ಮನೋರಂಜನೆ

ಅಗ್ನಿ ಶ್ರೀಧರ್ ವಿರುದ್ದದ ಕೇಸ್ ಕ್ಲೋಸ್- ಕಾಂಪ್ರಮೈಸ್ ಆದ್ರು ಟಾಟಾ ರಮೇಶ್.

ಖ್ಯಾತ ಪತ್ರಕರ್ತ ಮತ್ತು ವಿಚಾರವಾದಿ ಅಗ್ನಿ ಶ್ರೀಧರ್ ಅವರ ವಿರುದ್ಧದ ಮೊಕದ್ದಮೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.. ಶ್ರೀಧರ್ ವಿರುದ್ಧ ಕಳೆದ ವರ್ಷ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಹಾಗೂ ಮಾದಕವಸ್ತು ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯವರು ರಾಜಿ ಸಂಧಾನಕ್ಕೆ ಮುಂದಾದ ಕಾರಣ ಕೇಸ್ ಕ್ಲೋಸ್ ಆಗಿದೆ.. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪತ್ರಕರ್ತ ಅಗ್ನಿ ಶ್ರೀಧರ್, ರೋಹಿತ್ ಅವರು ದೂರುದಾರ ರಮೇಶ್ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳಲು ಕೋರ್ಟಿನಲ್ಲಿ ಸಮ್ಮತಿಸಿದ್ದಾರೆ.

 

 

ಏನಿದು ಪ್ರಕರಣ:
ಬೆಂಗಳೂರು ಉತ್ತರ ತಾಲೂಕಿನ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಕೊಲೆಯ ಆರೋಪಿಗಳಿಗೆ ಅಗ್ನಿ ಶ್ರೀಧರ್ ಅಕ್ರಮವಾಗಿ ಆಶ್ರಯ ನೀಡಿದ್ದಾರೆಂದು ಆರೋಪಿಸಿ ಫೆಬ್ರವರಿ 7, 2017 ರಂದು ಪೊಲೀಸರು ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಶ್ರೀಧರ್ ಮನೆಯಲ್ಲಿ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಪತ್ತೆಯಾಗಿದ್ದವು.

ಯಲಹಂಕ ನಿವಾಸಿ ಟಾಟಾ ರಮೇಶ್ ಅವರು ಅಗ್ನಿ ಶ್ರೀಧರ್ ನಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಪೋಲೀಸ್ ದೂರು ದಾಖಲಿಸಿದ್ದರು. ಈ ಸಂಬಂಧ ಶ್ರೀಧರ್ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತುಕೊಂಡಿದ್ದ ನ್ಯಾಯಾಲಯ ಇದೀಗ ದೂರುದಾರ ರಾಜಿಯಾಗಲು ಮುಂದಾಗಿರುವುದರಿಂದ ಪ್ರಕರಣವನ್ನು ವಜಾಗೊಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top