ಸಮಾಚಾರ

ಗರ್ಭಿಣಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದ ಹರಿಪ್ರಿಯಾ

ಖ್ಯಾತ ಕನ್ನಡ ಚಿತ್ರ ನಟಿ ಹರಿಪ್ರಿಯಾ ಅವರು ತಮ್ಮ ಅಮೋಘ ಕೆಲಸದಿಂದ ಮಾನವೀಯತೆ ಮೆರೆದಿದ್ದಾರೆ. ರಕ್ತದಾನ ಮಾಡುವ ಮೂಲಕ ಗರ್ಭಿಣಿ ಮಹಿಳೆಯ ಜೀವ ಉಳಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಇಂದು ‘ರಕ್ತ ಬೇಕಾಗಿದೆ’ ಎನ್ನುವ ಟ್ವೀಟ್‌ ನೋಡಿದ ಅವರು, ಸೀದಾ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಹೆರಿಗೆಯ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ತಮ್ಮ ರಕ್ತದಾನ ಮಾಡುವ ಮೂಲಕ ಆ ಜೀವ ಉಳಿಸಿದ್ದಾರೆ. ಬಳಿಕ ಆ ಮಹಿಳಿಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

I saw a tweet about blood requirement and went to donate blood for the first time !!!! I was terrified at first but decided to do it anyway !!! It was for a young mother who suffered severe blood loss during delivery. Thankfully she made it through the suffering😇She delivered twins😍 I was so happy to be of help to her 😃The satisfaction can’t be described in words ❤I encourage everyone to donate blood. It might save a life 🙏🏻 #worldblooddonarday

A post shared by Hariprriya (@iamhariprriya) on

ಉ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹರಿಪ್ರಿಯಾ ತಾವು ಮಾಡಿದ ಸಹಾಯವನ್ನು ಹಂಚಿಕೊಂಡಿದ್ದಾರೆ, ಇಂದು ಸಾರ್ಥಕತೆಯ ಮನೋಭಾವ ಮೂಡಿದೆ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು. ಎಂದು ಬರೆದಿದ್ದರೆ. ಹರಿಪ್ರಿಯಾ ಅವರಿಗೆ ಅಭಿನಂದನೆಯ ಮಹಾಪೂರ ಹರಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top