ಮನೋರಂಜನೆ

ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದ ತುಂಬು ಗರ್ಭಿಣಿಗೆ ರಕ್ತ ನೀಡಿ ಜೀವ ಉಳಿಸಿದ ನಟಿ ಹರಿಪ್ರಿಯಾ.

ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಸಿನಿಮಾದಲ್ಲಿ ಸೊಂಟ ಬಳುಕಿಸೋಕೆ ಮಾತ್ರ ಲಾಯಕ್ಕು ಎನ್ನುವ ಮಾತಿದೆ ಆದ್ರೆ ಕನ್ನಡದ ನಟಿ ಹರಿಪ್ರಿಯಾ ಮಾತ್ರ ತಾನು ಸಿನಿಮಾದಲ್ಲಿ ಮಾತ್ರ ನಾಯಕಿಯಲ್ಲ ನಿಜಜೀವನದಲ್ಲೂ ನಾಯಕಿ ಎಂಬುದನ್ನು ನಿರೂಪಿಸಿದ್ದಾರೆ. ಏನಾದರೊಂದು ಎಡವಟ್ಟುಮಾಡಿಕೊಳ್ಳುವ ಮುಖಾಂತವರೋ ಅಥವಾ ಬಟ್ಟೆ ಸರಿಸಿ ಅಂಗಾಂಗ ಪ್ರದರ್ಶನದ ಮೂಲಕವೇ ಸದ್ದು ಮಾಡಲೆತ್ನಿಸುವ ಈಗಿನ ನಟಿಯರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಸಾಮಾಜಿಕ ಕಳಕಳಿಯ ಮನೋಭಾವವನ್ನು ಹೊಂದಿರೋ ನಟಿಯರೂ ಇದ್ದಾರೆ.  ಅಂತಹವರಲ್ಲಿ ನೀರ್ದೋಸೆ ಚೆಲುವೆ ಕೂಡ ಒಬ್ಬಳು.

 

 

ಈಗ ಈ ವಿಚಾರಗಳೆಲ್ಲಾ ಯಾಕೆ ಅಂತೀರಾ? ಕಾರಣ ಇದೇ. ಹೆರಿಗೆಯ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ತಮ್ಮ ರಕ್ತದಾನ ಮಾಡುವ ಮೂಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹೆಂಗಳೆಯ ಜೀವಕ್ಕೆ ಆಸರೆಯಾಗಿದ್ದಾಳೆ. ‘ರಕ್ತ ಬೇಕಾಗಿದೆ’ ಎನ್ನುವ ಟ್ವೀಟ್‌ ನೋಡಿದ ಹರಿಪ್ರಿಯಾ, ನೇರವಾಗಿ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದ್ದಾರೆ.

ಆ ಬಳಿಕ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆಯಾಗಿದ್ದು, ಒಂದಲ್ಲ ಅಂತ ಎರೆಡೆರಡು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ್ದಾರೆ.. ಈ ಮೂಲಕ ಹರಿಪ್ರಿಯಾ ರಕ್ತದಾನ ಮಾಡಿದ್ದಕ್ಕೂ ಸಾರ್ಥಕವಾಗಿದೆ. ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಹರಿಪ್ರಿಯಾ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದ್ದಾರೆ. ಒಟ್ಟಿನಲ್ಲಿ ತೆರೆಮೇಲೆ ತಮ್ಮ ಥಳುಕು ಬಳುಕಿನ ಮೂಲಕವೇ ಚಪ್ಪಾಳೆ ಶಿಳ್ಳೆ ಗಿಟ್ಟಿಸಿಕೊಳ್ಳೋ ನಟಿಮಣಿಯರು ಇಂಥ ಸ್ಪೂರ್ತಿದಾಯಕ ಕಾಯಕಗಳಲ್ಲಿ ತೊಡಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರೆ ತಪ್ಪಾಗೊದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top