ಅರೋಗ್ಯ

ಎರಡೇ ವಾರದಲ್ಲಿ ಉದ್ದವಾದ ಮತ್ತು ದಟ್ಟವಾದ ಕೂದಲು ಬೆಳಿಬೇಕಂದ್ರೆ ಹೀಗ್ ಮಾಡಿ.

ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ಕೂದಲು ದಟ್ಟ ಹಾಗು ಉದ್ದವಾಗಿಯು ಬೆಳೆಯುತ್ತವೆ.

ಕೂದಲು ಉದುರುವುದು , ಬೊಕ್ಕ ತಲೆ , ಹಾಗು ಅನೇಕ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದಾರೆ .ನೀವು ಸಹ ಈ ರೀತಿ ತೊಂದರೆ ಅನುಭವಿಸುತ್ತಿದ್ದರೆ ಚಿಂತೆ ಬಿಟ್ಟು ಬಿಡಿ.
ಇಲ್ಲಿದೆ ಸರಳ ಮನೆ ಮದ್ದು.. ಆತ್ಮ ಸ್ತೈರ್ಯ ಕಳೆದುಕೊಳ್ಳದೆ ಇಂಥ ತೊಂದರೆಗಳಿಗೆ ಸವಾಲು ಹಾಕಿ ಎದುರಿಸಿ..ಈ ಅಧ್ಬುತವಾದ ಮನೆ ಮದ್ದನ್ನು ಒಮ್ಮೆ ಓದಿ ಹಾಗು ಪ್ರಯೋಗಿಸಿ ನೋಡಿ.
ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಈರುಳ್ಳಿ ರಸ ಕೂದಲು ಬೆಳವಣಿಗೆಗೆ ಸಹಾಯಮಾಡುತ್ತದೆ.

ಈರುಳ್ಳಿಯು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಉಪಯೋಗಿಸುವಂತಹ ತರಕಾರಿಯಾಗಿದೆ.ಅಡುಗೆ ಮಾಡಲು ಉಪಯೋಗಿಸುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು.
ಈರುಳ್ಳಿಯಲ್ಲಿ ಸಲ್ಫರ್ ಅಂಶವಿದ್ದು ಇದು ಕೂದಲು ದಟ್ಟವಾಗಿ ಬೆಳೆಯಲು ಸಹಾಯಮಾಡುತ್ತದೆ.

ಈರುಳ್ಳಿ ಯಲ್ಲಿ ಆಂಟಿ ಬ್ಯಾಕ್ಟೀರಿಯ ಕಣ್ಣಗಳಿದ್ದು ಇದು ಕೂದಲಿನ ಬುಡದಲ್ಲಿರುವ ಕೊಳೆಯನ್ನು ತೆಗೆದು ಹಾಕಿ ಕೂದಲ ಬೆಳವಣಿಗೆಗೆ ಪೋಷ್ಟಿಕಾಂಶವನ್ನು ಕೊಡುತ್ತದೆ.

 

 

ಈರುಳ್ಳಿ ರಸ ಮಾಡುವ ವಿಧಾನ.

ಮೊದಲಿಗೆ ಈರುಳ್ಳಿ ಸಿಪ್ಪೆ ತೆಗೆದು , ತೊಳೆದು , ಸಣ್ಣಗೆ ಕತ್ತರಿಸಿ ., ರುಬ್ಬಿಕೊಂಡು ., ಸೋಸಿಕೊಳ್ಳಿ ..

ಉಪಯೋಗಿಸುವ ವಿಧಾನ.

ಸೋಸಿಕೂಂಡ ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ 10 ನಿಮಿಷ ಮಸಾಜ್ ಮಾಡಿ, 30-40 ನಿಮಿಷ ಬಿಟ್ಟು ತೊಳೆಯಿರಿ..ವಾರಕ್ಕೆ 1-2 ಸಲ ಮಾಡಿ.

ಈರುಳ್ಳಿ ರಸ ( ಕೂದಲು ತೊಳೆದ ನಂತರ )

ಬೇಕಾಗುವ ಪದಾರ್ಥಗಳು..
*ಈರುಳ್ಳಿ ರಸ 1 ಚಮಚ
*1 ಲೀಟರ್ ಬಿಸಿ ನೀರು

ಉಪಯೋಗಿಸುವ ವಿಧಾನ.

ಬಿಸಿ ನೀರಿನ ಜೊತೆ ಈರುಳ್ಳಿ ರಸ ಬೆರೆಸಿರಿ.. ತಲೆ ಸ್ನಾನದ ನಂತರ ಇದರಿಂದ ಕೂದಲು ತೊಳೆಯಿರಿ.

ಸೂಚನೆ
ಈರುಳ್ಳಿರಸ ವಾಸನೆ ಇಂದ ಕೂಡಿದ್ದು ಇದನ್ನು ವಾರಾಂತ್ಯದಲ್ಲಿ ಅಥವಾ ರಾತ್ರಿ ಹೊತ್ತು ಉಪಯೋಗಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top