ಸಮಾಚಾರ

ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿರುವ ಸೈಫ್-ಕರೀನಾ

ಬಾಲಿವುಡ್‍ ರಾಯಲ್ ದಂಪತಿಗಳು ಎಂದೇ ಹೆಸರುವಾಸಿಯಾಗಿರುವ ಸೈಫ್ ಅಲಿ ಖಾನ್ ಹಾಗು ಕರೀನಾ ಕಪೂರ್ ಮತ್ತೆ ಒಟ್ಟಾಗಿ ಅಭಿನಯ ಮಾಡಬೇಕೆಂಬುದು ಬಹಳ ದಿನಗಳ ಅಭಿಮಾನಿಗಳ ಆಸೆ ಆಗಿತ್ತು.

 

 

 

5 ವರ್ಷಗಳ ನಂತರ ಸೈಫ್ ಅಲಿ ಖಾನ್ ಹಾಗು ಕರೀನಾ ಕಪೂರ್ ಮತ್ತೆ ಒಟ್ಟಾಗಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಓದಲು ಹಲವು ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಸೈಫ್ ಹಾಗು ಕರೀನಾ ಕಳೆದ 5 ವರ್ಷದಲ್ಲಿ ಇಬ್ಬರೂ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಸದ್ಯ ತಾಯಿಯಾದ ನಂತರ ಕರೀನಾ ವೀರೆ ದಿ ವೆಡ್ಡಿಂಗ್ ಚಿತ್ರದಲ್ಲಿ ಅಭಿನಯ ಮಾಡುವ ಮುಖೇನ ಬಾಲಿವುಡ್‍ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ಲಂಡನ್‍ನಲ್ಲಿ ರಾಯಲ್ ಕಪಲ್ ಮಗ ತೈಮೂರ್ ಜೊತೆ ರಜೆಯ ಮಜಾವನ್ನು ಕಳೆಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿರುವ ಸಿನಿಮಾಗಳು ಪ್ರೇಕ್ಷಕರನ್ನು ತಲುಪವಲ್ಲಿ ಯಶಸ್ವಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರೀನಾ ಪತಿಯ ಜೊತೆಯೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರವಾಸ ಮುಗಿಸಿ ಭಾರತಕ್ಕೆ ಬಂದ ಕೂಡಲೇ ಕರೀನಾ ದೊಡ್ಡ ಬ್ರಾಂಡ್‍ವೊಂದರ ಜಾಹೀರಾತಿನಲ್ಲಿ ಅಭಿನಯ ಮಾಡಲಿದ್ದಾರೆ ಇದರಲ್ಲಿ ಸೈಫ್ ಕೂಡ ಸಾಥ್ ಕೊಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top