ಧರ್ಮ

14 ಜೂನ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೧೪ ಜೂನ್ ೨೦೧೮
ಸೂರ್ಯೋದಯ : ೦೫:೫೭
ಸೂರ್ಯಾಸ್ತ : ೧೮:೪೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ

ಪಕ್ಷ : ಶುಕ್ಲ ಪಕ್ಷ
ತಿಥಿ : ಪಾಡ್ಯ
ನಕ್ಷತ್ರ : ಮಾರ್ಗಶಿರ
ಯೋಗ : ಗಂಡ
ಸೂರ್ಯ ರಾಶಿ : ವೃಷಭ

ಅಭಿಜಿತ್ ಮುಹುರ್ತ : ೧೧:೫೪ – ೧೨:೪೫
ಅಮೃತಕಾಲ : ೦೬:೧೫ – ೦೭:೪೦
ಅಮೃತಕಾಲ : ೨೬:೨೯+ – ೨೭:೫೫+
ರಾಹು ಕಾಲ: ೧೩:೫೫ – ೧೫:೩೧
ಗುಳಿಕ ಕಾಲ: ೦೯:೦೮ – ೧೦:೪೪

ಯಮಗಂಡ: ೦೫:೫೭ – ೦೭:೩೨

 

ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚಗಳು ಎದುರಾಗುವುದು. ಸದ್ಯದಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಸುಖವಾಗುವುದು. ತಾಳ್ಮೆಯಿಂದ ಇರಿ.

 

ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.

 

ಮಕ್ಕಳು ಶುಭ ವಾರ್ತೆಯನ್ನು ತರಲಿದ್ದಾರೆ. ವಿಶೇಷವಾದ ಸಂತೋಷ ಸಮಾಧಾನಗಳು ನಿಮ್ಮದಾಗುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.

 

ಅತ್ಯಂತ ನಂಬಿಕಸ್ಥ ಸ್ನೇಹಿತರಿಂದ ಇಲ್ಲವೆ ಬಂಧುಗಳಿಂದ ಸಹಕಾರ ಸಿಗದೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಂಧು ಬಳಗದವರ ಎದುರು ನಿಮ್ಮ ಸುಖದುಃಖಗಳನ್ನು ಹಂಚಿಕೊಳ್ಳದಿರಿ. ಭಗವಂತನನ್ನು ಮನಸಾ ಸ್ಮರಿಸಿ.

 

 

ಹೊಸದಾದ ವಿಶಿಷ್ಟ ಯೋಜನೆಯೊಂದಕ್ಕೆ ಚಾಲನೆ ನೀಡುವಿರಿ. ಇದರಿಂದ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗೆಲ್ಲುವ ಹಂತ ತಲುಪುವಿರಿ. ನಿಮ್ಮ ಸಹೋದ್ಯೋಗಿಗಳಿಂದ ಪ್ರಶಂಸೆ ದೊರೆಯುವುದು.

 

 

ಹಣಕಾಸಿನ ತೊಂದರೆ ಇದೆ ಎಂದು ಹೇಳಿಕೊಳ್ಳುವಷ್ಟು ವಿಶ್ವಾಸವನ್ನು ನೀವು ಉಳಿಸಿಕೊಂಡಿಲ್ಲ. ಹಾಗಾಗಿ ಇತರೆಯವರು ನಿಮ್ಮನ್ನು ಸಂಶಯ ದೃಷ್ಟಿಯಿಂದಲೇ ನೋಡುವರು. ಹಿಂದೆ ಆಗಿರುವ ತಪ್ಪನ್ನು ತಿದ್ದಿಕೊಂಡು ಮುನ್ನಡೆಯಿರಿ. ಒಳಿತಾಗುವುದು.

 

 

ಎಲ್ಲವೂ ಸರಿಯಾಗಿ ಆಗುತ್ತಿದೆ ಎನ್ನುವ ಹಂತದಲ್ಲಿರುವಾಗಲೇ ಕಿರಿಕಿರಿ ಮಾಡುವ ಹಿರಿಯರೊಬ್ಬರ ಸಹವಾಸ ನಿಮ್ಮ ತಾಳ್ಮೆಯನ್ನು ಕೆಡಿಸುತ್ತದೆ. ಆದರೆ ಅವರು ಹೇಳುವ ವಿಚಾರಗಳಲ್ಲಿ ಅಲ್ಪಪ್ರಮಾಣದ ಸತ್ಯಾಂಶವೂ ಇರುತ್ತದೆ ಎಂಬುದನ್ನು ತಿಳಿಯಿರಿ.

 

 

ಉತ್ತಮ ಆರೋಗ್ಯ, ಹಣಕಾಸು ವ್ಯವಹಾರದಲ್ಲಿ ಯಶಸ್ಸು, ಸಂತೋಷ, ಸಂಭ್ರಮದಿಂದ ದಿನವನ್ನು ಕಳೆಯುವಿರಿ. ದೂರದಿಂದ ಬರುವ ವಾರ್ತೆಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

 

ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಕಚೇರಿಯಲ್ಲಿ ಬಿಕ್ಕಟ್ಟು ನಿವಾರಣೆ ಅಗಲಿದೆ.  ಬೆಲೆಬಾಳುವ ವಸ್ತು ಖರೀದಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ,ಆರ್ಥಿಕ ಅಭಿವೃದ್ಧಿ ಕುಂಠಿತವಾದರೂ ಸಂತೃಪ್ತಿಯ ಬದುಕನ್ನು ಕಾಣುವಿರಿ. ಹೊಸ ಯೋಚನೆಗಳು, ಹೊಸ ಆವಿಷ್ಕಾರಗಳಿಂದ ಸಮಾಜದ ಗಣ್ಯರಿಂದ ಪ್ರಶಂಸೆಗೆ ಒಳಗಾಗುವಿರಿ.

 

 

ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸ್ನೇಹಿತರು ಹಿತೈಷಿಗಳು ನಿಮಗೆ ಸಹಾಯ ಮಾಡುವರು, ಹೊಸ ಕಾರ್ಯವನ್ನು ಆರಂಭಿಸಲು ಶುಭ ಸಮಯವಲ್ಲ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ.

 

ಸ್ನೇಹಿತರೊಂದಿಗೆ ವಾದ-ವಿವಾದ ಹಾಗೂ ಭಿನ್ನಾಭಿಪ್ರಾಯ ಉಂಟಾಗಬಹುದು, ನಿಮ್ಮ ಮರ್ಯಾದೆಗೆ ಧಕ್ಕೆ ತರದಂತೆ ಎಚ್ಚರ ವಹಿಸಿ, ಒಂದು ಪ್ರಮುಖ ಫಲಿತಾಂಶಕ್ಕೆ ಕಾಯುತ್ತಿರುವಿರಿ. ಅದು ನಿಮಗೆ ಅನುಕೂಲಕರವಾಗಿಯೇ ಇಂದು ಬರುವುದು. ಇದರಿಂದ ನಿಮ್ಮನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಮುಖಭಂಗವಾಗುವುದು.

 

ಒಟ್ಟೊಟ್ಟಿಗೆ ಹಲವು ಕೆಲಸಗಳು ಹೆಗಲೇರುವುದರಿಂದ ವಿಶ್ರಾಂತಿಗೆ ಸಂಚಕಾರ ಬರಲಿದೆ. ಸಾಧ್ಯವಾದಷ್ಟು ಸಂಭಾಳಿಸಿಕೊಂಡು ಹೋಗಲು ಪ್ರಯತ್ನಿಸಿ. ಆರ್ಥಿಕ ಮುಗ್ಗಟ್ಟು ಎದುರಾಗುವುದು,  ಆಪ್ತರೊಂದಿಗೆ ಸಮಾಲೋಚನೆ ನಡೆಸದೇ ಮುಂದಡಿ ಇಡುವುದು ಜಾಣತನದ ಲಕ್ಷ ಣವಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top