fbpx
ಉಪ್ಪಯುತ್ತ ಮಾಹಿತಿ

ನನ್ನಲ್ಲಾಗಿರುವ ಎಷ್ಟೆಲ್ಲಾ ಬದಲಾವಣೆಗೆ ಅವಳೇ ಕಾರಣ- ರಣಬೀರ್ ಕಪೂರ್.

ಸದ್ಯ ಬಾಲಿವುಡ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟು ಹೋಗಿರುವ ರಣಬೀರ್ ಕಪೂರ್ ಸಂಜು ಚಿತ್ರದ ಮೂಲಕ ಫಾರ್ಮ್’ಗೆ ಮರಳುವ ನಿರೀಕ್ಷೆಯಲ್ಲಿದ್ದಾನೆ. ಆ ವಿಷಯ ಆಗಿರಲಿ, ಇಂದಿಬ್ಬರು ನಟಿಯರ ಜೊತೆ ಡೇಟಿಂಗ್ ಮಾಡಿದ್ದ ಈ ಮೋಸ್ಟ ಎಲಿಜಿಬಲ್ ಬ್ಯಾಚುಲರ್ ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾನಂತೆ. ಹಾಗೆ ನೋಡಿದರೆ ಬಿಟೌನ್ ನಟ ನಟಿಯರು ಚಿತ್ರಕ್ಕಿಂತಲೂ ಅಫೇರುಗಳ ಮೂಲಕ ಸದ್ದು ಮಾಡೋದೇ ಹೆಚ್ಚು, ಗಲ್ಲಿಗೊಂದರಂತೆ ಪ್ರೇಮ ಸಲ್ಲಾಪಗಳು ಕಾಣಸಿಗಬಹುದು. ಆದರೆ ಸದ್ಯ ಇಲ್ಲಿ ಚಾಲ್ತಿಯಲ್ಲಿರುತ್ತವೆ. ಇಂಥ ಬಾಲಿವುಡ್ ಪ್ರೇಮಿಗಳ ಲವ್ ಸ್ಟೋರಿ ನಿಜಕ್ಕೂ ವಿಚಿತ್ರ. ಅಲ್ಲಿ ಯಾರು ಯಾವಾಗ ಯಾರನ್ನ ಪ್ರೀತಿಸ್ತಾರೆ, ಯಾವ ಜೋಡಿ ಯಾವಾಗ ದೂರಾಗುತ್ತೆ ಅಂತ ಹೇಳೋದೇ ಕಷ್ಟ. ಅಂಥಾ ಜೋಡಿಗಳು ದೂರಾಗೇ ಬಿಟ್ಟವೆಂದುಕೊಂಡ್ರೂ ಒಂದೇ ಸಿನಿಮಾದಲ್ಲಿ ನಟಿಸೋ ಮೂಲಕ ಶಾಕ್ ಕೊಟ್ರೂ ಅಚ್ಚರಿಯೇನಿಲ್ಲ.

 

 

ಇದೀಗ ಬಾಲಿವುಡ್ ಅಂಗಳದಲ್ಲಿ ಅಂಥದ್ದೇ ಫ್ರೆಶ್ ಲವ್ ಸ್ಟೋರಿ ಬಾಲಿವುಡ್ ತುಂಬಾ ಸದ್ದು ಮಾಡುತ್ತಿದೆ. ಸದ್ಯ ಇಲ್ಲಿ ಚಾಲ್ತಿಯಲ್ಲಿರೋ ಜೋಡಿ ಬಾಲಿವುಡ್ಡಿನ ಕ್ಯೂಟ್ ಹೀರೋಯಿನ್ ಆಲಿಯಾ ಭಟ್ ಮತ್ತು ರಣವೀರ್ ಕಪೂರ್. ಈ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವಂತಹ ಸುದ್ದಿಗಳು, ರೂಮರುಗಳು ಕೆಲವು ದಿನಗಳಿಂದ ಬಾಲಿವುಡ್ ಅಂಗಳದಿಂದ ತೂರಿಬರುತ್ತಿದ್ದವು ಆದರೆ ಈ ಯಾವುದೇ ರೂಮರುಗಳಿಗೆ ಆಲಿಯಾ ಆಗಲಿ, ರಣಬಿರ್ ಆಗಲಿ ಸಮಜಾಯಿಷಿ ಕೊಡೊ ಸಾಹಸಕ್ಕೆ ಕೈ ಹಾಕಿರಲಿಲ್ಲ ಆದರೆ ಇವತ್ತು ರಣಬೀರ್ ಕಪೂರ್ ಮೊದಲ ಬಾರಿಗೆ ತಮ್ಮಿಬ್ಬರ ಸ್ನೇಹದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಇತ್ತೀಚಿಗೆ GQ ಸಂದರ್ಶನದಲ್ಲಿ ಭಾಗವಹಿಸಿದ ರಣಬೀರ್ ಅವರಿಗೆ ನಿರೂಪಕರು ಆಲಿಯಾ ಜೊತೆಗಿನ ಸಂಭಂದದ ಬಗ್ಗೆ ತಿಳಿಸುವಂತೆ ಹೇಳಿದರು. ಆಗ ರಣಬೀರ್ ಆಲಿಯಾ ಭಟ್ ಜೊತೆ ಡೇಟಿಂಗ್ ನಡೆಸ್ತಿರೋದು ಹೌದು ಎಂದು ಒಪ್ಪಿಕೊಂಡಿದ್ದಾರೆ.”ನಮ್ಮಿಬ್ಬರ ಬಗ್ಗೆ ಹಬ್ಬಿರುವ ಈ ರೂಮರ್ ನಿಜವಾದದ್ದು. ಆದ್ರೆ ಈ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡಲ್ಲ. ನಟಿಯಾಗಿ, ವ್ಯಕ್ತಿಯಾಗಿ ಆಲಿಯಾ ಭಟ್ ಅವರನ್ನ ಹೆಚ್ಚು ಇಷ್ಟಪಡುತ್ತೇನೆ.. ಇದು ನಮಗೆ ಹೊಸದು, ಕೆಲವು ದಿನಗಳ ಕಾಲ ಹೀಗೆ ಇರಲಿ. ಸಂಬಂಧಕ್ಕೆ ಮಹತ್ವ ನೀಡುತ್ತೇನೆ’ ಎಂದು ಹೇಳಿದ್ದಾರೆ.

“ಪ್ರೀತಿಯಲ್ಲಿ ಬಿದ್ದಾಗ ಎಲ್ಲರೂ ಉತ್ತಮ ಕೆಲಸಗಳನ್ನೇ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಮ್ಮ ಜೀವನದಲ್ಲಿ ಪ್ರೀತಿ ಸಂಭವಿಸಿದಾಗ ನಾವು ಸಂತೋಷದಿಂದ ಇರುವುದು ಮಾಮೂಲು, ಪರಿಶುದ್ದ ಪ್ರೀತಿಯಿಂದ ನಾವು ಸುಂದರ ಹಾಗೂ ನಂಬಿಕೆಯ ಜೀವನವನ್ನು ನಾವು ಪಡೆಯುತ್ತೇವೆ., ಸದ್ಯ ಆಲಿಯಾ ಜೊತೆ ಕೆಲಸ ಪ್ರಾರಂಭಿಸಿದಾಗಿನಿಂದ ನನ್ನಲ್ಲಿ ಒಂದು ರೀತಿ ಸಕಾರಾತ್ಮಕ ಬದಲಾವಣೆಯಾಗಿದೆ. ಹೆಚ್ಚು ಸಂತೋಷದಲ್ಲಿರುತೇನೆ” ಎಂದು ಹೇಳುವ ಮೂಲಕ
ಆಲಿಯಾ ದೆಸೆಯಿಂದ ತಮ್ಮಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ಮೂಲಗಳ ಪ್ರಕಾರ ಆಲಿಯಾ ಮತ್ತು ರಣಬೀರ್ ಅವರ ಎರಡೂ ಕುಟುಂಬಗಳು ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top