ಸಮಾಚಾರ

‘ಈ ಮನೇಲಿ ದೇವರಿಗೆ ಪೂಜೆ ತಪ್ಪುತ್ತೋ ಬಿಡುತ್ತೋ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮಾಡ್ತಾರೆ ಮಹಾಮಂಗಳಾರತಿ ಯಾಕ್ ಗೊತ್ತಾ

ಎಲ್ಲರು ದೇವರನ್ನು ಪೂಜೆ ಮಾಡುತ್ತಾರೆ ಆದರೆ ತೆಲಂಗಾಣ ರಾಜ್ಯದ ಯುವಕನೊಬ್ಬ ಅಮೆರಿಕಾ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ದೇವರಂತೆ ಪೂಜೆ ಮಾಡುತ್ತಿದ್ದಾನೆ. ಮೂಲತಃ ತೆಲಂಗಾಣ ರಾಜ್ಯದ ಜನ್ ಗಾಂವ್ ಜಿಲ್ಲೆಯ ನಿವಾಸಿ ಆಗಿರುವ ಬುಸ್ಸಾ ಕೃಷ್ಣಾ ಅವರು ಟ್ರಂಪ್ ಭಾವಚಿತ್ರಕ್ಕೆ ಪೂಜೆ ಮಾಡುತ್ತಿರುವ ಯುವಕ.

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಫೋಟೊವನ್ನು ತಮ್ಮ ಮನೆಯ ಇರಿಸಿಕೊಂಡು ಪೂಜೆ ಮಾಡುತ್ತಿದ್ದಾರೆ. 31 ವರ್ಷದ ರೈತ ಬುಸ್ಸಾ ದಿನಾಲೂ ಟ್ರಂಪ್ ರ ಭಾವಚಿತ್ರಕ್ಕೆ ಅರಿಶಿಣ, ಕುಂಕುಮ ಹಚ್ಚಿ ಹೂ ಹಾಕಿ ಆರತಿ ಬೆಳಗುತ್ತಾರೆ ಎಂದು ತಿಳಿಸು ಬಂದಿದೆ.

 

 

ಡೊನಾಲ್ಡ್ ಟ್ರಂಪ್ ಭಾವಚಿತ್ರಕ್ಕೆ ಪೂಜೆ ಏಕೆ ಗೊತ್ತೇ:

ಎರಡು ವರ್ಷಗಳ ಹಿಂದೆ ಅಮೆರಿಕದ ಕನ್ನಾಸ್ ನಲ್ಲಿ ತೆಲಂಗಾಣ ರಾಜ್ಯದ ಮೂಲದ ಎಂಜನೀಯರ್ ಶ್ರೀನಿವಾಸ ಕೊಚಿಭೋಟ್ಲ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆದ ದ್ವೇಶಾಪರಾಧದ ಕೃತ್ಯ ಇದಾಗಿತ್ತು. ಈ ಪ್ರಕರಣ ಕುರಿತಂತೆ ಟ್ರಂಪ್ ಮೌನವಹಿಸಿದ್ದರು. ಇದೆ ಕಾರಣಕ್ಕಾಗಿ ಬುಸ್ಸಾ ಕೃಷ್ಣ ಟ್ರಂಪ್ ರ ಭಾವಚಿತ್ರಕ್ಕೆ ಈ ರೀತಿ ಪೂಜೆ ಸಲ್ಲಿಸಲು ಶುರು ಮಾಡಿದರು ಬುಸ್ಸಾ ಕೃಷ್ಣಾ .

ಪೂಜೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬುಸ್ಸ ಕೃಷ್ಣ ಶ್ರೀನಿವಾಸ ಹತ್ಯೆಯಿಂದ ನನ್ನ ಮನಸ್ಸಿಗೆ ತುಂಬ ನೋವಾಗಿದೆ. ಅಮೆರಿಕಾ ಜನರ ಮೇಲೆ ಭಾರತೀಯರಿಗೆ ಯಾವ ರೀತಿಯ ಪ್ರೀತಿ ಇದೆ ಎಂದು ಅಮೆರಿಕಾ ಜನತೆ ಹಾಗೂ ಟ್ರಂಪ್ ಗೆ ತಿಳಿಸಲು ರೀತಿ ಪೂಜೆ ಮಾಡುತ್ತಿದ್ದೇನೆ. ಒಂದಲ್ಲ ಒಂದು ದಿನ ಟ್ರಂಪ್ ಗೆ ತಲುಪುತ್ತದೆ ಎನ್ನುವ ವಿಶ್ವಾಸವಿದೆ. ಭಾರತೀಯರು ಆಧ್ಯಾತ್ಮಿಕತೆಯಿಂದ ಎಲ್ಲವನ್ನೂ ಗೆಲ್ಲಬಹುದೆಂದು ನಂಬಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಸಾಧ್ಯವಾಗದೇ ಹೋದರೆ ಪ್ರೀತಿಯ ಆರಾಧನೆಯ ಮೂಲಕ ಅವರನ್ನು ಗೆಲ್ಲಬಹುದು. ನಾನು ಈಗ ಅದನ್ನೇ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top