ಮನೋರಂಜನೆ

ಕಿರಾತಕ-2 ನಲ್ಲಿ ಯಶ್ ಇರೋದಿಲ್ಲ- ಬೇರೆ ನಾಯಕನನ್ನು ಕಿರಾತಕನನ್ನಾಗಿಸಿದ ನಿರ್ದೇಶಕ ಪ್ರದೀಪ್ ರಾಜ್.

2011ರಲ್ಲಿ ತೆರೆಗೆ ಬಂದಿದ್ದ ‘ಕಿರಾತಕ’ ಸಿನಿಮಾ ಯಶ್ ಅವರ ವೃತ್ತಿ ಬದುಕಿನಲ್ಲಿ ಅತ್ಯಂತ ಮಹತ್ತರವಾದ ಸಿನಿಮಾ. ಒಂದೊಳ್ಳೆ ಬ್ರೇಕ್ ಗಾಗಿ ಹಪಾಹಪಿಸುತ್ತಿದ್ದ ಯಶ್’ಗೆ ಸರಿಯಾದ ಸಮಯಕ್ಕೆ ದೊಡ್ಡ ತಿರುವನ್ನು ನೀಡಿದ ಚಿತ್ರ ‘ಕಿರಾತಕ’ ಎಂದರೆ ತಪ್ಪಾಗೊದಿಲ್ಲ.. ಮೂಲತಃ ಇದು ತಮಿಳಿನ ಹಿಟ್ ಚಿತ್ರವೊಂದರ ರೀಮೇಕೇ ಆಗಿದ್ದರೂ ಕನ್ನಡದ ನೇಟಿವಿಟಿಗೆ ಬದಲಾಯಿಸಿಕೊಳ್ಳಲಾಗಿತ್ತು ಅದರ ಜೊತೆ ಸೊಗಸಾದ ಹಾಡುಗಳು, ಮಂಡ್ಯ ಸೊಗಡು, ಅಚ್ಚುಕಟ್ಟಿನ ಚಿತ್ರಕತೆ, ಯಶ್ ಒಳಗೊಂಡಂತೆ ಇತರ ಕಲಾವಿದರ ಸ್ವಾಭಾವಿಕ ನಟನೆ ಎಲ್ಲವೂ ಚೆನ್ನಾಗಿ ವರ್ಕೌಟ್ ಆಗಿತ್ತು. ಈಗ ಯಾಕೆ ಆ ವಿಷ್ಯ ಅಂತೀರಾ?

 

 

ರಾಕಿಂಗ್ ಸ್ಟಾರ್‌ ಯಶ್‌ ಅದೇ ಕಿರಾತಕ ಚಿತ್ರದ ಸೀಕ್ವೆಲ್‌ ಮಾಡ್ತಿದ್ದಾರೆ, ಅದಕ್ಕಾಗಿ ಕೆಲಸಗಳನ್ನ ಶುರುಮಾಡಿದ್ದಾರೆ ಎಂಬೋ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ದುಬೈನಲ್ಲಿ ಶೂಟಿಂಗ್​ ನಡೆಯುತ್ತದೆ, ಕಿರಾತಕ2 ಸಿನಿಮಾವನ್ನು ಪ್ರದೀಪ್​​ ರಾಜ್​​ ನಿದೇಶಿಸುತ್ತಿಲ್ಲ. ಬೇರೆ ಯಾರೋ ನಿರ್ದೇಶಕ ಡೈರೆಕ್ಟ್​​ ಮಾಡ್ತಿದ್ದಾರೆ ಎಂಬ ನಾನಾ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು.. ಆದ್ರೆ ಈವರೆಗೂ ಎಲ್ಲೂ ಕೂಡ ಇದು ನಿಜವಾದ ಸುದ್ದಿಯೋ ಅಥವಾ ಸುಳ್ಳುಸುದ್ದಿಯೋ ಎಂದು ಅಧಿಕೃತವಾಗಿ ಕನ್ಫರ್ಮ್ .ಆಗಿರಲಿಲ್ಲ. ಆದರೆ ಇದೀಗ ‘ಕಿರಾತಕ’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಪ್ರದೀಪ್ ರಾಜ್ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರದೀಪ್ ರಾಜ್ “ಕಿರಾತಕ-2 ಸಿನಿಮಾವನ್ನು ನಾನೇ ನಿರ್ದೇಶನ ಮಾಡುತ್ತಿದ್ದೇನೆ. ಆದರೆ ಈ ಸಿನಿಮಾದ ನಾಯಕ ಯಶ್ ಅಲ್ಲ. ಬೈಂದೂರು ಕನ್ಸ್​ಸ್ಟ್ರಕ್ಷನ್​ ಬ್ಯಾನರ್​ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಚಿತ್ರಕ್ಕೆ ನಾಯಕನಾಗಿ ಕನ್ನಡದ ಪ್ರತಿಭಾವಂತ ಯುವ ನಟ ಸಿಕ್ಕಿದ್ದಾರೆ ಜೊತೆಗೆ ಬಾಲಿವುಡ್‌ನ ಪ್ರಸಿದ್ದ ನಟರೊಬ್ಬರು ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.. ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ. ” ಎಂದು ಹೇಳುವ ಮೂಲಕ ಇಷ್ಟು ದಿನ ಹರಿದಾಡುತ್ತಿದ್ದ ಅಂತೆಕಂತೆಗಳನ್ನೆಲ್ಲಾ ಮೂಟೆಕಟ್ಟಿ ಬಿಸಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top