ಸಮಾಚಾರ

ಇಂಗ್ಲೆಡ್ ಪ್ರವಾಸಕ್ಕೂ ಮುನ್ನ ಕೊಹ್ಲಿಗೆ ಅನುಷ್ಕಾ ಹೇಳಿದ ಗುಟ್ಟೇನು

ಮುಂಬರುವ ಐರ್ ಲ್ಯಾಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಎರಡು ತಿಂಗಳ ಧೀರ್ಘ ಕಾಲಿನ ಎಲ್ಲಾ ಮಾದರಿಯ ಕ್ರಿಕೆಟ್ ಸರಣಿಗಾಗಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಇಂದು ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿತು. 2 ತಿಂಗಳ ಸುದೀರ್ಘ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದೆ.

 

 

 

ಪ್ರಯಾಣಕ್ಕೂ ಮುನ್ನ ಪತಿ ವಿರಾಟ್‌‌ ಕೊಹ್ಲಿಗೆ ಡ್ರಾಪ್‌ ನೀಡಲು ಏರ್‌ಪೋರ್ಟ್‌ಗೆ ಆಗಮಿಸಿದ್ದ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಏರ್‌ಪೋರ್ಟ್‌‌ನಲ್ಲಿ ಕೊಹ್ಲಿಗೆ ಹಗ್‌ ಮಾಡಿ ಬಾವುಕರಾದ ಘಟನೆ ನಡೆಯಿತು. ಗಂಡನಿಗೆ ಶುಭ ಹಾರೈಕೆ ಮಾಡಿರುವ ಶರ್ಮಾ ಉತ್ತಮ ಪ್ರದರ್ಶನ ನೀಡುವಂತೆ ವಿಶ್‌ ಮಾಡಿದರು. ಇನ್ನು ಕೆಲವೇ ದಿನಗಳಲ್ಲಿ ಅನುಷ್ಕಾ ಶರ್ಮಾ ಕೂಡಾ ಐಫಾ ಅವಾರ್ಡ್‌ಗಾಗಿ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್-ಐರ್ ಲ್ಯಾಂಡ್ ಸರಣಿಗಾಗಿ ಶೇ. 100 ರಷ್ಟು ಸಿದ್ದನಿದ್ದೇನೆ. ಕುತ್ತಿಗೆ ಈಗ ಉತ್ತಮವಾಗಿದೆ. ಸಂಪೂರ್ಣ ತಯಾರಿ ಮಾಡಿದ್ದೂ, ಫಿಟ್ನೆಸ್ ಪರೀಕ್ಷೆಯಲ್ಲೂ ದೇಹ ಉತ್ತಮವಾಗಿರುವ ಅನುಭವ ಮೂಡಿದೆ. ಪಂದ್ಯ ಆಡಲು ಕಾತುರರಿಂದ ಕಾಯುತ್ತಿರುವುದಾಗಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಭಾರತ ಐರ್ ಲ್ಯಾಂಡ್ ವಿರುದ್ಧ ಎರಡು ಟಿ-20 ಹಾಗೂ ಇಂಗ್ಲೆಂಡ್ ವಿರುದ್ಧ ಮೂರು ಟಿ-20, ಮೂರು ಏಕದಿನ ಮತ್ತು ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top