ಸಿನಿಮಾ

ವಿವಾದವೊಂದರ ವಿಷ್ಯವಾಗಿ ಬಿಗ್ ಬಾಸ್ ದಯಾಳ್ ಪದ್ಮನಾಭನ್ ಪರ ಬ್ಯಾಟಿಂಗ್ ಆಡಿದ ರಕ್ಷಿತ್ ಶೆಟ್ಟಿ

ಸ್ಯಾಂಡಲ್‌ವುಡ್‌ನಲ್ಲಿ ನಲ್ಲಿ ಮತ್ತೊಂದು ಕಾಪಿರೈಟ್ ವಿವಾದ ಜೀವಪಡೆದುಕೊಂಡಿದೆ. ಇದೇ ಕಾಪಿರೈಟ್ ಪ್ರಕರಣಗಳಲ್ಲಿ ಈ ಹಿಂದೆ ಸಾಕಷ್ಟು ಚಿತ್ರಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿಯಿದ್ದ ಲಹರಿ ವೇಲು ಮತ್ತು ನಿರ್ದೇಶಕ ದಯಾಳ್ ಪದ್ಮನಾಭನ್ ನಡುವೆ ತಿಕ್ಕಾಟಶುರುವಾಗಿದೆ. ದಯಾಳ್‌ ಅವರ ನೂತನ ಚಿತ್ರ ‘ಆ ಕರಾಳ ರಾತ್ರಿ’ ಚಿತ್ರದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗದ ‘ಬದುಕು ಜಟಕಾಬಂಡಿ’ಯ ನಾಲ್ಕು ಸಾಲುಗಳನ್ನು ಬಳಸಿಕೊಂಡಿದ್ದಾರಲ್ಲಾ ಇದೇ ವಿಚಾರವಾಗಿ ಇದೀಗ ಲಹರಿ ವೇಲು ಮತ್ತು ದಯಾಳ್‌ ನಡುವೆ ಕಾಳಗ ಶುರುವಾಗಿದೆ.

 

ಮಧ್ಯ ಪ್ರವೇಶ ಮಾಡಿದ ರಕ್ಷಿತ್

 

ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದ “Hey who are you ” ಹಾಡು ಕೇಳಿದ್ದೀರಾ ?

ಈ ಹಾಡು ಲಹರಿ ಆಡಿಯೋ ಕಂಪನಿಯು ಕಾಪಿ ರೈಟ್ಸ್ ಹೊಂದಿರುವ ರವಿಚಂದ್ರನ್ , ಜೂಹಿ ಚಾವ್ಲಾ , ರಮೇಶ್ ಅರವಿಂದ್ ,ಖುಷ್ಬೂ ಅಭಿನಯದ “ಶಾಂತಿ ಕ್ರಾಂತಿ” ಚಿತ್ರದ “ಮಧ್ಯರಾತ್ರಿಲಿ” ಹಾಡಿನ ನಕಲು ಎಂದು, ತಮ್ಮ ಅಪ್ಪಣೆ ಇಲ್ಲದೆ ಹಾಡಿನ ಸಂಗೀತವನ್ನು ಬಳಸಿಕೊಳ್ಳಲಾಗಿದೆ ಎಂದು ಲಹರಿ ಆಡಿಯೋ ಕಂಪನಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ಲಹರಿ ವೇಲು ಮತ್ತು ದಯಾಳ್‌ ನಡುವಿನ ಜಗಳ ಜೋರಾಗಿದ್ದು ಸಿನಿ ನಟ ರಕ್ಷಿತ್ ಶೆಟ್ಟಿ ಸವಿವರವಾದ ದಯಾಳ್‌ ನಾಭನ್ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಲಹರಿ ಸಂಸ್ಥೆ ಅನ್ಯಾಯವಾಗಿ ಸಿನೆಮಾಗಳ ಮೇಲೆ ಹೇರುತ್ತಿರುವ ಕಾಪಿ ರೈಟ್ ವಿವಾದಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ .

 

 

ಏನಿದು ವಿವಾದ , ದಯಾಳ್‌ ಹೇಳಿರುವ ವಿವರ ಹೀಗಿದೆ

ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಲಹರಿ ವೇಲು ತಮ್ಮನಿಗೆ ಶೇರ್‌ ಮಾಡಿದ್ದೆ. ಆಗ ಅವರು ಇದರ ಹಕ್ಕು ನಮ್ಮ ಹತ್ತಿರ ಇವೆ. ಇದನ್ನು ನೀವು ಉಲ್ಲಂಘಿಸಿದ್ದೀರಿ. ಎಂದರು ಆದರೆ ಮಂಕುತಿಮ್ಮನ ಕಗ್ಗದ ಹಕ್ಕುಗಳು ಅಸಲಿಗೆ ಇರುವುದು ಡಿವಿಜಿ ಪ್ರತಿಷ್ಠಾನದ ಹತ್ತಿರ. ಲಹರಿ ಕಂಪನಿ ಹಣ ವಸೂಲಿ ಮಾಡುವ ಸಲುವಾಗಿ ಈ ಹಿಂದಿನಿಂದಲೂ ಹಲವು ಜನರಿಂದ ಹಣ ವಸೂಲಿ ಮಾಡಲು ಯತ್ನಿಸಿದೆ ಎಂದು ದೂರಿರುವ ದಯಾಳ್‌ ಈ ಸಂಬಂಧ ದಯಾಳ್‌ ವಾಣಿಜ್ಯ ಮಂಡಳಿಗೆ ದೂರನ್ನು ಸಹ ನೀಡಿದ್ದಾರೆ. ಒಂದುವಾರದೊಳಗೆ ಲಹರಿ ಕಂಪನಿ ಸೂಕ್ತ ಉತ್ತರ ನೀಡದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

 

ಆದರೆ ಲಹರಿ ವೇಲು ಅವರು ದಯಾಳ್‌ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. “ಈ ಹಿಂದೆ ನಾನು ಕಾನೂನಿನ ಮೂಲಕ ಮಾತ್ರ ನನ್ನ ಪರಿಹಾರ ಪಡೆದಿದ್ದೇನೆ. ಕಾನೂನು ಬಗ್ಗೆ ಗೊತ್ತಿಲ್ಲದ ನನ್ನ ಸಹೋದರನೊಂದಿಗೆ ಮಾತಾನಾಡಿ ವಿನಾಕಾರಣ ದಯಾಳ್ ವಿವಾದ ಮಾಡಿದ್ದಾರೆ. ಅಷ್ಟಕ್ಕೂ ನನಗೂ ದಯಾಳ್‌ಗೂ ಯಾವುದೇ ಮಾತುಕತೆ ನಡೆದಿಲ್ಲ. ಅವರು ನನಗೇ ಕರೆ ಮಾಡಿ ಅದರ ಹಕ್ಕುಗಳು ನಮ್ಮ ಬಳಿ ಇವೆಯೇ ಎಂಬುದನ್ನು ಕ್ಲ್ಯಾರಿಟಿ ಪಡೆಯಬಹುದಿತ್ತು. ಚಿತ್ರದ ಪ್ರಚಾರಕ್ಕಾಗಿ ಅವರು ಈ ರೀತಿ ಚೀಪ್‌ ಗಿಮಿಕ್‌ ಮಾಡುತ್ತಿದ್ದಾರೆ. “ಎಂದು ದಯಾಳ್ ವಿರುದ್ಧ ಹರಿಹಾಯ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top