ಸಮಾಚಾರ

ಕ್ಯಾಪ್ಟನ್ ಕೂಲ್ ಫಿದಾ ಆಗಿದ್ದಾರಾ ಈ ಬಾಲಿವುಡ್ ನಟಿಯರು- ಧೋನಿ ಜೊತೆಗೆ ಇವರ ಹೆಸರು ಥಳಕು ಹಾಕಿಕೊಂಡಿದ್ದೇಕೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಗೆ ಈಗ ಸಾಕ್ಷಿಯನ್ನು ಮದುವೆ ಆಗಿದ್ದಾರೆ. ಮದುವೆಗೂ ಮುನ್ನ ಕೆಲವು ನಟಿಯರ ಜೊತೆಯಲ್ಲಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿಯಾಗಿದ್ದವು. ಹಾಗಾದರೆ ಧೋನಿ ಯಾರ ಯಾರ ಜೊತೆ ಡೇಟಿಂಗ್ ಮಾಡಿದ್ದಾರೆ ನೋಡೋಣ ಬನ್ನಿ.

 

ಧೋನಿ-ದೀಪಿಕಾ ಪಡುಕೋಣೆ
2007 ರಲ್ಲಿ ಧೋನಿ ಹಾಗು ದೀಪಿಕಾ ವಿಚಾರವಾಗಿ ರೂಮರ್ ಎದ್ದಿದ್ದವು. ಸಂದರ್ಶನದಲ್ಲಿ ಮಾತನಾಡಿದ ಧೋನಿ ನನಗೆ ದೀಪಿಕಾ ಕಂಡ್ರೆ ಇಷ್ಟ ಎಂದು ಹೇಳಿದ್ದರು. ಕೆಲವು ಮೂಲಗಳ ಮಾಹಿತಿ ಪ್ರಕಾರ ಧೋನಿ ದೀಪಿಕಾ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿತ್ತು. ಇನ್ನು ಉದ್ದ ಕೂದಲಿಗೆ ಹೆಸರುವಾಸಿಯಾಗಿದ್ದ ಧೋನಿ ದೀಪಿಕಾಗೆ ಇಷ್ಟ ಆಗಲ್ಲ ಎಂದು ಟ್ರಿಮ್ ಮಾಡಿಸಿದ್ದರಂತೆ. ಆದರೆ ಎಂ ಎಸ್ ಧೋನಿ ಇದನ್ನು ನಿರಾಕರಿಸುತ್ತಾರೆ.

 

ಧೋನಿ- ಪ್ರೀತಿ ಸಿಮೋಯ್

ನಿರೂಪಕ ಹಾಗು ನಟ ಕಪಿಲ್ ಶರ್ಮಾ ಅವರ ಗೆಳತಿ ಪ್ರೀತಿ ಜೊತೆಯೂ ಧೋನಿ ಹೆಸರು ಕೇಳಿಬಂದಿತ್ತು. ಪ್ರೀತಿ ಸಿಮೋಯ್ ಜೊತೆಗೆ ಧೋನಿ ಡೇಟಿಂಗ್ ಮಾಡಿದ್ದರು ಎಂದು ಕೇಳಿಬಂದಿತ್ತು.

 

 

ಧೋನಿ – ರಾಯ್ ಲಕ್ಷ್ಮೀ

2009 ರಲ್ಲಿ ಧೋನಿ ಹಾಗು ನಟಿ ರಾಯ್ ಲಕ್ಷ್ಮಿ ಡೇಟಿಂಗ್ ಮಾಡಿದ್ದರು ಎಂದು ಸುದ್ದಿ ಆಗಿತ್ತು. ಆದರೆ ಸ್ವಲ್ಪ ದಿನಗಳ ನಂತರ ಈ ಸುದ್ದಿ ಮರೆಯಾಯಿತು.

 

ಧೋನಿ – ಆಸಿನ್

ಅಮಿರ್ ಖಾನ್ ಅಭಿನಯದ ಗಜಿನಿ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದವರು ನಟಿ ಅಸಿನ್. ಧೋನಿ ಹಾಗು ಅಸಿನ್ ಫ್ಯಾಷನ್ ಬ್ರಾಂಡ್ ಒಂದರ ಅಂಬಾಸಿಡರ್ ಆಗಿದ್ದರು. ಆಗ ಇಬ್ಬರ ಪರಿಚಯವಾಗಿ ನಂತರ ಪ್ರೀತಿಯಾಗಿತ್ತು ಎನ್ನಲಾಗಿದೆ. 2010 ರ ಐಪಿಎಲ್ ಸೆಮಿಪೈನಲ್ ಸಂದರ್ಭದಲ್ಲಿ ಧೋನಿ ಅಸಿನ್ ಮನೆಗೆ ಭೇಟಿ ನೀಡಿದ್ರು ಇದ್ದು ದೊಡ್ಡ ಸುದ್ದಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top