ಸಮಾಚಾರ

ಸಲಿಂಗಿ ವಿವಾಹವಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಐಸಿಸಿ ಮಹಿಳಾ ಕ್ರಿಕೆಟ್ ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು ಸಲಿಂಗಿ ವಿವಾಹ ಆಗಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವಾನ್ ನೈಕರ್ಕ್ ಅವರು ಸಹ ಆಟಗಾರ್ತಿ ಮತ್ತು ಆಲ್ ರೌಂಡರ್ ಮಾರಿಜಾನ್ನೆ ಕಾಪ್ ರನ್ನು ಮದುವೆ ಆಗಿದ್ದಾರೆ ಎಂದು ತಿಳಿದು ಬಂದಿದೆ. 2009ರ ಮಹಿಳಾ ವಿಶ್ವಕಪ್ ಸಂಧರ್ಭದಲ್ಲಿ ನಿಕೆರ್ಕ್ ಮತ್ತು ಕಾಪ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟಿದ್ದರು. ನಿಕೆರ್ಕ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್ 8ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಇನ್ನೂ ಕಾಪ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

 

 

ಕ್ರಿಕೆಟಿಗರು ಸಲಿಂಗಿ ಮದುವೆ ಆಗುತ್ತಿರುವುದು ಇದೆ ಮೊದಲೇನಲ್ಲ ಇದಕ್ಕೂ ಮೊದಲು ನ್ಯೂಜಿಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಆಮಿ ಸಟರ್ತೈಟ್ ಮತ್ತು ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಡೇನ್ ವಾನ್ ನೈಕರ್ಕ್ ಹಾಗು ಮಾರಿಜಾನ್ನೆ ಕಾಪ್ ಮದುವೆ ಚಿತ್ರಗಳು ವೈರಲ್ ಆಗಿದ್ದು ನವ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.

ಈ ಮದುವೆ ಸಮಾರಂಭಕ್ಕೆ ಸ್ನೇಹಿತರು ಹಾಗೂ ಸಂಬಂಧಿಕರು ಆಗಮಿಸಿ ಶುಭ ಹಾರೈಸಿದರು. ಈ ಮೂಲಕ ಸಲಿಂಗ ಮದುವೆಯಾದ ಎರಡನೇ ಜೋಡಿಯಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ನ್ಯೂಜಿಲ್ಯಾಂಡ್ ನ ಮಹಿಳಾ ಆಟಗಾರ್ತಿ ಆ್ಯಮಿ ಹಾಗೂ ಲಿಯಾ ಮದುವೆ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top