ಅರೋಗ್ಯ

ಕಡಲೆಕಾಯಿ ಬೀಜ ತಿಂದ ತಕ್ಷಣ ನೀರು ಕುಡಿಬೇಡಿ ಅಂತ ದೊಡ್ಡವರು ಹೇಳ್ತಾರೆ ಯಾಕೆ ಗೊತ್ತಾ? ತಿಳ್ಕೊಂಡ್ಮೇಲೆ ಇನ್ಮೇಲೆ ಆ ತಪ್ಪು ಯಾವತ್ತೂ ಮಾಡಲ್ಲ

ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಕಡಲೆಕಾಯಿ ಬೀಜ ತಿನ್ನುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ಉಂಟಾಗುವ ಅಪಮೃತ್ಯುವಿನಿಂದ ಪಾರಾಗಬಹುದು.

ಬೇಯಿಸಿದ ಕಡಲೆ ಬೀಜದಲ್ಲಿ ಪ್ಲಾವಿನೋಯ್ಡ್ಸ್ ಹಾಗು ಪಾಲಿ ಫಿನೋಲ್ಸ್ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಇದು ಹೃದಯದ ಸಮಸ್ಯೆ , ಕ್ಯಾನ್ಸರ್ ಯಿಂದ ಕಾಪಾಡುತ್ತದೆ.

ಒಂದು ಕಪ್ ಬೇಯಿಸಿದ ಕಡಲೆ ಬೀಜದಲ್ಲಿ ೨.೫ ಗ್ರಾಂ ಫೈಬರ್ ಇದ್ದು ಇದು ಜೀರ್ಣಕ್ರಿಯೆ , ಮಲಬದ್ಧತೆ ಸಮಸ್ಯೆಗಳಿಂದ ಕಾಪಾಡುತ್ತದೆ, ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡಂಟ್ಸ್ ಇರುತ್ತದೆ.

ಕಡಲೆ ಕಾಯಿ ಸಿಕ್ಕರೆ ಸಾಕು ಆರಾಮಾಗಿ ತಿಂದು ತೇಗುತ್ತೇವೆ , ಹಸಿಯಾಗೋ ಬೇಯಿಸಿಯೋ ಕಡಲೆ ಕಾಯಿಯ ರುಚಿಯೇ ಬೇರೆ , ಆದರೆ ದೊಡ್ಡವರು ಕಡಲೆ ಕಾಯಿ ತಿಂದ ಮೇಲೆ ನೀರು ಕುಡಿಯ ಬೇಡಿ ಎಂದು ಹೇಳುತ್ತಾರೆ ಯಾಕೆ ಗೊತ್ತೇ ?

ಕಡಲೆ ಕಾಯಿ ತಿಂದ ಮೇಲೆ ನೀರು ಕುಡಿಯಬಾರದು ಏಕೆಂದರೆ ಕಡಲೆ ಕಾಯಿಯಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದ್ದು ಇದನ್ನು ತಿಂದ ತಕ್ಷಣ ನೀರು ಕುಡಿದರೆ ಕೊಬ್ಬಿನ ಅಂಶ ಆಹಾರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ .

ಅಷ್ಟೇ ಅಲ್ಲದೆ ಕಡಲೆ ಕಾಯಿ ಉಷ್ಣ ಕಾರಕ ಕಡಲೆ ಕಾಯಿ ತಿಂದ ಮೇಲೆ ನೀರು ಕುಡಿದರೆ ತಂಪಾಗುತ್ತದೆ ಇದು ವಿರುದ್ಧವಾದ ಗುಣಗಳನ್ನು ಹೊಂದಿರುವುದರಿಂದ ಅಡ್ಡ ಪರಿಣಾಮಗಳಾದ ಶೀತ ಹಾಗು ಕೆಮ್ಮು ಉಂಟಾಗುತ್ತದೆ .

ಕಡಲೆ ಕಾಯಿ ತಿಂದರೆ ಸುಲಭವಾಗಿ ಜೀರ್ಣವಾಗುವುದಿಲ್ಲ , ಕಡಲೆ ಕಾಯಿ ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಕಾರಣವಾಗುತ್ತದೆ ,ಆದ್ದರಿಂದ ಕಡಲೆ ಕಾಯಿ ತಿಂದ ನಂತ್ರ ಕನಿಷ್ಠ 20 ನಿಮಿಷ ಆದ ನಂತ್ರ ನೀರು ಕುಡಿದರೆ ಒಳ್ಳೆಯದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top