ಮನೋರಂಜನೆ

ರೌಡಿಗಳ ಜೊತೆ ಯಾವುದೇ ಸಂಪರ್ಕ ಇಲ್ಲ, ಮಾಧ್ಯಮಗಳ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ- ಸಾಧು ಸ್ಪಷ್ಟನೆ.

ರೌಡಿ ಶೀಟರ್ ಸೈಕಲ್ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೊತೆ ಸಂಪರ್ಕ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಖುದ್ದು ಸಾಧುಕೋಕಿಲ ಅವರೇ ಜನರ ಮುಂದೆ ಸ್ಪಷ್ಟನೆ ನೀಡಿದ್ದಾರೆ.. ಕುಖ್ಯಾತ ಭೂಗತ ಕ್ರಿಮಿನಲ್ ಸೈಕಲ್ ರವಿ ಜೂನ್ 27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿ ಸದ್ಯ ಪೋಲೀಸರ ಅಥಿತಿಯಾಗಿದ್ದಾನೆ.. ಈ ಸುದ್ದಿಯನ್ನು ತೆವಲು ತೀರಿಸಿಕೊಳ್ಳಲು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ ಕೆಲ ಮಾನಗೇಡಿ ಮಾಧ್ಯಮಗಳು ಸಾಧುಕೋಕಿಲ ಅವರಿಗೂ ಸೈಕಲ್ ರವಿಗೆ ಸಂಭಂದವಿದೆ ಎಂಬ ಸುಳ್ಳು ಸುದ್ದಿಯನ್ನು ರಾಜಾರೋಷವಾಗಿ ಪ್ರಸಾರ ಮಾಡಿದ್ದವು.

 

 

ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದನ್ನು ಗಮನಿಸಿ ಎಚ್ಚೆತ್ತುಕೊಂಡ ಸಾಧು ಸೋಮವಾರ ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಈ ಬಗ್ಗೆ ವಿಚಾರಿಸಿಕೊಂಡು ಬಂದಿದ್ದರು.. ಇದೀಗ ಈ ವಿಚಾರದವಾಗಿ ತಮ್ಮ ಅಭಿಮಾನಿಗಳಿಗೆ ಸ್ಪಷ್ಟೀಕರಣ ನೀಡಿರುವ ಸಾಧು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಸುಳ್ಳುಸುದ್ದಿಯಾಗಿವೆ, ನನಗೂ ಭೂಗತಲೋಕಕ್ಕೂ ಯಾವುದೇ ಇರುವವರ ಜೊತೆ ನನಗೆ ಯಾವುದೇ ಸಂಪರ್ಕ, ಸಂಬಂಧ ಇಲ್ಲ.. ನ್ಯೂಸ್ ಚಾನೆಲ್ಲುಗಳಲ್ಲಿ ಬರುವ ನನಗೆ ಸಂಭಂದಪಟ್ಟ ಯಾವುದೇ ವಿಚಾರಗಳನ್ನು ನಂಬಬೇಡಿ.. ಹಾಗೇನಾದರೂ ವಿಷಯವಿದ್ದರೆ ನಾನೇ ವಯಕ್ತಿಕವಾಗಿ ತಿಳಿಸುತ್ತೇನೆ ಎಂದಿದ್ದಾರೆ.

ಸಾಧುಕೋಕಿಲ ಅವರ ವಿಡಿಯೋ ಇಲ್ಲಿ ನೋಡಿ

ಬ್ರೇಕಿಂಗ್ ನ್ಯೂಸ್ ಹಸಿವಿಗೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಸಮಾಜದಲ್ಲಿ ಯಾವುದೇ ವಿದ್ಯಮಾನಗಳು ನಡೆದರೂ ಅಥವಾ ಯಾವುದೇ ವಿಷಯಗಳು ವೈರಲ್ ಆದರೂ ಅವಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸುಳ್ಳು ಸುದ್ದಿಯನ್ನು ಬಿತ್ತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇದೀಗ ಇಂಥ ಕೆಲ ನ್ಯೂಸ್ ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ ಹುಚ್ಚಿಗೆ ಸ್ಯಾಂಡಲ್ ವುಡ್ ಹಾಸ್ಯನಟ ಸಾಧು ಬಲಿಯಾಗಿದ್ದಾರೆ., ಇನ್ನಾದರೂ ತಮ್ಮ ಕರ್ತವ್ಯ ನೆನೆದು ಸಮಾಜಕ್ಕೆ ಒಳ್ಳೆಯದಾಗುವ ಸಂದೇಶಗಳನ್ನ ನೀಡುವತ್ತ ನ್ಯೂಸ್ ಚಾನೆಲ್ಲುಗಳು ಗಮನಹರಿಸಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top