ಸಮಾಚಾರ

ದೇವರ ಅವತಾರ ತಾಳಿದ ನಟಿ ಶುಭಾ ಪೂಂಜ.

ನಿರ್ದೇಶಕ ಪುರುಷೋತ್ತಮ್ ಅವರು ಸದಾ ಭಕ್ತಿ ಪ್ರಧಾನ ಸಿನಿಮಾಗಳನ್ನೇ ನಿರ್ದೇಶನ ಮಾಡುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಈ ಬಾರಿ ಹಾಸನದಲ್ಲಿರುವ ಹಾಸನಾಂಬ ದೇವಿಯ ಚರಿತ್ರೆ ಕಟ್ಟಿಕೊಡುವ ‘ಹಾಸನಾಂಬ’ ಸಿನಿಮಾ ನಿರ್ದೇಶನ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾದಲ್ಲಿ ಶುಭಾ ಪೂಂಜ, ಪೂಜಾ ಗಾಂಧಿ, ಧರಣಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಾಗಿ ಗ್ಲಾಮರ್ ಪಾತ್ರದಲ್ಲೇ ಅಭಿನಯ ಮಾಡುವ ಶುಭಾ ಈ ಸಿನಿಮಾದಲ್ಲಿ ದೇವಿ ಅವತಾರ ತಾಳಿದ್ದಾರೆ. ‘ವೈಷ್ಣವಿ, ಮಹೇಶ್ವರಿ ಹಾಗು ಬ್ರಾಹ್ಮಿ ಈ ಮೂರು ದೇವತೆಗಳು ಸೇರಿದರೆ ಹಾಸನಾಂಬ ಆಗುತ್ತಾಳೆ. ಈ ಚಿತ್ರದಲ್ಲಿ ವೈಷ್ಣವಿ ದೇವಿ ಪಾತ್ರವನ್ನು ಶುಭಾ ಪೂಂಜ ಮಾಡುತ್ತಿದ್ದಾರೆ. ಹಾಸನಾಂಬ ಎಂಬ ಹೆಸರು ಬಂದಿದ್ದು ಹೇಗೆ, ಅದರ ಪವಾಡ ಏನು ಎಂಬುದರ ವಿಚಾರಗಳ ಮೇಲೆ ಚಿತ್ರದ ಕಥೆ ಇದೆ ಎಂದು ತಿಳಿದು ಬಂದಿದೆ.

 

With the blessings of Devi Hasanamba . Started the Devi Hasanamba movie .

A post shared by shubha Poonja . (@shubhapoonja) on

ಸದ್ಯ ಹಾಸನಾಂಬ ದೇವಿ ಚಿತ್ರಕ್ಕೆ ಮುಹೂರ್ತ ಮಾಡಿ, ಚಿತ್ರೀಕರಣ ಕೂಡ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಶುಭಾ ಪೂಂಜ ಹಾಸನಾಂಬ ದೇವಿಯ ಆಶೀರ್ವಾದದಿಂದ ‘ಹಾಸನಾಂಬ’ ಚಿತ್ರವನ್ನು ಶುರು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಶುಭಾ ಪೂಂಜಾ ಅವರು ಸಿಗಂಧೂರು ಚೌಡೇಶ್ವರಿ ಚಿತ್ರದಲ್ಲಿ ಚೌಡೇಶ್ವರಿ ಪಾತ್ರದಲ್ಲಿ ಅಭಿನಯ ಮಾಡಿದ್ದರು, ಸಿನಿಮಾದಲ್ಲಿನ ಶುಭಾ ಪಾತ್ರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ದೇವಿಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದು ಎಲ್ಲ ಅಭಿಮಾನಿಗಳು ಶುಭಾ ಪೂಂಜಾ ಅವರಿಗೆ ಶುಭ ಹಾರೈಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top