ಮನೋರಂಜನೆ

ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್- ಕೈ ಟ್ವೀಟ್’ಗೆ ನೆಟ್ಟಿಗರ ಲೇವಡಿ.

ವಿಚಾರವೊಂದರ ಕುರಿತಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಅಖಿಲ್ ಭಾರತೀಯ ಪಕ್ಷವು ಎಡವಟ್ಟು ಮಾಡಿಕೊಂಡಿದೆ.. ಹೌದು ಟ್ವೀಟ್ ಮಾಡುವ ವೇಳೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ನೆಟ್ಟಿಗರಿಂದ​ ಅಪಹಾಸ್ಯಕ್ಕೆ ಗುರಿಯಾಗಿದೆ.

ನೆನ್ನೆ (ಗುರುವಾರ) ಸಂಜೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ “ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜನರ ಮುಂದೆ ಲೈವ್ ಆಗಿಯೇ ಸುಳ್ಳು ಹೇಳುತ್ತಿದ್ದಾರೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ದೇಶಾದ್ಯಂತ 1141 ಮಣ್ಣು ಪರೀಕ್ಷಾ ಪ್ರಯೋಗಾಲಯಗಳಿದ್ದವು” ಎಂಬ ಟ್ವೀಟ್ ಪೋಸ್ಟ್ ಆಗಿತ್ತು.

 

 

ಈ ಟ್ವೀಟ್ಅ​ನ್ನು ಬಿಜೆಪಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ಟ್ಯಾಗ್​ ಮಾಡುವ ಬದಲು ನಟಿ​ ಪ್ರಿಯಾಂಕ ಚೋಪ್ರಾ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ನೆಟ್ಟಿಗರಿಂದ ಟ್ರೋಲ್’ಗೆ ಒಳಗಾಗಿದೆ. ಈ ಪ್ರಮಾದ ಗಮನಕ್ಕೆ ಬಂದ ಕೂಡಲೇ ಎಚ್ಚೆತ್ತುಕೊಂಡ ಕಾಂಗ್ರೆಸ್​ ತನ್ನ ಟ್ವೀಟ್ಅನ್ನು ಡಿಲೀಟ್ ಮಾಡಿದೆ. ಆದರೆ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಸಾಮಾಜಿಕ ಜಾಲತಾಣಿಗರು ಲೇವಡಿ ಮಾಡುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top