ಸಮಾಚಾರ

ಪಂಜಾಬಿ ಹಾಡಿಗೆ ಸ್ಟೆಪ್ ಹಾಕಿ ರಾತ್ರೋರಾತ್ರಿ ಫೇಮಸ್ ಆದ ಹುಡುಗ

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ. ಕಳೆದೆರಡು ತಿಂಗಳ ಹಿಂದೆಯಷ್ಟೇ ಹುಬ್ಬು ಹರಿಸೋ ಪುಟ್ಟ ವಿಡಿಯೋ ಮೂಲಕ ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಯದ್ವಾ ತದ್ವಾ ಫೇಮಸ್ ಆದ ಪ್ರಿಯ ಪ್ರಕಾಶ್ ಬಗ್ಗೆ ಗೊತ್ತಲ್ಲಾ. ಆಗ ಒಂದೆರಡು ದಿನಗಳಿಂದ ಪ್ರತಿಯೊಬ್ಬರ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲೂ ಪ್ರಿಯಾ ವಾರಿಯರ್‌ಳದ್ದೇ ಸದ್ದು. ಆಕೆಯ ಸೌಂಡು ಕಡಿಮೆಯಾಗುವ ಮುನ್ನವೇ ಅದೇ ರೀತಿಯ ಮತ್ತೊಬ್ಬ ಡ್ಯಾನ್ಸಿಂಗ್ ಅಂಕಲ್ ಪ್ರತ್ಯಕ್ಷ ಆಗಿದ್ದ. ಈಗ ಮತ್ತೊಬ್ಬ ಯುವಕ ಡಾನ್ಸ್ ಮೂಲಕ ಪ್ರತ್ಯಕ್ಷ ಆಗಿದ್ದಾನೆ.

ಕರಾಚಿ ಮೂಲಕ ಯುವಕನೊಬ್ಬ ಭಾರತೀಯ ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ವೈರಲ್ ಆಗಿದ್ದು ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನಿ ಮೂಲದ ಮೆಹರೋಜ್ ಬೇಗ್ ಬೇಬಿ ಗುಲಾಬಿ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿಕೊಂಡು ಹೈಪಸ್ರ್ಟಾರ್ ಮಾಲ್‍ ನಲ್ಲಿ ‘ಲಾಂಗ್ ಲಾಚಿ’ ಎಂಬ ಪಂಜಾಬಿ ಹಾಡಿಗೆ ಸ್ಟೆಪ್ ಹಾಕಿದ ವಿಡಿಯೋ ವೈರಲ್ ಆಗಿ ಸುಮಾರು 6.8 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

 

ಈ ವಿಡಿಯೋ ನೋಡಿ :

 

ಅನೇಕರು ಈ ಯುವಕನಿಗೆ ಪ್ರೋತ್ಸಾಹ ನೀಡುತ್ತಿದ್ದು, ಉತ್ತಮವಾಗಿ ಡಾನ್ಸ್ ಮಾಡಿದ್ದೀಯಾ ಹೀಗೆ ಡಾನ್ಸ್ ಮುಂದುವರೆಸು ಎಂದು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಯುವಕ ಇನ್ನು ವಿದ್ಯಾಭ್ಯಾಸ ಮಾಡುತ್ತಿದ್ದು. ಬಿಡುವಿನ ವೇಳೆಯಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಾನೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top