ಸಿನಿಮಾ

ಕಿಚ್ಚನನ್ನು ಹೊಗಳಿದ್ದಕ್ಕೆ ನಿಂದನೆ- ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ

‘ದಿ ವಿಲನ್’ ಚಿತ್ರದ ಟೀಸರ್ ರಿಲೀಸ್ ಆಗೋ ಮೊದಲು ರೀತಿಯ ವಿವಾದ ಸೃಷ್ಟಿ ಆಗಿತ್ತು. ಟೀಸರ್ ರಿಲೀಸ್ ಆದ ನಂತರ ಎರೆಡೆರಡು ಟೀಸರ್ ರಿಲೀಸ್ ಮಾಡಿ ಇನ್ನೊಂದು ರೀತಿಯಲ್ಲಿ ವಿವಾದ ಹುಟ್ಟಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ‘ದಿ ವಿಲನ್’ ಟೀಸರ್ ವೀವ್ಸ್ ಪಡೆದುಕೊಳ್ಳುತ್ತಿರುವುದನ್ನು ನೋಡಿದರೆ ಯೂಟ್ಯೂಬ್ ನಲ್ಲಿ ರೆಕಾರ್ಡ್ ಬ್ರೇಕ್ ಮಾಡುವಂತಿದೆ ಎಂದು ಶಿವಣ್ಣನ ಹ್ಯಾಂಡಲ್ ಹಾಕಿ ಸುದೀಪ್ ಅವರ ಟೀಸರ್ ಮಾತ್ರ ಪೋಸ್ಟ್ ಮಾಡಿದ್ದರು. ಇದು ಶಿವಣ್ಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ನೀವು ಕೇವಲ ಒಬ್ಬ ನಟರ ಪರವಾಗಿದ್ದೀರಿ ಎಂದು ಟೀಕೆಯ ಮಾತುಗಳು ಕೇಳಿ ಬಂದಿದ್ದವು. ಅಂದು ತಮ್ಮ ವಿರುದ್ಧ ಆಕ್ರೋಶಗೊಂಡ ಶಿವರಾಜಕುಮಾರ್ ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಯಾವುದೇ ಉತ್ತರ ನೀಡಿರಲಿಲ್ಲ​​. ಸ್ವತಃ ಕಿಚ್ಚ ಸುದೀಪ್ ರವರೆ ಎಂಟ್ರಿ ಕೊಟ್ಟು ರಿಷಬ್ ಪರವಾಗಿ ಮಾತನಾಡಿದ್ದರು. ಆದರೆ, ರಿಷಬ್ ಮಾತ್ರ ಸೈಲೆಂಟ್​ ಆಗಿಯೇ ಉಳಿದಿದ್ದರು. ಸದ್ಯ ರಿಷಬ್ ಈಗ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

 


ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ ಅವರು, ಅಂದು ನಾನು ಎರಡೂ ಟೀಸರ್​ಗಳನ್ನು ಪೋಸ್ಟ್​ ಮಾಡಿದ್ದೆ. ಆದರೆ ಕೆಲವರು ಸರಿಯಾಗಿ ಗಮನಿಸದೆ ಆರೋಪ ಮಾಡಿದ್ದಾರೆ. ನನಗೆ ಶಿವಣ್ಣನ ಮೇಲೆ ಅಪಾರವಾದ ಗೌರವವಿದೆ. ಡಾ. ರಾಜಕುಮಾರ್ ಮತ್ತು ಶಿವಣ್ಣನವರನ್ನು ನೋಡಿಯೇ ನಾವು ಸಿನಿಮಾ ರಂಗಕ್ಕೆ ಬಂದಿದ್ದು. ಅವರಿಗೆ ಗೌರವ ಕೊಡದೇ ಇನ್ನಾರಿಗೋ ಕೋಡೋಣ ಹೇಳಿ ಎಂದು ಹೇಳಿದ್ದಾರೆ.

ಶಿವಣ್ಣನ ಮೇಲೆ ಅಪಾರವಾದ ಗೌರವವಿದೆ ಅವರನ್ನು ಸೇರಿದಂತೆ ಮೇರು ನಟರುಗಳಾದ ದರ್ಶನ್​, ಸುದೀಪ್, ಯಶ್​ ಹಾಗೂ ಅಪ್ಪು ಅವರನ್ನೂ ಗೌರವಿಸುತ್ತೇನೆ ಎಂದು ಹೇಳಿರುವ ಅವ್ರು ಬೇರೆ ಭಾಷೆಯವರು ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ವಿಲನ್ ಹಾಗೂ ಕುರುಕ್ಷೇತ್ರ ಸಿನೆಮಾಗೆ ಬೆಂಬಲಿಸೋಣ ಎಂದು ಅವರು ಹೇಳಿದ್ದಾರೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ಶುಭಾಶಯವನ್ನು ಕೂಡ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top