ಮನೋರಂಜನೆ

ಮುಂದಿನವರ್ಷ ಬಿಡುಗಡೆಯಾಗಲಿದೆ ಸಂಜಯ್ ದತ್ ಆತ್ಮಚರಿತ್ರೆ.

ಬಾಲಿವುಡ್‌ನ ಈ ಹಿಂದಿನ ತಲೆಮಾರಿನ ನಟರಲ್ಲಿ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದ, ಸದಾ ಒಂದಿಲ್ಲೊಂದು ವಿವಾದಗಳಿಗೆ ಸಿಕ್ಕಿಕೊಳ್ಳುತ್ತಿದ್ದ ನಟ ಸಂಜಯ್ ದತ್. ತನ್ನ ಯೌವನದ ಹುಮ್ಮಸ್ಸಿನಲ್ಲಿ ಧಾರಾಳವಾಗಿಯೇ ಅಡ್ಡದಾರಿಯನ್ನೂ ಹಿಡಿದು ಆ ಹುರುಪಿನಲ್ಲಿ ಮಾಡಿಕೊಂಡಿದ್ದ ಯಡವಟ್ಟೊಂದಕ್ಕೆ ವರ್ಷಗಳ ಕಾಲ ಜೈಲು ಹಕ್ಕಿಯಾಗಿಯೂ ಹೊರ ಬಂದಿದ್ದಾನೆ. ಇಂಥಾ ಹಿನ್ನೆಲೆ ಇರುವ ಸಂಜಯ್ ದತ್ ಅವರ ಜೀವನದಾರಿತ ಚಿತ್ರ ‘ಸಂಜು’ ಕೂಡ ತೆರೆಮೇಲೆ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ.. ಇದೀಗ ಸಂಜಯ್ ದತ್ ಅವರು ಬರೆಯುತ್ತಿರುವ ಆತ್ಮಕತೆಯ ಬಿಡುಗಡೆಯ ದಿನಾಂಕ ಕೂಡ ಬಹಿರಂಗವಾಗಿದೆ.

 

 

ಈ ಹಿಂದೆ ಏಲ್ಲಿಯೂ ಹೇಳದ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಈ ಪುಸ್ತಕದಲ್ಲಿ ಸಂಜಯ್ ದತ್ ತಿಳಿಸಲಿದ್ದಾರೆ. ಮುನಿನಾ ವರ್ಷ ಸಂಜು ಬಾದ ಅರವತ್ತನೇ ವರ್ಷಕ್ಕೆ ಕಾಲಿಡುತ್ತಿದ್ದು ಅದರ ಅಂಗವಾಗಿ ಅವರ ಆತ್ಮಕತೆಯ ಪುಸ್ತಕ ಜುಲೈ 29, 2019ರಂದು ಬಿಡುಗಡೆಯಾಗಲಿದೆ.

ಈ ಪುಸ್ತಕವನ್ನು ‘ ಹರ್ಪರ್ ಕೊಲ್ಲಿನ್ಸ್’ ಪ್ರಕಾಶನ ಸಂಸ್ಥೆ ಬಿಡುಗಡೆ ಮಾಡಲಿದೆ. ಪುಸ್ತಕದಲ್ಲಿ ಸಂಜಯ್ ದತ್ ಅವರ ಮನದಾಳದ ಮಾತುಗಳನ್ನು ಓದುವ ತವಕದಲ್ಲಿ ಓದುಗರಿದ್ದಾರೆ. ಸಂಜಯ್ ದತ್ ಬಾಲ್ಯ, ಯೌವ್ವನ, ಬಾಲಿವುಡ್ ಲೋಕ, ವಿವಾದಗಳು, ಕಾರಾಗೃಹದಲ್ಲಿನ ಅನುಭವಗಳನ್ನು ಸಂಜು ಬಾಬಾ ಈ ಪುಸ್ತಕದಲ್ಲಿ ಹಂಚಿಕೊಳ್ಳಲಿದ್ದಾರಂತೆ.. ಸಂಜಯ್ ದತ್ ಅವರ ಆತ್ಮಕತೆಯ ಪುಸ್ತಕ ‘ಸಂಜು’ ಸಿನಿಮಾದಂತೆಯೇ ಸಕ್ಸಸ್ ಆಗುತ್ತದೆ ಎಂದು ಪ್ರಕಾಶಕ ಸಂಸ್ಥೆ ವಿಶ್ವಾಸಪಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top