ಅರೋಗ್ಯ

ಬೇವಿನ ಎಣ್ಣೆಯಿದ ಮಸ್ಕಿಟೋ ಲಿಕ್ವಿಡ್ ತಯಾರು ಮಾಡುವ ವಿಧಾನ ತಿಳಿದುಕೊಳ್ಳಿ. ರಾಸಾಯನಿಕ ಲಿಕ್ವಿಡ್ ಗಳಿಗೆ ಗುಡ್ ಬೈ ಹೇಳಿ

ಸೊಳ್ಳೆ ಅಪಾಯಕಾರಿ ಕೀಟವಾಗಿದೆ. ಇದರಿಂದ ನಮಗೆ ಅನೇಕ ಸಮಸ್ಯೆ ಉಂಟಾಗಬಹುದು. ಇವುಗಳನ್ನು ನಾವು ತಡೆಗಟ್ಟಲು ಅನೇಕ ರಾಸಾಯನಿಕ ವಸ್ತುಗಳಲ್ಲೂ ದುಂಡು ವೆಚ್ಚ ಮಾಡಿ ಬಳಸುತ್ತೇವೆ. ಆದರೆ ಇವುಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲವು. ಇವುಗಳನ್ನು ತಡೆಗಟ್ಟಲು ಮನೆಯಲ್ಲೇ ಸರಳ ವಿಧಾನದಿಂದ ಸೋಲೇ ನಿವಾರಕ ಮನೆಮದ್ದನ್ನು ನಾವು ತಯಾರು ಮಾಡಬಹುದು.

ಕಹಿ ಸಂಜೀವಿನಿ ಎಂದು ಹೆಸರುವಾಸಿಯಾಗಿರುವ ಬೇವು ನಮ್ಮ ದೇಶದಲ್ಲಿ ನಾನಾ ಭಾಗಗಳಲ್ಲಿ ಕಂಡುಬರುತ್ತದೆ. ಇದು ಅನೇಕ ರೋಗಗಲ್ಲೂ ನಿವಾರಣೆ ಮಾಡುತ್ತದೆ. ಬೇವನ್ನು ನಾವು ಸೊಳ್ಳೆ ನಿವಾರಣೆಗೆ ಕೂಡ ನಾವು ಬಳಸಬಹುದು. ತೆಂಗಿನ ಎಣ್ಣೆ ಮಾತು ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ ನಮ್ಮ ದೇಹಕ್ಕೆ ಹಚ್ಚುವುದರಿಂದ ಸೊಳ್ಳೆಗಳು ಕಚ್ಚುವುದಿಲ್ಲ.

ಇನ್ನು ಬೇವಿನ ಎಣ್ಣೆಯಿಂದ ಮೊಸ್ಕಿಟೊ ರೀಫಿಲ್ ಕೂಡ ತಯಾರು ಮಾಡುಬಹುದು ಅದು ಹೇಗೆ ಎಂದು ತಿಳಿಯೋಣ:

ಬೇಕಾಗಿರುವ ಸಾಮಗ್ರಿಗಳು:
ಹಳೆಯ ಮಸ್ಕಿಟೋ ರೀಫಿಲ್ ಕಂಟೇನರ್
3 – 4 ಕರ್ಪೂರ ಪುಡಿ ಮಾಡಿ
ಬೇವಿನ ಎಣ್ಣೆ

 

 

ತಯಾರಿಸುವ ವಿಧಾನ:

ಹಳೆಯ ಮಸ್ಕಿಟೋ ರೀಫಿಲ್ ಕಂಟೇನರ್ ಮುಚ್ಚಳವನ್ನು ತೆಗೆಯಬೇಕು, ಇದಕ್ಕೆ ಬೇವಿನ ಎಣ್ಣೆಯನ್ನು ಹಾಗು ಕರ್ಪುರದ ಪುಡಿಯನ್ನು ಸೇರಿಸಬೇಕು. ನಂತರ ಮಸ್ಕಿಟೋ ರೀಫಿಲ್ ಕಂಟೇನರ್ ಮುಚ್ಚಳವನ್ನು ಬಿಗಿಯಾಗಿ ಮೊದಲಿನ ರೀತಿ ಮುಚ್ಚಬೇಕು. ಈ ಕಂಟೇನರ್ ವನ್ನು ಸ್ವಿಚ್ ಗೆ ಹಾಕಿ ನಾವು ಬಳಸಬಹುದು. ಇದು ನೈಸರ್ಗಿಕವಾಗಿದ್ದು ಯಾವುದೇ ಅಪಾಯಕಾರಿ ಅಲ್ಲ.

ನೀಲಗಿರಿ ಹಾಗು ನಿಂಬೆಯ ತೈಲ : ನಿಂಬೆಯ ತೈಲ ಹಾಗು ನೀಲಗಿರಿ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಹಚ್ಚಿದರೆ ಸುಲಭವಾಗಿ ಸೊಳ್ಳೆಯನ್ನು ದೂರ ಮಾಡಬಹುದಾಗಿದೆ.. ಇದು ತ್ವಚೆಯ ಮೇಲೆ ಆ್ಯಂಟಿಸೆಪ್ಟಿಕ್‌ ಮತ್ತು ಕೀಟ ವಿಕರ್ಷಕವಾಗಿ ಕಾರ್ಯ ನಿರ್ವಹಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top