ಸಮಾಚಾರ

ಕುರುಕ್ಷೇತ್ರದೊಳಗೆ ನಡೆಯುತ್ತಿದೆ ಶೀತಲ ಸಮರ- ನಿಖಿಲ್ ಮೇಲೆ ಕೋಪಗೊಂಡರೆ ದರ್ಶನ್..?

ಸದ್ಯ ಕುರುಕ್ಷೇತ್ರದ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಹುಟ್ಟಲು ಬಹಳ ಕಾರಣಗಳಿವೆ ನಿರ್ಮಾಪಕ ಮುನಿರತ್ನ ಅವರ ಕನಸಿನ ಕೂಸಾಗಿರುವ ಈ ಚಿತ್ರಕ್ಕೆ ದೊಡ್ಡ ಬಂಡವಾಳವನ್ನೇ ಹೂಡಿದ್ದಾರೆ, ಮತ್ತೊಂದು ವಿಶೇಷತೆ ಅಂದರೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ 50 ನೇ ಸಿನಿಮಾ ಆಗಿದೆ. ಯಾವುದೇ ನಿರ್ಮಾಪಕರಿಗೆ ಟಾಪ್ ನಟ ದರ್ಶನ ಅವರ 50 ನೇ ಸಿನಿಮಾ ಡೇಟ್ಸ್ ಪಡೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ.

ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿರುವ ಕುರುಕ್ಷೇತ್ರ ಚಿತ್ರದ ಸುತ್ತ ಕೆಲವು ವಿವಾದಗಳು ಕೂಡ ಸುತ್ತಿಕೊಳ್ಳುತ್ತಿವೆ. ಎಲ್ಲವು ಅಂದು ಕೊಂಡಂತೆ ಆಗಿದ್ದರೆ ‘ಕುರುಕ್ಷೇತ್ರ’ ಸಿನಿಮಾ ಎರಡು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು ಆದರೆ ನಿರ್ಮಾಪಕರು ಚಿತ್ರವನ್ನು ತಡ ಮಾಡುತ್ತಲೇ ಬಂದರು. ಚಿತ್ರ ತಂಡವಾದಂತೆಲ್ಲ ವಿವಾದ ಹೆಚ್ಚಾಗುತ್ತಿವೆ.

 

 

ದರ್ಶನ್​​ ಈ ಚಿತ್ರದಲ್ಲಿ ದುಯೋರ್ಧನನಾಗಿ ಅಭಿನಯ ಮಾಡುತ್ತಿದ್ದು ಅವರಿಗೆ ದೊಡ್ಡ ಸ್ಟಾರ್​ ಕಾಸ್ಟ್​ ಇದೆ. ಆದ್ರೂ ಕೂಡ ಚಿತ್ರದಲ್ಲಿ ಅರ್ಜುನ್ ಮಗ ಅಭಿಮನ್ಯು ಪಾತ್ರಧಾರಿ ನಿಖಿಲ್ ಅವರ ಪಾತ್ರವನ್ನು ದೊಡ್ಡ ರೇಂಜಿಗೆ ಬಿಲ್ಡಪ್ ನೀಡಿ ಸಿನಿಮಾದಲ್ಲಿ ತೋರಿಸಿದ್ದಾರೆ ಎನ್ನಲಾಗಿದೆ. ಇದೆ ಕಾರಣಕ್ಕೆ ಈ ಚಿತ್ರದ ಬಗ್ಗೆ ದರ್ಶನ ಅಭಿಮಾನಿಗಳಲ್ಲಿ ಅಪಸ್ವರ ಕೇಳಿಬರುತ್ತಿದೆ ಎನ್ನಲಾಗುತ್ತಿದೆ. ಇನ್ನು ಕುಮಾರಸ್ವಾಮಿ ಅವರನ್ನು ಓಲೈಸಲು ಈ ರೀತಿ ಮಾಡಿದ್ದಾರೆ ಎಂದು ಕೂಡ ಮಾತುಗಳು ಕೇಳಿಬರುತ್ತಿವೆ.

ದರ್ಶನ 50 ನೇ ಸಿನಿಮಾದಲ್ಲಿ ದರ್ಶನ ಅವರಿಗೆ ಪ್ರಮುಖ ಪಾತ್ರ ಇರಬೇಕು ಎಂಬುದು ಅವರ ಅಭಿಮಾನಿಗಳ ಆಶಯವಾಗಿತ್ತು. ಆದರೆ ಚಿತ್ರದಲ್ಲಿ ಅಭಿಮನ್ಯು ಪಾತ್ರಧಾರಿಗೆ ಪ್ರಾಮುಖ್ಯತೆ ನೀಡುತ್ತಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ವಿವಾದಗಳು ಒಂದೆಡೆಯಾದರೆ ವಿವಾದಗಳಿಂದ ಚಿತ್ರಕ್ಕೆ ಪ್ರಚಾರ ಸಿಗುತ್ತಿರುವುದು ಸುಳ್ಳಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top