ಸಮಾಚಾರ

41 ವರ್ಷಗಳ ಹಿಂದಿನ ಈ ಫೋಟೋದಲ್ಲಿ ಅಣ್ಣಾವ್ರ​ ಜತೆ ಇರುವವರು ಯಾರು?

ಕನ್ನಡದ ಖ್ಯಾತ ನಟ ಡಾ. ರಾಜ್‌ಕುಮಾರ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.

 

 

 

ರಾಜಣ್ಣ ಅವರು ತಮ್ಮ ಸರಳತೆಗೆ ಹೆಸರುವಾಸಿ. ಚಿತ್ರೀಕರಣ ಸೆಟ್ ನಲ್ಲೂ ಕೂಡ ಅವರು ಸರಳತೆ ಮೆರೆಯುತ್ತಿದ್ದರು. ತಮ್ಮ ಬ್ಯುಸಿ ಷೆಡ್ಯೂಲ್ ನಲ್ಲೂ ಕೂಡ ತಮ್ಮ ಕುಟುಂಬ ಸದಸ್ಯರ ಜೊತೆ ಪ್ರೀತಿಯಿಂದ ಕಾಲ ಕಳೆಯುತ್ತಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಾಜಕುಮಾರ್ ಅವರ ಈ ಹಳೆಯ ಚಿತ್ರ ವೈರಲ್ ಆಗಿದೆ. ಅಂದಹಾಗೆ ಈ ಚಿತ್ರ ತೆಗೆದಿದ್ದು 41 ವರ್ಷಗಳ ಹಿಂದೆ. ಹಿರಿಯ ಪತ್ರಕರ್ತ ಜೆ.ಕುಮಾರ್ ಎಂಬುವವರು ಈ ಚಿತ್ರ ಕ್ಲಿಕ್ಕಿಸಿದ್ದಾರೆ.

ಈ ಫೋಟೋ ತೆಗೆದಾಗ ಡಾ. ರಾಜಕುಮಾರ ಅವರ ಕುಟುಂಬ ಸದಸ್ಯರು ಚೆನ್ನೈ ನಗರದ ಟಿ.ನಗರದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಹಿರಿಯ ಪತ್ರಕರ್ತ ಜೆ.ಕುಮಾರ್ ಅವರು ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗಿದ್ದಾಗ ಎಲ್ಲರು ಜೊತೆಗೂಡಿ ಊಟವನ್ನು ಮುಗಿಸಿ ಮನೆಯ ಹಾಲ್ ನಲ್ಲಿ ಟಿವಿ ನೋಡುತ್ತಾ ಕುಳಿತ್ತಿದ್ದ ಸಂಧರ್ಭದಲ್ಲಿ ಜೆ.ಕುಮಾರ್ ಈ ಫೋಟೋ ಕ್ಲಿಕ್ಕಿಸಿದ್ದರು. ಇನ್ನು ಈ ಚಿತ್ರದಲ್ಲಿ ರಾಜಕುಮಾರ್, ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಮಗಳು ಲಕ್ಷ್ಮೀ ಇದ್ದಾರೆ ಎಂದು ತಿಳಿದು ಬಂದಿದೆ. ಆಗಿನ ಕಾಲದಲ್ಲಿ ಟ್ರೆಂಡ್ ಆಗಿದ್ದ ಹಿಪ್ಪಿ ಕಟಿಂಗ್ ನ್ನು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಕೂಡ ಮಾಡಿಸಿದ್ದರು ಎಂಬುದನ್ನು ನಾವು ಚಿತ್ರದಲ್ಲಿ ಗಮನಿಸಬಹುದು.

ನಂತರದ ದಿನಗಳಲ್ಲಿ ರಾಜಕುಮಾರ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top