ಮನೋರಂಜನೆ

ಸೀತಾರಾಮ ಕಲ್ಯಾಣದ ಝಲಕ್ ತೋರಿಸೋಕೆ ಮುಹೂರ್ತ ಫಿಕ್ಸ್.

ಜಾಗ್ವಾರ್ ಚಿತ್ರದ ನಂತರ ನಿಖಿಲ್ ಕುಮಾರಸ್ವಾಮಿಯ ಮುಂದಿನ ಚಿತ್ರ ‘ಸೀತಾರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.. ಕುಮಾರಸ್ವಾಮಿ ಹೋಮ್ ಬ್ಯಾನರ್ ನಲ್ಲಿಯೇ ತಯಾರಾಗಿರುವ ಈ ಚಿತ್ರವೂ ಅದ್ಧೂರಿಯಾಗಿ ಮೂಡಿಬರುತ್ತಿದೆ. ಚಿತ್ರೀಕರಣವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸುತ್ತಿರುವ ನಿರ್ದೇಶಕ ಎ ಹರ್ಷ ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸಿಕೊಂಡು ಇತರೇ ಕೆಲಸ ಕಾರ್ಯಗಳತ್ತ ಗಮನ ಹರಿಸಲು ಪ್ಲಾನ್ ಮಾಡಿಕೊಂಡಿದ್ದರಂತೆ.. ಹೀಗಿರುವಾಗ ಚಿತ್ರತಂಡದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

 

 

ಚಿತ್ರದ ಟೀಸರ್ ಅನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಜುಲೈ 31 ರಂದು ರಾಮನಗರದಲ್ಲಿ ಬಿಡುಗಡೆಯಾಗಲಿದೆ. ಅಂದು ರಾಮನಗರದಲ್ಲಿ ಕರಗ ಮತ್ತು ಚಾಮುಂಡೇಶ್ವರಿ ಜಾತ್ರಾಮಹೋತ್ಸವ ನಡೆಯಲಿದ್ದು, ಆ ಮಹೋತ್ಸವದಲ್ಲಿ ಕುಮಾರಸ್ವಾಮಿ ಕುಟುಂಬದವರು ಪಾಲ್ಗೋಳ್ಳಲಿದ್ದಾರೆ. ಅದೇ ಸಂಧರ್ಭದಲ್ಲಿ ಸೀತಾರಾಮ ಕಲ್ಯಾಣದ ಟೀಸರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸುನೀಲ್ ಗೌಡ ಅವರ ನಿರ್ಮಾಣ ಮೇಲ್ವಿಚಾರಣೆ ಇರೋ ಸೀತಾರಾಮ ಕಲ್ಯಾಣ ರವಿ ಬಸ್ರೂರು ಅವರ ಸಂಗೀತದಿಂದ ಕಳೆಗಟ್ಟಲಿದೆ. ಇನ್ನುಳಿದಂತೆ ಸ್ವಾಮಿ ಛಾಯಾಗ್ರಹಣ, ರಾಮ್ ಲಕ್ಷಣ್ ಸಾಹಸ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಮತ್ತು ಮೋಹನ್ ಬಿ ಕೆರೆ ಕಲಾ ನಿರ್ದೇಶನದಲ್ಲಿ ಸೀತಾರಾಮ ಕಲ್ಯಾಣ ಮೂಡಿ ಬರಲಿದೆ.ಚಿತ್ರದಲ್ಲಿ ನಿಖಿಲ್’ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top