ಮನೋರಂಜನೆ

ಇನ್ನೂ ಬರೋಬ್ಬರಿ ಹತ್ತುವರ್ಷ ಶಿವಣ್ಣ ಯಾರ ಕೈಗೂ ಸಿಗೋದಿಲ್ಲ- ಕೈಯಲ್ಲಿರೋ ಸಿನಿಮಾಗಳೆಷ್ಟು ಗೊತ್ತಾ

ಬಹುಷಃ ಶಿವಣ್ಣನಷ್ಟು ಬ್ಯುಸಿ ಇರೋ ನಟ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಯಾವ ಚಿತ್ರರಂಗದಲ್ಲಿ ಕಾಣಸಿಗದಿಲ್ಲವೇನೋ ಗೊತ್ತಿಲ್ಲ? ಯಾಕಂದ್ರೆ ಶಿವಣ್ಣನ ಕೈಯಲ್ಲಿರುವ ಸಿನಿಮಾಗಳನ್ನು ನೋಡಿದರೆ ಎಂಥವರೂ ಕಂಗಾಲಾಗುತ್ತಾರೆ. ವರ್ಷವೊಂದಕ್ಕೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸುವ, ಒಂದು ಚಿತ್ರ ಮುಕ್ತಾಯವಾಗೋ ಮುನ್ನವೇ ಮತ್ತೊಂದು ಚಿತ್ರಕ್ಕೆ ಅಣಿಗೊಳ್ಳುವ ಅವರ ಕೈಲಿರೋ ಹೊಸಾ ಚಿತ್ರಗಳ ಪಟ್ಟಿ ನೋಡಿದರೇನೇ ಎಂಥವರೂ ಕಂಗಾಲಾಗುವಂತಿದೆ.. ಬಹುಶಃ ಈಗ ಶಿವಣ್ಣನ ಕೈಲಿರೋ ಚಿತ್ರಗಳ ಪಟ್ಟಿ ನೋಡಿದರೆ ಅವರ ಉತ್ಸಾಹದ ಬಗ್ಗೆ ಎಂಥವರಿಗಾದರೂ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ..

 

 

ಅಂದಹಾಗೆ ಸದ್ಯ ಶಿವಣ್ಣನ ಕೈಯಲ್ಲಿರುವ ಒಟ್ಟು ಚಿತ್ರಗಳ ಸಂಖ್ಯೆ ಬರೋಬ್ಬರಿ 20. ಇವೆಲ್ಲ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯಾಗುವುದಕ್ಕೆ ಏನಿಲ್ಲಾ ಅಂದ್ರೂ ಕನಿಷ್ಠ ಹತ್ತು ವರ್ಷ ಬೇಕು. ಹೀಗಾಗಿ ಇನ್ನೂ ಹತ್ತು ವರ್ಷಗಳ ಕಾಲ ಶಿವಣ್ಣ ನಾಟ್ ರೀಚೇಬಲ್.

ಸಧ್ಯ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಬಿಡುಗಡೆಗೆ ಸಿದ್ಧವಾಗಿದ್ದು ಇದರೊಂದಿಗೆ ರುಸ್ತುಂ, ಕವಚ, ದ್ರೋಣ ಚಿತ್ರಗಳೂ ಒಂದಷ್ಟು ಭಾಗಗಳ ಚಿತ್ರೀಕರಣವನ್ನು ಮುಗಿಸಿಕೊಂಡಿವೆ. ಉಳಿದಂತೆ ‘ಎಸ್‌ಆರ್‌ಕೆ’, ‘ಖದರ್’, ‘ವೈರಮುಡಿ’, ‘ಯಾರ್ ಆದ್ರೆ ನನಗೇನು’, ‘ಕನ್ವರ್ ಲಾಲ್’, ‘ದಂಗೆ’ ಚಿತ್ರಗಳ ಶೀರ್ಷಿಕೆ ಫೈನಲ್ ಆಗಿದ್ದು ಅವುಗಳ ಜೊತೆ ಇನ್ನೂ ಹೆಸರಿಡದ ‘ಪಿ ವಾಸು’, ‘ಎಪಿ ಅರ್ಜುನ್’, ‘ಮಂಜು ಸ್ವರಾಜ್’, ‘ನಾಗತಿಹಳ್ಳಿ ಚಂದ್ರಶೇಖರ್’, ‘ಟಿಎಸ್ ನಾಗಾಭರಣ’, ‘ಯೋಗರಾಜ್ ಭಟ್’ ನಿರ್ದೇಶನದ ಚಿತ್ರಗಳೂ ಕ್ಯೂನಲ್ಲಿವೆ.. ಅಷ್ಟೇ ಅಲ್ಲದೆ ಮಾತುಕತೆ ಹಂತದಲ್ಲಿರುವ ನಾಲ್ಕು ಇತರ ನಿರ್ದೇಶಕರ ಸಿನಿಮಾಗಳನ್ನೂ ಶಿವಣ್ಣ ಫೈನಲ್ ಮಾಡುವ ಸಾಧ್ಯತೆ ಇದೆ.

ಐವತ್ತು ವರ್ಷದ ದಾಟಿದ ನಟನೊಬ್ಬ ಇಪ್ಪತ್ತು ಸಿನಿಮಾಗಳಿಗೆ ಬುಕ್ ಆಗಿರುವ ನಿದರ್ಶನ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಅಂತ ಕಾಣುತ್ತೆ. ಆದರೆ ಶಿವಣ್ಣ 56ರ ಹರಯದಲ್ಲೂ ಅಷ್ಟೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ತಾವು ಆಲ್ ಟೈಮ್ ಯಂಗ್ ಅಂಡ್ ಎನರ್ಜಿಟಿಕ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top