ಮನೋರಂಜನೆ

ಬಂದೇ ಬಿಡ್ತು ನೋಡಿ ‘ದಿ ವಿಲನ್’ ಮೊದಲ ಹಾಡು.

ಪ್ರೇಕ್ಷಕ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ  ಸುದೀಪ್-ಶಿವಣ್ಣ ಕಾಂಬಿನೇಷನ್ನಿನ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಬೆಟ್ಟವಾಗುತ್ತಿದೆ. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಲನ್ ಚಿತ್ರದ ಟೀಸರ್ ಅಬ್ಬರಿಸಿದ ಇದೀಗ ಹಾಡುಗಳ ಸರದಿ. ಮೊದಲೇ ಹೇಳಿದ ಹಾಗೆ ಇಂದು ಬೆಳಿಗ್ಗೆ ಹತ್ತು ಗಂಟೆಗೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

 

 

‘ಐಯಾಮ್ ವಿಲನ್’ ಸಾಲಿನಿಂದ ಆರಂಭವಾಗುವ ಹಾಡಿನ ಲಿರಿಕಲ್ ವಿಡಿಯೋ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ. ಈ ಹಾಡಿಗೆ ಸಾಹಿತ್ಯವನ್ನು ನಿರ್ದೇಶಕ ಪ್ರೇಮ್ ಅವರೇ ಬರೆದಿದ್ದು ಶಂಕರ್ ಮಹಾದೇವನ್ ಅವರು ಹಾಡನ್ನು ಹಾಡಿದ್ದಾರೆ. ಉಳಿದಂತೆ ಚಿತ್ರದ ಎರಡನೇ ಹಾಡು ಜುಲೈ21 ರಂದು ಬಿಡುಗಡೆಯಾಗಲಿದೆ.

ಅಂದಹಾಗೆ ಹಾಡುಗಳನ್ನೆಲ್ಲಾ ಯೂಟ್ಯೂಬ್ ನಲ್ಲಿ ರಿವೀಲ್ ಮಾಡಿದ ನಂತರ ಪ್ರೇಮ್ ಅವರು ಹುಬ್ಬಳ್ಳಿ ಮತ್ತು ದೂರದ ದುಬೈ ಎರಡೂ ಕಡೆ ದೊಡ್ಡ ಮಟ್ಟದ ಆಡಿಯೋ ಸಮಾರಂಭಗಳನ್ನು ಆಯೋಜಿಸುವ ಪ್ಲಾನ್ ನಲ್ಲಿದ್ದಾರೆ. ಈ ಹಿಂದೆ ತಮಿಳಿನ ರಜಿನಿಕಾಂತ್ ಅವರ 2.0 ಚಿತ್ರದ ಆಡಿಯೊ ಬಿಡುಗಡೆಯಾದ ಸ್ಥಳದಲ್ಲಿಯೇ ದಿ ವಿಲನ್ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆಯಂತೆ., “ಬೇರೆ ಸ್ಥಳೀಯ ಭಾಷೆಯ ಚಿತ್ರಗಳು ವಿದೇಶಗಳಲ್ಲಿ ಬಿಡುಗಡೆಯಾಗುತ್ತಿವೆ. ಹಾಗಿರುವಾಗ ಕನ್ನಡದಲ್ಲಿ ಕೂಡ ಏಕೆ ಈ ಪ್ರಯತ್ನ ಮಾಡಬಾರದು? ತಮಿಳು ನಿರ್ದೇಶಕ ಎಸ್ ಶಂಕರ್ ದುಬೈಯಲ್ಲಿ ಆಡಿಯೋ ಲಾಂಚ್ ಮಾಡುತ್ತಾರೆ ಎಂದರೆ ನಾವು ಯಾಕೆ ಮಾಡಬಾರದು?” ಎಂಬ ಮಾತುಗಳನ್ನು ಪ್ರೇಮ್ ಆಡಿದ್ದಾರೆ.ಈ ಸಂಭಂದ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದು ಆದಷ್ಟು ಬೇಗ ಸಮಾರಂಭಗಳ ದಿನಾಂಕವನ್ನು ಘೋಷಿಸುತ್ತಾರಂತೆ.

ಸದ್ಯ ಸುದೀಪ್- ಆಮಿ ಜಾಕ್ಸನ್ ನಡುವಿನ ಹಾಡೊಂದನ್ನು ಹೊರತುಪಡಿಸಿ ಮಿಕ್ಕೆಲ್ಲಾ ಶೂಟಿಂಗ್ ಅನ್ನು ಮುಗಿಸಿಕೊಂಡಿರುವ ಪ್ರೇಮ್ ಅದನ್ನು ಕೂಡ ಬೇಗ ಮುಗಿಸಿ ಪ್ರಚಾರಕ್ಕೆ ಇಳಿಯಲಿದ್ದಾರಂತೆ. ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top