ದೇವರು

ದೇಶದಲ್ಲೇ ಅಪಾರ ಸಂಪತ್ತಿರೋ ಅನಂತ ಪದ್ಮನಾಭ ದೇವಸ್ಥಾನವನ್ನ ಕಾಪಾಡ್ತೀರೋ ಈ ಪ್ರಾಣಿ ಯಾವುದು ಗೊತ್ತಾ

ಅನಂತ ಪದ್ಮನಾಭ ದೇವಾಲಯದ ಸಂಪತ್ತನ್ನು ಕಾಯುತ್ತಿರುವ ಈ ವಿಶೇಷವಾದ ಪ್ರಾಣಿ ಯಾವುದು ?ನಿಮಗೆ ಗೊತ್ತೇ ?

ನಮ್ಮ ಭಾರತದಲ್ಲಿ ಹಲವಾರು ಮಂದಿರಗಳಿವೆ. ಅವುಗಳ ರಹಸ್ಯ ಮತ್ತು ಅಲ್ಲಿನ ಜನರ ಭಕ್ತಿಯು ನಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ಅಂತಹ ಒಂದು ಮಂದಿರ ಕೇರಳ ರಾಜ್ಯದಲ್ಲಿ ಇದೆ. ಕರ್ನಾಟಕ ಕೇರಳದ ಗಡಿ ಭಾಗದಲ್ಲಿರುವ ಕನ್ನಡಿಗರೇ ಹೆಚ್ಚಾಗಿ ಇಲ್ಲಿ ನೆಲೆಸಿರುವ ಕಾಸರಗೋಡಿನ ಕುಂಭೇಳೆಯಲ್ಲಿ ಇರುವ ಅನಂತಪುರ ದೇವಾಲಯದ ರಹಸ್ಯದ ಕುರಿತು ಇಂದು ನಾವು ತಿಳಿದುಕೊಳ್ಳೋಣ ಬನ್ನಿ.

ಈ ದೇವಾಲಯದಲ್ಲಿ ಒಂದು ಕೊಳ ಇದೆ. ಕೊಳದ ಮಧ್ಯದಲ್ಲಿ ಇರುವ ಕೇರಳ ರಾಜ್ಯದಲ್ಲಿರುವ ಏಕೈಕ ದೇವಾಲಯ ಇದಾಗಿದೆ. ಈ ದೇವಾಲಯದ ರಕ್ಷಣೆಯನ್ನು ಇಲ್ಲಿರುವ ಮೊಸಳೆಯು ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಮೊಸಳೆ ಬೇರೆ ಎಲ್ಲಾ ಮೊಸಳೆಗಳಿಗಿಂತ ತುಂಬಾ ವಿಬ್ಬಿನ್ನವಾಗಿದೆ. ಅದೇನೆಂದರೆ ಇದು ಮಾಂಸಹಾರಿಯಲ್ಲ ಈ ಮೊಸಳೆ ಸಸ್ಯಾಹಾರಿ .ಇದೇ ಈ ದೇವಾಲಯದಲ್ಲಿ ಇರುವ ವಿಶೇಷತೆಯಾಗಿದೆ.ಈ ಮೊಸಳೆಗೆ ಭಾವಿಯ ಎಂದು ಹೆಸರನ್ನು ಇಡಲಾಗಿದೆ.

 

 

ಹಿಂದೆ ಬ್ರಿಟಿಷರು ಇಲ್ಲಿ ಟೆಂಟನ್ನು ಹಾಕಿಕೊಂಡು ಹೊಸ ಮಾಡುತ್ತಿದ್ದರಂತೆ.ಈ ಮೊಸಳೆ ಇರುವುದನ್ನು ಅರಿತ ಅವರು ಅದಕ್ಕೆ ಗುಂಡು ಹಾರಿಸಿ ಸಾಯಿಸಿದ್ದರಂತೆ. ಅದನ್ನು ಸಾಯಿಸಿದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿನಗಳಲ್ಲೇ ಸತ್ತು ಹೋಗಿದ್ದಾನೆ.

ಆದರೆ ಪವಾಡ ಸದೃಶವೆಂಬಂತೆ ಸ್ವಲ್ಪ ದಿವಸಗಳಲ್ಲಿ ಮತ್ತೆ ಈ ಭಾವಿಯ ಮೊಸಳೆ ಮತ್ತೆ ಕಾಣಿಸಿಕೊಂಡಿದೆ. ಈಗ ಇರುವ ಮೊಸಳೆ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆ ಅಥವಾ ಉಪಟಳ, ಭಯವನ್ನು ನೀಡಿಲ್ಲ. ಈ ಭಾವಿಯ ಮೊಸಳೆ ಇರುವುದೇ ಇಲ್ಲಿನ ವಿಶೇಷತೆಯಾಗಿದೆ .ಇಲ್ಲಿ ಇರುವ ದೇವಸ್ಥಾನದ ಅರ್ಚಕರು ಭಾವಿಯ ಎಂದು ಕರೆದ ತಕ್ಷಣ ಅದು ಮೇಲೆ ಬಂದು ಅನ್ನಪ್ರಸಾದವನ್ನು ಸ್ವೀಕಾರ ಮಾಡುತ್ತದೆ. ಮಳೆಗಾಲ ಕಡಿಮೆಯಾದರೂ ಕೂಡ ಈ ಕ್ಷೇತ್ರದಲ್ಲಿ ಇರುವ ಕೊಳದ ನೀರಿನ ಮಟ್ಟ ಒಂದೇ ರೀತಿಯಾಗಿ ಇರುತ್ತದೆ.

ನೀರು ಸ್ವಲ್ಪ ಕಡಿಮೆಯಾದಾಗ ಗುಹೆಯಲ್ಲಿ ಮಲಗಿರುವ ಮೊಸಳೆಯನ್ನು ಕಾಣಬಹುದು.ಇಲ್ಲವೆಂದರೆ ಉಳಿದ ಸಮಯದಲ್ಲಿ ಅದು ಕಣ್ಣಿಗೆ ಕಾಣಿಸುವುದೇ ಇಲ್ಲ.ಇಲ್ಲಿ ದೇವರ ಪೂಜೆಯ ನಂತರ ನೈವೇದ್ಯವನ್ನು ಈ ಭಾವಿಯನಿಗೆ ನೀಡಲಾಗುತ್ತದೆ .ಬೇರೆ ಜನರು ಪ್ರಸಾಧವನ್ನು ತಿನ್ನಿಸುವ ಹಾಗಿಲ್ಲ. ಈ ಪ್ರಸಾದವನ್ನು ಕೇವಲ ಪೂಜಾರಿ ಮತ್ತು ಅರ್ಚಕರು ಮಾತ್ರ ಪ್ರಸಾದವನ್ನು ತಿನ್ನಿಸುತ್ತಾರೆ. ಈ ಭಾವಿಯ ಮೊಸಳೆ ಕೊಳದಲ್ಲಿರುವ ಮೀನುಗಳಿಗೂ ಸಹ ಯಾವುದೇ ಹಾನಿಯನ್ನು ಮಾಡಿದಂತಹ ಹಿನ್ನೆಲೆ ಕೂಡ ಇಲ್ಲ. ಅಂತಹ ವಿಶೇಷ ಪ್ರಾಣಿ ಈ ಮೊಸಳೆಯಾಗಿದೆ.

ಇನ್ನೂ ತಿರುವನಂತಪುರಂನಲ್ಲಿ ಇರುವ ಅನಂತಪದ್ಮನಾಭ ಸ್ವಾಮಿ ದೇವಾಲಯದ ಮೂಲಸ್ಥಾನ ಈ ದೇವಾಲಯ ಎಂದು ಹೇಳಲಾಗುತ್ತದೆ.ಈ ದೇವಾಲಯದ ಮೂರ್ತಿಯನ್ನು ಕಲ್ಲಿನಿಂದ ನಿರ್ಮಿಸಿಲ್ಲ ಬದಲಾಗಿ ಔಷಧೀಯ ವಸ್ತುಗಳಿಂದ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top