ಮನೋರಂಜನೆ

‘ಬಾಸ್’ ವಿವಾದದ ಬಗ್ಗೆ ರೆಬಲ್ ಸ್ಟಾರ್ ಅಂಬರೀಷ್ ಹೇಳಿದ್ದಿಷ್ಟು- ಅಂಬಿ ಪ್ರಕಾರ ಬಾಸ್ ಯಾರು ಗೊತ್ತಾ?

ಚಿತ್ರರಂಗದಲ್ಲಿ ಸ್ಟಾರ್‌ಗಳು ತಮ್ಮ ಪಾಡಿಗೆ ತಾವು ಅನ್ಯೋನ್ಯವಾಗಿದ್ದರೂ ಅಭಿಮಾನಿಗಳ ನಡುವೆ ಆಗಾಗ ತಿಕ್ಕಾಟ ಹೊತ್ತಿಕೊಳ್ಳುತ್ತಿರುತ್ತೆ. ಸದ್ಯ ಇಂಥಾದ್ದೇ ಒಂದು ಕೋಲ್ಡ್ ವಾರ್ ಮತ್ತೆ ಶುರುವಾಗಿ ಕಳೆದೊಂದು ತಿಂಗಳಿನಿಂದ ಅಭಿಮಾನಿಗಳ ನಡುವೆ ಕಾಳಗ ನಡೆಯುತ್ತಿದೆ. ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಂಥಾದ್ದೊಂದು ವಾರ್ ನಡೆಯಲು ಕಾರಣವಾಗಿರೋದು ‘ಬಾಸ್’ ಎಂಬ ಬಿರುದು. ಕೆಲ ದಿನಗಳಿಂದ ಸ್ಟಾರ್‌ಗಳ ಅಭಿಮಾನಿಗಳ ನಡುವೆ ಬಾಸ್ ಎಂಬ ಬಿರುದಿಗಾಗಿ ಶೀತಲ ಸಮರ ನಡೆಯುತ್ತಿರೋದು ಬಹುಷಃ ಎಲ್ಲರಿಗೂ ಗೊತ್ತಿರೋ ವಿಚಾರವೇ..

 

 

ಟಗರು ಚಿತ್ರದ ಶತದಿನದ ಪೂರೈಸಿದ ಅಂಗವಾಗಿ ನಿರ್ದೇಶಕ ಸೂರಿ ಶಿವಣ್ಣನಿಗೆ ‘ಬಾಸ್ ಆಫ್ ಸ್ಯಾಂಡಲ್ ವುಡ್’ ಎಂಬ ಬಿರುದು ನೀಡಿತ್ತು. ಇದೇ ಅಭಿಮಾನಿಗಳ ನಡುವೆ ‘ಬಾಸ್’ ವಿವಾದ ಹೊತ್ತಿಕೊಳ್ಳಲು ಕಾರಣವಾಗಿತ್ತು. ಶಿವರಾಜ್ ಕುಮಾರ್ ದರ್ಶನ್ ಮತ್ತು ಯಶ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನೇ ‘ಬಾಸ್’ ಅನ್ನಬೇಕು ಎಂಬ ತರೇಹವಾರಿ ವಾದ ಮಂಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟದ ಜೊತೆಗೆ ದೊಡ್ಡ ಚರ್ಚೆಗಳು ನಡೆದಿದ್ದವು.

ಈ ವಿಚಾರವಾಗಿ ಸ್ವತಃ ತಾವೇ ಪ್ರತಿಕ್ರಿಯಿಸಿದ್ದ ಶಿವಣ್ಣ “ಇಲ್ಲಿ ಯಾರಿಗೆ ಯಾರೂ ಬಾಸ್ ಇಲ್ಲ ಅವರವರ ಮನೆಗೆ ಅವರೇ ಬಾಸ್” ಎಂದು ವಾಸ್ತವದ ನೆಲೆಗಟ್ಟಿನಲ್ಲಿ ಹೇಳಿದ್ದರು. ಹೀಗಿದ್ದರೂ ಅಭಿಮಾನಿಗಳು ಮಾತ್ರ ‘ಬಾಸ್’ ತಿಕ್ಕಾಟವನ್ನು ಬಿಡುವಂತೆ ಕಾಣುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ.. ಈ ಎಲ್ಲಾ ವಿದ್ಯಮಾನಗಳ ನಡುವೆ ಚಿತ್ರರಂಗದ ಹಿರಿಯಣ್ಣ ಎನಿಸಿಕೊಂಡಿರುವ ರೆಬಲ್ ಸ್ಟಾರ್ ಅಂಬರೀಷ್ ಈ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅಂಬರೀಷ್ ಇಲ್ಲಿ ಯಾರೂ ಬಾಸ್ ಇಲ್ಲ ಎಂದು ಹೇಳಿದ್ದಾರೆ. “ಕನ್ನಡ ಚಿತ್ರರಂಗದಲ್ಲಿ ಕಲಾವಿದರ ನಡುವೆ ಕಿತ್ತಾಟವಾಗುವುದಿಲ್ಲ. ಇಲ್ಲಿ ಯಾರೂ ‘ಬಾಸ್’ ಇರೋದಿಲ್ಲ. ನಾವೆಲ್ಲಾ ಒಂದೇ ಕುಟುಂಬದವರು ಎಂಬ ಭಾವನೆ ಕಲಾವಿದರ ನಡುವೆ ಇದೆ ಆದರೆ ಅಭಿಮಾನಿಗಳಲ್ಲಿ ಮಾತ್ರ ಈ ರೀತಿಯ ಗೊಂದಲ ಉಂಟಾಗುತ್ತವೆ. ಅಭಿಮಾನಿಗಳು ಸುಮ್ಮನೆ ಹೀಗೆಲ್ಲ ಕಿತ್ತಾಡಬಾರದು.. ಇಲ್ಲಿ ಸಿನಿಮಾ ಚೆನ್ನಾಗಿ ಓಡುದ್ರೆ ಅವನೇ ಬಾಸ್. ಯಾರ‍್ಯಾರ ಸಿನಿಮಾ ಸೂಪರ್ ಹಿಟ್ ಆಗುತ್ತವೋ ಅವರೆಲ್ಲಾ ಬಾಸ್’ಗಳೇ,, ಆದರೆ ಡುತ್ತಾರೆ.ಒಟ್ನಲ್ಲಿ ಸಿನಿಮಾ ಚೆನ್ನಾಗಿ ಮಾಡೋರೆಲ್ಲಾ ಬಾಸ್‌ ಅಷ್ಟೆ” ಎಂದು ತಮ್ಮ ಧಾಟಿಯಲ್ಲೇ ಅಂಬರೀಷ್ ಹೇಳಿದರು.

ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಯಾರು ಬಾಸ್ ಎಂಬ ವಿವಾದ ಯಾರೇನೇ ಹೇಳಿದರೂ ತಣ್ಣಗಾಗುವಂತೆ ಕಾಣುತ್ತಿಲ್ಲ. ಬಾಸುಗಳೆಲ್ಲ ಅವರವರ ಸಿನಿಮಾ, ಶೂಟಿಂಗು ಅಂತ ತಮ್ಮದೇ ಲೋಕದಲ್ಲಿ ಹಾಯಾಗಿದ್ದರೂ ಅವರ ಅಭಿಮಾನಿಗಳು ಎನಿಸಿಕೊಂಡವರು ಮಾತ್ರ ಇದನ್ನೊಂದು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ನಾನಾ ರೀತಿಯ ಆಚರಣೆಗೆ ಇಳಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top