ಮನೋರಂಜನೆ

ಅಮ್ಮನಾಗಿ ಒಂದು ವರ್ಷ ಪೂರೈಸಿದ ಸನ್ನಿ ಲಿಯೋನ್- ಸಂತಸ ವ್ಯಕ್ತಪಡಿಸಿದ್ದು ಹೀಗೆ.

ಸನ್ನಿ ಲಿಯೋನ್ ಅಂದಾಕ್ಷಣ ರೋಮ ರೋಮವೂ ರೋಮಾಂಚವಾದಂತಾಗಿ ಕುಣಿದಾಡುವ ಪಡ್ಡೆಗಳು, ಒಳಗೊಳಗೇ ಸಂಭ್ರಮಿಸುವ ಮಡಿವಂತರಿಗೇನೂ ಇಲ್ಲಿ ಕೊರತೆ ಇಲ್ಲ. ಘನ ಮಾಧ್ಯಮಗಳು ಕೂಡಾ ಆಕೆಯ ಬೆತ್ತಲಿನತ್ತಲೇ ಫೋಕಸ್ ಮಾಡುತ್ತವೆ. ಅದರ ಸುತ್ತಲೇ ಸುದ್ದಿ ಹುಡುಕುತ್ತಾರೆ. ಇದೆಲ್ಲದರಿಂದಾಗಿ ಸನ್ನಿ ಲೊಯೋನ್ ಅಂದರೆ ಕಾಮೋತ್ತೇಜಕ ಸರಕೆಂಬಂತೆಯೇ ಆಗಿಹೋಗಿದೆ..

 

 

ನೀಲಿ ಚಿತ್ರಗಳಲ್ಲಿ ನಟಿಸೋದು ಆಕೆಯ ಅನಿವಾರ್ಯತೆಯೋ, ಹಣದ ಮೂಲವೋ ಆಕೆಗಷ್ಟೇ ಗೊತ್ತು. ಆದರೆ ಇದೆಲ್ಲದರಾಚೆಗೆ ಸನ್ನಿ ಲಿಯೋನ್‌ಗೊಂದು ಮಾನವೀಯ ಮುಖವಿದೆ. ಯಾರದೋ ಸಂಕಟವನ್ನು ತನ್ನದೆಂದುಕೊಳ್ಳುವ, ಮತ್ಯಾರದೋ ಕೂಸನ್ನು ಎದೆಗವುಚಿಕೊಂಡು ಸಂಭ್ರಮಿಸುವ ಅಮ್ಮನಿದ್ದಾಳೆ! ಸನ್ನಿ ಲಿಯೋನ್ ಮತ್ತು ಡ್ಯಾನಿಯಲ್ ದಂಪತಿ ಈ ಹಿಂದೆ ನಿಶಾ ಎಂಬ ಇಪ್ಪತ್ತೊಂದು ತಿಂಗಳ ಕೂಸನ್ನು ದತ್ತು ತೆಗೆದುಕೊಂಡಿದ್ದರು. ಆ ಮಗುವನ್ನು ಚೆಂದಗೆ ನೋಡಿಕೊಂಡಿರುವ ಸನ್ನಿ ಲಿಯೋನ್ ಅದರ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿ ಸಂಭ್ರಮಿಸಿದ್ದಳು. ಈ ಒಂದು ಮಗುವಿನ ದೇಖಾರೇಖಿಗೆಂದೇ ಒದ್ದಾಡಿ ತನ್ನ ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಂಡಿದ್ದ ಸನ್ನಿ ಇತ್ತೀಚಿಗೆ ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಮಕ್ಕಳಿಗೆ ತಾಯಿಯಾಗಿದ್ದರು. ಒಟ್ಟಿನಲ್ಲಿ ಬರೋಬ್ಬರಿ ಮೂರು ಮಕ್ಕಳಿಗೆ ಸನ್ನಿ ಈಗ ತಾಯಿಯಾಗಿದ್ದಾಳೆ.

 

 

ಇದೀಗ ವಿಷಯ ಏನಪ್ಪಾ ಅಂದ್ರೆ ತನ್ನ ಪುತ್ರಿ ನಿಶಾಳನ್ನು ದತ್ತು ಪಡೆದುಕೊಂಡು ನೆನ್ನೆಗೆ ಬರೋಬ್ಬರಿ ಒಂದು ವರ್ಷ ಕಳೆದಿದೆ. ಇದೇ ಸಂತೋಷವನ್ನು ಸನ್ನಿ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ತಮ್ಮ ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿದ್ದಾಳೆ “ಒಂದು ವರ್ಷದ ಹಿಂದೆ ನಿನ್ನನ್ನು ನಾವು ಮನೆಗೆ ಕರೆತಂದಾಗ ನಮ್ಮ ಜೀವನ ಬದಲಾಗಿತ್ತು.. ಇಂದು ನೀನು ನಮ್ಮೊಂದಿಗೆ ಒಂದು ವರ್ಷ ಪೂರೈಸಿರುವೆ. ನೀನು ನಮ್ಮೊಂದಿಗೆ ಕಳೆದಿರುವುದು ಕೇವಲ ಒಂದು ವರ್ಷವಷ್ಟೇ ಎಂದರೆ ನನಗೆ ನಂಬಲಾಗುತ್ತಿಲ್ಲ. ನಮ್ಮ ಜೀವನದ ಒಂದು ಭಾಗವಾಗಿರುವ ನೀನು ಪ್ರಪಂಚದ ಅತ್ಯಂತ ಸುಂದರ ಮಗು. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ನಿಶಾ ಕೌರ್ ವೈಬರ್'” ಎಂದು ಬರೆದುಕೊಂಡಿದ್ದಾಳೆ.

ಈ ಹಿನ್ನಲೆಯಲ್ಲಿ ಸನ್ನಿ ಇತರೇ ನಟಿಯರಿಗಿಂತಲೂ ಭಿನ್ನವಾಗಿ ಕಾಣಿಸುತ್ತಾಳೆ. ಆಕೆಯೊಳಗಿನ ಮಾತೃತ್ವ ನಿಜಕ್ಕೂ ಮನ ಸೆಳೆಯುತ್ತದೆ. ಆಕೆ ನೀಲಿ ಸಿನಿಮಾ ನಟಿಯಾಗಿದ್ದರೂ, ಏನೇ ಆಗಿದ್ದರೂ ಆಕೆಯೊಳಗಿನ ಅಮ್ಮ ಮಾನವೀಯ ಮನಸುಗಳನ್ನೆಲ್ಲ ತಾಕುತ್ತಾಳೆ. ಅಂದಹಾಗೆ ವೈರಲ್ ಆಗಬೇಕಿರೋದು ಅದ್ಯಾರೋ ಕಣ್ಣು ಹೊಡೆದ ವೀಡಿಯೋ ಅಲ್ಲ; ಇಂಥಾ ಮನುಷ್ಯತ್ವದ ವಿಚಾರಗಳು ವೈರಲ್ ಆಗಬೇಕಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top