ಮನೋರಂಜನೆ

ಸ್ಯಾಂಡಲ್‍ವುಡ್‍ನಲ್ಲಿ ಹೊಸ ಗಿಮಿಕ್ ಶುರುಮಾಡಿದ ಗೋಲ್ಡನ್ ಸ್ಟಾರ್ ಗಣೇಶ್.

ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಗಣ್ಣ ನಿರ್ದೇಶನದ ಹಾರರ್-ಕಾಮಿಡಿ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತೀಚಿಗೆ ಹರಡಿತ್ತಲ್ಲಾ ಆ ಸಿನಿಮಾ ಟೈಟಲ್ ಫೈನಲ್ ಆಗಿದ್ದು ಚಿತ್ರಕ್ಕೆ ‘ಗಿಮಿಕ್’ ಎಂದು ಹೆಸರಿಡಲಾಗಿದೆ. ಕಳೆದವಾರವಷ್ಟೇ ಶೂಟಿಂಗ್ ಆರಂಭಿಸಿರುವ ನಿರ್ದೇಶಕ ನಾಗಣ್ಣ ತಮ್ಮ ಟೀಮಿನೊಂದಿಗೆ ಬಿರುಸಿನ ಕೆಲಸದಲ್ಲಿ ತೊಡಗಿದ್ದಾರೆ.. ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಆದಷ್ಟು ಬೇಗ ಶ್ರೀಲಂಕಾದ ಹಲವು ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

 

 

ಈಗಾಗಲೇ ರಾಮ್ತಾ ಜೋಗಿ ಶೀರ್ಷಿಕೆಯ ಪಂಜಾಬಿ ಸಿನಿಮಾ ಮಾಡಿದ್ದ ಪಂಜಾಬಿ ಹುಡುಗಿ ರೋನಿಕಾ ಸಿಂಗ್ ಗಿಮಿಕ್ ನಲ್ಲಿ ಗಣೇಶ್’ಗೆ ನಾಯಕಿಯಾಗುತ್ತಿದ್ದಾಳೆ. ಈ ಮೂಲಕವೇ ಕನ್ನಡ ಸಿನಿಮಾ ಜಗತ್ತನ್ನು ಪ್ರವೇಸುತ್ತಿದ್ದಾಳೆ. ಚಿತ್ರದ ತಾರಾಗಣದಲ್ಲಿ ಸುಂದರ್ ರಾಜ್, ಶೋಭರಾಜ್, ಸಾಧು ಕೋಕಿಲಾ ಮತ್ತು ಗುರು ದತ್ ಸೇರಿದಂತೆ ಹಲವು ಕಲಾವಿದರು ಇದ್ದು ಇದೇ ಮೊದಲಬಾರಿಗೆ ಹಾರರ್ ಚಿತ್ರದಲ್ಲಿರುವ ಗಣೇಶ್ ತುಂಬಾನೇ ಉತ್ಸುಕರಾಗಿದ್ದಾರಂತೆ.

ಇದುವರೆಗೂ ಚಾಕೊಲೇಟ್ ಹೀರೊ ಆಗಿ ರೊಮ್ಯಾಂಟಿಕ್ ಚಿತ್ರೆಗಳಲ್ಲೇ ಹೆಚ್ಚು ನಟಿಸುತ್ತಾ ಹೃದಯ ಕದ್ದಿರುವ ಗಣೇಶ್ ಇದೇ ಮೊದಲ ಬಾರಿಗೆ ಹಾರರ್ ಚಿತ್ರವೊಂದರ ಮೂಲಕ ಕನ್ನಡಿಗರನ್ನು ಹೆದರಿಸಲು ಬರುತ್ತಿದ್ದಾರೆ.. ಚಿತ್ರದಲ್ಲಿ ಹಾರರ್ ಜತೆಗೆ ಗಣೇಶ್ ಅವರು ತಮ್ಮ ಎಂದಿನ ಕಾಮಿಡಿ ಮೂಲಕ ಜನರನ್ನು ರಂಜಿಸಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದು ವಿಜ್ಞೇಶ್ ಛಾಯಾಗ್ರಹಣ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top