ದೇವರು

ಶ್ರೀ ಕೃಷ್ಣನಿಗೆ 16,100 ಹೆಂಡತಿಯರು ನಿಜವಾಗಿಯೂ ಇದ್ದರೆ ? ಆಗದ್ರೆ ಇದರ ಹಿಂದೆ ಇರೋ ಕಥೆ ಆದ್ರೂ ಏನು? ತಿಳ್ಕೊಳ್ಳಿ .

ನರಕಾಸುರನು ಪ್ರಘಜ್ಯೋತಿಷ್ಯಪುರದ ರಾಜ .ಇವನು ವರಹಾ ರೂಪಿ ವಿಷ್ಣು ಹಾಗೂ ಭೂ ದೇವಿಯ ಪುತ್ರ .ಇವನು ಬಾಣಾಸುರನ ಸಹವಾಸದಿಂದ ಅತ್ಯಂತ ದುಷ್ಟನಾಗಿ ಬೆಳೆಯುತ್ತಾನೆ. ತನ್ನ ಸಾವು ತನ್ನ ತಂದೆ ತಾಯಿಯರಿಂದಲೇ ಬರಬೇಕು ಎಂಬ ವರವನ್ನು ಪಡೆದಿರುತ್ತಾನೆ.ಅಂದರೆ ಹೆತ್ತವರು ಮಕ್ಕಳನ್ನು ಕೊಲ್ಲುತ್ತಾರೆಯೇ, ಅಮರತ್ವವನ್ನು ಪಡೆಯಲು ಈ ತಂತ್ರವನ್ನು ಉಪಯೋಗಿಸುತ್ತಾನೆ. ತನಗೆ ಸಾವೇ ಇಲ್ಲ ಎಂಬ ಮದದಿಂದ ಅತ್ಯಂತ ಹೀನ ಕೃತ್ಯಗಳನ್ನು ರಾಜಾರೋಷವಾಗಿ ಮಾಡುತ್ತಿದ್ದ.ಈ ವಿಚಾರ ಸ್ವರ್ಗಲೋಕವನ್ನು ಕಂಗೆಡಿಸಿತ್ತು.

ದೇವತೆಯರ ಮಾತೆ ಆದಿತ್ಯ ಕರ್ಣಕುಂಡಲವನ್ನು ಅಪಹರಿಸಿದ್ದ. ವರುಣನ ಚತ್ರ ಚಮತ್ಕಾರವನ್ನು ಕಸಿದುಕೊಂಡು ಅವಮಾನಿಸಿದ್ದ . ದೇವ , ಯಕ್ಷ ,ಗಂಧರ್ವ, ಭೂಲೋಕ ಈ ಎಲ್ಲಾ ಕಡೆಯಿಂದ 16100 ಸ್ತ್ರೀಯರನ್ನು ಅಪಹರಿಸಿ ತಂದು ಸೆರೆಯಲ್ಲಿಟ್ಟಿದ್ದ. ಇವನ ಅತ್ಯಾಚಾರಗಳಿಗೆ ಕೊನೆಯೇ ಇರಲಿಲ್ಲ .
ಇವನ ಸೇನಾಧಿಪತಿಯಾದ ಮೂರನು ಅತ್ಯಂತ ಬಲಶಾಲಿಯಾಗಿದ್ದನು. ಇವನನ್ನು ಹಿಮ್ಮೆಟ್ಟಿಸುವುದು ಸುಲಭದ ಮಾತಾಗಿರಲಿಲ್ಲ. ದೇವರನ್ನು ,ಯಕ್ಷ ,ಕಿನ್ನರರನ್ನು ಸೋಲಿಸಿ ಕಳುಹಿಸುತ್ತಿದ್ದನು. ದ್ವಾಪರಯುಗದಲ್ಲಿ ಭೂದೇವಿಯು ಸತ್ಯಭಾಮೆಯ ರೂಪದಲ್ಲಿಯೂ, ವಿಷ್ಣುವು ಶ್ರೀ ಕೃಷ್ಣನ ರೂಪದಲ್ಲಿ, ಅವತರಿಸಿದರು.

 

 

ಅದಿತಿಯು ಸತ್ಯಭಾಮೆಯನ್ನು ಒಮ್ಮೆ ಕಂಡು ನರಕಾಸುರನಿಂದ ಉಂಟಾಗುತ್ತಿರುವ ಲೋಕ ಕಂಟಕಗಳ ಬಗ್ಗೆ ತಿಳಿಸಿದಳು. ಇದರಿಂದ ಕುಪಿತಳಾದ ಸತ್ಯಭಾಮೆಯು ಕೃಷ್ಣನಿಗೆ ತಿಳಿಸಿ ನರಕಾಸುರನನ್ನು ಎದುರಿಸಲು ತಾನು ಸಹ ಗರುಡವಾಹನದಲ್ಲಿ ಕೃಷ್ಣನೊಡನೆ ಪ್ರಘಜ್ಯೋತಿಷ್ಯಪುರಕ್ಕೆ ಹೊರಟರು.
ನರಾಕಾಸುರನ ಸೇನಾಧಿಪತಿಯಾದ ಮೂರನನ್ನು ಇವರು ಮೊದಲು ಎದುರಿಸಿದರು.ನಾರಾಯಣ ಶಸ್ತ್ರ ಹಾಗೂ ಆಗ್ನೇಯ ಶಸ್ತ್ರಗಳ ಸಹಾಯದಿಂದ ಮೂರನು ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಸುಲಭವಾಗಿ ಸೋಲಿಸಿ ಮುರನನ್ನು ಕೊಂದ ಕೃಷ್ಣನು “ಮುರಾರಿ” ಎನಿಸಿಕೊಂಡನು.

ನಂತರ ನರಕಾಸುರನೇ ಇವರನ್ನು ಎದುರಿಸಲು ಬಂದನು. ನರಕಾಸುರನು ಹಾಗೂ ಕೃಷ್ಣ ನಡುವೆ ಬೀಕರ ಯುದ್ಧ ಉಂಟಾಯಿತು. ನರಕಾಸುರನು ಪ್ರಯೋಗಿಸಿದ ಆಜ್ಞೆಯಾಸ್ತ್ರವನ್ನು ಕೃಷ್ಣನು ವರುಣಾಸ್ತ್ರದಿಂದ ನಿಷ್ಕ್ರಿಯಗೊಳಿಸಿದನು.ಬ್ರಹ್ಮಾಸ್ತ್ರವನ್ನು ತನ್ನ ಬ್ರಹ್ಮಾಸ್ತ್ರದಿಂದ ನಿಷ್ಕ್ರಿಯಗೊಳಿಸಿದನು. ಕಡೆಗೆ ನರಕಾಸುರನು ಶ್ರೀವೈಷ್ಣವಾಸ್ತ್ರ ಪ್ರಯೋಗಿಸಿದಾಗ ಕೃಷ್ಣನು ಬೇಕೆಂತಲೇ ಎಚ್ಚರ ತಪ್ಪಿದಂತೆ ನಟಿಸಿದನು.
ನರಕಾಸುರನು ತನ್ನ ತಂದೆ ತಾಯಿಯರಿಬ್ಬರಿಂದಲೇ ಮರಣ ಬರಬೇಕೆಂದು ಕೇಳಿಕೊಂಡಿದ್ದ ನಲ್ಲವೇ ? ಇದರಿಂದ ಕೋಪಗೊಂಡ ಸತ್ಯಭಾಮೆಯು ತಾನೂ ಕೂಡ ನರಕಾಸುರನ ಮೇಲೆ ಬಾಣಪ್ರಯೋಗ ಮಾಡಿ, ಅವನನ್ನು ನಿಷ್ಕ್ರಿಯಗೊಳಿಸಿದಳು, ಘಾಯಗೊಳಿಸಿದಳು. ನಂತರ ಕೃಷ್ಣ, ಸತ್ಯಭಾಮೆ ತನ್ನ ತಂದೆ ತಾಯಿಯರು ಎಂಬುದು ನರಕಾಸುರನಿಗೆ ತಿಳಿಯಿತು.ತನ್ನ ಹೀನ ಕೃತ್ಯಗಳಿಗೆ ಪಶ್ಚಾತಾಪ ಪಟ್ಟನು.

ತನ್ನ ಮರಣಕ್ಕೆ ಯಾರು ದುಃಖ ಪಡಬೇಕಾಗಿಲ್ಲ ಬದಲಾಗಿ ಸಂಭ್ರಮಿಸಲಿ ಎಂದು ಕೇಳಿಕೊಂಡನು. ಆದ್ದರಿಂದ ಕೃಷ್ಣ ಹಾಗೂ ಸತ್ಯಭಾಮೆ ಅವನಿಗೆ ಆ ವರವನ್ನು ಅನುಗ್ರಹಿಸಿದರು. ಕೃಷ್ಣನು ಅವನನ್ನು ತನ್ನ ಸುದರ್ಶನ ಚಕ್ರವನ್ನು ಪ್ರಯೋಗ ಮಾಡಿ ಸಂಹರಿಸಿದನು. ನರಕಾಸುರನ ಅತ್ಯಾಚಾರಕ್ಕೆ ಒಳಗಾಗಿ ಅಪಹರಿಸಲ್ಪಟ್ಟ 16100 ಸ್ತ್ರೀಯರ ಮಾನವನ್ನು ರಕ್ಷಣೆ ಮಾಡುವುದಕ್ಕಾಗಿ ಶ್ರೀಕೃಷ್ಣನು ಅವರನ್ನು ವರಿಸಿ ಸಮಾಜದಲ್ಲಿ ಅವರಿಗೆ ತಕ್ಕ ಸ್ಥಾನಮಾನ ಸಿಗುವಂತೆ ಮಾಡಿದನು. ಹೀಗೆ ನಾವು ನರಕಾಸುರನ ವಧೆಯ ದಿನವನ್ನು ನರಕಚತುರ್ದಶಿ ಎಂದು ಸಂಭ್ರಮದಿಂದ ಆಚರಣೆ ಮಾಡುತ್ತೇವೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top