ಮನೋರಂಜನೆ

ವೈರಲ್ ಆಯ್ತು ನಾಗರಹಾವಿನ ಬಗ್ಗೆ ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಬರೆದ ಅಭಿಮಾನದ ಪತ್ರ.

ಸಾಹಸಸಿಂಹ ವಿಷ್ಣವರ್ಧನ್ ನಮ್ಮಿಂದ ದೈಹಿಕವಾಗಿ ಮರೆಯಾಗಿ ವರ್ಷಗಳೇ ಕೆಳದರೂ ಅವರ ನೆನಪು ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಜರಾಮರ… ಅವ್ರ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಮನೆಮಾಡಿದ್ದಾರೆ.. ಆದರೀಗ ವಿಷ್ಣುದಾದರನ್ನು ಮತ್ತೆ ತೆರೆಮೇಲೆ ನೋಡೋ ಅವಕಾಶ ಸಿಕ್ಕಿದೆ. ಅದು ನಾಗರಹಾವು ಚಿತ್ರದ ಮೂಲಕ. 1972ರಲ್ಲಿ ತೆರೆಕಂಡಿದ್ದ ನಾಗರಹಾವು ಚಿತ್ರ ಆಧುನಿಕ ತಂತ್ರಜ್ಞಾನಗಳೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಎದುರು ಪ್ರತ್ಯಕ್ಷವಾಗುತ್ತಿದೆ.

 

 

ನಾಗರಹಾವು… ಈ ಎವರ್ ಗ್ರೀನ್ ಕನ್ನಡ ಸಿನಿಮಾಗೆ ಸ್ಪೆಷಲ್ ಪವರ್ ಇದೆ., ಹೌದು ಸಾಹಸಸಿಂಹ ವಿಷ್ಣುವರ್ಧನ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಮೊದಲ ಸಿನಿಮಾ ‘ನಾಗರಹಾವು’. ಹಾಗೆ ಬುಸ್ಸೆಂದು ಪರದೆ ಸೀಳಿಬಂದ ನಾಗರಹಾವು ಸೃಷ್ಟಿಸಿದ ಇತಿಹಾಸ ಬಹುದೊಡ್ಡದು. ವಿಷ್ಣುವರ್ಧನ್​ ಮತ್ತು ಅಂಬರೀಶ್​ ಅನ್ನೋ ಸೂಪರ್ ಸ್ಟಾರ್​ಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಈ ಚಿತ್ರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿದೆ.

ಜುಲೈ 20ರಂದು ಬಿಡುಗಡೆ:
ಆಧುನಿಕ ತಂತ್ರಜ್ಞಾನದ ಟಚ್ ಸಿಕ್ಕಿರುವ ನಾಗರಹಾವನ್ನು ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.. ಇದೀಗ ಚಿತ್ರದ ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು ಇದೇ ಜುಲೈ 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಇಂಥಾ ನಾಗರಹಾವು ಚಿತ್ರದ ಬಗ್ಗೆ ಚಿತ್ರ ಸಾಹಿತಿ, ನಟ ಮತ್ತು ನಿರ್ದೇಶಕ ಡಾ.ವಿ ನಾಗೇಂದ್ರಪ್ರಸಾದ್ ತಮ್ಮ ಫೇಸ್ಬುಕ್ ನಲ್ಲಿ ಪ್ರಕಟಿಸಿರುವ ಪೋಸ್ಟ್ ಒಂದು ವಿಷ್ಣು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಸ್ವತಃ ವಿಷ್ಣುದಾದಾನ ಅಪ್ಪಟ ಅಭಿಮಾನಿಯಾಗಿರುವ ನಾಗೇಂದ್ರ ಪ್ರಸಾದ್ ಬರೆದಿರುವ ಈ ಅಭಿಮಾನದ ಪಾತ್ರದಲ್ಲಿ ಚಿತ್ರದ ವಿಶೇಷತ್ಗಳನ್ನು ಎತ್ತಿ ತೋರಿಸಿದ್ದಾರೆ.

ನಾಗೇಂದ್ರ ಪ್ರಸಾದ್ ಅವರ ಅಭಿಮಾನದ ಪತ್ರದ ಯಥಾವತ್ತು ರೂಪ ಈ ರೀತಿ ಇದೆ.

70 ರ ದಶಕದ ಯುವಕರ ಮನಸ್ಸಿನಲ್ಲಿದ್ದ
ಆಸೆ-ಕನಸು-ಮೊಂಡು ಧೈರ್ಯ -ಭಂಡತನ-ತುಂಟತನ-ಒಳ್ಳೆತನ
ಎಲ್ಲದಕ್ಕೂ ರಾಯಭಾರಿಯಾದ -ಪ್ರತಿನಿಧಿಯಾದ ನಾಗರಹಾವಿನ ರಾಮಾಚಾರಿ.

ಹಾಗೇ..ಅಂದಿನ ಯುವತಿಯರು ಬಯಸುತ್ತಿದ್ದ ಪ್ರೇಮಿಯಾಗಿ ಅಲಮೇಲು ರೀತಿಯ ಸಂಪ್ರದಾಯವಾದಿ ಮನಸ್ಥಿತಿಯ ಯುವತಿಯರಿಗೂ
ಮಾರ್ಗರೇಟ್ ರೀತಿಯ
ಪಾಶ್ಚಿಮಾತ್ಯ ರೀತಿ ರಿವಾಜುಗಳಲ್ಲಿ ನಂಬಿಕೆ ಇಟ್ಟ ಹುಡುಗಿಯರಿಗೂ
ಅಚ್ಚುಮೆಚ್ಚಿನ ಹುಡುಗನಾಗಿ
ತೆರೆಯನ್ನು ಆವರಿಸಿಕೊಳ್ಳುತ್ತಾ..
ಸಹಜ ಸರಳತೆಯಿಂದ
ನಾಡಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ ಸಂಪತ್ ಕುಮಾರ್.

ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕನ ಕೈಗೆ ಸಿಕ್ಕು ಜನಮನ್ನಣೆ ಪಡೆದ ಪ್ರತಿಭೆಗಳು ಒಂದೇ ಎರಡೇ…
ಅಂಬರೀಶ್ ರಂತಹಾ ನಾಯಕನ ಉಗಮವೂ ನಾಗರ ಹಾವಿನಿಂದಲೇ..

ಕೆ.ಎಸ್.ಅಶ್ವಥ್ ರಂತಹಾ ಮೇರುನಟನ ವಿಶ್ವರೂಪ
ಲೀಲಾವತಿ ಅಮ್ಮ, ಅಂಕಲ್ ಲೋಕ್ ನಾಥ್, ಆರತಿ, ಜಯಂತಿ ಶಿವರಾಮಣ್ಣ..
ಎಂ.ಪಿ.ಶಂಕರ್…ಶಕ್ತಿ ಪ್ರಸಾದ್..ವಜ್ರಮುನಿ
ಹೀಗೆ..
ಪರಕಾಯ ಪ್ರವೇಶ ಮಾಡುವ ಕಲಾವಿದರ ದಂಡನ್ನು ನೋಡುವುದೇ ಒಂದು ರಸಾನುಭೂತಿ.

ತರಾಸು ಅವರ ಪಾತ್ರಗಳು
ವೀರಾಸ್ವಾಮಿ ಯವರ ಧಾರಾಳತನ

ವಿಜಯಭಾಸ್ಕರ್
ವಿಜಯನಾರಸಿಂಹ
ಆರ್.ಎನ್.ಜಯಗೋಪಾಲ್
ಪಿ.ಬಿ.ಎಸ್.
ಪಿ.ಸುಶೀಲ
ನಮ್ಮ ಹಿಂದಿನ ತಲೆಮಾರಿನ ಪ್ರತಿಭೆಗಳ ಮಾಸ್ಟರ್ ಪೀಸ್.
ನಾಗರ ಹಾವು.

ಡಾ.ವಿಷ್ಣುವರ್ಧನ್ ಆರಾಧ್ಯರಾಗಲು ನಾಂದಿಯಾದ ನಾಗರಹಾವು
ಮತ್ತೆ ತೆರೆಯ ಮೇಲೆ ಹೊಸ ತಾಂತ್ರಿಕ ಶಕ್ತಿಯೊದಿಗೆ ಬರುತ್ತಿದೆ.
ಅಭಿಮಾನಿಗಳಿಗೆ ರೋಮಾಂಚನವನ್ನೂ
ಕನ್ನಡಿಗರಿಗೆ ಹೆಮ್ಮೆಯನ್ನೂ
ತಂದೊಡ್ಡುತ್ತಿರುವ ಈಶ್ವರಿ ಸಂಸ್ಥೆಯ
ಬಾಲಾಜಿ ಯವರಿಗೆ ಅನಂತ ಧನ್ಯವಾದಗಳು.
ಬನ್ನಿ..ನಾಗರಹಾವು ಸಿನಿಮಾ ನೋಡೋಣ
ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿಗೆ
ಆ ಎಲ್ಲ ಪ್ರತಿಭೆಗಳನ್ನು ಪರಿಚಯಿಸೋಣ.
ಕನ್ನಡ ಇರುವವರೆಗೂ ನಮ್ಮ ರಾಮಾಚಾರಿ ಅಮರ.
—- ವಿ.ನಾಗೇಂದ್ರ ಪ್ರಸಾದ್.

ನಾಗರಹಾವು ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ತಂದೆ ವೀರಸ್ವಾಮಿಯವರು ನಿರ್ಮಾಣ ಮಾಡಿದ್ದರು. ಇದೀಗ ಅವರ ಎರಡನೇ ಪುತ್ರ ಬಾಲಾಜಿ ಈ ಚಿತ್ರವನ್ನು ರೀ ರಿಲೀಸ್ ಮಾಡಲು ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಶ್ರೀ ಈಶ್ವರಿ ಪ್ರೊಡಕ್ಷನ್​ ಜಾಹೀರಾತು ಹೊರಡಿಸಿದೆ. ಚಿತ್ರಕ್ಕೆ ನೂತನ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ಟಚ್ ನೀಡಲಿದ್ದು, ಮೊದಲಿಗಿಂತ ಹೈ ಕ್ವಾಲಿಟಿಯಲ್ಲಿ ಸಿನಿಮಾವನ್ನು ಹೊರತಂದಿದ್ದಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top