ಮನೋರಂಜನೆ

ನೇಣು ಬಿಗಿದುಕೊಂಡು ಪ್ರಾಣಬಿಟ್ಟ ಖ್ಯಾತ ನಟಿ- ಆತ್ಮಹತ್ಯೆಗೆ ಶರಣಾಗಳು ಕಾರಣವೇನು?

ತಮಿಳು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಜನಪ್ರಿಯ ನಟಿ ಪ್ರಿಯಾಂಕಾ ಇಂದು ಬೆಳ್ಳಂ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ನಿವಾಸದಲ್ಲಿನ ಕೊನೆಯೊಂದರಲ್ಲಿ ಫ್ಯಾನ್‌ಗೆ ಬಿಗಿಯಾಗಿ ನೇಣು ಬಿಗಿದುಕೊಂಡು ಪ್ರಾಣ ತ್ಯಜಿಸಿದ್ದಾರೆ.

 

 

ಪ್ರಿಯಾಂಕಾ ಆತ್ಮಹತ್ಯೆ ಬಗ್ಗೆ ಯಾರೊಬ್ಬರೂ ದೂರು ದಾಖಲಿಸಿಲ್ಲವಾದರೂ ಪೊಲೀಸರೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚನ್ನಾಗಿಯೇ ಇದ್ದ ನಟಿ ಇದ್ದಕ್ಕಿದ್ದ ಹಾಗೆ ನೇಣು ಹಾಕಿಕೊಳ್ಳಲು ಕಾರಣ ಏನಿರಬಹುದು ಎಂದು ಕಂಡುಹಿಡಿಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಒಂದು ವರ್ಗದ ಮೂಲಗಳ ಪ್ರಕಾರ ಪ್ರಿಯಾಂಕಾಳ ಸಂಸಾರದಲ್ಲಿ ಎದ್ದಿದ್ದ ಕಿತ್ತಾಟಗಳೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಮೂರು ವರ್ಷಗಳ ಹಿಂದೆ ಅರುಣ್‍ಬಾಲಾ ಎಂಬಾತನ ಜೊತೆ ಪ್ರಿಯಾಂಕಾ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಳು.. ಇಷ್ಟು ಇದಾಗಲೇ ಕಾಲ ಅನ್ಯೋನ್ಯವಾಗಿಯೇ ಇದ್ದ ದಂಪತಿ ಅದ್ಯಾವ ಕಾರಣಕ್ಕೋ ಏನೋ ಗಲಾಟೆ ಮಾಡಿಕೊಂಡು ಎರಡು ತಿಂಗಳಿಂದ ಬೇರೆಬೇರೆಯಾಗಿ ವಾಸವಾಗಿದ್ದರು ಎಂಬ ಮಾತುಗಳು ಕಾಲಿವುಡ್ ವಲಯದ ಕೇಳಿಬರುತ್ತಿವೆ.

ಅಂದಹಾಗೆ ತಮಿಳಿನ ‘ವಂಶಂ’ ಧಾರಾವಾಹಿಯಲ್ಲಿ ಪ್ರಿಯಾಂಕಾ ಅವರು ಜ್ಯೋತಿಕಾ ಪಾತ್ರವನ್ನು ಮಾಡುತ್ತಿದ್ದರು. ಇದೇ ಧಾರಾವಾಹಿಯಲ್ಲಿ ಖ್ಯಾತ ನಟಿ ರಮ್ಯಾಕೃಷ್ಣ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top