fbpx
ದೇವರು

ಈ 5 ದೇವಾಲಯಗಳ ದರ್ಶನದಿಂದ ಮಾಡಿದ ಪಾಪ ಕಳೆದು ಮೋಕ್ಷ ದೊರೆಯುತ್ತದೆಯಂತೆ ,ನಿಮಗೆ ಈ ದೇವಾಲಯಗಳ ಬಗ್ಗೆ ಗೊತ್ತಾದ್ರೆ ಖಂಡಿತಾ ಒಂದ್ಸಲ ಭೇಟಿ ಮಾಡೇ ಮಾಡ್ತೀರಾ .

ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ ಐದು ದೇವಾಲಯಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ನೋಡೋಣ ಬನ್ನಿ
ಭಾರತ ದೇಶ ಸಂಸ್ಕೃತಿ ಸಂಪ್ರದಾಯಕ್ಕೆ ಕನ್ನಡಿ ಇದ್ದಂತೆ ಈ ಕರ್ನಾಟಕ ರಾಜ್ಯ. ಮುಖ್ಯವಾಗಿ ಇಲ್ಲಿರುವ ದೇವಾಲಯದಲ್ಲಿನ ಶಿಲ್ಪ ಕಲೆಗಳು ನಮ್ಮ ಸಂಪ್ರದಾಯಗಳಿಗೆ ಪ್ರತಿಬಿಂಬ. ಈ ದಕ್ಷಿಣಾದಿ ರಾಜ್ಯದಲ್ಲಿ ತಮಿಳುನಾಡು ರಾಜ್ಯದ ನಂತರ ಅತ್ಯಂತ ಪ್ರಾಚೀನ ಹಾಗೂ ಪುರಾಣ ಪ್ರಾಧಾನ್ಯತೆಯನ್ನು ಹೊಂದಿರುವ ದೇವಾಲಯಗಳು ಕರ್ನಾಟಕದಲ್ಲಿ ಅತ್ಯಧಿಕ ಎಂದೆ ಹೇಳಬಹುದು. ಇಲ್ಲಿನ ಪರಮ ಪವಿತ್ರವಾದ ದೇವಾಲಯಕ್ಕೆ ಕೇವಲ ಭಾರತ ದೇಶದಲ್ಲಿನ ವಿವಿಧ ರಾಜ್ಯದಿಂದ ಅಲ್ಲದೆ ವಿದೇಶದಲ್ಲೂ ಕೂಡ ಅತಿ ಹೆಚ್ಚು ಪ್ರವಾಸಿಗರು ಮತ್ತು ಭಕ್ತರು ಭೇಟಿ ನೀಡುತ್ತಾರೆ.

ಟೆಂಪಲ್ ಟೂರಿಸಂನಲ್ಲಿ ತಮಿಳುನಾಡಿನ ನಂತರ ಅತ್ಯಧಿಕ ಆದಾಯವನ್ನು ಹೊಂದುತ್ತಿರುವ ರಾಜ್ಯದಲ್ಲಿ ಕರ್ನಾಟಕ ಕೂಡ ಒಂದು. ಇನ್ನು ಇಲ್ಲಿನ ದೇವಾಲಯದಲ್ಲಿನ ಆಚಾರ ವಿಚಾರಗಳು ಕೂಡ ವಿಭಿನ್ನವಾಗಿವೆ . ಈ ಕ್ರಮದಲ್ಲಿ ಕರ್ನಾಟಕದಲ್ಲಿ ಅತ್ಯಂತ ಪುರಾತನವಾದ ಹಾಗೂ ಪ್ರಸಿದ್ಧವಾದ ದೇವಾಲಯಗಳ ಬಗ್ಗೆ ತಿಳಿದುಕೊಳ್ಳೋಣ….. ಈ ದೇವಾಲಯಗಳಿಗೆ ಭೇಟಿ ನೀಡಿದರೆ ಮೋಕ್ಷವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಆದರೆ ಆ ದೇವಾಲಯಗಳು ಯಾವುವು ?

 

 

1.ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರ 
ಮೂಕಾಂಬಿಕಾ ಕ್ಷೇತ್ರವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರಿನಲ್ಲಿ ಇದೆ. ಇಲ್ಲಿ ಮೂಕಾಂಬಿಕೆ ನೆಲೆಸಿದ್ದಾಳೆ. ವರ್ಷವಿಡೀ ಈ ದೇವಾಲಯಕ್ಕೆ ಕರ್ನಾಟಕ ರಾಜ್ಯದಿಂದ ಅಲ್ಲದೆ ಕೇರಳ ರಾಜ್ಯದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇರುವ ದೇವಾಲಯ ಚಿಕ್ಕ ದೇವಾಲಯ ಪಟ್ಟಣವಾದ ಕೊಲ್ಲೂರು ಕುಂದಾಪುರ ತಾಲೂಕು ಕೇಂದ್ರದಿಂದ ಸುಮಾರು 38 ಕಿಲೋಮೀಟರ್ ದೂರದಲ್ಲಿ ಹಾಗೂ ಉಡುಪಿ ನಗರದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ.
ಇಲ್ಲಿನ ವಿಶೇಷತೆ ಏನೆಂದರೆ ಇಲ್ಲಿನ ಶಿವಲಿಂಗ . ಮೂಕಾಂಬಿಕೆ ದೇವಿಯು ಶಿವಲಿಂಗದ ರೂಪದಲ್ಲಿ ನೆಲೆಸಿದ್ದಾಳೆ .ಶಿವಲಿಂಗ ಹಾಗೂ ಶಕ್ತಿಯನ್ನು ಪ್ರತಿನಿಧಿಸುತ್ತದೆ . ಶ್ರೀ ಚಕ್ರದ ಮೇಲಿನ ಪಂಚಲೋಹದ ಮೂಕಾಂಬಿಕೆಯ ವಿಗ್ರಹವನ್ನು ಅದ್ವೈತ ಗುರು ಶ್ರೀ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದರು.

2. ಉಡುಪಿಯ ಶ್ರೀಕೃಷ್ಣ ದೇವಾಲಯ
ಇಲ್ಲಿ ಭಕ್ತರು ಮೂಲ ವಿರಾಟನನ್ನು ನೇರವಾಗಿ ದರ್ಶನ ಮಾಡಲು ಆಗುವುದಿಲ್ಲ . ಕೇವಲ ಒಂದು ಕಿಟಕಿಯ ದ್ವಾರದ ಸಹಾಯದಿಂದ ಮಾತ್ರವೇ ಕಾಣುವುದಕ್ಕೆ ಸಾಧ್ಯ ವಾಗುತ್ತದೆ. ಉಡುಪಿಯಲ್ಲಿನ ಪ್ರಸಿದ್ಧವಾದ ದೇವಾಲಯಗಳಲ್ಲಿ ಪ್ರಮುಖವಾದದ್ದು ಎಂದೇ ಹೇಳಬಹುದು. ಪುರಾಣ ಕಥೆಯ ಪ್ರಕಾರ ಶ್ರೀಕೃಷ್ಣನ ಪರಮ ಭಕ್ತನಾದ ಕನಕದಾಸರು ಸ್ವಾಮಿಯ ದರ್ಶನಕ್ಕೆ ಬಂದರೆ ಕೀಳು ಜಾತಿಯವನು ಎಂದು ಹೊರ ದಬ್ಬುತ್ತಿದ್ದರು.
ಆದ್ದರಿಂದ ಸ್ವಾಮಿಯ ದರ್ಶನಕ್ಕೆ ಬಂದ ಮಹಾಭಕ್ತನಾದ ಕನಕದಾಸನಿಗೆ ದರ್ಶನ ನೀಡುವ ಸಲುವಾಗಿ ಆಶ್ಚರ್ಯಕರವಾಗಿ ಸ್ವಾಮಿಯೇ ಹಿಂದೆ ತಿರುಗಿ ಕನಕದಾಸನ ಇದ್ದಲ್ಲಿಗೆ ಮುಖಮಾಡಿ ದರ್ಶನವನ್ನು ನೀಡುತ್ತಾನೆ. ಆದ್ದರಿಂದ ಇಲ್ಲಿನ ಮೂಲ ವಿಗ್ರಹವನ್ನು ಪ್ರವೇಶ ದ್ವಾರದಿಂದ ಅಲ್ಲದೆ ಇಂದಿಗೂ ಕಿಟಕಿಯ ಮುಖಾಂತರದಿಂದಲೇ ಭಕ್ತರು ದರ್ಶನ ಮಾಡುತ್ತಾರೆ.ಇಂತಹ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ತಮ್ಮ ಜನ್ಮವನ್ನು ಪಾವನವಾಗಿಸಿ ಕೊಳ್ಳುತ್ತಾರೆ.

3.ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ಸಾಕಷ್ಟು ಜನ ಗಣ್ಯರು ಭೇಟಿ ಕೊಟ್ಟಿದ್ದಾರೆ. ಅಂಥವರಲ್ಲಿ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್ ಕೂಡ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾದ ನಾಗ ಕ್ಷೇತ್ರವಾಗಿದೆ . ಸುತ್ತಲೂ ಕಾಡು, ನದಿಗಳು ಮತ್ತು ಅದ್ಭುತವಾದ ನೈಸರ್ಗಿಕ ಪರಿಸರವನ್ನು ಆನಂದಿಸಬಹುದಾಗಿದೆ .
ಸುಬ್ರಹ್ಮಣ್ಯ ಸ್ವಾಮಿಗೆ ಮೀಸಲಾಗಿರುವ ಈ ದೇವಾಲಯವು ಭಾರತದ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ .ದೇಶದ ಮೂಲೆ ಮೂಲೆಗಳಿಂದಲೂ ಕೂಡ ತಮ್ಮ ಸರ್ಪ ದೋಷವನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ದೇವಾಲಯಗಳ ಮೂಲಕ ಸಂಪರ್ಕ ವ್ಯವಸ್ಥೆ ಇದೆ.

4.ಧರ್ಮಸ್ಥಳ
ಶ್ರೀ ಕ್ಷೇತ್ರ ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಪ್ರಖ್ಯಾತಿ ಪಡೆದಿದೆ. ನೇತ್ರಾವತಿ ನದಿ ದಂಡೆಯ ಮೇಲಿರುವ ಧರ್ಮಸ್ಥಳ ದೇವಸ್ಥಾನಗಳ ಪಟ್ಟಣವಾಗಿದ್ದು. ಈ ಪಟ್ಟಣವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಇದೆ. ಭಗವಂತನಾದ ಶಿವನಿಗೆ ಸಮರ್ಪಿತವಾಗಿರುವ ಧರ್ಮಸ್ಥಳ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
ಮಂಜುನಾಥ ಎಂದು ಕರೆಯಲ್ಪಡುವ ಶಿವನ ಗರ್ಭಗುಡಿ ದೇವಸ್ಥಾನದಲ್ಲಿ ಜೊತೆಗೆ ಅಮ್ಮನವರು ಎಂದು ಕರೆಯಲ್ಪಡುವ ದೇವತೆಯ ಗುಡಿ ಮತ್ತು ಧರ್ಮದ ಕಾವಲು ದೇವತೆಗಳಾದ ಮತ್ತು ಧರ್ಮಗಳ ಗುಡಿಗಳು ದೇವಸ್ಥಾನದಲ್ಲಿವೆ. ಧರ್ಮಸ್ಥಳ ದೇವಸ್ಥಾನವು ಎಂಟು ನೂರು ವರ್ಷಗಳಿಗಿಂತ ಪ್ರಾಚೀನವಾದದ್ದು ಪುರಾತನವಾದದ್ದು ಎಂದು ಹೇಳಲಾಗಿತ್ತು. ಮಂಜುನಾಥೇಶ್ವರ ವಿಭಿನ್ನವಾಗಿ, ಅನನ್ಯ ಭಕ್ತಿಯಿಂದ ಪೂಜಿಸಲಾಗುತ್ತದೆ ವಾಸ್ತವವಾಗಿ ಅರ್ಚಕರು ಭಗವಂತನಾದ ವಿಷ್ಣುವಿನ ಅನುಯಾಯಿಗಳಾಗಿದ್ದಾರೆ.

5.ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯ .
ಹೊರನಾಡು ಅನ್ನಪೂರ್ಣೇಶ್ವರಿಯ ದೇವಾಲಯವು ಭದ್ರಾ ನದಿಯ ದಡದಲ್ಲಿದೆ .ಶ್ರೀ ಕ್ಷೇತ್ರವನ್ನು ಹೊರನಾಡು ಎಂದು ಕರೆಯಲಾಗುತ್ತದೆ. ಅನ್ನಪೂರ್ಣೇಶ್ವರಿ ದೇವಿ ಅಥವಾ ಅನ್ನ ದೇವತೆಗೆ ಸಮರ್ಪಿತವಾದ ದೇವಾಲಯವಾಗಿ ಈ ದೇವಾಲಯ ನಿರ್ಮಾಣ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ. ಇದು ರಾಜ್ಯದ ಪುರಾತನವಾದ ದೇವಾಲಯಗಳಲ್ಲಿ ಒಂದು . ದೇವಿಯ ವಿಗ್ರಹವು ಅತ್ಯಂತ ಸುಂದರವಾಗಿದ್ದು ದೇವಾಲಯಕ್ಕೆ ಬಂದು ಪ್ರಾರ್ಥಿಸಿದರೆ, ತಮ್ಮ ಜೀವನದಲ್ಲಿ ಎಂದಿಗೂ ಹಸಿವಿನಿಂದ ಬಳಲುವುದಿಲ್ಲ ಎಂದು ನಂಬಲಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top