ತಿಂಡಿ ತೀರ್ಥ

ಅಲ್ಲಿ ಇಲ್ಲಿ ತಿಂದು ಆರೋಗ್ಯ ಹಾಳು ಮಾಡ್ಕೊಳ್ಳೋ ಬದಲು ಮನೆಯಲ್ಲೇ ಮಾಡಿ ರುಚಿರುಚಿ ಗರಿಗರಿಯಾದ ಸಬ್ಬಕ್ಕಿ ವಡೆ

ಈ ಚಳಿಗಾಲದಲ್ಲಿ ಬಿಸಿ ಬಿಸಿಯಾದ ಸಬ್ಬಕ್ಕಿ ಅಥವಾ ಸೀಮೆ ಅಕ್ಕಿ ವಡೆ ಯಾವ ರೀತಿಯಾಗಿ ಮಾಡಬಹುದು ಎಂದು ತಿಳಿಯೋಣ ಬನ್ನಿ

 

 

ಸಬ್ಬಕ್ಕಿ ವಡೆ ಮಾಡಲು ಬೇಕಾದ ಪದಾರ್ಥಗಳು :

ಸಬ್ಬಕ್ಕಿ ಅಥವಾ ಸೀಮೆ ಅಕ್ಕಿ – 1 ಕಪ್
ಈರುಳ್ಳಿ – 1 ರಿಂದ 2
ಹಸಿಮೆಣಸಿನಕಾಯಿ – 4 ರಿಂದ 6
ಬೈಯಿಸಿರುವಂತ ಆಲೂಗೆಡ್ಡೆ – 2

ಕಡ್ಲೆಬೀಜವನ್ನು ಹುರಿದು ತರಿಯಾಗಿ – 1/2 ಕಪ್
ಉಪ್ಪು – ರುಚಿ ತಕ್ಕಷ್ಟು
ಕರೆಯಲು ಎಣ್ಣೆ

 

ಮಾಡುವ ವಿಧಾನ:

ಮೊದಲು ಒಂದು ಕಪ್ ಸಬ್ಬಕ್ಕಿ ಅಥವಾ ಸೀಮೆಅಕ್ಕಿ ಯನ್ನು ಚೆನ್ನಾಗಿ 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಸ್ಟೋವ್ ಮೇಲೆ ಪಾನ್ ಇಟ್ಟು ಕಡ್ಲೇಬೀಜವನ್ನು ಹುರಿದುಕೊಂಡು ತರಿಯಾಗಿ ಪುಡಿಮಾಡಿಕೊಳ್ಳಬೇಕು ನಂತರ ನೆನೆಸಿದ ಸಬ್ಬಕ್ಕಿ ಮೃದುವಾಗಿದ್ದರೆ ಒಂದು ಪಾತ್ರೆಗೆ ಹಾಕಿಕೊಳ್ಳಿ ಸಣ್ಣಗೆ ಹಚ್ಚಿರುವ ಈರುಳ್ಳಿ ,ಹಸಿಮೆಣಸಿನಕಾಯಿ ,ಬೈಯಿಸಿಕೊಂಡಿರುವ ಆಲೂಗೆಡ್ಡೆ ,ತರಿಯಾಗಿ ಪುಡಿಮಾಡಿಕೊಂಡಿರುವ ಕಡ್ಲೆಬೀಜ ಮತ್ತು ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಕಲಸಿಕೊಂಡ ನಂತರ ಅದನ್ನು ಚಪ್ಪಟೆ ಆಕಾರದಲ್ಲಿ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಕರಿದುಕೊಳ್ಳಬೇಕು.ತುಂಬಾ ಸುಲಭ ವಿಧಾನದಲ್ಲಿ ಸಬ್ಬಕ್ಕಿ ಅಥವಾ ಸೀಮೆ ಅಕ್ಕಿ ವಡೆ ಮಾಡಿಕೊಂಡು ತಿನ್ನಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top