fbpx
ದೇವರು

ಶ್ರೀ ಕಾಳಹಸ್ತಿ ದೇವಸ್ಥಾನದ ದರ್ಶನದ ನಂತರ ಅಪ್ಪಿತಪ್ಪಿನ್ನು ಈ ತಪ್ಪನ್ನು ಮಾಡಬಾರದು ,ಮಾಡಿದ್ರೆ ದರಿದ್ರ-ಪಾಪ ಸುತ್ತಿಕೊಂಡು ಪಡಬಾರದ ಕಷ್ಟ ಪಡಬೇಕಾಗುತ್ತದೆ.

ಶ್ರೀ ಕಾಳಹಸ್ತಿ ದೇವಸ್ಥಾನದ ದರ್ಶನದ ಬಳಿಕ ಬಹಳಷ್ಟು ಮಂದಿ ಭಕ್ತರು ಈ ತಪ್ಪನ್ನು ಸಾಮಾನ್ಯವಾಗಿ ಮಾಡುತ್ತಾರಂತೆ ಆದರೆ ಹಾಗೆ ಈ ತಪ್ಪನ್ನು ಮಾಡಬೇಡಿ. ಯಾಕೆ ಎಂದು ನಿಮಗೆ ಗೊತ್ತೇ ?

ಭಾರತ ದೇಶ ಇಂದೂ ಸಂಪ್ರದಾಯವನ್ನು ಹೊಂದಿರುವಂತಹ ಬೃಹತ್ ದೇಶವಾಗಿದೆ . ಭಾರತ ದೇಶದಲ್ಲಿ ಇಂದೂ ದೇವಾಲಯಗಳಿಗೆ ಲೆಕ್ಕವೇ ಇಲ್ಲ. ಭಾರತೀಯರು ಪ್ರತಿಯೊಬ್ಬರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ.ಕೆಲವು ಜನರು ದೇವಾಲಯಗಳನ್ನು ದರ್ಶನ ಮಾಡುವಾಗ ತಪ್ಪನ್ನು ಮಾಡುತ್ತಾರೆ .ಶ್ರೀ ಕಾಳಹಸ್ತೀಶ್ವರ ದೇವಸ್ಥಾನದ ದರ್ಶನದ ಬಳಿಕ ಬಹಳಷ್ಟು ಜನ ಭಕ್ತರು ಆ ತಪ್ಪನ್ನು ಮಾಡುತ್ತಾರಂತೆ .ಆದರೆ ಅಂತಹ ತಪ್ಪುಗಳನ್ನು ಮಾಡಬೇಡಿ. ಯಾಕೆ ಎನ್ನುವುದನ್ನು ? ಈಗ ತಿಳಿದುಕೊಳ್ಳೋಣ ಬನ್ನಿ.

ತಿರುಮಲ ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಿಕೊಳ್ಳಲು ಹೋಗುವ ಭಕ್ತರು ತಿಮ್ಮಪ್ಪನ ದರ್ಶನ ಮುಗಿದ ಬಳಿಕ ಸುತ್ತಲೂ ಇರುವ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಲು ಹೋಗುತ್ತಾರೆ. “ಪಾಪನಾಶನಂ ಕಾಣಿಪಾಕಂ” ಎಂದು ಕೊನೆಯದಾಗಿ ಶ್ರೀ ಕಾಳಹಸ್ತಿ ದರ್ಶನ ಪಡೆಯುತ್ತಾರೆ. ಇನ್ನು ಕೊನೆಯದಾಗಿ ಶ್ರೀ ಕಾಳಹಸ್ತಿಯನ್ನು ದರ್ಶನ ಮಾಡಿಕೊಂಡು ಬಳಿಕ ಇನ್ಯಾವ ದೇವಸ್ಥಾನಕ್ಕೂ ಹೋಗಬಾರದು ಎಂದು ಹೇಳುತ್ತಾರೆ. ಆ ರೀತಿ ಹೋದರೆ ಅನಿಷ್ಟ ಎಂಬ ಆಚಾರ ಇಂದೂ ಸಂಪ್ರದಾಯದಲ್ಲಿ ಬಂದಿದೆ.

 

 

ಇಷ್ಟಕ್ಕೂ ಯಾಕೆ ಆ ರೀತಿ ಮಾಡಬೇಕು ? ಶ್ರೀ ಕಾಳಹಸ್ತಿ ದೇವಾಲಯವನ್ನು ಯಾಕೆ ಕೊನೆಯಲ್ಲಿ ದರ್ಶನ ಮಾಡಬೇಕು ? ಶ್ರೀ ಕಾಳಹಸ್ತಿ ದರ್ಶನದ ಬಳಿಕ ಬೇರೆ ಇನ್ಯಾವ ದೇವಾಲಯಕ್ಕೂ ಯಾಕೆ ಹೋಗಬಾರದು ? ಹೋದರೆ ಏನು ಆಗುತ್ತದೆ ? ಯಾಕೆ ನೇರವಾಗಿ ಮನೆಗೆ ಹೋಗಬೇಕು ? ಬನ್ನಿ ತಿಳಿದುಕೊಳ್ಳೋಣ.

ಪಂಚಭೂತಗಳ ನಿಲಯ
ಈ ವಿಶಾಲ ವಿಶ್ವ ಗಾಳಿ ,ಆಗಸ ,ಭೂಮಿ, ನೀರು ,ಬೆಂಕಿ ಪಂಚಭೂತಗಳು. ಇವಕ್ಕೆ ಪ್ರತಿಯಾಗಿ ಭೂಮಿಯ ಮೇಲೆ ಪಂಚಭೂತ ಲಿಂಗಗಳಿವೆ .ಅದರಲ್ಲಿ ಒಂದು ಚಿತ್ತೂರು ಜಿಲ್ಲೆಯಲ್ಲಿನ ,ಶ್ರೀಕಾಳಹಸ್ತಿಯಲ್ಲಿನ, ಶ್ರೀ ಕಾಳಹಸ್ತೀಶ್ವರ ದೇವಾಲಯದ ವಾಯು ಲಿಂಗ. ಇಲ್ಲಿನ ಗಾಳಿ ಸ್ಪರ್ಶಿಸಿದ ಬಳಿಕ ಯಾವುದೇ ದೇವಾಲಯಗಳಿಗೂ ಹೋಗಬಾರದು ಎಂಬ ಆಚಾರವಿದೆ. ಇದರಲ್ಲಿ ಸತ್ಯ ಇಲ್ಲದಿಲ್ಲ.
ಸರ್ಪದೋಷ, ರಾಹು-ಕೇತುಗಳ ದೋಷ ಇರುವವರು ಇಲ್ಲಿಗೆ ಬಂದ ನಂತರ ಸಂಪೂರ್ಣ ನಿವಾರಣೆಯಾಗುತ್ತದೆ. ಶ್ರೀ ಕಾಳಹಸ್ತಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿಯ ದರ್ಶನದಿಂದ ಸರ್ಪ ದೋಷ ಕೂಡ ನಿವಾರಣೆಯಾಗುತ್ತದೆ. ವಿಶೇಷ ಪೂಜೆಗಳನ್ನು ಮಾಡಿದ ಬಳಿಕ ನೇರವಾಗಿ ಮನೆಗೆ ಹೋಗಬೇಕೆಂದು ಹೇಳುತ್ತಾರೆ ಇಲ್ಲಿನ ಪೂಜಾರಿಗಳು .

ಕಾರಣ 
ದೋಷ ನಿವಾರಣೆಯಾಗಬೇಕಾದರೆ ಶ್ರೀ ಕಾಳಹಸ್ತಿಯಲ್ಲಿ ಪಾಪಗಳನ್ನು ಬಿಟ್ಟು ಮನೆಗೆ ಹೋಗಬೇಕು. ಮತ್ತೆ ಇನ್ಯಾವುದೇ ದೇವಸ್ಥಾನಕ್ಕೆ ಹೋದರು ಸಹ ದೋಷ ನಿವಾರಣೆ ಇರುವುದಿಲ್ಲ ಎಂಬುದು ಅಲ್ಲಿನ ಪೂಜಾರಿಗಳು ಹೇಳುತ್ತಾರೆ. ಗ್ರಹಣಗಳು, ಶನಿ ಬಾಧೆ, ಪರಮ ಶಿವನಿಗೆ ಇರುವುದಿಲ್ಲ. ಉಳಿದ ಎಲ್ಲಾ ದೇವರಿಗೂ ಶನಿಪ್ರಭಾವ ಗ್ರಹಣದ ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ .
ಇದಕ್ಕೆ ಇನ್ನೊಂದು ಆಧಾರ ಚಂದ್ರ ಗ್ರಹಣ . ಈ ಗ್ರಹಣದ ದಿನ ಕಲಿಯುಗದ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿರುವ ತಿರುಮಲ ತಿರುಪತಿ ದೇವಸ್ಥಾನ ಸೇರಿದಂತೆ ಎಲ್ಲಾ ದೇವಾಲಯಗಳನ್ನು ಸಹ ಮುಚ್ಚುತ್ತಾರೆ. ಗ್ರಹಣದ ನಂತರ ಸಂಪ್ರೋಕ್ಷಣೆ ಮಾಡಿ ಆಗ ಪೂಜೆಗಳನ್ನು ಆರಂಭಿಸುತ್ತಾರೆ . ಆದರೆ ಗ್ರಹಣದ ಸಮಯದಲ್ಲಿ ಶ್ರೀ ಕಾಳಹಸ್ತೀಶ್ವರ ದೇವಾಲಯ ಮಾತ್ರ ತೆರೆದೇ ಇರುತ್ತದೆ . ಅಷ್ಟೆ ಅಲ್ಲ ನಿತ್ಯ ಪೂಜೆಗಳು ಸಹ ನಡೆಯುತ್ತಲೇ ಇರುತ್ತವೆ. ಹಾಗಾಗಿ ಇಲ್ಲಿನ ದೇವರ ದರ್ಶನದ ಬಳಿಕ ಬೇರೆ ಯಾವ ದೇವರ ದರ್ಶನದ ಅಗತ್ಯವೂ ಇಲ್ಲ ಎಂಬುದು ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top