ದೇವರು

ಮೈಸೂರು ರಾಜರು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ 500 ಕೋಟಿ ಬೆಲೆ ಬಾಳುವ ಗುಲಾಭಿ ರಂಗಿನ ವಜ್ರ ಏನ್ ಆಯಿತು?ಇದರ ಹಿಂದೆ ಇರುವ ರಹಸ್ಯ ವಾದರು ಏನು ?ಇಲ್ಲಿದೆ ನೋಡಿ ನಂಬಲಾರದ ರೋಚಕ ಸತ್ಯ .

500 ಕೋಟಿ ರೂಪಾಯಿ ಬೆಲೆ ಬಾಳುವ ಗುಲಾಭಿ ರಂಗಿನ ವಜ್ರ, ಮೈಸೂರು ರಾಜರು ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿದ್ದ ವಜ್ರ ಈಗ ಇಲ್ಲ ? ಈ ವಜ್ರದ ಹಿಂದಿರುವ ರಹಸ್ಯ ಏನು ?
ತಿಮ್ಮಪ್ಪನ 500 ಕೋಟಿಯ ವಜ್ರ ಎಲ್ಲಿ ಹೋಯಿತು ? ಮೈಸೂರು ದೊರೆಯ ಈ ಮಹಾ ಕಾಣಿಕೆ ಕಾಣೆಯಾಗಿದ್ದು ಹೇಗೆ ? ತಿರುಪತಿ ತಿಮ್ಮಪ್ಪನ ಸನ್ನಿಧಿಗೂ ಕನ್ನ ಹಾಕಿದ್ದಾರೆಯೇ ? ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಸಂಪತ್ತಿಗೂ ಕೂಡ ಅಮೂಲ್ಯ ವಜ್ರವನ್ನೇ ಕದ್ದು ಬಿಟ್ಟರಾ ? ಸಾಲಗಾರನ ಶ್ರೀನಿವಾಸನ ಸನ್ನಿಧಿಯಲ್ಲಿ ಹೀಗೆ ನಡೆದದ್ದು ಹೇಗೆ ? ಅಷ್ಟಕ್ಕೂ ಏನಿದು ಗುಲಾಬಿ ಬಣ್ಣದ ವಜ್ರ ಎಂದು ಕೇಳುತ್ತೀರ ? ಬನ್ನಿ ಇದರ ಬಗ್ಗೆ ಇಂದು ಕೂಲಂಕುಷವಾಗಿ ಎಲ್ಲವನ್ನೂ ತಿಳಿದುಕೊಳ್ಳೋಣ.

 

 

 

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಸಪ್ತಗಿರಿ ವಾಸ , ಸಾಕ್ಷಾತ್ ಲಕ್ಷ್ಮಿಪತಿ, ತಿರುಪತಿ ತಿಮ್ಮಪ್ಪ ಶ್ರೀನಿವಾಸ ಭಾರತದ ಅತಿ ಶ್ರೀಮಂತ ದೇವರು. ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ಅದೆಷ್ಟು ಬಂಗಾರವಿದೆಯೋ ? ಅದೆಷ್ಟು ವಜ್ರ ವೈಡೂರ್ಯಗಳಿವೆಯೋ ? ಅದೆಷ್ಟು ಸಂಪತ್ತು ತಿಮ್ಮಪ್ಪನ ಸನ್ನಿಧಾನವನ್ನು ಸೇರಿದೆಯೋ ? ಆ ಭಗವಂತನಿಗೆ ಗೊತ್ತು.

ಸಹಸ್ರಾರು ವರ್ಷಗಳಿಂದಲೂ ತಿಮ್ಮಪ್ಪನ ಸನ್ನಿಧಿಗೆ ಸಾಕಷ್ಟು ನಿಧಿ ಕಾಣಿಕೆಯ ರೂಪದಲ್ಲಿ ಚಿನ್ನ,ವಜ್ರ ಬಂದು ಸೇರಿದೆ. ರಾಜಾಧಿರಾಜರು, ಮಹಾರಾಜರು ,ಚಕ್ರವರ್ತಿಗಳು ತಿಮ್ಮಪ್ಪನಿಗೆ ಕನಕಾಭಿಷೇಕವನ್ನೇ ಮಾಡಿಬಿಟ್ಟಿದ್ದಾರೆ. ಅದರಲ್ಲೂ ಮೈಸೂರು ಮಹಾರಾಜರು ಚಿನ್ನದ ಮಳೆಯನ್ನೇ ಸುರಿಸಿದ್ದಾರೆ .ಮೈಸೂರು ಅರಸರು ತಿರುಪತಿಯ ತಿಮ್ಮಪ್ಪನ ಪರಮ ಭಕ್ತರು. ಅವರು ಆನನ್ಯ ಸೇವೆಯನ್ನು ಮಾಡಿದ್ದಾರೆ. ತಿರುಪತಿಗೆ ಮೈಸೂರು ರಾಜರು 60 ಮಣ ಬಂಗಾರವನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ . ಮೈಸೂರು ಅರಸರು ತಿರುಪತಿಗೆ ಹೋದರೆ ಮೊದಲು ಇವರಿಗೆ ಗೌರವ ನೀಡುತ್ತಾರೆ. ಮೈಸೂರಿನ ಅರಸರು ನೀಡಿದ್ದಾರೆ . ಒಂದು ಮಣ ಎಂದರೆ 40 ಸೇರು ತೂಕ. ಒಂದು ಸೇರು ಎಂದರೆ ಒಂದು ಕೆಜಿಗಿಂತಲೂ ಸ್ವಲ್ಪ ಕಡಿಮೆ ಪ್ರಮಾಣ . ಇದರ ಅರ್ಥ ಮೈಸೂರಿನ ದೊರೆಗಳು ತಿರುಮಲಕ್ಕೆ 2400 ಕೆಜಿಗೂ ಅಧಿಕ ಚಿನ್ನವನ್ನು ನೀಡಿದ್ದಾರೆ .
ಇದೇ ಸತ್ಯವನ್ನು ತಿರುಮಲದ ಪ್ರಧಾನ ಅರ್ಚಕರಾಗಿದ್ದ ರಮಣ ದೀಕ್ಷಿತರು ಸಹ ಇದನ್ನು ಒಪ್ಪಿಕೊಳ್ಳುತ್ತಾರೆ. ಮೈಸೂರಿನ ಅರಸರು ಬರಿ ಚಿನ್ನಾಭರಣಗಳನ್ನು ಆಷ್ಟೇ ನೀಡಿಲ್ಲ . ವಜ್ರ ವೈಡೂರ್ಯಗಳನ್ನು, ಅತ್ಯಮೂಲ್ಯವಾದ ಬೆಲೆಬಾಳುವ, ತುಂಬಾ ಬೆಲೆ ಬಾಳುವ ಪ್ಲಾಟಿನಂ ಹಾರದಲ್ಲಿ 500 ಕೋಟಿ ಬೆಲೆ ಬಾಳುವ ವಜ್ರವು ಇತ್ತು. ಅದೇ ಗುಲಾಬಿ ಬಣ್ಣದ ವಜ್ರ. ಇದೇ ವಜ್ರದ ಕಥೆಯನ್ನೇ ಇಂದು ನಾವು ತಿಳಿದುಕೊಳ್ಳೋಣ .

ಇದು ಸಾಮಾನ್ಯ ವಜ್ರವಲ್ಲ . ಇದು ವಿಶ್ವದ ಅತಿ ದುಬಾರಿ ವಜ್ರಗಳನ್ನು ಪಟ್ಟಿ ಮಾಡಿದರೆ , ಕೊಹಿನೂರು ವಜ್ರದ ನಂತರ ಇದು ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಬೆಲೆ ಸರಿ ಸುಮಾರು 500 ಕೋಟಿ.ಇದು ಈಗ ಕಾಣಿಸುತ್ತಿಲ್ಲ. ಸಪ್ತಗಿರಿಯ ಯಾವ ಮೂಲೆಯಲ್ಲೂ ಸಹ ಈ ವಜ್ರ ಕಾಣಿಸುತ್ತಿಲ್ಲ.
ಇದೇ ವಿಚಾರವೇ ಈಗ ತಿರುಪತಿಯಲ್ಲಿ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಪ್ಲಾಟಿನಮ್ ಹಾರವೊಂದು ಇದೆ. ಸ್ವಾಮಿಯವರ ಉತ್ಸವ ಮೂರ್ತಿಗೆ ಅಲಂಕರಿಸುತ್ತೇವೆ. ಇದನ್ನು ಕೊಟ್ಟಿದ್ದು ಕೃಷ್ಣರಾಜ ಒಡೆಯರ್ ಎನ್ನುವ ಮೈಸೂರು ಮಹಾರಾಜರು. ಆ ಪ್ಲಾಟಿನಂ ಹಾರ ವಜ್ರದಿಂದ ತುಂಬಿತ್ತು. ಇದರ ಮಧ್ಯೆ ಇರುವ ಗುಲಾಬಿ ಬಣ್ಣದ ವಜ್ರ 2001ರ ಇಸವಿಯ ಗರುಡವಾಹನ ಸೇವೆಯಲ್ಲಿ ಭಕ್ತಾದಿಗಳು ಎಸೆಯುವ ನಾಣ್ಯ ತಾಕಿ ಗುಲಾಬಿ ಬಣ್ಣದ ವಜ್ರ ಒಡೆದು ಹೋಯಿತು .ಅದು ಕಾಣಿಸುತ್ತಿಲ್ಲ ಅಂತ ವರದಿಗಳಲ್ಲಿ ದಾಖಲಾಗಿದೆ. ಹಾಗಾದರೆ ಈ ವಜ್ರ ಎಲ್ಲಿ ಹೋಯಿತು ? ಜಗತ್ತಿನ ಅತಿ ದುಬಾರಿ ವಜ್ರಗಳ ಸಾಲಿಗೆ ಸೇರಿರುವ ಗುಲಾಬಿ ಬಣ್ಣದ ವಜ್ರ ಏನಾಯಿತು ? ಅದಕ್ಕೆ ರಮಣ ದೀಕ್ಷಿತರು ಕೊಡುವ ಉತ್ತರ ಕೇಳಿದರೆ ಶಾಕ್ ಆಗುತ್ತೀರಾ.

 

 

 

ಅವರು ಹೇಳುವ ಉತ್ತರಕ್ಕೂ ದೂರದ ದೇಶಕ್ಕೂ ಸಂಬಂಧವಿದೆ. ಅಪರೂಪದ ಒಂದು ವಜ್ರ ಜಿನೀವಾದಲ್ಲಿ ಹರಾಜಿಗೆ ಬಂದಿತ್ತು. ಅತಿ ಹೆಚ್ಚು ಮೊತ್ತಕ್ಕೆ ವಜ್ರ ಹರಾಜು ಆಗಿತ್ತು. ಆ ವಜ್ರ ತಿರುಮಲದಲ್ಲಿದ್ದ ಗುಲಾಬಿ ವಜ್ರದಷ್ಟು ದಪ್ಪವಿದೆ. ಅದೇ ಬಣ್ಣದಲ್ಲಿಯೂ ಸಹ ಇದೆ. ಅದೇ ವಜ್ರ ಇರಬಹುದು ಎನ್ನುವುದು ಸಹ ಸಂದೇಹವಾಗಿದೆ.
ಅಚ್ಚರಿಯ ಸಂಗತಿಯೆಂದರೆ ಕೆಲವು ದಿನಗಳ ಹಿಂದೆ ಸ್ವಿಡ್ಜರ್ಲ್ಯಾಂಡ್ನ ಜಿನೀವಾ ಪಟ್ಟಣದಲ್ಲಿ ವಜ್ರಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಅಲ್ಲಿಗೆ ಈ ಅಪರೂಪದ ವಜ್ರ ಬಂದಿತ್ತು. ಅದೇ ರಾಜ್ ಪಿಂಕ್ ಡೈಮಂಡ್. ಈ ರಾಜ್ ಪಿಂಕ್ ಡೈಮಂಡ್ ವಜ್ರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸಿವೆ.
ಅಭಿಷೇಕಕ್ಕೂ ಈ ವಜ್ರಕ್ಕೂ ಸಂಬಂಧವಿದೆ. ಅಭಿಷೇಕ ಪ್ರಿಯ ತಿಮ್ಮಪ್ಪನಿಗೆ ಪ್ರಸಾದ ತಯಾರಿಸುವುದಕ್ಕೆ ಎಂದೇ ಒಂದು ಕೋಣೆ ಇದೆ. ಅಲ್ಲಿ ಅರ್ಚಕರನ್ನು ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ. ಕೇವಲ ಅರ್ಚಕರಿಗೆ ಮಾತ್ರ ಅಲ್ಲಿ ಪ್ರವೇಶ. ಮಡಿಯಿಂದ ಕೂಡಿದ ಪಾಕ ಶಾಲೆಯಲ್ಲಿ ತಯಾರಾಗುವ ಪ್ರಸಾದವೇ ತಿಮ್ಮಪ್ಪನಿಗೆ ಅಭಿಷೇಕಕ್ಕೆ, ನೈವೇದ್ಯಕ್ಕೆ ಬಳಸುವುದು. ಆ ರಹಸ್ಯ ಪಾಕ ಶಾಲೆಯಲ್ಲಿದೆ. ಈ ರಹಸ್ಯ ಪಾಕಶಾಲೆ ಕಳೆದ ಸಹಸ್ರಾರು ವರ್ಷಗಳಿಂದ ತೆರೆದೇ ಇತ್ತು.

ಡಿಸೆಂಬರ್ ತಿಂಗಳಿನಲ್ಲಿ 25 ದಿನ ಮುಚ್ಚಲಾಗಿತ್ತು . ಒಂದು ಪುರಾತತ್ವ ಸಂಪತ್ತು, ಒಂದು ಪುರಾತನ ಶಿಲ್ಪಸಂಪತ್ತನ್ನು ಒಳಗೊಂಡ ದೇವಾಲಯದ ಒಂದು ಭಾಗವನ್ನು ಯಾರ ಅನುಮತಿಯೂ ಪಡೆಯದೆ , ಅವರಿಗೆ ಅವರೇ ತೀರ್ಮಾನ ತೆಗೆದುಕೊಂಡು ದುರಸ್ತಿ ನಡೆಸಿದ್ದಾರೆ. ಪಾಕಶಾಲೆಯ ಕೆಳಗೆ ಹಾಕಿದ್ದ ಬಂಡೆಗಳನ್ನು ತೆಗೆದಿದ್ದು ಯಾಕೆ ? ಅದರ ಕೆಳಗೆ ಏನೆಲ್ಲಾ ಇತ್ತು ? ಆ ಬಂಡೆಗಳನ್ನು ತೆಗೆದು ಹಾಕುವುದಕ್ಕೆ 25 ದಿನಗಳ ಕಾಲ ಕೋಣೆಯನ್ನು ಮುಚ್ಚಿದ್ದು ಯಾಕೆ ? ಅಲ್ಲದೆ ಆ ಕೋಣೆಯ ಬೀಗವನ್ನು ಅವರ ಬಳಿಯೇ ಇಟ್ಟುಕೊಂಡಿದ್ದು ಯಾಕೆ ? ಇದೆಲ್ಲಾ ಪ್ರಶ್ನೆಗಳಿಂದ ಆ ವಜ್ರ ಕಳುವಾಗಿ ಹೋಗಿದೆ ? ತಿಮ್ಮಪ್ಪನ ಸನ್ನಿಧಾನದಲ್ಲಿದ್ದ ವಜ್ರ ಎಲ್ಲಿ ಹೋಯಿತು ? ಇದಕ್ಕೆ ಸಂಬಂಧ ಪಟ್ಟಂತೆ 15 ಮಂದಿ ಅರ್ಚಕರನ್ನು ಸಹ ವಜಾಗೊಳಿಸಿದೆ. ಎನ್ನುವ ಚರ್ಚೆ ನಡೆಯುತ್ತಿದೆ.

ಮೈಸೂರಿನ ಗುಲಾಬಿ ಬಣ್ಣದ ವಜ್ರ ತಿಮ್ಮಪ್ಪನ ಸನ್ನಿಧಿಯಿಂದ ಜಿನೀವಾ ದೇಶ ಸೇರಿದ್ದು ಹೇಗೆ ? ಏನಿದು ಈ ವಜ್ರದ ರಹಸ್ಯ ? ಬನ್ನಿ ಆ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ.
ಮೈಸೂರಿನ ಮಹಾರಾಜರು ನೀಡಿದ ಪ್ಲಾಟಿನಮ್ ಹಾರದಲ್ಲಿ ಈ ದುಬಾರಿ ಬೆಲೆಯ ಗುಲಾಬಿ ರಂಗಿನ ವಜ್ರವು ಕೂಡ ಭಾರಿ ಚರ್ಚೆಗೆ ಒಳಪಟ್ಟಿದೆ. ಈ ದುಬಾರಿ ಬೆಲೆಯ ವಜ್ರವನ್ನು ಮೈಸೂರು ರಾಜ್ಯದ ಸಂಸ್ಥಾನದ ಮಹಾರಾಜರು ದೇಗುಲಕ್ಕೆ 1945 ನೇ ಇಸವಿಯಲ್ಲಿ ಕೊಡುಗೆಯಾಗಿ ನೀಡಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಅದರ ಮೌಲ್ಯ 500 ಕೋಟಿ ರೂಪಾಯಿ ಆಗಿರುವ ಸಾಧ್ಯತೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top