fbpx
ದೇವರು

ಅಪಾರ ಮಹಿಮೆ ಇರುವ ಭಕ್ತರ ಎಲ್ಲ ಕಷ್ಟಗಳನ್ನು ನಿವಾರಣೆ ಮಾಡುವಂತ ಕೋತಿ ಆಂಜನೇಯ ಸ್ವಾಮಿ ದೇವಾಲಯದ ಬಗ್ಗೆ ಗೊತ್ತಾದ್ರೆ ಖಂಡಿತಾ ನೀವು ಒಂದ್ಸಲ ಹೋಗ್ತೀರಾ .

ಕೋತಿ ಆಂಜನೇಯ ಸ್ವಾಮಿ ದೇವಾಲಯ 

ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಓಡಾಡುವ ಜನ ಈ ದೇವಸ್ಥಾನದ ಮುಂದೆ ಸ್ವಲ್ಪ ಹೊತ್ತು ವಾಹನಗಳನ್ನು ನಿಲ್ಲಿಸಿ ದೇವರಿಗೆ ನಮಸ್ಕಾರ ಮಾಡಿ ಹೋಗುತ್ತಾರೆ. ಅಷ್ಟೊಂದು ಮಹಿಮೆ ಹೊಂದಿರುವ ಆ ದೇವಸ್ಥಾನದ ಹೆಸರೇ “ಕೋತಿ ಆಂಜನೇಯ ಸ್ವಾಮಿ ದೇವಾಲಯ” . ನಿತ್ಯವೂ ಇಲ್ಲಿಗೆ ಅಪಾರ ಭಕ್ತರ ದಂಡೇ ಹರಿದು ಬರುತ್ತದೆ . ಅಪಾರ ಮಹಿಮೆಯನ್ನು ಹೊಂದಿರುವ ಕೋತಿ ಆಂಜನೇಯ ಸ್ವಾಮಿಯ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 

 

 

ಯಾವುದೇ ದೇವಾಲಯದ ನಿರ್ಮಾಣದ ಹಿಂದೆ ಒಂದು ಇತಿಹಾಸವಿದೆ.
ದೇವಾಲಯದ ನಿರ್ಮಾಣ ಎಂದರೆ ಅದು ಸಾಮಾಜಿಕ, ಧಾರ್ಮಿಕ ಕಾರ್ಯ ಮತ್ತು ಅದೊಂದು ಜನ ಕಲ್ಯಾಣ ಕಾರ್ಯವಾಗಿತ್ತು. ಅದೇ ರೀತಿ ಈ ಕೋತಿ ಆಂಜನೇಯ ದೇವಾಲಯದ ಹಿಂದೆ ಕೂಡ ಒಂದು ಇತಿಹಾಸ ಇದೆ.ಸುಮಾರು ಐವತ್ತು ವರ್ಷಗಳ ಹಿಂದೆ ರಾಮನಗರದ ಈ ಹೆದ್ದಾರಿಯಲ್ಲಿ ಕೋತಿಗಳದ್ದೇ ಆರ್ಭಟವಾಗಿತ್ತು. ಹಿಂದೆ ಈ ಪ್ರದೇಶ ದಟ್ಟವಾದ ಅರಣ್ಯ ಪ್ರದೇಶದಿಂದ ಕೂಡಿದ್ದರಿಂದ ಇಲ್ಲಿ ಕೋತಿಗಳ ಸಂಖ್ಯೆ ಹೆಚ್ಚಾಗಿತ್ತು. ಅಷ್ಟೇ ಅಲ್ಲದೆ ಈ ಕೋತಿಗಳು ಸುತ್ತಮುತ್ತಲು ಹಳ್ಳಿಯ ಜನರು ಬೆಳೆದ ಬತ್ತ,ಕಬ್ಬುಗಳನ್ನು ತಿಂದು ಹಾಳು ಮಾಡುತ್ತಿದ್ದವು .ಈ ರಸ್ತೆಯಲ್ಲಿ ಓಡಾಡುವ ಜನ ಮತ್ತು ವಾಹನಗಳಿಗೂ ಕೂಡ ಕೋತಿಗಳು ತೊಂದರೆ ಕೊಡುತ್ತಿದ್ದವು.ಈ ಮಾರ್ಗವಾಗಿ ಸಾಗುತ್ತಿದ್ದ ಸರಕು, ಲಾರಿ ಮತ್ತು ರೈತರ ಎತ್ತಿನ ಗಾಡಿಗಳಿಗೆ ಲಗ್ಗೆ ಹಾಕುತ್ತಿದ್ದವು ಕೋತಿಗಳು. ಇದರಿಂದ ಇಲ್ಲಿನ ಗ್ರಾಮಸ್ಥರು ರೋಸಿ ಹೋಗಿದ್ದರು. ಕೋತಿಗಳಿಗೆ ಯಾವುದೇ ರೀತಿಯ ಶಿಕ್ಷೆ ಕೊಡುತ್ತಿರಲಿಲ್ಲ. ಕೋತಿಯನ್ನು ಆಂಜನೇಯನ ಅಪರಾವತಾರ ಎಂದು ನಂಬಲಾಗಿತ್ತು.

ಆದ್ದರಿಂದ ಕೋತಿಗಳಿಗೆ ಯಾವುದೇ ತೊಂದರೆ ಕೊಡದೆ ಪೂಜ್ಯಭಾವದಿಂದ ನೋಡುತ್ತಿದ್ದರು. ಇದೇ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಒಮ್ಮೆಲೆ ನೂರಾರು ಕೋತಿಗಳು ಸಾವಿಗೆ ಈಡಾದವು. ಯಾರೋ ದುಷ್ಕರ್ಮಿಗಳು ಕೋತಿಗಳಿಗೆ ವಿಷವನ್ನು ಹಾಕಿ ಸಾಯಿಸಿದರು. ಅಲ್ಲದೆ ಹೆದ್ದಾರಿ ಪಕ್ಕದಲ್ಲಿ ಮೂಟೆ ಕಟ್ಟಿ ಬಿಸಾಡಿದ್ದರು. ಇದನ್ನು ಕಂಡು ಮಂಡ್ಯ ಜಿಲ್ಲೆಯ ಸಂಪತ್ ಎಂಬುವವರು ಈ ಜಾಗದಲ್ಲಿ ಆ ಕೋತಿಗಳನ್ನು ಸಮಾಧಿ ಮಾಡಿದರು. ಯಾರೋ ಮಾಡಿದ ತಪ್ಪಿಗೆ ಇಲ್ಲಿನ ಗ್ರಾಮಸ್ಥರು ಸೇರಿದಂತೆ ರಸ್ತೆಯಲ್ಲಿ ಓಡಾಡುವರು ಸಾಕಷ್ಟು ಸಂಕಷ್ಟಗಳಿಗೆ ಗುರಿಯಾಗಿದ್ದರು. ಜನರಿಗೆ ಸಾಕಷ್ಟು ನೋವುಗಳು ಸಂಭವಿಸುತ್ತಿದ್ದವು.
ಊರಿನ ಹಿರಿಯರ ಮಾರ್ಗದರ್ಶನದಲ್ಲಿ ಕೋತಿಗಳ ಸಮಾಧಿಗಳ ಮೇಲೆ ಒಂದು ಆಂಜನೇಯ ದೇವಾಲಯವನ್ನು ಕಟ್ಟಿದರೆ ತೊಂದರೆಗಳು ದೂರವಾಗುತ್ತವೆ ಎಂದು ಹೇಳಿದರು. ಅದರಂತೆಯೇ ಈ ಮಾರ್ಗ ಮಧ್ಯದಲ್ಲಿರುವ ಈ ಕೋತಿಗಳ ಸಮಾಧಿಗಳ ಮೇಲೆ ಒಂದು ದೇವಾಲಯವನ್ನು ಕಟ್ಟಲಾಯಿತು ಅದೇ ಈ ಕೋತಿ ಆಂಜನೇಯ ದೇವಾಲಯ. ಇಲ್ಲಿ ದೇವಾಲಯವನ್ನು ಕಟ್ಟಿದ ನಂತರ ಕೋತಿಗಳ ಹಾವಳಿ ಮತ್ತು ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಆಗಿದೆಯಂತೆ. ಅಷ್ಟೇ ಅಲ್ಲದೆ ಅಂದಿನಿಂದಲೂ ಸಾಕಷ್ಟು ನಂಬಿಕೆಯನ್ನು ಇಟ್ಟುಕೊಂಡಿರುವ ಜನ ಈ ದೇವರನ್ನು ಆರಾಧಿಸುತ್ತಾ ಬಂದಿದ್ದಾರೆ .

ಈ ಸುತ್ತಮುತ್ತಲು ಸಂಚರಿಸುವ ಯಾವುದೇ ವಾಹನ ಸವಾರರಾದರೂ ಕೂಡ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ ಮತ್ತು ಇನ್ನೊಂದು ವಿಶೇಷತೆ ಏನೆಂದರೆ ಯಾವುದೇ ಹೊಸ ವಾಹನ ಖರೀದಿಸಿದ ನಂತರ ಇಲ್ಲಿನ ಗ್ರಾಮಸ್ಥರು ವಾಹನದ ಮೊದಲ ಪೂಜೆಯನ್ನು ಇಲ್ಲಿಯೇ ಮಾಡಿಸುತ್ತಾರೆ. ರಾಮನಗರ, ಬಿಡದಿ, ಬೆಂಗಳೂರು, ಮೈಸೂರು ಸೇರಿದಂತೆ ಹೊರ ರಾಜ್ಯಗಳಿಂದಲೂ ಕೂಡ ವಾಹನ ಪೂಜೆಗೆ ಭಕ್ತರು ಇಲ್ಲಿಗೆ ಬರುತ್ತಾರೆ .ಕೋತಿ ಆಂಜನೇಯನಿಗೆ ನಿತ್ಯವೂ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಪ್ರತಿ ಶನಿವಾರ ಆಂಜನೇಯನ ವಾರದ ದಿನವಾದ್ದರಿಂದ ವಿಶೇಷ ಪೂಜೆಗಳನ್ನು ಮಾಡುವುದರಿಂದ ಸಾಕಷ್ಟು ಜನ ಇಲ್ಲಿಗೆ ಬರುತ್ತಾರೆ.

ಕೆಲವು ವಿಚಿತ್ರ ಸಮಸ್ಯೆಗಳಿಂದ ಬಳಲುವ ಅನೇಕರು ವಿಶೇಷವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಂದು ಬಂದು ಹರಕೆಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಈ ದೇವಾಲಯದಲ್ಲಿ ಮತ್ತೊಂದು ವಿಶೇಷತೆ ಇದೆ. ರಾಜಕಾರಣಿಗಳು ತಮ್ಮ ಚುನಾವಣೆ ನಾಮಪತ್ರ ಸಲ್ಲಿಸುವಾಗ ಈ ದೇವಾಲಯದಲ್ಲಿ ಮೊದಲ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಸ್ಥಳೀಯವಾಗಿ ಅಲ್ಲದೇ ಅಕ್ಕ ಪಕ್ಕದ ಜಿಲ್ಲೆಯವರು, ಮುಖಂಡರು ಕೂಡ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಕೋತಿ ಆಂಜನೇಯ ಸ್ವಾಮಿಯ ಆರಾಧಕರು. ಇಲ್ಲಿಗೆ ಭೇಟಿ ನೀಡುವ ಮುಖಂಡರುಗಳು ಸಾಕಷ್ಟು ವಿಶೇಷ ಪೂಜೆಗಳನ್ನು ಮಾಡಿಸುತ್ತಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top