ದೇವರು

ಇಲ್ಲಿದೆ ಪ್ರಕೃತಿಗೆ ಸವಾಲೊಡ್ಡುವ ವಿಸ್ಮಯ! ಸಾವಿರಾರು ವರ್ಷಗಳ ಹಿಂದಿನ ಶೇಷನಾಗ ರಹಸ್ಯ!!.ಈ ದೇವಸ್ಥಾನದಲ್ಲಿ ಉಕ್ಕುತ್ತಿದೆ ಕುದಿಯುವ ನೀರು,ಇಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ !!ತಿಳ್ಕೊಳ್ಳಿ ಈ ಪವಿತ್ರ ಸ್ಥಳದ ಬಗ್ಗೆ.

ನಮ್ಮ ಭಾರತದ ಹಿಮಾಲಯದ ತಪ್ಪಲಿನಲ್ಲಿ ಇರುವ ಈ ಶಿವ ದೇವಾಲಯದ ಬಳಿ ಇದೆ ಕುದಿಯುವ ನೀರಿನ ಕೊಳ.ಇದರ ಹಿಂದಿದೆ ಶೇಷನಾಗನ ರಹಸ್ಯ . ಏನದು ?

ಇಲ್ಲಿದೆ ಪ್ರಕೃತಿಗೆ ಸಲ ಸವಾಲೊಡ್ಡುವ ವಿಸ್ಮಯ. ಸಾವಿರಾರು ವರ್ಷಗಳ ಹಿಂದಿನ ನಾಗ ರಹಸ್ಯ ಇದು. ಹಿಮ ಪ್ರದೇಶದಲ್ಲಿರುವ ಮಂದಿರದಲ್ಲಿ ಉಕ್ಕುತ್ತಿದೆ ಕುದಿಯುವ ನೀರು. ನೀರನ್ನು ಸ್ಪರ್ಶಿಸಿದರೆ ವೃದ್ಧಿಯಾಗುತ್ತದೆ ಆಯುಷ್ಯ. ಪ್ರಕೃತಿಯ ವಿಸ್ಮಯಕ್ಕೆ ಕೊನೆಯೇ ಇಲ್ಲ ಅನ್ನಿಸುತ್ತದೆ. ಪ್ರಕೃತಿಯ ಕಣಕಣಗಳು ಕೂಡ ರಹಸ್ಯಗಳಿಂದ ಕೂಡಿದೆ. ಯಾಕೆಂದರೆ ಈ ಶೇಷನಾಗನ ರಹಸ್ಯ ನಿಮಗೆ ಅಚ್ಚರಿಯನ್ನು ಮೂಡಿಸುತ್ತದೆ. ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ಈ ವಿಸ್ಮಯ ನೋಡುಗರನ್ನು ಹುಬ್ಬೇರಿಸುವಂತೆ ಮಾಡುತ್ತದೆ .

ಈ ಭೂಮಿಯೇ ಒಂದು ದೊಡ್ಡ ರಹಸ್ಯ. ಬ್ರಹ್ಮಾಂಡ, ಗ್ರಹಗಳು, ನಕ್ಷತ್ರಗಳು ಇವೆಲ್ಲಾ ಬದಿಗರಲಿ. ಇನ್ನೂ ಮನುಷ್ಯನಿಗೆ ಭೂಮಿಯ ರಹಸ್ಯವನ್ನೇ ಸಂಪೂರ್ಣವಾಗಿ ತಿಳಿಯುವುದಕ್ಕೆ ಸಾಧ್ಯವಾಗಿಲ್ಲ. ಹಿಂದೆ ಈ ಭೂಮಿಯಲ್ಲಿ ಹೇಗಿತ್ತು ? ಏನಿತ್ತು ? ಎಂದು ಊಹಿಸಬಹುದೇ ಹೊರತು ಖಚಿತವಾಗಿ ಏನನ್ನೂ ಕೂಡ ಹೇಳುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಕೆಲವು ಸಂಗತಿಗಳು ನಮ್ಮ ಮುಂದೆಯೇ ಇದ್ದರೂ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅದರ ಹಿಂದಿರುವ ಕಾರಣವನ್ನು ತಿಳಿದುಕೊಳ್ಳುವುದಕ್ಕೆ ಸತತ ಪ್ರಯತ್ನಗಳು ಕೂಡ ನಡೆಯುತ್ತಿವೆ.

 

 

ಹಿಮಾಲಯ ಪರ್ವತ ಎಂದರೆ ಅದೊಂದು ವಿಸ್ಮಯಗಳು ಮತ್ತು ಕುತೂಹಲಗಳ ತಾಣವಾಗಿದೆ. ವಿಜ್ಞಾನಿಗಳಿಗೆ ಸಂಶೋಧನೆಯ ತಾಣವಾಗಿದೆ.ಅದೇ ಧಾರ್ಮಿಕರಿಗೆ ಹಿಮಾಲಯ ಪವಿತ್ರ ಭೂಮಿ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮಶಿವನ ಕೈಲಾಸ ಪರ್ವತವಿದು. ದೇವಾನು ದೇವತೆಗಳೇ ನೆಲೆ ನಿಂತಿರುವ ಕೈಲಾಸ ಪರ್ವತ ಹಿಮಾಲಯ. ದೇಶದ ಅಂದವನ್ನು ಕೂಡ ಹೆಚ್ಚಿಸಿವೆ. ಹಿಮಾಲಯ ಪರ್ವತಗಳು. ಹಿಮಾಲಯದ ತಪ್ಪಲಿನಲ್ಲಿರುವ ರಾಜ್ಯಗಳಲ್ಲಿ ಶಿವನ ಮಂದಿರಗಳೇ ಹೆಚ್ಚಾಗಿವೆ. ಪ್ರತಿ ಮಂದಿರದ ಹಿಂದೆ ಹತ್ತು ಹಲವು ಕಥೆಗಳು, ಐತಿಹ್ಯಗಳು, ಪೌರಾಣಿಕ ಹಿನ್ನೆಲೆಗಳು ಇವೆ. ಅತ್ಯಂತ ಪ್ರಭಾವಶಾಲಿಯಾಗಿರುವ ಶಿವ ಕ್ಷೇತ್ರಗಳು ಕೂಡ ಹಿಮಾಲಯದ ತಪ್ಪಲಿನಲ್ಲಿ ಇವೆ. ಅಂತಹ ದೇಗುಲಗಳಲ್ಲಿ ಈ ಶಿವ ದೇಗುಲವು ಸಹ ಒಂದು.ಈ ದೇವಾಲಯವಿರುವುದು ಹಿಮಾಚಲ ಪ್ರದೇಶದಲ್ಲಿ .

ಇಲ್ಲಿದೆ ಪ್ರಕೃತಿಯ ಅತಿದೊಡ್ಡ ವಿಸ್ಮಯ. ಈ ಮಂದಿರದಲ್ಲಿ ಉಕ್ಕುತ್ತದೆ ಕುದಿಯುವ ನೀರು.
ಹಿಮಚ್ಛಾದಿತವಾಗಿರುವ ಹಿಮಾಚಲ ಪ್ರದೇಶ ಪ್ರಕೃತಿ ಸೌಂದರ್ಯವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಸದಾ ತಂಪಾಗಿರುವ ಈ ರಾಜ್ಯದಲ್ಲಿ ಹಲವಾರು ನದಿಗಳು ಹರಿಯುತ್ತವೆ. ಹಿಮಾಲಯ ಪರ್ವತದಲ್ಲಿ ಹುಟ್ಟಿ ಹರಿದುಕೊಂಡು ಬರುವ ನದಿ ತೀರಗಳಲ್ಲಿ ಹಲವು ದೇವಸ್ಥಾನಗಳು ಇವೆ. ಈ ದೇಗುಲಗಳ ಮುಂದೆ ಹರಿಯುವ ನೀರಿನಲ್ಲಿ ಸ್ನಾನವನ್ನು ಮಾಡಿದರೆ ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆಯೂ ಸಹ ಇದೆ. ಈಗ ನಾವು ಪಾರ್ವತಿ ನದಿ ತಟದಲ್ಲಿರುವ ಈ ದೇಗುಲದ ವಿಸ್ಮಯವನ್ನು ಇಂದು ನಾವು ತಿಳಿದುಕೊಳ್ಳೋಣ.

ಹಿಮಾಚಲ ಪ್ರದೇಶದಲ್ಲಿರುವ ಕುಲುವಿನಲ್ಲಿ ಒಂದು ಮಂದಿರವಿದೆ . ಮಹಾದೇವ ಶಿವನ ಪ್ರಖ್ಯಾತ ಮಂದಿರವಿದು. ಇಲ್ಲಿಗೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ . ಇಲ್ಲಿ ಒಂದು ವಿಸ್ಮಯ ನಡೆಯುತ್ತದೆ. ಆ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಾರೆ. ಹಿಮಚ್ಚಾದಿತ ತಂಪು ಪ್ರದೇಶದಲ್ಲಿ ಇದ್ದರೂ, ಈ ದೇವಾಲಯದಲ್ಲಿ ಕುದಿಯುವ ಬಿಸಿನೀರು ಉಕ್ಕುತ್ತದೆ . ಇದು ಕೃತಕವಾಗಿ ಸೃಷ್ಟಿಸಿರುವ ನೀರಲ್ಲ. ಕುಲುವಿನಲ್ಲಿ ಇರುವ ಮಣಿಕರಣ ಶಿವನ ದೇವಾಲಯದ ಮುಂದೆ ನೈಸರ್ಗಿಕವಾಗಿ ರೂಪವಾಗಿರುವ ದೇಗುಲದ ಹೊರಗೆ ಪಾರ್ವತಿ ನದಿ ಹರಿಯುತ್ತದೆ. ಅಲ್ಲಿ ನೀರು ತಂಪಾಗಿಯೇ ಇರುತ್ತದೆ. ಆದರೆ ದೇಗುಲದ ಹೊರಗಡೆ ಮುಂಭಾಗದಲ್ಲಿ ಇರುವ ಈ ಕುಂಡದಲ್ಲಿ ಸದಾ ನೀರು ಕುಡಿಯುತ್ತಾನೆ ಇರುತ್ತದೆ. ಯಾರು ಕಾಯಿಸುತ್ತಿದ್ದಾರೆ ಎನ್ನುವ ಅನುಮಾನ ಬರುವ ಹಾಗಿದೆ ಈ ದೃಶ್ಯ.ಬಿಸಿ ನೀರು ಉಕ್ಕುತ್ತಾ ಇರಬೇಕಾದರೆ ದಟ್ಟವಾದ ಹೊಗೆಯು ಹೇಳುತ್ತದೆ. ನೋಡುಗರ ಕಣ್ಣಿಗೆ ಇದೊಂದು ಅದ್ಭುತವಾಗಿ ಕಾಣುತ್ತದೆ . ಹಿಮಾಚಲ ಪ್ರದೇಶದ ಸದಾ ತಂಪಾಗಿರುವ ಜಾಗವಿದು. ಆದರೆ ಭೀಕರ ಚಳಿಗಾಲದಲ್ಲೂ ಕುಲುವಿನಲ್ಲಿರುವ ಮಣಿಕರಣನ ಶಿವಮಂದಿರದಲ್ಲಿ ಕುದಿಯುವ ನೀರು ಉಕ್ಕುತ್ತ ಇರುತ್ತದೆ. ನೈಸರ್ಗಿಕವಾಗಿ ಬಿಸಿ ನೀರು ಉಕ್ಕುತ್ತದೆ ಅದಕ್ಕೆ ಕಾರಣ ಇಲ್ಲಿ ಇರುವ ಶೇಷನಾಗ .
ಮಣಿಕರಣದ ಮಂದಿರದಲ್ಲಿ ಬುಸುಗುಟ್ಟಿದ ಶೇಷನಾಗ . ಇವತ್ತಿಗೂ ಅದರ ಪ್ರಭಾವ ಇದೆ.

 

 

ಮಣಿಕರಣ ಶಿವಾಲಯದ ಮುಂದೆ ನೀರು ಸದಾ ಕುದಿಯುತ್ತಿರುವುದಕ್ಕೆ ಕಾರಣ ಶೇಷನಾಗ . ಸಾವಿರಾರು ವರ್ಷಗಳ ಹಿಂದೆ ಶೇಷನಾಗ ಈ ಜಾಗದಲ್ಲಿ ಜೋರಾಗಿ ಒಮ್ಮೆ ಬುಸುಗುಟ್ಟಿದ . ಈತನ ಬಾಯಿಂದ ಬಂದ ಬಿಸಿಗಾಳಿಗೆ ನದಿಯ ನೀರು ಕುದಿಯುವುದಕ್ಕೆ ಪ್ರಾರಂಭವಾಯಿತು. ಸಾವಿರಾರು ವರ್ಷಗಳ ಹಿಂದೆ ಕುದಿಯಲು ಶುರುವಾದ ನೀರು ಇವತ್ತಿಗೂ ಕುದಿಯುತ್ತಾ ಇದೆ. 100 ಡಿಗ್ರಿ ಸೆಲ್ಸಿಯಸ್ ನಲ್ಲಿ ನೀರು ಕುದಿಯುತ್ತಾನೆ ಇರುತ್ತದೆ.

ಶೇಷನಾಗ ಎಂದರೆ ಸಾಮಾನ್ಯ ನಾಗನಲ್ಲ, ಸೃಷ್ಟಿಯಲ್ಲಿ ಜನಿಸಿದ ಮೊಟ್ಟಮೊದಲ ನಾಗ. ಈತನನ್ನು ಆದಿಶೇಷ ಎಂದು ಸಹ ಕರೆಯಲಾಗುತ್ತದೆ .ಮಹಾವಿಷ್ಣು ವಿರಾಜಮಾನವಾಗಿರುವುದು ಇದೇ ನಾಗಶೇಷನ ಮೇಲೆ . ಅನಂತ ಶೇಷ ಎಂದು ಕರೆಯಲ್ಪಡುವ ಈ ನಾಗ ಎದ್ದಾಗ ಬ್ರಹ್ಮಾಂಡ ಸೃಷ್ಟಿಯಾಯಿತು.ಈತ ಮತ್ತೆ ತನ್ನ ಸ್ವಸ್ಥಾನಕ್ಕೆ ಹೋದರೆ ಸೃಷ್ಟಿಯೇ ನಾಶವಾಗುತ್ತೆ ಎಂದು ಹೇಳುತ್ತಾರೆ. ಇಷ್ಟೊಂದು ಶಕ್ತಿಯನ್ನು ಹೊಂದಿರುವ ಶೇಷನಾಗ ಪಾರ್ವತಿ ನದಿಯ ನೀರು ಬಿಸಿಯಾಗಿ ಕುದಿಯುವುದಕ್ಕೆ ಶುರುವಾಯಿತು ಎಂದು ಪುರಾಣ ಕಥೆಗಳು ಹೇಳುತ್ತವೆ.

ಶೇಷನಾಗ ಈ ಪ್ರದೇಶದಲ್ಲಿ ಬುಸುಗುಡುವುದಕ್ಕೆ ಕಾರಣವೇನು ? ಇಲ್ಲಿ ಕುದಿಯುವ ನೀರು ಇದೆ ಎಂದು ಜನರಿಗೆ ಗೊತ್ತಿರುವುದರ ಹಿಂದೆ ಇರುವ ರೋಚಕ ಕಥೆ ಏನು ? ಮಣಿಕರಣದ ವಿಸ್ಮಯಕಾರಿ ಪ್ರದೇಶದಲ್ಲಿ ಸ್ವತಃ ಶಿವ ಪಾರ್ವತಿಯರ ನೆಲೆಸಿದ್ದರು. ಇಲ್ಲೇ ಶಿವ ಪಾರ್ವತಿಯರು ನೆಲೆಸಿದ್ದು. ಇಲ್ಲೇ ಇರುವುದು ರೋಚಕವಾದ ಕಥೆ. ನಿಮಗೆ ಗೊತ್ತಿರಬಹುದು ಕೈಲಾಸಪರ್ವತದಲ್ಲಿ ಪರಮೇಶ್ವರ ತಪಸ್ಸನ್ನು ಮಾಡುತ್ತಿದ್ದ ಇವತ್ತಿಗೂ ಕೂಡ ಶಿವನ ಕುರುಹುಗಳು ಹಿಮಾಲಯದಲ್ಲಿ ಕಾಣಸಿಗುತ್ತವೆ. ಎಷ್ಟೋ ಗುಹೆಗಳಲ್ಲಿ ರುದ್ರದೇವ ಬಂದು ಹೋದ ಗುರುತುಗಳು ಶಿವಲಿಂಗ ಇರುವ ಗುರುತುಗಳು ಇವೆ .ಇಂದಿನ ಕಾಲದಲ್ಲಿ ಋಷಿಗಳು ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಿದ್ದಿದ್ದು ಇದೇ ಹಿಮಾಲಯ ಪರ್ವತದಲ್ಲಿ. ಅದ್ದರಿಂದ ಪುರಾಣದ ಪುಟಗಳನ್ನು ತಿರುಗಿಸಿದರೆ ಹತ್ತು ಹಲವು ಶಿವನ ಕಥೆಗಳು ಸಿಗುತ್ತವೆ .

ಸಾವಿರದ ನೂರು ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು ಶಿವ ಪಾರ್ವತಿ. ಕೊಳದಲ್ಲಿ ಮಣಿ ಕಳೆದುಕೊಂಡ ಪಾರ್ವತಿ.
ಹೌದು ಇದು ಸಾವಿರಾರು ವರ್ಷಗಳ ಹಿಂದಿನ ಕಥೆ. ದಂತಕಥೆಯಲ್ಲಿ ಬರುವ ಒಂದು ಸನ್ನಿವೇಶ. ಒಮ್ಮೆ ಶಿವಪಾರ್ವತಿಯರು ಲೋಕ ವಿರಾಮವಾಗಿ ಸುತ್ತಾಡುತ್ತಿರುವಾಗ ಆದರೆ ಈ ಹಿಮಾಚಲ ಪ್ರದೇಶದಲ್ಲಿರುವ ಈ ಪ್ರದೇಶಕ್ಕೆ ಬಂದರು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲೇ ಕೆಲವು ಸಮಯ ನೆಲೆಸಬೇಕೆಂದು ನಿರ್ಧರಿಸಿದರು. ಸುಮಾರು ಸಾವಿರ ವರ್ಷಗಳ ಕಾಲ ನಲೆಸಿದರು ಎನ್ನುವ ಪ್ರತೀತಿ ಇದೆ. ಇದೇ ಸಮಯದಲ್ಲಿ ಇಲ್ಲಿನ ನೀರಿನ ಕೊಳದಲ್ಲಿ ಪಾರ್ವತಿ ದೇವಿಯ ಮಣಿ ಕಳೆದು ಹೋಗುತ್ತದೆ. ಮಣಿಯನ್ನು ಕಳೆದುಕೊಂಡ ಪಾರ್ವತಿ ಶಿವನಲ್ಲಿ ತೆಗೆದುಕೊಡುವಂತೆ ವಿನಂತಿಸಿದಳು. ಶಿವ ತನ್ನ ದೂತರಿಗೆ ಆಗ್ನೆ ಮಾಡಿ ಪಾರ್ವತಿ ಕಳೆದುಕೊಂಡಿರುವ ಮಣಿಯನ್ನು ಹುಡುಕಿ ತರುವಂತೆ ಹೇಳುತ್ತಾನೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಕೂಡ ಮಣಿ ಸಿಗುವುದೇ ಇಲ್ಲ . ಇದರಿಂದ ಕೋಪೋದ್ರಿಕ್ತನಾದ ಶಿವ ಮೂರನೇ ಕಣ್ಣು ತೆರೆಯುತ್ತಾನೆ. ಈ ಲೋಕ ವಿನಾಶವಾಗುವುದನ್ನು ತಡೆಯಲು ದೇವಾನುದೇವತೆಗಳು ಒಂದು ಸಂಚನ್ನು ಮಾಡುತ್ತಾರೆ .

ನೀರಿನ ಕೊಳದಲ್ಲಿ ಇದ್ದ ಶೇಷನಾಗನಿಗೆ ವಿನಂತಿಯನ್ನು ಮಾಡುತ್ತಾರೆ. ಕೂಡಲೇ ಶೇಷನಾಗ ತನ್ನ ಎಲ್ಲಾ ಬಲವನ್ನು ಉಪಯೋಗಿಸಿ ಬುಸುಗುಡುತ್ತಾನೆ. ಶೇಷನಾಗನ ಬಾಯಿಂದ ಬಂದ ಬೆಂಕಿಗೆ ಇಡೀ ಕೊಳವೆ ಕುದಿಯುವುದಕ್ಕೆ ಪ್ರಾರಂಭವಾಗುತ್ತದೆ. ನೀರಿನ ತಳದಲ್ಲಿದ್ದ ಕಲ್ಲುಗಳೆಲ್ಲ ಮೇಲಕ್ಕೆ ಬರುತ್ತದೆ . ಆಗ ಪಾರ್ವತಿ ಕಳೆದುಕೊಂಡಿದ್ದ ಮಣಿಯೂ ಕೂಡ ಸಿಗುತ್ತದೆ . ಪಾರ್ವತಿ ತಾನು ಕಳೆದುಕೊಂಡಿದ್ದ ಮಣಿಯನ್ನು ಮರಳಿ ಪಡೆಯುತ್ತಾಳೆ. ನಂತರ ಈ ಸ್ಥಳವು ಪ್ರಶಾಂತವಾಯಿತು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ “ಮಣಿಕರ್ಣ” ಎನ್ನುವ ಹೆಸರು ಬಂತು.
ಈ ಸ್ಥಳ ಸಿಕ್ಕರಿಗೂ ಕೂಡ ಪವಿತ್ರವಾದ ಸ್ಥಳವಾಗಿದೆ .ಇಲ್ಲಿ ಬಿಸಿನೀರಿನ ಬುಗ್ಗೆ ಇದೆ ಎಂದು ಮೊದಲಿಗೆ ಗೊತ್ತಾಗಿದೆ ಸಿಕ್ಕರ ಮಹಾಗುರು ಗುರುನಾನರಿಗೆ ಎಂದು ತಿಳಿಯುತ್ತದೆ. ಸಿಖ್ಖರ ಮೊದಲ ಗುರುವಾಗಿ ಗುರುನಾನಕ್ ಮೊದಲು ಇಲ್ಲಿಗೆ ಬೇಟಿ ಕೊಟ್ಟಾಗ ತನ್ನ ಶಿಷ್ಯರಿಗೆ ಒಂದು ನಿರ್ದಿಷ್ಟವಾದ ಕಲ್ಲನ್ನು ಎತ್ತಲು ಹೇಳಿದರಂತೆ. ಶಿಷ್ಯರು ಆ ಕಲ್ಲನ್ನು ಎತ್ತಿದ್ದಾಗ ಬಿಸಿನೀರಿನ ಬುಗ್ಗೆ ಕಂಡಿದೆ. ಅಲ್ಲಿಂದ ಕಲಿಯುಗದಲ್ಲಿಯೂ ಮಣಿ ಕರ್ಣನ ಚಮತ್ಕಾರ ತಿಳಿಯುತ್ತಾ ಹೋಯಿತು. ಇವತ್ತಿಗೂ ಇಲ್ಲಿ ಸಿಕ್ಕರು ಹಾಗೂ ಇಂದೂಗಳು ಎರಡು ಧರ್ಮದ ಭಕ್ತರು ಬರುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಶೇಷನಾಗ ತೋರಿದ ಚಮತ್ಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೊರಗಡೆ ಹಿಮ ಸುರಿಯುತ್ತಿದ್ದರೂ ಕೂಡ ಈ ಕೊಳದ ಒಳಗಡೆ ನೀರು ಕುದಿಯುತ್ತಾ ಇರುತ್ತದೆ. ಬಿಸಿ ನೀರಿನ ಬುಗ್ಗೆಗಳು ಉಕ್ಕುತ್ತಾ ಇರುತ್ತವೆ. ನೀರಿನಿಂದ ಹೊಗೆಯಾಡುತ್ತಾ ಇರುತ್ತದೆ .ಇದನ್ನು ಕಲಿಯುಗದ ಮಹಾ ಚಮತ್ಕಾರ ಎಂದೇ ಹೇಳಲಾಗುತ್ತದೆ.

 

 

ಈ ವಿಸ್ಮಯಕಾರಿ ನೀರಿಗೆ ಹಲವು ಅದ್ಭುತ ಶಕ್ತಿಗಳಿವೆ.ಶೇಷನಾಗನ ಬಾಯಿಂದ ಬೆಂಕಿಯಿಂದ ಉತ್ಪತ್ತಿಯಾಗುವ ಈ ಪವಿತ್ರ ನೀರು ಆಯುಷ್ಯವನ್ನು ವೃದ್ಧಿಸುತ್ತಾ ? ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಯಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಅದಕ್ಕೆ ಕಾರಣ ಈ ಬಿಸಿ ನೀರಿನಲ್ಲಿ ಇರುವ ವಿಸ್ಮಯಕಾರಿ ಶಕ್ತಿ. ಹಿಮಾಲಯ ಪರ್ವತದ ತಪ್ಪಲಿನಲ್ಲಿ ಇರುವ ಹಿಮಾಚಲ ಪ್ರದೇಶ ಪ್ರವಾಸಿಗರ ಸ್ವರ್ಗ. ಕುಲುಮನಾಲಿಯಂತೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ.ತನ್ನ ನಿಸರ್ಗ ಸೌಂದರ್ಯದಿಂದ ದೇಶ-ವಿದೇಶ ಪ್ರವಾಸಿಗರನ್ನು ಸೆಳೆಯುತ್ತಿದೆ . ಕುಲುವಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ ಮಣಿಕರ್ಣ.
ಕುದಿಯುವ ನೀರಿನಲ್ಲಿದೆ ಪವಾಡ ಶಕ್ತಿ.

ಈ ನೀರನ್ನು ಸ್ವೀಕರಿಸಿದರೆ ಹೆಚ್ಚಾಗುತ್ತದೆ ಆಯಸ್ಸು .ಹೌದು, ಮಣಿಕರಣದ ಶಿವನ ದೇವಾಲಯದ ಮುಂದೆ ಸದಾ ಕಾಲ ನೀರು ಕುದಿಯುತ್ತಿರುತ್ತದೆ ಎನ್ನುವುದು ವಿಸ್ಮಯವಾದ ಸಂಗತಿಯಲ್ಲ . ಅದಕ್ಕಿಂತಲೂ ಹೆಚ್ಚು ಅಚ್ಚರಿ ಪಡುವ ಸಂಗತಿ ಇದೆ. ಸಾವಿರಾರು ವರ್ಷಗಳ ಹಿಂದೆ ಶೇಷನಾಗ ಬುಸುಗುಟ್ಟಿದಾಗ ನೀರು ಕುದಿಯಲು ಪ್ರಾರಂಭವಾಯಿತು ಎನ್ನುವುದು ಪ್ರತೀತಿ. ಇಡೀ ವಿಶ್ವವನ್ನೇ ನಾಶ ಮಾಡಬಲ್ಲ ಶಕ್ತಿ ಹೊಂದಿರುವಾತ, ಅಷ್ಟೇ ಅಲ್ಲದೆ ಮರುಸೃಷ್ಟಿ ಮಾಡುವ ತಾಕತ್ತು ಕೂಡ ಶೇಷನಾಗನಿಗೆ ಇದೆ. ಅಂತಹ ಶೇಷನಾಗ ಬುಸುಗುಟ್ಟಿದಾಗ ನೀರು ಕುದಿಯಲು ಪ್ರಾರಂಭವಾಗಿದೆ . ಆದ್ದರಿಂದ ಸಾವಿರಾರು ವರ್ಷಗಳ ಕಾಲ ಕುದಿಯುತ್ತಿರುವ ನೀರಿಗೆ ವಿಶೇಷವಾದ ಶಕ್ತಿ ಇದೆ. ಹಿಂದೆ ಗುರು ನಾನಕರು ಇಲ್ಲಿಗೆ ಬೇಟಿ ಕೊಟ್ಟಾಗ ಶಿಷ್ಯರಿಗೆ ಹಸಿವು ಆಯ್ತಂತೆ. ಆಗ ಸ್ಥಳೀಯರು ಚಪಾತಿ ಮಾಡಲು ಹಿಟ್ಟು ಕೊಟ್ಟರು ಆದರೆ ಚಪಾತಿಯನ್ನು ಬೇಯಿಸುವುದು ಹೇಗೆ ಎನ್ನುವ ಪ್ರಶ್ನೆ ಮೂಡಿತು. ಆಗ ಗುರು ನಾನಕರು ಒಂದು ಸಲಹೆ ಕೊಡುತ್ತಾರೆ .ಕುದಿಯುವ ನೀರಿನ ಮೂಲ ತೋರಿಸುವಂತೆ ಹೇಳುತ್ತಾರೆ.ಅಲ್ಲಿ ಚಪಾತಿಯನ್ನು ಬೇಯಿಸಲು ಹೇಳುತ್ತಾರೆ. ಚಪಾತಿಯ ಮೇಲೆ ನೀರು ಹಾಕಿದಾಗ ಎಲ್ಲಾ ಚಪಾತಿಗಳು ಮುಳುಗಿ ಹೋಗುತ್ತವೆ . ಆಗ ಗುರು ನಾನಾಕರು ತನ್ನ ಪಾಲಿಗೆ ಬರುವ ಪ್ರತಿ ಚಪಾತಿಯಲ್ಲಿ ಒಂದು ಚಪಾತಿಯನ್ನು ದಾನವಾಗಿ ಕೊಡುತ್ತೇನೆ ಎಂದು ಪ್ರಾರ್ಥಿಸಲು ಹೇಳುತ್ತಾರೆ. ಶಿಷ್ಯ ಇದೇ ರೀತಿ ಮಾಡಿದಾಗ ರೀತಿಯಲ್ಲಿ ಎಲ್ಲಾ ಚಪಾತಿಗಳು ಮೇಲೆದ್ದು ಬಂದವು ಅಲ್ಲಿಂದ ಈ ನೀರಿಗೆ ಇರುವ ಶಕ್ತಿಯ ದರ್ಶನ ತಿಳಿಯಿತು.

ಮಣಿ ಕರಣದ ಕುದಿಯುವ ನೀರಿನಲ್ಲಿ ಹಲವಾರು ಔಷಧೀಯ ಗುಣಗಳು ಇವೆ. ಈ ಪವಿತ್ರವಾದ ಜಲವನ್ನು ಸ್ವೀಕರಿಸಿದರೆ ರೋಗರುಜಿನಗಳು ಮಾಯವಾಗುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ಇಂದೂ ಹಾಗೂ ಸಿಕ್ಕರು ಸಾವಿರ ಸಾವಿರ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಪವಿತ್ರ ಕುದಿಯುವ ನೀರನ್ನು ಸ್ವೀಕರಿಸುತ್ತಾರೆ. ರೋಗ ಗುಣವಾಗದೇ ಆಸ್ಪತ್ರೆಯನ್ನು ಅಲೆದು ಸುಸ್ತಾಗಿದ್ದಾರೆ ಈ ನೀರಿನಿಂದ ಗುಣವಾಗುತ್ತದೆ. ಈ ನೀರಿಗೆ ಇರುವ ಅಪೂರ್ವವಾದ ಶಕ್ತಿ ಎಲ್ಲರನ್ನೂ ಬೆರಗು ಗೊಳಿಸುತ್ತಾ ಇದೆ .

ಪ್ರಕೃತಿಯ ಕೆಲವೊಂದು ವಿಸ್ಮಯಗಳಿಗೆ ಉತ್ತರ ಕೊಡಲು ವಿಜ್ಞಾನವು ಸೋತಿದೆ. ಹಿಮಾಚಲ ಪ್ರದೇಶದಂತಹ ತಂಪಾದ ಸ್ಥಳದಲ್ಲಿ ನೀರು ಕುದಿಯುತ್ತಾ ಇದೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅಸಲಿಗೆ ಕೆಲವೊಂದು ಪ್ರದೇಶಗಳಲ್ಲಿ ನೀರು ನೈಸರ್ಗಿಕವಾಗಿ ಬಿಸಿಯಾಗಿರುತ್ತದೆ. ಅದಕ್ಕೆ ವಿಜ್ಞಾನದಲ್ಲಿ ಉತ್ತರ ಇದೆ . ಆದರೆ ಈ ರೀತಿ ಕುದಿಯುತ್ತಾ ಇರುವ ನೀರು ಜಗತ್ತಿನ ಬೇರೆಲ್ಲೂ ಕಾಣಸಿಗುವುದಿಲ್ಲ. ಹೀಗಾಗಿಯೇ ಶೇಷನಾಗನ ಈ ಪವಾಡ ವಿಶ್ವವನ್ನೇ ಚಕಿತಗೊಳಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top