fbpx
ದೇವರು

ಲಕ್ಷ್ಮಿ ಕುಬೇರರು ಒಂದೇ ಕಡೆ ನೆಲೆಸಿರುವ ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಭೇಟಿ ಕೊಟ್ಟರೆ ನಿಮ್ಮ ಹಣಕಾಸಿನ ಸಮಸ್ಯೆ ಮಾಯವಾಗಿ ,ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುವುದು ಗ್ಯಾರಂಟಿ ,ನೋಡಿ ಆ ದೇವಾಲಯ ಎಲ್ಲಿದೆ ಅಂತ .

ಪ್ರತಿಯೊಬ್ಬ ಲಕ್ಷ್ಮೀ ದೇವಿಯ ಆರಾಧಕರು ತಿಳಿದುಕೊಳ್ಳಬೇಕಾದ ಕಥೆ ಇದು. ಈ ದೇವಸ್ಥಾನದಲ್ಲಿ ಒಟ್ಟಿಗೆ ಇದ್ದಾರೆ ಲಕ್ಷ್ಮಿ ಕುಬೇರರು . ಈ ದೇವಸ್ಥಾನಕ್ಕೆ ಒಂದು ಬಾರಿ ಭೇಟಿ ಕೊಟ್ಟರೆ ಹಣದ ರಾಶಿಯೇ ನಿಮ್ಮ ಮನೆಗೆ ಬರುತ್ತದೆಯಂತೆ.ಇಲ್ಲಿಗೆ ಭೇಟಿ ಕೊಟ್ಟ ನಂತರ ತಿರುಪತಿಗೆ ಹೋದರೆ ಅದೃಷ್ಟ ಖುಲಾಯಿಸುತ್ತದೆ.

ನೀವು ಹಲವು ಬೇರೆ ಬೇರೆ ರೀತಿಯ ದೇವಾಲಯಗಳನ್ನು ನೋಡಿರಬಹುದು. ಆದರೆ ಸಂಪತ್ತು ಕರುಣಿಸುವ 2 ದೇವರು ಜೊತೆಯಾಗಿರುವ ದೇಗುಲ ಇರುವುದು ಈ ಭೂಮಿಯಲ್ಲಿ ಒಂದೇ ಒಂದು ಕಡೆ ಮಾತ್ರ. ಈ ವಿಸ್ಮಯಕಾರಿ ಲಕ್ಷ್ಮಿ ಕುಬೇರರ ಮಂದಿರ ಭಕ್ತರ ಜೀವನದಲ್ಲಿ ಪವಾಡವನ್ನೇ ಸೃಷ್ಟಿಸುತ್ತದೆ ಕಳೆದು ಹೋದ ಹಣವು ಮರಳಿ ಬರುವಂತೆ ಮಾಡುತ್ತದೆ.ಬನ್ನಿ ಈ ದೇವಸ್ಥಾನದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಬನ್ನಿ.

 

 

ಮನುಷ್ಯ ಜೀವನವನ್ನು ನಡೆಸುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಎಂದು ಹೇಳುತ್ತಾರೆ. ಹೊಟ್ಟೆಬಟ್ಟೆ ಎರಡಕ್ಕೂ ಲಕ್ಷ್ಮಿಯ ಕೃಪೆ ಇರಲೇಬೇಕು. ಇವತ್ತು ದುಡ್ಡಿಲ್ಲದೆ ಈ ಜಗತ್ತು ನಡೆಯುವುದಿಲ್ಲ . ಹೀಗಾಗಿ ಈ ಭೂಮಿಯ ಮೇಲೆ ಪ್ರತಿಯೊಬ್ಬ ಹುಟ್ಟಿದ ಮನುಷ್ಯ ಕೂಡ ನಾಲ್ಕು ಕಾಸು ಸಂಪಾದನೆ ಮಾಡುವುದೇ ಆಗಿದೆ. ಪ್ರತಿ ಮನುಷ್ಯ ದುಡ್ಡನ್ನು ಸಂಪಾದನೆ ಮಾಡುವುದು ಹೇಗೆ ? ಅಂತ ಯೋಚನೆ ಮಾಡುತ್ತಿರುತ್ತಾನೆ. ಏನೂ ಇಲ್ಲದೇ ಇರುವವರಿಗೆ ಸ್ವಲ್ಪನಾದರೂ ಬೇಕು ಎನ್ನುವ ಆಸೆ. ಸ್ವಲ್ಪ ಇದ್ದವರಿಗೆ ಹೆಚ್ಚು ಬೇಕು ಎನ್ನುವ ಬಯಕೆ . ಹೆಚ್ಚು ದುಡ್ಡಿದ್ದವರಿಗೆ ಇನ್ನೂ ಮತ್ತಷ್ಟು ಬೇಕು ಎನ್ನುವ ಆಸೆ. ಹೀಗೆ ಪ್ರತಿಯೊಬ್ಬರೂ ಕೂಡ ದುಡ್ಡಿನ ಹಿಂದೆ ಬಿದ್ದಿದ್ದಾರೆ. ಆದರೆ ಕೈಗೆ ಸಿಕ್ಕ ಅಲ್ಪಸ್ವಲ್ಪ ಹಣವು ಕೆಲವೊಮ್ಮೆ ಕೈತಪ್ಪಿ ಹೋಗುತ್ತದೆ.ಆಗ ದೇವರ ಮೊರೆ ಹೋಗುವುದು ಒಂದೇ ದಾರಿ.

ಜಗತ್ತಿನ ಏಕೈಕ ವಿಸ್ಮಯಕಾರಿ ದೇಗುಲ ಇದು. ಇಲ್ಲಿ ಜೊತೆಗಿದ್ದಾರೆ ಲಕ್ಷ್ಮಿ ಕುಬೇರರು. ಇಬ್ಬರ ದರ್ಶನವನ್ನು ಒಟ್ಟಿಗೆ ಪಡೆದರೆ ಸಂಪತ್ತು ಪ್ರಾಪ್ತಿಯಾಗುತ್ತದೆ. ಸಂಪತ್ತು ಎಂದಾಕ್ಷಣ ನೆನಪಾಗುವುದು ಲಕ್ಷ್ಮೀದೇವಿ ಮತ್ತು ಮತ್ತೊಂದು ಹೆಸರು ಕುಬೇರ. ಯಾರ ಬಳಿಯಾದರೂ ಹೆಚ್ಚು ಹಣವಿದ್ದರೆ ಆತನನ್ನು ಕುಬೇರನಿಗೆ ಹೋಲಿಸಲಾಗುತ್ತದೆ ಅವನನ್ನು ಲಕ್ಷ್ಮೀಪುತ್ರ ಎಂದು ಕರೆಯುತ್ತಾರೆ.
ಯಾಕೆಂದರೆ ಕುಭೇರನ ಬಳಿ ಇರುವಷ್ಟು ಸಂಪತ್ತು ಬೇರೆ ಯಾರ ಬಳಿಯೂ ಇಲ್ಲ. ಸಂಪತ್ತಿಗೆ ಇನ್ನೊಂದು ಹೆಸರೇ ಲಕ್ಷ್ಮಿ.ಹೀಗೆ ಲಕ್ಷ್ಮೀ ಹಾಗೂ ಕುಭೇರರು ಶ್ರೀಮಂತಿಕೆಯ ರಾಯಭಾರಿಗಳು ಇವರು. ಆದರೆ ಕುಬೇರನನ್ನು ಹೆಚ್ಚಾಗಿ ಪೂಜೆ ಮಾಡುವುದಿಲ್ಲ. ಕುಬೇರನಿಗಾಗಿ ಇರುವ ದೇವಸ್ಥಾನಗಳು ಕೂಡ ಕಡಿಮೆಯೇ. ಆದರೆ ಲಕ್ಷ್ಮಿಯ ಮಂದಿರಗಳು ಸಾಕಷ್ಟು ಇವೆ. ಇವರಿಬ್ಬರು ಜೊತೆಯಾಗಿರುವ ಮಂದಿರ ಇರುವುದು ಒಂದೇ ಒಂದು. ಆದುವೇ ಲಕ್ಷ್ಮಿ ಕುಬೇರ ಮಂದಿರ. ಜಗತ್ತಿನ ಏಕೈಕ ಲಕ್ಷ್ಮಿ ಕುಬೇರ ಮಂದಿರವಿದು. ಇಲ್ಲಿ ಐಶ್ವರ್ಯ ಸಂಪತ್ತುಗಳಿಗೆ ಅಧಿದೇವತೆಯಾದ ಲಕ್ಷ್ಮೀ ಹಾಗೂ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಕುಬೇರ ಕೂಡ ಜೊತೆಯಾಗಿದ್ದಾರೆ. ದುಡ್ಡಿನ ಮಂದಿರ ಎಂದೇ ಕರೆಸಿಕೊಳ್ಳುವ ಈ ಮಂದಿರಕ್ಕೆ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.

ಲಕ್ಷ್ಮಿ ಹಾಗೂ ಕುಬೇರ ಜೊತೆಯಾಗಿರುವ ಈ ಮಂದಿರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ನಂಬಿ ಬಂದವರನ್ನು ಕೈಬಿಡದ ಲಕ್ಷ್ಮಿ ಕುಬೇರರು. ಈ ಪುಣ್ಯ ನೆಲದಲ್ಲಿ ಪವಾಡವನ್ನೇ ಮಾಡುತ್ತಾರೆ . ಇಲ್ಲಿಗೆ ಬಂದು ಒಳಿತನ್ನು ಕಂಡವರು ಅದೆಷ್ಟೋ ಜನ ಅಷ್ಟಕ್ಕೂ ಈ ವಿಸ್ಮಯಕಾರಿ ಮಂದಿರದ ವಿಶೇಷತೆ ಏನು. ಗೊತ್ತೆ ? ಸಂಪತ್ತಿನ ಎರಡು ಅಧಿದೇವತೆಗಳು ನೆಲೆಸಿರುವ ಈ ದೇವಸ್ಥಾನಕ್ಕೆ ಬಂದರೆ ನಿಮ್ಮ ಸಂಪತ್ತು ದ್ವಿಗುಣವಾಗುತ್ತದೆ. ಶುದ್ಧ ,ಭಕ್ತಿಯಿಂದ ಕೈಮುಗಿದು ಬೇಡಿದರೆ ಐಶ್ವರ್ಯ ಮನೆ ಬಾಗಿಲಿಗೆ ಬರುತ್ತದೆ. ಪ್ರತಿದಿನ ಲಕ್ಷ್ಮಿ ಕುಬೇರರ ಮಂದಿರಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಇದರಲ್ಲಿ ಹೆಚ್ಚಿನವರು ಸಂಪತ್ತನ್ನು ಕಳೆದು ಕೊಂಡವರೇ. ಇಲ್ಲಿನ ವಿಶೇಷತೆಯೇ ಅದು. ನೀವು ಚಿನ್ನಾಭರಣಗಳನ್ನು ಅಥವಾ ಹಣವನ್ನು ಕಳೆದುಕೊಂಡಿದ್ದರೆ. ಇಲ್ಲಿಗೆ ಬಂದು ಪ್ರಾರ್ಥನೆಯನ್ನು ಮಾಡಬೇಕು. ಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು. ಹೀಗೆ ಮಾಡಿದರೆ ಕಳೆದುಹೋದ ಸಂಪತ್ತು ಮರಳಿ ಲಭಿಸುತ್ತದೆ. ಚಿನ್ನಾಭರಣ ದುಡ್ಡನ್ನು ಕಳೆದುಕೊಂಡವರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹೀಗೆ ಪೂಜಿಸಿದ ಕೆಲವೇ ದಿನಗಳಲ್ಲಿ ಬಿಟ್ಟು ಹೋಗಿದ್ದ ಸಂಪತ್ತು ಪುನಃ ಸಿಕ್ಕಿರುವ ಉದಾಹರಣೆಗಳೂ ಇವೆ . ಇದನ್ನು ಲಕ್ಷ್ಮಿ ಕುಬೇರರ ಪವಾಡಗಳು ಎಂದು ನಂಬಿದ್ದಾರೆ.

ಇಲ್ಲಿ ಸಂಪತ್ತಿನ ಒಡೆಯರಾದ ಲಕ್ಷ್ಮಿ ಹಾಗೂ ಕುಬೇರ ಇಬ್ಬರೂ ಇರುವುದರಿಂದ. ವಿಶೇಷವಾದ ಶಕ್ತಿ ಈ ಮಂದಿರಕ್ಕೆ ಇದೆ. ಸುಮಾರು 500 ವರ್ಷಗಳಷ್ಟು ಹಳೆಯದಾದ ಈ ದೇಗುಲ ತಲೆತಲಾಂತರಗಳಿಂದ ವಿಸ್ಮಯವನ್ನು ಸೃಷ್ಟಿಸುತ್ತಾ ಬಂದಿದೆ.ಹೀಗಾಗಿ ದಿನದಿಂದ ದಿನಕ್ಕೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇಂತಹದೊಂದು ವಿಸ್ಮಯವನ್ನು ಸೃಷ್ಟಿಸುವ ಲಕ್ಷ್ಮಿ ಕುಬೇರ ಮಂದಿರ ಇರುವುದು ಪಕ್ಕದ ತಮಿಳುನಾಡು ರಾಜ್ಯದಲ್ಲಿ, ಚೆನೈನ ರತ್ನ ಮಂಗಳಂನ ವಂಡಲೂರಿನಲ್ಲಿ ಶ್ರೀ ಲಕ್ಷ್ಮಿ ಕುಬೇರರ ಮಂದಿರವಿದೆ.

ಮನೆಯಲ್ಲಿ ಸಂಪತ್ತು ನಲೆಸಬೇಕೆಂದರೆ, ಲಕ್ಷ್ಮಿ ಕುಬೇರರ ಪೂಜೆಯನ್ನು ಮತ್ತು ಪ್ರಾರ್ಥನೆಯನ್ನು ಮಾಡಬೇಕು ಎಂದು ಹೇಳುತ್ತಾರೆ. ಆದರೆ ಇವರಿಬ್ಬರೂ ಇರುವ ಮಂದಿರ ಸಿಗುವುದು ತುಂಬಾ ಅಪರೂಪ .ಜಗತ್ತಿನ ಏಕೈಕ ಲಕ್ಷ್ಮಿ ಕುಬೇರರ ಮಂದಿರ ಎಂದು ಕರೆಯಲ್ಪಡುವ ವಂಡಲೂರಿನ ಈ ಮಂದಿರ ಹಲವು ಅಚ್ಚರಿಗಳ ತಾಣವಾಗಿದೆ. ಇಲ್ಲಿ ಸಾಕ್ಷಾತ್ ಕುಭೇರ ಹಾಗು ಲಕ್ಷ್ಮಿಯನ್ನು ಜೊತೆಯಾಗಿ ಆರಾಧಿಸಲಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾದರೆ ಈ ಮಂದಿರಕ್ಕೆ ಒಮ್ಮೆ ಭೇಟಿ ಕೊಟ್ಟರೆ ಸಾಕು . ಮನಃಪೂರ್ವಕವಾಗಿ ಭಕ್ತಿಯಿಂದ ಬೇಡಿಕೊಂಡರೆ ಲಕ್ಷ್ಮಿ ಉಳಿದುಬಿಡುತ್ತಾಳೆ . ಸಂಪತ್ತಿನ ರಾಜಾ ಕುಬೇರ ಆಶೀರ್ವಾದವನ್ನು ಮಾಡುತ್ತಾನೆ. ಕೈ ಬಿಟ್ಟು ಹೋಗಿರುವ ಸಂಪತ್ತನ್ನು ಮರಳಿ ಕರುಣಿಸುವ ಶಕ್ತಿ ಕೂಡ ಈ ದೇಗುಲಕ್ಕೆ ಇದೆ.
ವಂಡಲೂರಿನ ಲಕ್ಷ್ಮಿ ಕುಬೇರ ಮಂದಿರದ ಮತ್ತೊಂದು ವಿಶೇಷತೆ ಏನೆಂದರೆ .

 

 

ಕುಬೇರನ ಕೈಯಲ್ಲಿ ಕಳಸ ಇರುವುದು. ಸಾಮಾನ್ಯವಾಗಿ ಲಕ್ಷ್ಮಿ ಯಾವಾಗಲೂ ಕೈಯಲ್ಲಿ ಕಳಶವನ್ನು ಹಿಡಿದುಕೊಂಡೇ ನಿಂತಿರುತ್ತಾಳೆ. ಆದರೆ ಕುಬೇರನ ಕೈಯಲ್ಲಿ ಕಳಸ ಇರುವುದು ಈ ದೇಗುಲದಲ್ಲಿ ಮಾತ್ರ. ಇನ್ನೂ ದೇಗುಲದ ಪ್ರಾಂಗಣದಲ್ಲಿ ದೇವಾನು ದೇವತೆಗಳನ್ನು ಪೂಜಿಸಲ್ಪಡುತ್ತಾರೆ. ಶಿವ, ಸುಬ್ರಹ್ಮಣ್ಯ, ಗಣೇಶ ,ಆಂಜನೇಯ ಹೀಗೆ ಎಲ್ಲಾ ದೇವರ ಸನ್ನಿಧಾನದಲ್ಲಿ ಬೇಡಿದ್ದನ್ನು ಕರುಣಿಸುವ ದೇವರ ವಿರಾಜಮಾನರಾಗಿದ್ದಾರೆ .
ತಿರುಪತಿ ತಿಮ್ಮಪ್ಪನನ್ನು ನೋಡಲು ಹೋಗುವ ಮೊದಲು ಲಕ್ಷ್ಮೀ ಕುಭೆರರ ಮಂದಿರಕ್ಕೆ ಭೇಟಿ ನೀಡಬೇಕು ಎಂದು ಹೇಳುತ್ತಾರೆ . ಇದರ ಹಿಂದಿರುವ ಕಾರಣವೇನು ? ಈ ರೀತಿ ಮಾಡಿದರೆ ಏನಾಗುತ್ತದೆ ? ಲಕ್ಷ್ಮಿ ಕುಬೇರರ ಮಂದಿರಕ್ಕೂ ತಿರುಪತಿ ತಿಮ್ಮಪ್ಪನಿಗೂ ಅವಿನಾಭಾವ ಸಂಬಂಧವಿದೆ . ತಿರುಪತಿಗೆ ಹೋಗುವ ಮೊದಲು ಇಲ್ಲಿಗೆ ಭೇಟಿ ಕೊಟ್ಟರೆ ಸಿಗುವ ಲಾಭ ದುಪ್ಪಟ್ಟಾಗುತ್ತದೆಯಂತೆ. ಅದು ಹೇಗೆ ? ಎಂದು ತಿಳಿದುಕೊಳ್ಳೋಣ ಬನ್ನಿ .

ಕಲಿಯುಗದ ವೈಕುಂಟ ಎಂದೇ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ ? ಸಾವಿರಾರು ವರ್ಷಗಳ ಹಿಂದೆ ವಿಸ್ಮಯಕಾರಿಯಾಗಿ 7 ಬೆಟ್ಟಗಳ ಮೇಲೆ ನಿಂತಿರುವ ತಿಮ್ಮಪ್ಪ ಇವತ್ತಿಗೂ ಕೂಡ ಪವಾಡಗಳನ್ನು ಸೃಷ್ಟಿಸುತ್ತಿದ್ದಾನೆ. ವಿಸ್ಮಯಕಾರಿ ಶಕ್ತಿಯಿಂದ ಭಕ್ತರನ್ನು ಸಲಹುತ್ತಿದ್ದಾನೆ. ಈತನನ್ನು ಕಾಣಲು ದೇಶ-ವಿದೇಶಗಳಿಂದ ಭಕ್ತರು ಬರುತ್ತಾರೆ . ಜಗತ್ತಿನ ಅತ್ಯಂತ ಶ್ರೀಮಂತ ದೇವರು ಕಲಿಯುಗದ ವೆಂಕಟೇಶ. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಮನೆ-ಮನಗಳಲ್ಲಿ ಪಡೆದುಕೊಂಡಿದ್ದಾನೆ .

ನಿಮಗೆ ಶ್ರೀನಿವಾಸ ಕಲ್ಯಾಣದ ಕಥೆ ಗೊತ್ತಿರಬಹುದು. ಪದ್ಮಾವತಿಯ ಜೊತೆ ಮದುವೆಗಾಗಿ ಕುಬೇರನ ಬಳಿ ಬಾಲಾಜಿ ಸಾಲವನ್ನು ಪಡೆದು ಕೊಂಡಿರುತ್ತಾನೆ. ಬೃಹತ್ ಸಂಪತ್ತನ್ನು ಸಾಲವಾಗಿ ಕುಬೇರನು ಶ್ರೀನಿವಾಸ ಹಾಗೂ ಪದ್ಮಾವತಿ ಮದುವೆಗಾಗಿ ನೀಡಿದ್ದ. ಹಾಗೂ ಕಲಿಯುಗದ ಅಂತ್ಯದ ಒಳಗೆ ಕುಬೇರನ ಎಲ್ಲಾ ಸಾಲವನ್ನು ಬಡ್ಡಿ ಸಮೇತ ತೀರಿಸುವುದಾಗಿ ಮಾತು ಕೊಟ್ಟಿರುತ್ತಾನೆ. ಹೀಗಾಗಿ ತಿರುಪತಿಯ ಹುಂಡಿಗೆ ತಮ್ಮ ಕೈಲಾದಷ್ಟು ಧನ-ಕನಕಗಳನ್ನು ಸಮರ್ಪಿಸುತ್ತಾರೆ. ಶ್ರೀನಿವಾಸ ಕಲ್ಯಾಣದ ಸಾಲವನ್ನು ತಿರೀಸುತ್ತಿದ್ದಾನೆ. ಯಾರು ತಿರುಪತಿಗೆ ಸಂಪತ್ತನ್ನು ಕೊಡುತ್ತಾರೋ , ಅವರಿಗೆ ದೇವರು ಬೇಗನೆ ಒಲಿದು ಬಿಡುತ್ತಾನೆ ಎಂದು ಹೇಳಲಾಗುತ್ತದೆ. ಸಾವಿರಾರು ವರ್ಷಗಳು ಕಳೆದರೂ ಇನ್ನೂ ಕೂಡ ತೀರಿಲ್ಲ ಕುಭೇರನ ಸಾಲ.
ತಿಮ್ಮಪ್ಪನಿಗೆ ಹೋಗುವ ಮುನ್ನ ಇಲ್ಲಿಗೆ ಬರಬೇಕು. ಲಕ್ಷ್ಮಿ ಕುಬೇರ ದರ್ಶನದಿಂದ ಲಾಭ ದುಪ್ಪಟ್ಟಾಗುತ್ತದೆ. ತಮಿಳುನಾಡಿನಲ್ಲಿರುವ ಲಕ್ಷ್ಮಿ ಕುಬೇರರ ಮಂದಿರಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಸ್ಮಯಕಾರಿ ಕಥೆ ಇದೆ. ಅದೇನೆಂದರೆ ಕುಬೇರನಿಗೂ ತಿಮ್ಮಪ್ಪನಿಗೂ ಹಳೆಯ ನಂಟು. ಶ್ರೀನಿವಾಸ ಕಲ್ಯಾಣಕ್ಕೆ ಸಾಲ ಕೊಟ್ಟವರೇ ಯಕ್ಷರ ಮಹಾರಾಜ ಕುಬೇರ. ಹೀಗಾಗಿ ತಿರುಪತಿಗೆ ತೆರಳುವ ಮೊದಲು ಒಮ್ಮೆ ಇಲ್ಲಿಗೆ ಭೇಟಿ ಕೊಡಬೇಕಂತೆ. ಲಕ್ಷ್ಮಿ ಕುಬೇರರ ದರ್ಶನ ಮಾಡಿ ತಿರುಪತಿ ತಿಮ್ಮಪ್ಪನ ಬೇಟಿಗೆ ಹೋದರೆ ನಿಮಗೆ ಆಗುವ ಲಾಭ ದುಪ್ಪಟ್ಟು. ತಿಮ್ಮಪ್ಪನ ಮುಂದೆ ಏನೇ ಬೇಡಿಕೊಂಡರು ಎರಡು ಲಾಭವಾಗುತ್ತದೆ ಹಾಗೂ ದುಪ್ಪಟ್ಟು ಪುಣ್ಯ ಲಭಿಸುತ್ತದೆ ಎಂದು ಹೇಳುತ್ತಾರೆ.

ಲಕ್ಷ್ಮಿ ಕುಬೇರರು ಕೇವಲ ಸಂಪತ್ತು ಕರುಣಿಸುವುದು ಮಾತ್ರವಲ್ಲ. ಮನೋಕಾಮನೆಗಳನ್ನು ಪರೋಕ್ಷವಾಗಿ ಪೂರೈಸುತ್ತಾರೆ . ಆದರೆ ಬಹುತೇಕ ತಿರುಪತಿಯ ಭಕ್ತರಿಗೆ ಈ ವಿಷಯ ಗೊತ್ತಿಲ್ಲ . ತಿರುಪತಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ತಮ್ಮ ಕೈಲಾದಷ್ಟು ಧನ-ಕನಕಗಳನ್ನು ಅರ್ಪಿಸಿ ಬರುತ್ತಾರೆ . ಆದರೆ ಅದರಿಂದ ಸಿಗುವ ಲಾಭ ಎರಡರಷ್ಟು ಆಗಬೇಕಾದರೆ ಮೊದಲು ಲಕ್ಷ್ಮಿ ಕುಬೇರ ಮಂದಿರಕ್ಕೆ ಭೇಟಿ ಕೊಡಬೇಕು. ಇಲ್ಲಿ ದೇವರಿಗೆ ಕೈಮುಗಿದು ತಿರುಪತಿಯ ದರ್ಶನಕ್ಕೆ ಹೋದರೆ ಎರಡರಷ್ಟು ಪುಣ್ಯ ಸಿಗುತ್ತದೆ ಜೊತೆಗೆ ಸಂಪತ್ತು ದ್ವಿಗುಣವಾಗುತ್ತದೆ.
ತಿರುಪತಿ ತಿಮ್ಮಪ್ಪ ಬಯಸಿ ಬಂದ ಭಕ್ತರನ್ನು ಯಾವತ್ತೂ ಕೈ ಬಿಟ್ಟಿಲ್ಲ. ಏಳು ಬೆಟ್ಟಗಳ ಮೇಲೆ ವಿರಾಜಮಾನನಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಬಾಲಾಜಿ. ಕುಬೇರನಿಗೆ ಚಿರಋಣಿಯಾಗಿರುತ್ತಾನೆ. ಇದೇ ಕಾರಣದಿಂದ ಮೊದಲು ಲಕ್ಷ್ಮಿ ಕುಬೇರ ಮಂದಿರಕ್ಕೆ ಭೇಟಿ ಕೊಟ್ಟು ನಂತರ ತಿರುಪತಿಗೆ ಹೋದರೆ ಕಂಡಿತವಾಗಿಯೂ ದೇವರು ಒಲಿಯುತ್ತಾನೆ. ಅಷ್ಟೇ ಅಲ್ಲ ಸಿಗುವ ಲಾಭ ದುಪ್ಪಟ್ಟು ಆಗುತ್ತದೆ ಎನ್ನುವ ನಂಬಿಕೆ ಇದೆ .
ಲಕ್ಷ್ಮಿ ಹಾಗೂ ಕುಬೇರರನ್ನು ಒಟ್ಟಾಗಿ ಬೇರೆಲ್ಲೂ ನೋಡೋಕೆ ಸಾಧ್ಯವಿಲ್ಲ. ಇದರ ಹಿಂದಿರುವ ಕಾರಣವೇನು. ಇಂತಹ ಅಪರೂಪದ ದರ್ಶನ ಸಿಗುವ ಈ ಮಂದಿರದ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ .
ನಮ್ಮದು ಧಾರ್ಮಿಕವಾಗಿ ಶ್ರೀಮಂತ ದೇಶ. ಮುಕ್ಕೋಟಿ ದೇವರನ್ನು ಪೂಜಿಸುವ ರಾಷ್ಟ್ರ. ಪ್ರತಿ ಊರಿಗೂ ಕನಿಷ್ಠಪಕ್ಷ ಒಂದಲ್ಲ ಒಂದು ಮಂದಿರ ಇದ್ದೇ ಇರುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಲವು ಪುಣ್ಯ ಕ್ಷೇತ್ರಗಳು ಇವೆ . ಒಂದೊಂದು ದೇವಾಲಯಕ್ಕೂ ಒಂದೊಂದು ಇತಿಹಾಸ ಇದೆ.ಶಿವ,ವಿಷ್ಣು ಹಾಗೂ ಆದಿ ಶಕ್ತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಾಧಿಸಲಾಗುತ್ತದೆ . ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ.
ಸಂಪತ್ತಿನ ಅಧಿದೇವತೆ ಲಕ್ಷ್ಮಿ. ಕುಬೇರನಿಗೆ ಸಂಪತ್ತನ್ನು ಕಾಯುವ ಕೆಲಸ . ಎಲ್ಲ ಕಥೆಗಳಲ್ಲೂ ಬರುವ ಹಾಗೆ ಕುಬೇರನ ಆಶೀರ್ವಾದ ಸಂಪತ್ತು ಇದೆ ಎಂದು ಹೇಳಲಾಗುತ್ತದೆ. ಕುಬೇರನು ಅತ್ಯಂತ ಶ್ರೀಮಂತ ದೇವರು ಎಂದು ಕೂಡಾ ಕರೆಯುತ್ತಾರೆ .ಆದರೆ ಅಸಲಿಯ ಸಂಗತಿಯೇ ಬೇರೆ. ಅದೇನೆಂದರೆ ಕುಬೇರ ಶ್ರೀಮಂತ ದೇವತೆ ಅಲ್ಲವೇ ಅಲ್ಲ. ಶಿವಭಕ್ತನಾಗಿರುವ ಕುಬೇರನಿಗೆ ಒಮ್ಮೆ ಶಿವ-ಪಾರ್ವತಿಯರು ನೇರ ದರ್ಶನ ಕೊಡುತ್ತಾರೆ.

 

 

 

ಮೊದಲ ಬಾರಿಗೆ ಪಾರ್ವತಿಯನ್ನು ನೋಡಿದ ಕುಭೇರ ಆಕೆಯ ಸೌಂದರ್ಯವನ್ನು ನೋಡಿ ಅಚ್ಚರಿಗೆ ಒಳಗಾಗುತ್ತಾನೆ. ಆದ್ದರಿಂದ ಆತನ ಒಂದು ಕಣ್ಣು ಹೊಡೆದುಕೊಳ್ಳುತ್ತದೆ.ಆಗ ಪಾರ್ವತಿ ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಅಂತ ಅಂದುಕೊಂಡು ಅವನ ಒಂದು ಕಣ್ಣನ್ನು ಸುಟ್ಟು ಬಿಡುತ್ತಾಳೆ. ಕೊನೆಗೆ ಈತನಿಗೆ ದುರುದ್ದೇಶವಿಲ್ಲ ಅಂತ ಗೊತ್ತಾಗಿ ಕಣ್ಣನ್ನು ದಯ ಪಾಲಿಸುತ್ತಾಳೆ. ನಂತರ ಶಿವನು ಕುಬೇರನನ್ನು ಅಷ್ಟ ದಿಕ್ಕುಗಳಲ್ಲಿ ಒಂದು ದಿಕ್ಕಿಗೆ ಕಾವಲುಗಾರನನ್ನಾಗಿ ನೇಮಿಸುತ್ತಾನೆ. ಪಾರ್ವತಿ ಈತನಿಗೆ ಧನ,ದಾನ್ಯ ಸಂಪತ್ತನ್ನು ಕೊಡುತ್ತಾಳೆ. ಶಿವನ ಪತ್ನಿ ಪಾರ್ವತಿಯಿಂದ ಅಗಾದವಾದ ಸಂಪತ್ತನ್ನು ಪಡೆದ ಕುಬೇರನಿಗೆ ಒಂದು ಜವಾಬ್ದಾರಿಯನ್ನು ನೀಡಲಾಗುತ್ತದೆ. ಅವಶ್ಯಕತೆ ಇದ್ದವರಿಗೆ ಸಂಪತ್ತನ್ನು ಹಂಚುವ ಹೊಣೆ ಕುಬೇರನಿಗೆ ಇರುತ್ತದೆ. ಅಲ್ಲಿಂದ ಕುಬೇರ ಶ್ರೀಮಂತ ದೇವರಾಗಿ ಹೆಸರನ್ನು ಪಡೆದ. ಆದರೆ ಆತನ ಬಳಿ ಇರುವ ಸಂಪತ್ತು ಮಾತ್ರ ಆತನದಲ್ಲ. ಕುಬೇರ ಕೇವಲ ಹಂಚುವವನು ಅಷ್ಟೇ. ಇನ್ನು ಲಕ್ಷ್ಮೀ ಎಂದರೆ ಪಾರ್ವತಿಯ ಇನ್ನೊಂದು ರೂಪ. ಇವರಿಬ್ಬರೂ ಜೊತೆಯಾಗಿ ನೆಲೆ ನಿಂತಿರುವ ಪುಣ್ಯಕ್ಷೇತ್ರವೇ ವಂಡಲೂರಿನ ಲಕ್ಷ್ಮಿ ಕುಬೇರ ಮಂದಿರ.

ಲಕ್ಷ್ಮಿ ಕುಬೇರನ ಮಂದಿರಕ್ಕೆ ಬಂದು ಬೇಡಿಕೊಂಡರೆ ಕಳೆದು ಹೋದ ಸಂಪತ್ತು ಸಿಗುವುದು .ಮಾತ್ರವಲ್ಲದೇ ಲಕ್ಷ್ಮಿ ಬೇಗನೆ ಒಲಿಯಲು ಕಾರಣವಿದೆ .ಇಲ್ಲಿ ಲಕ್ಷ್ಮಿ ಸಾಕ್ಷಾತ್ ಲಕ್ಷ್ಮಿಯು ಇದ್ದಾಳೆ ಲಕ್ಷ್ಮಿ ಅಷ್ಟೇ ಅಲ್ಲ ಸಂಪತ್ತನ್ನು ಹಂಚುವ ಜವಾಬ್ದಾರಿಯನ್ನು ಹೊಂದಿರುವ ಕುಬೇರನು ಇದ್ದಾನೆ. ಹೀಗಾಗಿ ಇಬ್ಬರು ನೆಲೆನಿಂತಿರುವ ವಿಶೇಷವಾದ ಸ್ಥಳವಾದ ಕಾರಣ ಇಲ್ಲಿಗೆ ಬಂದರೆ ಬರಿಗೈಯಲ್ಲಿ ವಾಪಸ್ಸಾಗುವ ಅವಕಾಶವೇ ಇಲ್ಲ. ಶ್ರದ್ಧೆ ಭಕ್ತಿಯಿಂದ ಕೈಮುಗಿದು ಬೇಡಿಕೊಂಡರೆ ಹಣದ ರಾಶಿಯ ಮನೆ ಬಾಗಿಲಿಗೆ ಬರುತ್ತದೆ ಎನ್ನುವ ನಂಬಿಕೆ ಇದೆ. ಜಗತ್ತಿನ ಏಕೈಕ ಲಕ್ಷ್ಮಿ ಕುಬೇರರ ಮಂದಿರ ಇವತ್ತಿಗೂ ಭಕ್ತಾದಿಗಳ ಆಸೆಗಳನ್ನು ಪೂರೈಸುತ್ತಾ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ . ಅದರಲ್ಲೂ ಕಳೆದುಹೋದ ಸಂಪತ್ತನ್ನು ವಾಪಸ್ ದೊರಕಿಸಿಕೊಟ್ಟು ಪವಾಡ ಸೃಷ್ಟಿಸುವುದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಕಲಿಯುಗದಲ್ಲಿ ಲಕ್ಷ್ಮಿ ಕುಬೇರರ ಪವಾಡ ನಿರಂತರವಾಗಿ ನಡೆಯುತ್ತದೆ ಎನ್ನುವ ಭಕ್ತರ ನಂಬಿಕೆ ಇವತ್ತಿಗೂ ಕೂಡ ಸುಳ್ಳಾಗದೇ ಇರುವುದು. ಈ ದೇಗುಲದ ಮಹಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top