fbpx
ದೇವರು

ಈ ವಿಶ್ರಾಂತಿ ಪಡೆಯುವ ಹನುಮಂತನ ಗುಡಿಯ ನಿಗೂಢ,ರಹಸ್ಯಗಳನ್ನ ತಿಳ್ಕೊಳ್ಳೋದ್ರ ಜೊತೆಗೆ ನಿಮ್ಮ ಎಲ್ಲ ಕಷ್ಟಗಳನ್ನ ಪರಿಹಾರ ಮಾಡ್ತಾನೆ ಅಂತ ಗೊತ್ತಾದ್ರೆ ನೀವು ಹೋಗಿ ಬರ್ತೀರಾ.

ಕಲಿಯುಗದ ಚಮತ್ಕಾರ ಇಲ್ಲಿಗೆ ಮಾರುವೇಷದಲ್ಲಿ ಬರುತ್ತಾನಂತೆ ಆಂಜನೇಯ ಸ್ವಾಮಿ.ಈ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯತ್ತಿದ್ದಾನಂತೆ ಹನುಮಂತ. ಇಲ್ಲಿ ಹನುಮನ ಹಣೆಗೆ ಕುಂಕುಮವನ್ನು ಹಚ್ಚಿದರೆ ಅದೃಷ್ಟವೋ ಅದೃಷ್ಟ. ಭಕ್ತರನ್ನು ಪರೀಕ್ಷಿಸಲು ನಾನಾ ವೇಷದಲ್ಲಿ ಕಾಣಿಸಿಕೊಳ್ಳುತ್ತಾನೆ ಹನುಮಂತ.

ಅಂಜನಿಪುತ್ರ ,ಹನುಮಂತ ಚಿರಂಜೀವಿಗಳಲ್ಲಿ ಒಬ್ಬರು . 3 ಯುಗಗಳನ್ನು ಕಂಡಿರುವ ಕಾಣುತ್ತಿರುವ ದೇವರು ಹನುಮ . ವಿಶ್ವದೆಲ್ಲೆಡೆ ಗುಡಿಯನ್ನು ಹೊಂದಿರುವ ಆಂಜನೇಯನ ವಿಸ್ಮಯಕಾರಿ ಮಂದಿರವು ಒಂದಿದೆ.ಇಲ್ಲಿ ಭಗವಂತನೇ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ ಎಂದು ಹೇಳುವ ಮಾರುತಿ ಇಲ್ಲಿಗೆ ಮಾರುವೇಷದಲ್ಲಿ ಬರುತ್ತಾನಂತೆ. ಈ ದೇಗುಲದ ಎಲ್ಲಿದೆ ? ಈ ದೇಗುಲದ ಬಗ್ಗೆ ಇನ್ನೂ ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ .

 

 

ಪವನ ಪುತ್ರ, ಮಾರುತಿ, ಭಜರಂಗಿ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತಾನೆ. ರಾಮಭಕ್ತ ಹನುಮಂತ ತ್ರೇತಾಯುಗ, ದ್ವಾಪರಯುಗ ಎರಡರಲ್ಲೂ ತನ್ನ ಅಸ್ತಿತ್ವವನ್ನು ಸಾರಿರುವ ಆಂಜನೇಯ ಚಿರಂಜೀವಿ. ಹೀಗಾಗಿಯೇ ಈ ಕಲಿಯುಗದಲ್ಲಿ ಮಾರುತಿಗೆ ವಿಶೇಷವಾದ ಪೂಜೆ ಹಾಗೂ ಪ್ರಾಶಸ್ತ್ಯ ಇದೆ.ನಮ್ಮ ಇಂದೂ ಪರಂಪರೆಯಲ್ಲಿರುವ ಮುಕ್ಕೋಟಿ ದೇವರುಗಳಲ್ಲಿ ವಿಶೇಷವಾಗಿರುವ ದೇವರು ಎಂದರೆ ಅದು ಹನುಮಂತ . ಅದಕ್ಕೆ ಕಾರಣ ಹಲವಾರು ವಾನರ ದೇಹವನ್ನು ಹೊಂದಿರುವ ಆಂಜನೇಯ.
ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದು. ಕಥಾನಾಯಕ ಶ್ರೀರಾಮಚಂದ್ರನ ಬಂಟನಾಗಿ ಹಾಗೂ ಒಬ್ಬ ಮಹಾನ್ ಪರಾಕ್ರಮಿಯಾಗಿ ಮಂಗ ಬುದ್ಧಿಯವನಾಗಿ, ಮುಗ್ಧನಾಗಿ ಹಲವು ಹೀಗೆ ಹಲವು ರೂಪದಲ್ಲಿ ನಮಗೆ ಕಾಣಿಸಿಕೊಳ್ಳುತ್ತಾನೆ. ಕಲಿಯುಗದಲ್ಲಿ ಹನುಮನನ್ನು ನೆನೆದರೆ ಯಾವ ಭಯವೂ ಇರುವುದಿಲ್ಲ. ಹನುಮಾನ್ ಚಾಲೀಸಾ ಪಠಿಸಿದರೆ ಎಂತವರು ಸಾಧಿಸಿ ತೋರಿಸಬಹುದು ಎನ್ನುವ ನಂಬಿಕೆ ಇದೆ .
ಇಲ್ಲಿದೆ ಹನುಮನ ವಿಸ್ಮಯಕಾರಿ ಮಂದಿರವಿದೆ. ಇಲ್ಲಿಯೇ ವಿಶ್ರಾಂತಿ ಪಡೆದು ಕೊಳ್ಳುತ್ತಿದ್ದಾನೆ ಮಾರುತಿ. ಮಲಗಿರುವ ಆಂಜನೇಯನಿಗೆ ನಡೆಯುತ್ತದೆ ಪೂಜೆ . ನೀವು ಹನುಮನ ಹಲವು ದೇವಸ್ಥಾನಗಳನ್ನು ನೋಡಿರಬಹುದು. ಬೇರೆ ಬೇರೆ ರೂಪದಲ್ಲಿ ವಿಧಾನದಲ್ಲಿ ವಾಯುಪುತ್ರನ ಪೂಜೆ ನಡೆಯುತ್ತದೆ . ಆದರೆ ಇಲ್ಲೊಂದು ವಿಶೇಷವಾದ ಮಂದಿರವಿದೆ. ಇಲ್ಲಿ ಅಂಜನಾದೇವಿಯ ಪುತ್ರ ಮಲಗಿರುವ ರೂಪದಲ್ಲಿ ಇದ್ದಾನೆ. ಅಸಲಿಗೆ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನಂತೆ ಹನುಮ.

ಇದು ಉತ್ತರ ಪ್ರದೇಶದ ಅಲಹಾಬಾದ್ ಅಥವಾ ಪ್ರಯಾಗದಲ್ಲಿ ಇರುವ ಒಂದು ವಿಭಿನ್ನವಾದ ಹನುಮ ಮಂದಿರ. ಬಡೆ ಹನುಮಾನ್ ಜೀ, ಲೇಟೆ ಹನುಮಾನ ಜೀ, ಹೀಗೆ ನಾನಾ ಹೆಸರುಗಳಿಂದ ಈ ಮಂದಿರವನ್ನು ಕರೆಯಲಾಗುತ್ತದೆ. ಗಂಗಾ ನದಿಯ ತಟದಲ್ಲಿರುವ ಈ ದೇಗುಲಕ್ಕೆ ಎಲ್ಲಾ ಧರ್ಮದ ಭಕ್ತರೂ ಕೂಡ ಆಗಮಿಸುತ್ತಾರೆ. ಶಕ್ತಿ ದೇವತೆಯಾಗಿರುವ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾರೆ. ಮಾರುವೇಷದಲ್ಲಿ ಬರುತ್ತಾನೆ ಆಂಜನೇಯ .ಕುಂಕುಮವನ್ನು ಅರ್ಪಿಸಿದರೆ ಒಲಿಯುತ್ತಾನೆ.

 

 

 

ಈ ಹನುಮಾನ್ ಮಂದಿರದ ವಿಶೇಷತೆ ಏನೆಂದರೆ.

ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರೂ ಕೂಡ ಆಂಜನೇಯನಿಗೆ ಕುಂಕುಮವನ್ನು ಅರ್ಪಿಸುತ್ತಾರೆ. ವಿಶ್ವದ ಮೂಲೆಮೂಲೆಗಳಿಂದ ಭಕ್ತರನ್ನು ಸೆಳೆಯುತ್ತಿದೆ ಹನುಮನ ಮಂದಿರ.ಈ ಆಂಜನೇಯನ ವಿಗ್ರಹಕ್ಕೆ ಕುಂಕುಮವನ್ನು ಅರ್ಪಿಸಿದರೆ ಕ್ಷಣಮಾತ್ರದಲ್ಲಿ ಒಲಿಯುತ್ತಾನಂತೆ .ಶ್ರದ್ದೆ,ಭಕ್ತಿಯಿಂದ ಪೂಜೆ ಮಾಡಿದರೆ ಭಜರಂಗಿಯ ಆಶೀರ್ವಾದ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಇದೆ. ಬಡೇ ಹನುಮಾನ್ ಮಂದಿರ ಹಲವು ಸಂಗತಿಗಳನ್ನು ಮತ್ತು ಪ್ರಖ್ಯಾತಿಯನ್ನು ಪಡೆದಿದೆ. ಮಾರುತಿ ಇಲ್ಲಿಗೆ ಮಾರುವೇಷದಲ್ಲಿ ಭೇಟಿ ಕೊಡುತ್ತಾನೆ ಎನ್ನುವ ಭಕ್ತರ ನಂಬಿಕೆ ಇದೆ. ಭಕ್ತರ ನಂಬಿಕೆಯನ್ನು ಪರೀಕ್ಷಿಸಲು ಹನುಮಂತ ಮಾರುವೇಷದಲ್ಲಿ ಬರುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರೂ ಕೂಡ ನಿಷ್ಕಲ್ಮಶ ಮನಸ್ಸಿನಿಂದ ಆಂಜನೇಯನ ಭಜನೆ ಮಾಡುತ್ತಾರೆ. ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಮನಸ್ಸಿನಲ್ಲಿ ಅಂದುಕೊಂಡಿದ್ದು ನೆರವೇರಿದರೆ ಕುಂಕುಮವನ್ನು ಅರ್ಪಿಸಿದರೆ ಸಾಕು.ಹನುಮನ ಹಣೆಗೆ ಕುಂಕುಮವನ್ನು ಲೇಪನವನ್ನು ಮಾಡಿದರೆ ಸಾಕು ಭಗವಂತನ ಮನಸ್ಸು ಸಂತುಷ್ಟವಾಗುತ್ತದೆ. ಆಗ ಏನೇ ಕೇಳಿದರೂ ಇಲ್ಲ ಎನ್ನುವುದಿಲ್ಲ.ಇಲ್ಲೇ ವಿಶ್ರಾಂತಿಯನ್ನು ಪಡೆಯುತ್ತಿರುವ ಹನುಮ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ಪ್ರತೀತಿ ತಲೆತಲಾಂತರಗಳಿಂದ ಬಂದಿದೆ.

ಅದರಲ್ಲೂ ಸಂತಾನವಿಲ್ಲದವರು ಒಮ್ಮೆ ಬಡೆ ಹನುಮಾನ್ ಜೀಯನ್ನು ನೆನೆದರೆ ಸಾಕು ಸಂತಾನಭಾಗ್ಯ ದೊರಕುತ್ತದೆ ಎಂದು ಹೇಳಲಾಗುತ್ತದೆ. ಅಪರೂಪದಲ್ಲೇ ಅಪರೂಪವಾಗಿರುವ ಮಲಗಿರುವ ಹನುಮಂತನನ್ನು ಆ ಸ್ಥಳದಿಂದ ಎಬ್ಬಿಸುವ ಹಲವು ಪ್ರಯತ್ನಗಳು ನಡೆದಿವೆ. ಆದರೆ ಮಾರುತಿಯ ವಿಗ್ರಹವನ್ನು ಎಬ್ಬಿಸೋಕೆ ಸಾಧ್ಯವಾಗಲೇ ಇಲ್ಲ . ಇತಿಹಾಸದ ಕಾಲದಲ್ಲೇ ಈ ಪ್ರಯತ್ನ ನಡೆದಿದೆ. ಕೊನೆಗೆ ಹನುಮನಿಗೆ ಏಳಲು ಇಷ್ಟವಿಲ್ಲ ಅನಿಸುತ್ತದೆ ಎನ್ನುವ ತೀರ್ಮಾನಕ್ಕೆ ಬಂದು ಆತನನ್ನು ಎಬ್ಬಿಸುವ ಪ್ರಯತ್ನ ಕೈಬಿಡಲಾಯಿತು.
ಮಲಗಿರುವ ಸ್ಥಿತಿಯಲ್ಲಿ ಆತನಿಗೆ ದೇವಾಲಯವನ್ನು ಕಟ್ಟಿ ಪೂಜೆ ನಡೆಸಲು ಪ್ರಾರಂಭ ಮಾಡಿದರು. ಪ್ರಯಾಗದ ದೇವಾಲಯಕ್ಕೆ ಸಾಮಾನ್ಯ ಭಕ್ತರು ಮಾತ್ರವಲ್ಲ ರಾಜಕಾರಣಿಗಳು, ಸಿನಿಮಾ ರಂಗದವರು ಬರುತ್ತಾರೆ. ಆಂಜನೇಯನ ಮಂದಿರಕ್ಕೆ ಬಂದು ಕುಂಕುಮವನ್ನು ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಮನೋಕಾಮನೆಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಅತ್ಯಂತ ಪ್ರಭಾವಶಾಲಿಯಾದ ದೇವರು ಎಂದೇ ಖ್ಯಾತಿ ಪಡೆದಿರುವ ಬಡೆ ಹನುಮಾನ್ ಭಕ್ತರನ್ನು ಕೈಬಿಡುವುದಿಲ್ಲ . ಇಲ್ಲಿ ನಡೆಯುವ ವಿಸ್ಮಯಗಳು ಚಮತ್ಕಾರಗಳು ಅನುಭವಿಸಿದವರಿಗೆ ಮಾತ್ರ ಗೊತ್ತು. ಒಮ್ಮೆ ಇಲ್ಲಿ ಭೇಟಿ ಕೊಟ್ಟರೆ ಸಾಕು ಹನುಮಂತನ ಶಕ್ತಿಯ ಸಾಕ್ಷಾತ್ಕಾರವಾಗುತ್ತದೆ. ಹೀಗಾಗಿ ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟರೆ ಪದೇಪದೇ ಹೋಗಬೇಕು ಎನಿಸುತ್ತದೆ. ಉತ್ತರ ಪ್ರದೇಶದ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಈ ಮಂದಿರ ಪ್ರವಾಸಿ ತಾಣವಾಗಿಯೂ ಹೆಸರು ಪಡೆದಿದೆ.

ಈ ಮಂದಿರದಲ್ಲಿ ಹನುಮಂತ ಮಲಗಿರುವ ಸ್ಥಿತಿಯಲ್ಲಿ ಯಾಕೆ ಇದ್ದಾನೆ ? ಕುಂಕುಮ ಹಚ್ಚಿದರೆ ಮಾತ್ರ ಬೇಗನೇ ಒಲಿಯಲು ಕಾರಣ ಏನು ? ರಾಮಾಯಣದಲ್ಲಿ ಹನುಮನ ಪಾತ್ರವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಪ್ರಯಾಗದಲ್ಲಿ ಹನುಮ ಮಲಗಿರುವುದಕ್ಕೂ ರಾಮಾಯಣದ ಕಥೆಗೂ ನೇರವಾದ ಸಂಬಂಧವಿದೆ.
ರಾಮಾಯಣದ ಬಗ್ಗೆ ಎರಡು ವಾಕ್ಯದಲ್ಲಿ ಹೇಳಿದರು ಅದರಲ್ಲಿ ಆಂಜನೇಯನ ಹೆಸರು ಬಂದೇ ಬರುತ್ತದೆ. ಯಾಕೆಂದರೆ ಇಡೀ ರಾಮಾಯಣ ಕತೆಯನ್ನು ವಿಭಿನ್ನವಾಗಿ ನಿಲ್ಲುವ ಪಾತ್ರವದು. ರಾಮಾಯಣದ ಪಾತ್ರಗಳಲ್ಲಿ ರಾಮನನ್ನು ದ್ವೇಷಿಸುವವರು ಸಿಗಬಹುದು ಆದರೆ ಹನುಮಂತನನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಯಾಕೆಂದರೆ ಆತ ಇರುವುದೇ ಹಾಗೆ. ಮಹಾಪರಾಕ್ರಮಿಯಾದರೂ ತನ್ನ ಶಕ್ತಿಯ ಬಗ್ಗೆ ಗೊತ್ತಿರದ ಮುಗ್ಧ ಆತ.

ಭಾರತದಿಂದ ಶ್ರೀಲಂಕಾಗೆ ನೆಗೆದ ಮಹಾ ದೂತ . ರಾವಣನ ಲಂಕೆಗೆ ಬೆಂಕಿ ಹಚ್ಚಿ ಮಜಾ ಕೊಟ್ಟ ಹಾಸ್ಯಗಾರ. ರಾವಣನ ಜೊತೆ ಯುದ್ಧ ಮಾಡಿ ಸುಸ್ತಾದ ಹನುಮ. ಪ್ರಯಾಗದಲ್ಲಿ ಬಂದು ವಿಶ್ರಾಂತಿ ಪಡೆದ ವಾಯುಪುತ್ರ. ಲಂಕಾಸುರ ರಾವಣ ಸೀತೆಯಮೋಹಕ್ಕೆ ಒಳಗಾಗಿ ಪುಷ್ಪಕ ವಿಮಾನದಲ್ಲಿ ಅಪಹರಿಸಿದ ಮಹಾಬ್ರಾಹ್ಮಣ. ರಾಮ, ಲಕ್ಷ್ಮಣ ,ಸೀತೆ ವನವಾಸದಲ್ಲಿ ಇರಬೇಕಾದರೆ ಮಾರುವೇಷದಲ್ಲಿ ಬಂದು ಸೀತೆಯನ್ನು ಲಂಕೆಗೆ ಹೊತ್ತೊಯ್ದ. ಸೀತೆಯ ಹುಡುಕಾಟದಲ್ಲಿ ಮನೆಗೆ ಬಂದವನೇ ಅಂಜನಿಪುತ್ರ ಬಜರಂಗಿ. ಶ್ರೀರಾಮದೂತನಾಗಿ ಲಂಕೆಗೆ ಹಾರಿ ಕೊಂಡು ಹೋದ ಸೀತೆಯನ್ನು ಭೇಟಿಯಾಗಿ ರಾಮನಿಗೆ ವಿಷಯವನ್ನು ತಿಳಿಸಿದ. ನಂತರ ರಾಮ ವಾನರ ಸೇನೆಯ ಸಹಾಯದಿಂದ ಲಂಕೆಗೆ ಹೋಗುವುದಕ್ಕೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ ಆ ಸಮಯದಲ್ಲೂ ಆಂಜನೇಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾನೆ.
ಸೇತುವೆಯ ಸಹಾಯದೊಂದಿಗೆ ರಾಮನ ಸೈನ್ಯ ಲಂಕೆಗೆ ಹೋಗುತ್ತದೆ . ಅಲ್ಲಿ ರಾಮ, ಲಕ್ಷ್ಮಣ, ಹನುಮಂತನ ಜೊತೆ ರಾವಣನ ಸೈನ್ಯಕ್ಕೆ ದೊಡ್ಡ ಯುದ್ಧವೇ ನಡೆಯುತ್ತದೆ. ರಾವಣನ ಜೊತೆ ಕಾದಾಟಕ್ಕೆ ನಿಲ್ಲುವ ಹನುಮ ಯುದ್ಧ ಮಾಡಿ ಸುಸ್ತಾಗಿ ಹೋಗುತ್ತಾನೆ. ಯುದ್ಧ ಮುಗಿದು ರಾಮ ಜಯಶಾಲಿಯಾದ ನಂತರ ಹನುಮಂತ ವಿಶ್ರಾಂತಿಯನ್ನು ಪಡೆದು ಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ರಾಮಬಂಟನಿಗೆ ಸೀತಾ ಮಾತೆ ಉಪಚಾರ ಮಾಡುತ್ತಾಳೆ.ಆತ ಕಳೆದುಕೊಂಡಿರುವ ಶಕ್ತಿಯನ್ನು ಮತ್ತೆ ಪಡೆಯಲು ಕುಂಕುಮವನ್ನು ಹಚ್ಚುತ್ತಾಳೆ. ಹೀಗೆ ರಾವಣನ ಜೊತೆ ಕಾದಾಡಿ ಶಕ್ತಿಯನ್ನು ಕಳೆದುಕೊಂಡಿದ್ದ ಮಾರುತಿಗೆ ಕುಂಕುಮವನ್ನು ಹಚ್ಚಿದ ನಂತರ ತನ್ನ ಶಕ್ತಿಯನ್ನು ಮರಳಿ ಪಡೆಯುತ್ತಾನೆ.

 

 

ಉತ್ತರಪ್ರದೇಶದ ಪ್ರಯಾಗದಲ್ಲಿ ಹನುಮ ವಿಶ್ರಾಂತಿಯನ್ನು ಪಡೆದಿದ್ದ ಎನ್ನುವ ಕಥೆ ಇದೆ. ಇಲ್ಲಿ ಸೀತೆ ಆತನಿಗೆ ಕುಂಕುಮವನ್ನು ಹಚ್ಚಿದಳಂತೆ. ಬಡೆ ಹನುಮಾನ್ ಜೀ ಮಂದಿರದಲ್ಲಿ ಇವತ್ತಿಗೂ ಈ ಕಥೆ ಜೀವಂತವಾಗಿದೆ. ಹನುಮಂತ ಶಕ್ತಿಯನ್ನು ಮರಳಿ ಪಡೆದ ಜಾಗದಲ್ಲೆಯೇ ನಿರ್ಮಾಣವಾಗಿದೆ ಎನ್ನಲಾಗುವ ಈ ಮಂದಿರದಲ್ಲಿ, ಇವತ್ತಿಗೂ ಕೂಡ ಹನುಮನಿಗೆ ಕುಂಕುಮವನ್ನು ಹಚ್ಚಲಾಗುತ್ತದೆ. ಹೀಗೆ ಯಾರು ಈ ದೇಗುಲಕ್ಕೆ ಬಂದು ಆಂಜನೇಯನಿಗೆ ಕುಂಕುಮವನ್ನು ಅರ್ಪಿಸುತ್ತಾರೋ ಅಂತವರಿಗೆ ಹನುಮನು ಬೇಗನೇ ಒಲಿಯುತ್ತಾನೆ .ಹೀಗಾಗಿ ಈ ದೇಗುಲಕ್ಕೆ ಬರುವ ಪ್ರತಿಯೊಬ್ಬ ಭಕ್ತನು ಕೈಲಾದಷ್ಟು ಕುಂಕುಮವನ್ನು ಅರ್ಪಿಸುತ್ತಾರೆ. ಬಡವ-ಬಲ್ಲಿದ ಎನ್ನುವ ಭೇದಭಾವ ಇಲ್ಲದೆ ಶಕ್ತಿ ಅನುಸಾರವಾಗಿ ಎಷ್ಟು ಕೊಟ್ಟರೂ ತೆಗೆದುಕೊಳ್ಳುತ್ತಾನೆ ಹನುಮ.ರಾಮಾಯಣ ಕಾಲದಲ್ಲಿ ವಿಶ್ರಾಂತಿ ಪಡೆದಿದ್ದ ಎನ್ನುವ ಈ ಜಾಗ ಇವತ್ತಿಗೂ ಕೂಡ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ವಾಯುಪುತ್ರನ ಚಮತ್ಕಾರದ ಫಲ ಪಡೆದವರು ಇವತ್ತಿಗೂ ಅನೇಕ ಮಂದಿ ಇದ್ದಾರೆ . ಮಲಗಿರುವ ರೂಪದಲ್ಲಿ ವಿಶೇಷವಾಗಿ ಕಾಣುವ ಹನುಮ ಸಾವಿರಾರು ವರ್ಷಗಳಿಂದ ನಂಬಿದ ಭಕ್ತರನ್ನು ಕೈಹಿಡಿದು ನಡೆಸುತ್ತಿದ್ದಾನೆ.

ನಿಜಕ್ಕೂ ಆಂಜನೇಯ ಇಲ್ಲಿಗೆ ಭೇಟಿ ನೀಡಿದ್ದಾನೆಯೇ ? .ಇವತ್ತಿಗೂ ಹನುಮಂತ ಜೀವಂತವಾಗಿದ್ದಾನೆಯೇ ? ಇಲ್ಲಿ ಪ್ರತಿವರ್ಷ ಗಂಗೆ ಬಂದು ಹನುಮಂತನ ಪಾದವನ್ನು ಮುಟ್ಟುವುದು ನಿಜವೇ ?
ಚಿರಂಜೀವಿಗಳಲ್ಲಿ ಒಬ್ಬನಾಗಿರುವ ಹನುಮಂತ ಇವತ್ತಿಗೂ ಜೀವಂತವಾಗಿದ್ದಾನೆ ಎಂದು ಹೇಳಲಾಗುತ್ತದೆ. ಭಾರತೀಯ ಪುರಾಣವನ್ನು ತೆಗೆದು ನೋಡಿದರೆ ಹಲವು ಜನ ಚಿರಂಜೀವಿಗಳು ಕಣ್ಣು ಮುಂದೆ ಬರುತ್ತಾರೆ .ಪರಶುರಾಮ, ಋಷಿ ಅಶ್ವತ್ಥಾಮ, ವಿಭೀಷಣ, ವ್ಯಾಸ ಮಹರ್ಷಿಗಳು ಹೀಗೆ ಇನ್ನೂ ಹಲವು ಚಿರಂಜೀವಿಗಳು ಇದ್ದಾರೆ. ಇವರು ಎಲ್ಲಾ ಯುಗದಲ್ಲಿಯೂ ಇದ್ದು, ಈ ಬ್ರಹ್ಮಾಂಡ ಕೊನೆಯಾಗುವವರೆಗೆ ಇರುತ್ತಾರೆ ಎನ್ನುವ ನಂಬಿಕೆ ಇದೆ.ಈ ಮಹಾ ಚಿರಂಜೀವಿಗಳ ಸಾಲಿಗೆ ರಾಮಬಂಟ ಹನುಮಂತನು ಕೂಡಾ ಸೇರುತ್ತಾನೆ.

ಇವತ್ತಿಗೂ ಜೀವಂತವಾಗಿದ್ದಾನೆಯೇ ಹನುಮ ? ಹಿಮಾಲಯ ಪರ್ವತದಲ್ಲಿ ಇರುವ ಆ ನಿಗೂಢ ವ್ಯಕ್ತಿ ಯಾರು ?

ಚಿರಂಜೀವಿ ಎಂದ ಮೇಲೆ ಎಲ್ಲ ಯುಗಗಳಲ್ಲೂ ಬದುಕಿರಲೇಬೇಕು. ತ್ರೇತಾಯುಗದಲ್ಲಿ ರಾಮಭಕ್ತನಾಗಿ ,ದ್ವಾಪರ ಯುಗದಲ್ಲಿ ಅರ್ಜುನನ ರಥದ ದ್ವಜವೇರಿ ಕುಳಿತಿದ್ದ ಹನುಮ, ಕಲಿಯುಗದಲ್ಲಿಯೂ ಇದ್ದಾನೆ ಎಂದು ಹೇಳಲಾಗುತ್ತದೆ. ಹಿಮಾಲಯ ಪರ್ವತದ ತಪ್ಪಲಿನಲ್ಲಿ ಗುಹೆಯೊಳಗೆ ಧ್ಯಾನ ಮಾಡುತ್ತಿರಬೇಕೆ ? ಹಿಂದೆ ಒಬ್ಬರು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.ಈಗ ಹನುಮ ಹೇಗಿದ್ದಾನೆ ಎನ್ನುವ ಚಿತ್ರವನ್ನು ಸಹ ಮಾಡಿದ್ದರು ಹಣ್ಣುಹಣ್ಣು ಮುದುಕನಾಗಿರುವ ಹನುಮಂತ ರಾಮ ನಾಮಸ್ಮರಣೆ ಮಾಡುತ್ತಾ ಹಿಮಾಲಯದಲ್ಲಿ ಇಂದಿಗೂ ಇದ್ದಾನೆ ಎಂದು ಹೇಳಲಾಗುತ್ತದೆ.
ರಾಮನು ಹನುಮನಿಗೆ ನೀನು ಮುಂದಿನ ಜನ್ಮದಲ್ಲಿ ಬ್ರಹ್ಮನಾಗುತ್ತೀಯಾ ಅಲ್ಲಿಯವರೆಗೆ ನೀನು ಹಿಮಾಲಯದಲ್ಲಿ ತಪಸ್ಸು ಮಾಡುತ್ತಾ ಇರು ಎಂದು ವರವನ್ನು ಕೊಟ್ಟಿರುತ್ತಾನೆ . ಹೀಗಾಗಿ ಹಿಮಾಲಯದಲ್ಲಿ ತಪಸ್ಸು ಮಾಡುತ್ತೀರಬೇಕು ಎಂದು ಹೇಳುತ್ತಾನೆ. ಮತ್ತೊಂದು ಸಂಗತಿಯೆಂದರೆ ಯಾವತ್ತು ಹನುಮ ಹಿಮಾಲಯ ಪರ್ವತದಲ್ಲಿ ಇರುವುದಿಲ್ಲ. ಮಾರುವೇಷದಲ್ಲಿ ಕೆಳಗೆ ಇಳಿದು ರಹಸ್ಯವಾಗಿ ಬರುತ್ತಾನಂತೆ. ಹನುಮಂತ ಶಿವನ ಅವತಾರವೇ ಎಂದು ಹೇಳುವುದಕ್ಕೆ ಉತ್ತರ ಪ್ರದೇಶದ ಈ ಪ್ರಯಾಗ ಮಂದಿರವೇ ಸಾಕ್ಷಿಯಾಗಿದೆ.

ಗಂಗಾ ನದಿಯ ತಟದಲ್ಲಿರುವ ಈ ಹನುಮನ ದೇವಾಲಯದ ಒಳಗೆ ಪ್ರತಿ ವರ್ಷ ಹರಿದು ಬರುತ್ತಾಳಂತೆ ಗಂಗೆ.

ಹನುಮನ ಪಾದವನ್ನು ಸ್ಪರ್ಶಿಸಿ ಹೋಗುತ್ತಾಳಂತೆ.ಪ್ರತಿ ವರ್ಷ ಗಂಗೆ ಹರಿದು ಹನುಮಂತನ ಮಂದಿರದೊಳಗೆ ಹನುಮನ ಪಾದಸ್ಪರ್ಶ ಮಾಡಿದ್ದಾಳೆ. ಶಿವನ ಜಡೆಯಲ್ಲಿರುವ ಗಂಗೆ ಪರಮೇಶ್ವರನ ಅಪರಾವತಾರ ಎನ್ನುವುದಕ್ಕೆ ಈ ರೀತಿ ಗೌರವವನ್ನು ತೋರಿಸುತ್ತಿದ್ದಾಳೆ. ಇವತ್ತು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿರುವ ಹನುಮ ಭಕ್ತರನ್ನು ಪರೀಕ್ಷಿಸಲು ಬರುತ್ತಾನೆ ಎನ್ನುವ ನಂಬಿಕೆ ಇದೆ.ಅದರಲ್ಲೂ ಉತ್ತರಪ್ರದೇಶದಲ್ಲಿ ಇರುವ ಮಂದಿರಕ್ಕೆ ಮಾರುವೇಶದಲ್ಲಿ ಬರುತ್ತಾನೆ ನಂಬಿಕೆ ಇದೆ. ಹೀಗಾಗಿ ಈ ಪುಣ್ಯಕ್ಷೇತ್ರ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಮನೋಕಾಮನೆಗಳು ಈಡೇರಬೇಕಾದರೆ ಕುಂಕುಮವನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಬೇಕು. ಹನುಮಂತ ಒಲಿದು ಬಿಡುತ್ತಾನೆ ಎನ್ನುವ ವಿಶ್ವಾಸ ಭಕ್ತರಲ್ಲಿ ಅಚಲವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top