ಭವಿಷ್ಯ

31 ಜುಲೈ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೩೧ ಜುಲೈ ೨೦೧೮
ಸೂರ್ಯೋದಯ : ೦೬:೧೫
ಸೂರ್ಯಾಸ್ತ : ೧೯:೧೩
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ತದಿಗೆ – ೦೮:೪೩ ವರೆಗೆ
ನಕ್ಷತ್ರ : ಶತಭಿಷ – ೦೯:೧೦ ವರೆಗೆ
ಯೋಗ : ಶೋಭಾನ – ೧೪:೨೮ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೮ – ೧೩:೧೦
ಅಮೃತಕಾಲ : ೨೬:೪೧+ – ೨೮:೨೬+
ರಾಹು ಕಾಲ:೧೫:೫೯ – ೧೭:೩೬
ಗುಳಿಕ ಕಾಲ: ೧೨:೪೪ – ೧೪:೨೧
ಯಮಗಂಡ:೦೯:೩೦ – ೧೧:೦೭

 

ಸಣ್ಣಸಣ್ಣ ಮಾತುಗಳಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಗಾಜಿನ ಮನೆಯಲ್ಲಿರುವವರ ಮನಸ್ಥಿತಿ ನಿಮ್ಮದಾಗಿರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ. ಒಂದು ವೇಳೆ ನೀವು ನಿಮ್ಮ ಮಾತಿನಲ್ಲಿ ದುಡುಕಿದರೆ ಪರಿಣಾಮ ಘೋರವಾಗಿರುತ್ತದೆ.

ಸಣ್ಣಪುಟ್ಟ ಕಾರ್ಯಗಳು ಕೂಡಾ ನೆರವೇರಲು ಸಾಕಷ್ಟು ಜನರ ಸಹಾಯವನ್ನು ಬಯಸುವ ಸಂದರ್ಭ ಬರುವುದು. ನಿಮ್ಮನ್ನು ಪ್ರೀತಿಸುವವರ ಮೂಲಕ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳಿ. ಕುಲದೇವರ ಆಶೀರ್ವಾದ ನಿಮ್ಮನ್ನು ರಕ್ಷಿಸುವುದು.

 

ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಪುನಃ ಜೋಡಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳು ನಿಮ್ಮಂತೆ ಆಗುತ್ತಿಲ್ಲ ಎಂದು ದುಡುಕಿ ಪರರನ್ನು ನೋಯಿಸದಿರಿ. ಆದಷ್ಟು ತಾಳ್ಮೆಯಿರಲಿ. ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗಿ.

ಯಾವುದು ನಿಮ್ಮಿಂದ ಆಗುವುದಿಲ್ಲವೋ ಎಂದು ತಿಳಿದಿರುವ ನಿಮಗೆ ಒಂದು ಮಹತ್ತರ ಕೆಲಸ ಕೈಗೂಡಿ ನಿಮಗೆ ಸಂತಸವನ್ನುಂಟು ಮಾಡುವುದು. ಈ ಕೆಲಸಕ್ಕಾಗಿ ಪಟ್ಟ ಶ್ರಮ ಸಾರ್ಥಕ ಎನಿಸುವುದು.

 

ನಿಮ್ಮ ಮುಂಗೋಪದಿಂದ ನಿಮ್ಮ ಸಂಗಾತಿ ಜತೆಯಲ್ಲಿ ಘರ್ಷಣೆ ಉಂಟಾಗುವುದು. ತದನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತಗಳು ಆಗದಂತೆ ಎಚ್ಚರ ವಹಿಸಿ.

 

 

ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಯಾವುದಕ್ಕೂ ಸಂಗಾತಿ ಸಲಹೆಯನ್ನು ಕೇಳಿ.

 

 

ಆಳು ಮಾಡಿದ್ದು ಹಾಳು ಎನ್ನವ ಗಾದೆ ಮಾತು ನೆನಪಿಗೆ ಬರುವ ಘಟನೆ ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸವನ್ನು ಮಾಡಿದ್ದಲ್ಲಿ ಯಶಸ್ಸು ದೊರೆಯುವುದು. ಕಾರ್ಯ ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸ ಪೂರ್ಣಗೊಳ್ಳುವುದಿಲ್ಲ.

 

 

ಪದೇ ಪದೆ ನಿಮ್ಮ ವಿರುದ್ಧ ಮಾತುಗಳು ಕೇಳಿಸುವುದು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗುಬರುತ್ತದೆ.

 

ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ನಿಮ್ಮ ದ್ವಂದ್ವ ನಿಲುವಿನ ವಿಚಾರದಿಂದ ನಿಮ್ಮನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಮಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ.

 

ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

 

ಒಂಟಿತನ ನಿಮ್ಮನ್ನು ಕಾಡುವುದು. ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್‌ ಪರಿಶೀಲಿಸುವುದು ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top