fbpx
ಭವಿಷ್ಯ

01 ಆಗಸ್ಟ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೧ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೬
ಸೂರ್ಯಾಸ್ತ : ೧೯:೧೩
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ – ೧೦:೨೨ ವರೆಗೆ
ನಕ್ಷತ್ರ : ಪೂರ್ವಾ ಭಾದ್ರ – ೧೧:೨೬ ವರೆಗೆ
ಯೋಗ : ಅತಿಗಂಡ – ೧೪:೪೫ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ರಾಹು ಕಾಲ:೧೨:೪೪ – ೧೪:೨೧
ಗುಳಿಕ ಕಾಲ: ೧೧:೦೭ – ೧೨:೪೪
ಯಮಗಂಡ:೦೭:೫೩ – ೦೯:೩೦

 

ಲಂಗುಲಗಾಮಿಲ್ಲದ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಕಾರ್ಯೋನ್ಮುಖರಾಗಿ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.

ನಯವಾದ ಮಾತುಗಳ ಮೂಲಕ ನಿಮ್ಮ ಅಂತರಂಗದ ವಿಚಾರಗಳನ್ನು ಬಹಿರಂಗ ಪಡಿಸಲು ಕೆಲವರು ಹವಣಿಸುವರು. ಇದರ ಸೂಕ್ಷ ್ಮತೆ ಅರಿತು ನೀವು ಅವರಿಗೆ ಸರಿಯಾದ ಬುದ್ಧಿ ಕಲಿಸುವಿರಿ.

 

ಹಿರಿಯರು ಮತ್ತು ಬಂಧುಗಳಿಂದ ಉತ್ತಮ ಬೆಂಬಲ ಲಭ್ಯವಾಗಲಿದೆ. ಇಡೀ ದಿನ ಉಲ್ಲಾಸದಿಂದ ಇರುವಿರಿ. ಮಕ್ಕಳು ನಿಮ್ಮ ಸಂತೋಷ ಇಮ್ಮಡಿಗೊಳಿಸುವರು. ಬರಬೇಕಾಗಿದ್ದ ಬಾಕಿ ಹಣ ಕೈ ಸೇರುವುದು.

ಮುನ್ನುಗ್ಗುವ ವ್ಯಕ್ತಿಯನ್ನು ಕೀಟಲೆ ಮಾಡಿ ಅವನಿಗೆ ಅಡೆತಡೆ ಉಂಟು ಮಾಡುವಂಥ ಜನರು ನಿಮ್ಮ ಸುತ್ತಮುತ್ತ ಇರುವರು. ಅಂಥವರ ಹಾವಭಾವ ಮತ್ತು ಮಾತುಕತೆಗೆ ಉತ್ತರ ಕೊಡದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.

 

ಎಲ್ಲವೂ ಸರಿಯಾಗಿ ಆಗುತ್ತಿದೆ ಎನ್ನುವ ಹಂತದಲ್ಲಿರುವಾಗಲೇ ಕಿರಿಕಿರಿ ಮಾಡುವ ಹಿರಿಯರೊಬ್ಬರ ಸಹವಾಸ ನಿಮ್ಮ ತಾಳ್ಮೆಯನ್ನು ಕೆಡಿಸುತ್ತದೆ. ಆದರೆ ಅವರು ಹೇಳುವ ವಿಚಾರಗಳಲ್ಲಿ ಅಲ್ಪಪ್ರಮಾಣದ ಸತ್ಯಾಂಶವೂ ಇರುತ್ತದೆ ಎಂಬುದನ್ನು ತಿಳಿಯಿರಿ.

 

 

ನೀವು ಅತ್ಯಂತ ಪಾರದರ್ಶಕ ವ್ಯವಹಾರವನ್ನು ನಡೆನುಡಿಯಲ್ಲಿ ತೋರುವುದರಿಂದ ನೀವೊಬ್ಬ ಅತ್ಯಂತ ನಂಬಲರ್ಹವಾದ ವ್ಯಕ್ತಿಯೆಂದು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಹಲವು ಮೂಲಗಳಿಂದ ಹಣಕಾಸು ಬರುವುದು.

 

 

ಕೇವಲ ಕೆಲವೇ ಕೆಲವು ಮಂದಿ ಪ್ರತಿಭಾನ್ವಿತರಲ್ಲಿ ಒಬ್ಬರಾದ ನಿಮಗೆ ಕೆಲಸದ ಸ್ಥಳದಲ್ಲಿ ಭಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಇದರಿಂದ ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ತೊಂದರೆ ನಿವಾರಣೆ ಆಗುವುದು.

 

 

ವಿನಾಕಾರಣ ನಿಮ್ಮ ಮೇಲೆ ಜಗಳ ಕಾಯುವ ಜನ, ನಿಮ್ಮನ್ನೆ ಜಗಳಗಂಟ ಎಂದು ದೂರುವ ಸಾಧ್ಯತೆ ಇದೆ. ಆದಷ್ಟು ಯಾರ ಜತೆಯಲ್ಲಿಯೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳದಿರಿ. ಕುಲದೇವರನ್ನು ಮನಸಾ ಸ್ಮರಿಸಿ.

 

ಬಹು ದಿನಗಳ ನಿರೀಕ್ಷೆ ಫಲವಾಗಿ ಪ್ರಭಾವಿ ಜನರಿಂದ ನಿಮಗೆ ಅನುಕೂಲ ವಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಚುರುಕುತನ ತೋರುವರು. ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ.

 

ಸುಖಾಸುಮ್ಮನೆ ಒಂದು ವ್ಯಾಜ್ಯದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಹಾಗಾಗಿ ಅನವಶ್ಯಕವಾಗಿ ಪರರ ಕಾರ್ಯ ವೈಖರಿ ಬಗ್ಗೆ ಟೀಕೆ ಟಿಪ್ಪಣಿ ಮಾಡದಿರಿ. ಇದರಿಂದ ತೊಂದರೆ ಎದುರಿಸಬೇಕಾಗುತ್ತದೆ.

 

ದೂರದ ಜನರಿಂದ ಮಾತ್ರ ನಿಮಗೆ ಕಿರಿಕಿರಿಗಳು ಉಂಟಾಗುವುದಿಲ್ಲ. ನಿಮ್ಮ ಹತ್ತಿರದವರೂ ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡುವುದರಿಂದ ಮನಸ್ಸಿಗೆ ಘಾಸಿಯಾಗುವುದು. ಇದಕ್ಕೆ ನೊಂದುಕೊಳ್ಳದೆ ಭಗವಂತನನ್ನು ಅನನ್ಯತೆಯಿಂದ ಪ್ರಾರ್ಥಿಸಿ.

 

ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಕೇವಲ ಹೊರ ಜಗತ್ತಿನ ವಿಚಾರಗಳ ಬಗ್ಗೆ ಗಮನ ಹರಿಸದೆ ಮಡದಿ, ಮಕ್ಕಳ ಕಡೆಗೂ ಗಮನ ಹರಿಸಬೇಕಾದ್ದು ನಿಮ್ಮ ಕರ್ತವ್ಯ. ಮನೆ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top