ಹೆಚ್ಚಿನ

ಈತ 70 ವರ್ಷದಿಂದ ಊಟ ಮಾಡಿಲ್ಲ,ಆದರೂ ಆರೋಗ್ಯವಾಗಿ ಬದುಕಿದನೇ ,ಏನ್ ಇದರ ಹಿಂದೆ ಇರುವ ಮರ್ಮ !ಈತನ ಬಗ್ಗೆ ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ ನೀವು.

ವಿಜ್ಞಾನಿಗಳಿಗೆ ಅರ್ಥವಾಗದೆ ಇರುವ ವಿಚಿತ್ರ. ಈ ಮನುಷ್ಯ 70 ವರ್ಷದಿಂದಲೂ ಊಟವನ್ನೇ ಮಾಡಿಲ್ಲ.

ವಿಜ್ಞಾನಕ್ಕೆ ಅರ್ಥವಾಗದ ವಿಚಿತ್ರ ಮನುಷ್ಯರು ಈ ಭೂಮಿಯ ಮೇಲೆ ಇದ್ದಾರೆ. ವಿಜ್ಞಾನಕ್ಕೆ ಅರ್ಥವಾಗದ ವಿಚಿತ್ರಗಳು ಈಗಲೂ ಈ ಭೂಮಿಯ ಮೇಲೆ ಸಾಕಷ್ಟು ಇವೆಯೇ ? ಹಾಗೂ ಅಂತಹ ಮನುಷ್ಯರು ಕೂಡ ಇದ್ದಾರೆಯೇ ? ಎನ್ನುವ ಪ್ರಶ್ನೆಗೆ ಉತ್ತರ ಇದ್ದರೂ ಇರಬಹುದು.ಈ ಒಂದೇ ಒಂದು ಘಟನೆ ನಾವು ನಮ್ಮ ಭಾರತ ದೇಶದಲ್ಲಿ ನೋಡಬಹುದು. ಒಬ್ಬ ವಿಚಿತ್ರ ವ್ಯಕ್ತಿ ಇದ್ದಾನೆ .ಆತ 70 ವರ್ಷಗಳಿಂದಲೂ ಸಹ ನೀರನ್ನು ಸಹ ಕುಡಿಯದೆ ಆಹಾರವನ್ನು ಸೇವಿಸದೆ ಜೀವಿಸುತ್ತಿದ್ದಾರೆ.

 

 

 

ಹೌದು, ಇದು ಸತ್ಯ. ಈ ಮನುಷ್ಯನ ಒಂದು ವಿಷಯ ಮಾತ್ರ ಎಲ್ಲರನ್ನು ಆಶ್ಚರ್ಯಕ್ಕೆ ಈಡು ಮಾಡುತ್ತಿದೆ. ಅದೇನೆಂದರೆ ಆತನ ಆರೋಗ್ಯ ಮಾತ್ರ ಪ್ರತಿಯೊಂದು ರೀತಿಯಲ್ಲಿಯೂ ಸಹ ಚಾಕ ಚಕ್ಯತೆಯಿಂದ ಕೊಡಿದ್ದು, ಎಲ್ಲವೂ ಸಹ ಸರಿಯಾಗಿಯೇ ಇದೆ. ಆದರೂ ಕೂಡ 70 ವರ್ಷಗಳಿಂದ ಅದೇಗೆ ಈ ರೀತಿ ಉಪವಾಸವಿದ್ದಾರೆ ? ಎಂಬುದೇ ಆಶ್ಚರ್ಯಕರವಾದ ಸಂಗತಿಯಾಗಿದೆ.
1940 ರಲ್ಲಿ ಈತನಿಗೆ ಪರೀಕ್ಷೆ ಮಾಡಿದಾಗ ಯಾವ ರೀತಿಯ ಆರೋಗ್ಯದ ಸಮಸ್ಯೆಗಳು ಕೂಡ ಇಲ್ಲ ಎಂದು ಖುದ್ದಾಗಿ ವೈದ್ಯರು ಹೇಳಿದ್ದಾರೆ. ಅಂತಹ ಒಬ್ಬ ವ್ಯಕ್ತಿ ಗುಜರಾತಿನ ಶರದ್ ಗ್ರಾಮದಲ್ಲಿ ಜೀವಿಸುತ್ತಿದ್ದಾರೆ . ಆತನ ಹೆಸರು ಪ್ರಹಲ್ಲಾದ್ ಜೆನಿ. ಆತನನ್ನು ಎಲ್ಲರೂ ಭಕ್ತಿಯಿಂದ ಮಾತಾಜಿ ಎಂದು ಕರೆಯುತ್ತಾರೆ. ಚುಂದಾ ದಿವಾಲಾ ಮಾತಾಜಿ ಎಂದು ಕೂಡ ಆತನನ್ನು ಕರೆದು ಪೂಜಿಸುತ್ತಾರೆ. ಈ ಸಾದು ದೇವಿಯ ಉಪಾಸಕರಂತೆ. ಈತ ಕನಿಷ್ಠ ಪಕ್ಷ ತನ್ನ ಬಾಲ್ಯದಿಂದಲೇ ದೇವಿಯನ್ನು, ಅಂಬೆಯನ್ನು ಪೂಜಿಸುತ್ತಾ ಆಕೆಯ ಆರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ .

ಸರಿ ಸುಮಾರಾಗಿ 70 ವರ್ಷಗಳಿಂದ ಆಹಾರವನ್ನು ಸೇವಿಸದೆ , ನೀರನ್ನು ಸಹ ಕುಡಿಯದೇ ಜೀವಿಸುತ್ತಿದ್ದಾರೆ. ಇದು ಸಾಧ್ಯವೇ ? ಹೇಗೆ ಸಾಧ್ಯ ? ಇದು ನಿಜವೇ ? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕೂಡ ಕಾಡುತ್ತದೆ. ಈತನು ಏಳು ವರ್ಷ ವಯಸ್ಸಿನಲ್ಲಿ ಇದ್ದಾಗ ಮನೆಯಿಂದ ಓಡಿಹೋಗಿ ಕಾಡಿನಲ್ಲಿ ಕೆಲವು ದಿನಗಳ ಕಾಲ ಓಡಾಡಿ .ನಂತರ ತನ್ನ 11ನೇ ವರ್ಷದಿಂದ ಶ್ರೀ ಮಾತೆ ಅಂಬೆಯನ್ನು ಪೂಜಿಸಲು ಪ್ರಾರಂಭಿಸಿದರಂತೆ.
ಹತ್ತಿರದಲ್ಲಿರುವ ಅಂಬೆಯ ಉಪಾಸಕರಾಗಿ ಪ್ರತಿನಿತ್ಯ ಆಕೆಯನ್ನು ಪೂಜಿಸುತ್ತಾ ದೇವಿಯ ಆರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.ಹೀಗೆ ದೇವಿಯನ್ನು ಪೂಜಿಸುತ್ತಲೇ ಆತನು ತನ್ನ ರೂಪು ರೇಖೆಗಳನ್ನು ಸಹ ಆ ಜಗನ್ಮಾತೆಗೆ ಹೇಗೆ ಇಷ್ಟವೋ ಹಾಗೆ ಬದಲಾಯಿಸಿಕೊಳ್ಳಲು ಪ್ರಾರಂಭಿಸಿದ್ದರಂತೆ. ಅ ತಾಯಿಯಂತೆಯೇ ಕೆಂಪು ಸೀರೆಯನ್ನು ಉಟ್ಟುಕೊಳ್ಳುವುದು, ಅಲಂಕಾರಗಳನ್ನು ಕೂಡ ಜಗನ್ಮಾತೆಗೆ ಹೇಗೆ ಮಾಡುತ್ತಾರೋ, ಹಾಗೆ ತಾನು ಸಹ ಅಲಂಕರಿಸಿಕೊಳ್ಳುವದು, ತಲೆಯಲ್ಲಿ ಉದ್ದವಾದ ಕೂದಲನ್ನು ಬೆಳೆಸಿ , ಅದಕ್ಕೆ ಹೂ ಮುಡಿದುಕೊಳ್ಳುವುದು. ಹೀಗೆ ಹೆಂಗಸರು ಹೇಗೆ ಅಲಂಕಾರ ಮಾಡಿಕೊಳ್ಳುತ್ತಾರೋ, ಹಾಗೆ ತಾನು ಸಹ ಅಲಂಕರಿಸಿಕೊಳ್ಳುತ್ತಾ ಬಂದಿದ್ದಾರೆ.

ಇಷ್ಟೇ ಅಲ್ಲದೆ ಪ್ರತಿ ಕ್ಷಣವೂ ಕೂಡ ಅಂಬೆಯ ಧ್ಯಾನದಲ್ಲಿ ಪೂಜೆಯಲ್ಲಿಯೇ ಮಗ್ನನಾಗಿದ್ದನು.ಈ ಸಾದು ದೇವಿಯ ಪೂಜೆ ಮಾಡುತ್ತಿರುವುದು ನಿಜವೇ ? ಎಂದು ಹಳ್ಳಿಯ ಜನರಲ್ಲಿ ಸಂಶಯ ಮೂಡಿಬಂತಂತೆ. ಆತನನ್ನು ಕೆಲವು ದಿವಸ ಆತನ ಕೋಣೆಯಲ್ಲಿ ಪರೀಕ್ಷಿಸಲು ಆರಂಭಿಸಿದ್ದರಂತೆ. ನಿಜವಾಗಿ ನೋಡಿದರೆ ಆತ ನಿಜವಾಗಿಯೂ ಆಹಾರವನ್ನು, ನೀರನ್ನು ಕೂಡ ಸೇವಿಸದೇ ಧ್ಯಾನ ಮಗ್ನನಾಗಿ ಇರುತ್ತಿದ್ದರಂತೆ . ಕೇವಲ ಹಣೆಯ ಮೇಲೆ ಕೆಲವು ನೀರಿನ ಬಿಂದಿಗಳನ್ನು ಆ ತಾಯಿ ಜಾರಿಸಿ, ಆತನ ಹಸಿವಿನ ತೃಷೆಯನ್ನು ತೀರಿಸುತ್ತಾಳೆ ಎಂದು ಅಲ್ಲಿನ ಜನರ ನಂಬಿಕೆಯಾಗಿದೆ. ಹೀಗೆ ಆ ಜಗನ್ ಮಾತೆ ಇವರನ್ನು ಕಾಪಾಡುತ್ತಾ ಬಂದಿದ್ದಾಳೆ ಎಂದು ಹೇಳುತ್ತಾರೆ.

 

 

1970 ರಲ್ಲಿ ತನ್ನ ಬಾಲ್ಯದಲ್ಲಿಯೇ, 11ನೇ ವರ್ಷದಿಂದ ಪ್ರತಿ ನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ , ನಾಲ್ಕು ಗಂಟೆಗೆ ನಿದ್ರೆಯಿಂದ ಎದ್ದೇಳುವುದು . ಆ ತಾಯಿಗೆ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಳ್ಳುವುದು. ಆತನ ದಿನಚರ್ಯವಾಗಿದೆ . 2003ರಲ್ಲಿ ಹಳ್ಳಿಯ ಜನರು ಹಾಗೂ ಅಲ್ಲಿನ ವೈದ್ಯರು ಅವರ ಸಂಶಯವನ್ನು ತೀರಿಸಿಕೊಳ್ಳಲು ಡಾಕ್ಟರ್ ಸುದೀರ್ಷ ಎನ್ನುವ ವೈದ್ಯರ ಪರಿವೀಕ್ಷಣೆಯಲ್ಲಿ ಆತನನ್ನು ಪರೀಕ್ಷಿಸಲು ಆರಂಭಿಸಿದರಂತೆ. ಆತನ ಮೇಲೆ ಇದ್ದ ಅನುಮಾನದ ಕಾರಣದಿಂದಾಗಿ ಆತನನ್ನು ಒಂದು ಕೋಣೆಯಲ್ಲಿ ಹತ್ತು ದಿನಗಳ ಕಾಲ ಕೂಡಿ ಹಾಕಿ ಆಹಾರವನ್ನು ನೀರನ್ನು ಕೊಡದೆ ಪರೀಕ್ಷಿಸಲು ಆರಂಭಿಸಿದರಂತೆ. ಆದರೆ ಆತ ಕುಳಿತ ಜಾಗದಿಂದಲೂ ಕೂಡ ಕದಲದೆ ಹಾಗೆ ಹತ್ತು ದಿನಗಳ ಕಾಲ ಒಂದೇ ಕಡೆ ಕುಳಿತುಕೊಂಡು ಧ್ಯಾನ ಮಗ್ನನಾಗಿದ್ದನಂತೆ.

ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಆತ ಮಲ ವಿಸರ್ಜನೆಗೂ ಕೂಡ ಏಳದೆ ಹಾಗೆಯೇ ಕುಳಿತುಕೊಂಡಿದ್ದನಂತೆ. ಹತ್ತು ದಿನಗಳ ನಂತರ ವೈದ್ಯರು ಪರೀಕ್ಷೆ ಮಾಡಿದಾಗ ತೂಕ ಮಾತ್ರ ಕಡಿಮೆಯಾಗಿತ್ತು. ಆದರೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಕೂಡ ಆತನನ್ನು ಕಾಡುತ್ತಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೀಗೆ ಮತ್ತೆ ಕೆಲವು ದಿನಗಳ ಕಾಲ ಕಳೆದವು. ಮತ್ತೆ 2010ರಲ್ಲಿ ಮತ್ತೊಮ್ಮೆ ಎರಡನೇ ಬಾರಿ ಆತನನ್ನು ಪರೀಕ್ಷಿಸಲು ಡಾಕ್ಟರ್ ಸುರೇಶ ಮತ್ತು 35 ಜನರ ವೈದ್ಯರ ತಂಡ ಮತ್ತು ಇತರ ಸಂಸ್ಥೆಗಳು ಏಪ್ರಿಲ್ 22 ರಿಂದ ಮೇ 6 ನೇ ತಾರೀಖು 2010 ರವರೆಗೆ ಅಂದರೆ 15 ದಿನಗಳವರೆಗೆ ಆತನನ್ನು ಪರೀಕ್ಷಿಸಲು ಒಂದು ಕೋಣೆಯಲ್ಲಿ ಕೂಡಿ ಹಾಕಿ ಆ ಒಂದು ಕೋಣೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಆತನನ್ನು ಪರೀಕ್ಷಿಸಲು ಪ್ರಾರಂಭಿಸಿದಂತೆ.

ಮತ್ತೆ ಅದೇ ರೀತಿ ಜರುಗಿತಂತೆ, ಆತ ಕುಳಿತ ಜಾಗದಿಂದ 15 ದಿವಸಗಳ ಕಾಲ ಪರೀಕ್ಷಿಸಿದಾಗ ಆತ ಕುಳಿತ ಜಾಗದಿಂದ ಕದಲಲೂ ಇಲ್ಲ,ಮಲ ವಿಸರ್ಜನೆಗೂ ಕೂಡ ತೆರಳಲಿಲ್ಲವಂತೆ. ಆತನ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ಎಲ್ಲಾ ರಿಪೋರ್ಟ್ ಗಳು ಕೂಡ ಸರಿಯಾಗಿಯೇ ಇವೆ. ಈ ತರಹ ಒಂದು ವಿಚಿತ್ರವಾದ ಮನುಷ್ಯ ನಮ್ಮ ಭಾರತದ ಗುಜರಾತ್ ರಾಜ್ಯದಲ್ಲಿ ವಾಸವಾಗಿದ್ದಾರೆ. ಇದು ಇಂದಿಗೂ ಕೂಡ ವಿಜ್ಞಾನಕ್ಕೆ ಅಚ್ಚರಿಯನ್ನು ಮೂಡಿಸುವ ಸಂಗತಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top