ಹೆಚ್ಚಿನ

ತೊಡೆಯ ಮೇಲೆ ಊಟದ ತಟ್ಟೆಯನ್ನುಇಟ್ಕೊಂಡು ಊಟ ಮಾಡ್ಬಾರ್ದು ಅಂತ ಯಾಕ್ ಹೇಳ್ತಾರೆ ,ತಿಂದ್ರೆ ಏನ್ ಆಗುತ್ತೆ,ಇಲ್ಲಿದೆ ನೋಡಿ ಅದರ ಹಿಂದಿರುವ ಕಾರಣ.

ಅನ್ನವನ್ನು ಅಂದರೆ ಊಟ ಮಾಡುವ ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡಿದರೆ, ಅನ್ನದಲ್ಲಿರುವ ದೈವತ್ವಕ್ಕೆ ಅಗೌರವ ತೋರಿದಂತಾಗುತ್ತದೆ. ಅನ್ನ ಬ್ರಹ್ಮದಲ್ಲಿನ ಸಾತ್ವಿಕತೆಯ ಲಾಭವೂ ಅಪೇಕ್ಷಿತ ರೀತಿಯಲ್ಲಿ ಆಗುವುದಿಲ್ಲ.ಆನ್ನವೂ ಪೂರ್ಣ ಬ್ರಹ್ಮವಾಗಿರುವುದರಿಂದ ಅದಕ್ಕೆ ದೈವತ್ವದ ಗೌರವವನ್ನು ಕೊಡಬೇಕಾಗುತ್ತೆ.
ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜತಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನು ಇಟ್ಟುಕೊಂಡು ಸೇವಿಸುತ್ತಾ ಇರುತ್ತೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿಯಲ್ಲಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ. ಶರೀರದ ಸಂಪರ್ಕವೂ ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ.

 

 

 

ತೊಡೆಯ ಮೇಲೆ ಊಟ ಮಾಡುವ ತಟ್ಟೆಯನ್ನು ಇಟ್ಟುಕೊಂಡು ಅನ್ನವನ್ನು ಸೇವಿಸಿದರೆ ಇದರಿಂದ ಜೀವನದ ಅಂತರ ಮನಸ್ಸಿನ ವಾಸನೆಯ ವಿಚಾರಗಳಿಗೆ ಅನುಸಾರವಾಗಿ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಾಂಕ್ರಾಮಿಕವಾಗುತ್ತದೆ.

ಇನ್ನೂ ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸೂಕ್ತವಾಗಿರುವ ಸ್ಪಂದನಗಳು ಕಾರ್ಯ ನಿರತವಾಗಿ ಅನ್ನವೂ ಅಪವಿತ್ರವಾಗಿಬಹುದು. ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನೆಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ.
ಆದ್ದರಿಂದ ನಾವು ಊಟವಾಗಲಿ,ತಿಂಡಿಯನ್ನಾಗಲಿ ಅಥವಾ ಬೇರೆ ಇನ್ನೇನ್ನೇ ಆದರೂ ಕೂಡಾ ತೊಡೆಯ ಮೇಲೆ ಇಟ್ಟುಕೊಂಡು ತಿನ್ನಬಾರದು.ಬದಲಾಗಿ ಒಂದು ಮೇಜಿನ ಮೇಲೆ ಅಥವಾ ನೆಲದ ಮೇಲೆ ತೆಟ್ಟೆಯನ್ನು ಇಟ್ಟುಕೊಂಡು ನೆಲದ ಮೇಲೆಯೇ ಕುಳಿತುಕೊಂಡು ಊಟಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top