ಹೆಚ್ಚಿನ

ಮೇಲು ಕೋಟೆಯಲ್ಲಿ ಆಷಾಡ ಮಾಸದಲ್ಲಿ ನಡೆಯುವ ಈ ಬ್ರಹ್ಮೋತ್ಸವಕ್ಕೂ ಮೈಸೂರಿನ ಅರಸ ಮುಮ್ಮಡಿ ಕೃಷ್ಣ ರಾಜರಿಗೂ ಏನು ಸಂಬಂಧ?ಯಾಕೆ ರಾಜರ ಹೆಸರಲ್ಲಿ ಈ ಬ್ರಹ್ಮೋತ್ಸವ ಮಾಡುತ್ತಾರೆ ? ಇದರ ಹಿಂದೆ ಇದೆ ಬೆಚ್ಚಿ ಬಿಳಿಸೋ ಇತಿಹಾಸ,ತಿಳ್ಕೊಳ್ಳಿ .

ಮೇಲು ಕೋಟೆಯಲ್ಲಿ ಕೃಷ್ಣರಾಜ ಮುಡಿ ಬ್ರಹ್ಮೋತ್ಸವದ ಸಂಭ್ರಮ.ಆಶಾಡ ಮಾಸದಲ್ಲಿ ನಡೆಯುವ ಈ 9 ದಿನಗಳ ಬ್ರಹ್ಮೋತ್ಸವಕ್ಕೆ ಇದೆ ಶ್ರೀಮಂತ ಇತಿಹಾಸ ಏನು ? ಹೇಗೆ ನೆಡೆಸಲಾಗುತ್ತದೆ.ಜುಲೈ 27 ತಾರೀಖಿನಂದು ಪ್ರಾರಂಭವಾಗಿರುವ ಈ ಬ್ರಹ್ಮೋತ್ಸವ ಅಗಸ್ಟ್ 4 ನೇ ತಾರೀಖಿನವರೆಗೆ ಇರುತ್ತದೆ.

ಆಶಾಡ ಮಾಸದಲ್ಲಿ ಮೇಲುಕೋಟೆಯಲ್ಲಿ ಕೃಷ್ಣ ರಾಜಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ಇದು ಮೈಸೂರು ಸಂಸ್ಥಾನದ ಅರಸ ಮುಮ್ಮಡಿ ಕೃಷ್ಣ ರಾಜ ಮೈಸೂರು ಸಂಸ್ಥಾನದ ಒಡೆಯರ್ ಅವರ ಹೆಸರಿನಲ್ಲಿ ನಡೆಯುವ 9 ದಿನಗಳ ಉತ್ಸವ .ಇಷ್ಟಕ್ಕೂ ಓರ್ವ ರಾಜನ ಹೆಸರಿನಲ್ಲಿ ಭಗವಂತನಿಗೆ ಇಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ.ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ ….
ಮೇಲುಕೋಟೆಯಲ್ಲಿ ಈಗ ಬ್ರಹ್ಮೋತ್ಸವದ ಸಂಭ್ರಮ. ದಕ್ಷಿಣ ಭಾರತದ ಪ್ರಾಚೀನ ಕ್ಷೇತ್ರವಿದು. ವಿಷ್ಣುವಿನ ಅವತಾರವೇ ಚಲುವನಾರಾಯಣಸ್ವಾಮಿ. ಮುಮ್ಮಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಒಂಬತ್ತು ದಿನಗಳ ಅದ್ದೂರಿ ಉತ್ಸವ ನಡೆಯುತ್ತದೆ. ಜುಲೈ 27ನೇ ತಾರೀಖಿನಿಂದ ಪ್ರಾರಂಭವಾಗಿದೆ ಅಂದರೆ ಆಗಸ್ಟ್ 4 ನೇ ತಾರೀಖಿನವರೆಗೂ ಬ್ರಹ್ಮೋತ್ಸವ ನೆಡೆಸುತ್ತಾರೆ. ಕರ್ನಾಟಕದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಗೆ ದೇವರ ಸ್ಥಾನ ನೀಡಲಾಗಿದೆ .ಶ್ರೀಮಾನ್ ರಾಜಾಧಿರಾಜ , ರಾಜ ಪರಮೇಶ್ವರ ರಾಜ ಮಾರ್ತಾಂಡ ,ಪ್ರೌಢ ಪ್ರತಾಪ, ಅಪ್ರತಿಮ ವೀರ, ಮಹಾರಾಜ ,ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಬಹುಪರಾಗ್ ಬಹುಪರಾಗ್ ಎಂದು ಹೊಗಳುತ್ತಾರೆ .

 

 

ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜ. ಮೈಸೂರು ಸಂಸ್ಥಾನವನ್ನು ಧರ್ಮ, ಕಲೆ ಸಾಹಿತ್ಯದ ನೆಲೆಬೀಡನ್ನಾಗಿ ಶ್ರೀಮಂತಗೊಳಿಸಿದ ಮಹಾಮಹಿಮ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಹೇಳುವುದಕ್ಕೆ ಕೇಳುವುದಕ್ಕೆ ಕನ್ನಡಿಗರೂ ಹೆಮ್ಮೆ ಪಡಬೇಕು. ಅಂತಹ ಮಹಾನ್ ವ್ಯಕ್ತಿತ್ವ ಅವರದ್ದು. ಕರ್ನಾಟಕದ ಈ ಪುಣ್ಯ ಕ್ಷೇತ್ರದಲ್ಲಿ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಅಜರಾಮರವಾಗಿ ಉಳಿಸಲಾಗಿದೆ. ಈ ಕ್ಷೇತ್ರದಲ್ಲಿ ಪ್ರತಿವರ್ಷ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಒಂಬತ್ತು ದಿನಗಳ ಕಾಲ ಉತ್ಸವ ನಡೆಯುತ್ತದೆ. ದೇಶದ ಯಾವುದೇ ರಾಜನಿಗೂ ಈ ತರದ ಗೌರವ ಸಿಕ್ಕಿಲ್ಲ. ದೇಶದ ಯಾವುದೇ ಮೂಲೆಯಲ್ಲಿಯೂ ರಾಜನ ಹೆಸರಿನಲ್ಲಿ ಕೂಡ ಬ್ರಹ್ಮೋತ್ಸವ ನಡೆಯುವುದಿಲ್ಲ. ಆದರೆ ಕರ್ನಾಟಕದ ಈ ಕ್ಷೇತ್ರದಲ್ಲಿ ಕೃಷ್ಣರಾಜ ಒಡೆಯರ್ ಅವರಿಗೆ ದೇವರ ಸ್ಥಾನವನ್ನು ನೀಡಿ ಪೂಜಿಸಲಾಗುತ್ತದೆ. ಆ ಕ್ಷೇತ್ರ ಯಾವುದು ? ಎಂದು ನಿಮಗೆ ಗೊತ್ತೆ ? ಅದೇ ಶ್ರೀ ಚೆಲುವನಾರಾಯಣ ಸ್ವಾಮಿ ನೆಲೆಸಿರುವ ಮೇಲುಕೋಟೆ.
ಮಂಡ್ಯ ಜಿಲ್ಲೆಯ, ಮೇಲುಕೋಟೆ ದಕ್ಷಿಣ ಭಾರತದ ಪುಣ್ಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ.ಈ ಮೇಲುಕೋಟೆಗೂ ಮತ್ತು ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶದ ಅವಿನಾಭಾವ ಸಂಬಂಧವಿದೆ. ಯಧುವಂಶದ ಮೂಲ ಅರಸರು ಚೆಲುವನಾರಾಯಣನ್ನು ನೋಡುವುದಕ್ಕೆ ಎಂದು ಭಾರತಕ್ಕೆ ಬಂದವರು . ಚೆಲುವನಾರಾಯಣನ್ನು ಕುಲದೇವರು ಎಂದು ನಂಬಿ ಆರಾಧಿಸಿದವರು. ಮೈಸೂರು ಕೃಷ್ಣರಾಜ ಒಡೆಯರ್ ಅವರು ಮೇಲುಕೋಟೆಯ ಮೇಲೆ ಅಪಾರವಾದ ಭಕ್ತಿ ಮತ್ತು ನಂಬಿಕೆ ಇತ್ತು. ಆದರಂತೆಯೇ ಪ್ರತಿವರ್ಷ ಕೃಷ್ಣ ರಾಜಮುಡಿ ಎನ್ನುವ ಉತ್ಸವವನ್ನು ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ಕೃಷ್ಣರಾಜ ಬ್ರಹ್ಮೋತ್ಸವ ಆರಂಭವಾಗಿದೆ .

ಮೇಲುಕೋಟೆಯ ಕೃಷ್ಣರಾಜ ಮುಡಿ ಉತ್ಸವದ ಹಿನ್ನೆಲೆ ಏನು ? ಮೇಲುಕೋಟೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಗೆ ಏಕೆ ಅಷ್ಟೊಂದು ಮಹತ್ವ ? ಅದು 1294 ನೇ ವರ್ಷ. ಶ್ರೀಮಂತ ಮೈಸೂರು ಸಂಸ್ಥಾನ ಟಿಪ್ಪು ಸುಲ್ತಾನ ವಶದಲ್ಲಿ ಇತ್ತು. ಮೈಸೂರು ರಾಜ ವಂಶದವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದ ಟಿಪ್ಪು ಸುಲ್ತಾನ ಮೈಸೂರು ಸಂಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ .ಬ್ರಿಟಿಷರ ವಿರುದ್ಧ ಟಿಪ್ಪುಸುಲ್ತಾನ ಕದನ ನಡೆಯುತ್ತಲೇ ಇತ್ತು. ಹೀಗಿರುವಾಗಲೇ ಅಂದರೆ 1794 ಜುಲೈ 14 ಈ ದಿನಾಂಕದಂದು ಶ್ರೀರಂಗಪಟ್ಟಣದಲ್ಲಿ ಮಹಾರಾಣಿ ಕೆಂಪನಂಜ ಆಮ್ಮಣ್ಣಿ ಅವರು ರಾಜ ವಂಶದ ಕುಡಿಯೊಂದಕ್ಕೆ ಜನ್ಮ ನೀಡುತ್ತಾರೆ.ಆ ಗೃಹ ಬಂಧನದಲ್ಲಿ ಜನಿಸಿದ ವೀರ ಮಗುವಿಗೆ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಲಾಗುತ್ತದೆ.
ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಜನಿಸಿದ 5ನೇ ವರ್ಷಕ್ಕೆ ಅಂದರೆ 1799ರಲ್ಲಿ ಬ್ರಿಟಿಷ್ ಹಾಗೂ ಟಿಪ್ಪು ನಡುವೆ ಯುದ್ಧ ನಡೆಯುತ್ತದೆ. ಆ ಕದನಕ್ಕೆ ನಾಲ್ಕನೇ ಮೈಸೂರು ಯುದ್ಧ ಎಂದು ಹೆಸರು ನೀಡಲಾಗುತ್ತದೆ. ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಹತನಾಗುತ್ತಾನೆ. ಟಿಪ್ಪು ಸುಲ್ತಾನ್ ಹತನಾದ ನಂತರ ಬ್ರಿಟಿಷರು ಮತ್ತು ಲಕ್ಷ್ಮಿ ಅಮ್ಮಣ್ಣಿಯವರ ನಡುವೆ ಒಂದು ಒಪ್ಪಂದ ಏರ್ಪಡುತ್ತದೆ. ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ನೆರವೇರಿಸಲಾಗುತ್ತದೆ. ಐದು ವರ್ಷದ ಬಾಲಕನಾಗಿರುವಾಗಲೇ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ನೆರವೇರಿಸುತ್ತಾರೆ. ಪಟ್ಟಾಭಿಷೇಕವಾದ ಮುಮ್ಮುಡಿ ಅವರಿಗೆ ಸಕಲ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ. ವೇದ, ವ್ಯಾಸ ,ಸಂಸ್ಕೃತ ಪಾಠದ ಜೊತೆಗೆ ಸಮರ ಕಲೆಗಳು ಒಂದು ರಾಜ್ಯವನ್ನು ಕಾಪಾಡಲು ಓರ್ವ ರಾಜನಿಗೆ ಏನೆಲ್ಲಾ ಅರ್ಹತೆ ಇರಬೇಕು, ಅದನ್ನೆಲ್ಲ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕರಗತ ಮಾಡಿಕೊಳ್ಳುತ್ತಾರೆ.

 

 

ಮುಮ್ಮುಡಿಯವರು ಕನ್ನಡ, ಸಂಸ್ಕೃತ , ಇಂಗ್ಲಿಷ್, ತಮಿಳು, ತೆಲುಗು, ಮರಾಠಿ ಭಾಷೆಯನ್ನು ಕೂಡ ಕಲಿತುಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ರಾಜಮಾತೆ ಲಕ್ಷ್ಮೀ ಅಮ್ಮಣ್ಣಿ ಅವರು . ರಾಜ ಮಾತೆಯ ಮಡಿಲಿನಲ್ಲಿ ದೀವಾನ ಪೂರ್ಣಯ್ಯ ಎನ್ನುವವರು ಆಡಳಿತದಲ್ಲಿ ಬೆಳೆದ ಕೃಷ್ಣರಾಜ ಒಡೆಯರ್ ಅವರು ರಾಜ್ಯಭಾರವನ್ನು ಮಾಡುವ ಎಲ್ಲ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ . ದುರಂತ ಏನೆಂದರೆ ಕ್ರಿಸ್ತಶಕ 1810 ರಲ್ಲಿ ರಾಜಮಾತೆ ಶ್ರೀಲಕ್ಷ್ಮಿ ಅಮ್ಮಣ್ಣಿಯವರ ನಿಧನರಾಗುತ್ತಾರೆ. ಕ್ರಿಸ್ತಶಕ 1811 ರಲ್ಲಿ ದಿವಾನ್ ಪೂರ್ಣಯ್ಯನವರು ನಿಧಾನರಾಗುತ್ತಾರೆ. ಅಲ್ಲಿಗೆ ಮೈಸೂರು ಸಂಸ್ಥಾನದ ಸಂಪೂರ್ಣ ಜವಾಬ್ದಾರಿ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹೆಗಲ ಮೇಲೆ ಬೀಳುತ್ತದೆ.

ಮೇಲುಕೋಟೆಯಲ್ಲಿ ಪ್ರತಿವರ್ಷ ಮುಮ್ಮಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ವೈರಮುಡಿ ಬ್ರಹ್ಮೋತ್ಸವ ನಡೆಸಲಾಗುತ್ತದೆ . ಇದರ ಇತಿಹಾಸ ಏನು ? ಭಾರತದ ಯಾವ ದೇಗುಲಗಳಲ್ಲೂ ಕೂಡ ಒಬ್ಬ ರಾಜನ ಹೆಸರಿನಲ್ಲಿ ಬ್ರಹ್ಮೋತ್ಸವ ನಡೆಯುವುದಿಲ್ಲ .ಆದರೆ ಕೃಷ್ಣರಾಜ ಒಡೆಯರ್ ಅವರು ಜನಿಸಿರುವ ನಕ್ಷತ್ರದ ದಿನದಂತೆ ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಗೆ ತೀರ್ಥಸ್ನಾನ ನಡೆಸಲಾಗುತ್ತದೆ .

ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ದೇಗುಲದಲ್ಲಿ ಇಷ್ಟೊಂದು ಮಹತ್ವ ಯಾಕೆ ನೀಡಲಾಗುತ್ತದೆ ?

ರಾಜರ ಹೆಸರಿನಲ್ಲಿ ಭಗವಂತನಿಗೆ ತೀರ್ಥಸ್ನಾನ ನಡೆಯುವ ಭಾರತದ ಏಕೈಕ ಕ್ಷೇತ್ರವಿದು . ಮುಮ್ಮಡಿ ಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ದಿನ ಚೆಲುವನಾರಾಯಣನಿಗೆ ತೀರ್ಥ ಸ್ನಾನ ನಡೆಯುತ್ತದೆ .ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ಸಂಸ್ಥಾನ ಸುಭಿಕ್ಷವಾಗಿತ್ತು. ಎಲ್ಲಾ ಸಂಪತ್ತು ಸಮೃದ್ಧಿಯಾಗಿ ನೆಲೆಸಿತ್ತು. ಆದರೆ ಬ್ರಿಟಿಷರ ಅಣತಿಯಂತೆ ಆಳ್ವಿಕೆ ನಡೆಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿಯೇ 1831 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ರಾಜರ ಸ್ಥಾನದಿಂದ ಕೆಳಗಿಳಿಯುತ್ತಾರೆ.ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷ ರಾಜ್ಯಭಾರ ಆರಂಭವಾಗುತ್ತದೆ.
1831 ರಲ್ಲಿ ಅಧಿಕಾರ ಕಳೆದುಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಧಾರ್ಮಿಕ ಕಾರ್ಯಗಳಲ್ಲೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈ ಬೃಹತ್ ಗೋಪುರ ಇರಲಿಲ್ಲ. ಬೆಟ್ಟದಲ್ಲಿ ಇಂತಹ ಒಂದು ವಿಹಂಗಮವಾದ ಗೋಪುರವನ್ನು ಕಟ್ಟಿಸಿದವರು ಇದೆ ಮುಮ್ಮಡಿ ಕೃಷ್ಣರಾಜ ಒಡೆಯರ್ . ಇಂತಹದೊಂದು ಭವ್ಯವಾದ ಗೋಪುರವನ್ನು ಕಟ್ಟಿಸಿಕೊಟ್ಟ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿ ದೇವಿಯ ಆಶೀರ್ವಾದಕ್ಕೆ ಪಾತ್ರರಾದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಒಂದು ಕನಸಿತ್ತು . ಅದೇನೆಂದರೆ ಭಾರತದ ಎಲ್ಲಾ ಪ್ರಮುಖ ದೇವತೆಗಳನ್ನು ಕೂಡ ಒಂದೇ ಕ್ಷೇತ್ರದಲ್ಲಿ ಪೂಜಿಸಬೇಕು. ಅದಕ್ಕೆ ಆವರು ಅರಮನೆಯ ಆವರಣದಲ್ಲಿ ಶ್ರೀ ಪ್ರಸನ್ನ ಕೃಷ್ಣ ದೇಗುಲವನ್ನು ನಿರ್ಮಿಸಿದರು. ಆ ಒಂದೇ ದೇಗುಲದಲ್ಲಿ ಭಾರತದ ಎಲ್ಲಾ ಪ್ರಮುಖ ದೇವತೆಗಳನ್ನೂ ಪೂಜಿಸಲಾಗುತ್ತದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅತಿ ಹೆಚ್ಚು ಧಾರ್ಮಿಕ ಕಾರ್ಯಗಳನ್ನು ಮಾಡಿದ್ದು ಮೇಲುಕೋಟೆಯಲ್ಲಿಯೇ. ಹೆಚ್ಚು ಧಾರ್ಮಿಕ ಕಾರ್ಯಗಳನ್ನು ಮಾಡಿದ್ದು ಮೇಲುಕೋಟೆಯಲ್ಲಿ . ಮುಮ್ಮುಡಿ ಅವರು ತಮ್ಮ ಜೀವಿತಾವಧಿಯಲ್ಲಿ ಯಾವತ್ತಿಗೂ ಕೂಡ ಮೇಲುಕೋಟೆಯ ಚೆಲುವನಾರಾಯಣನ ಆರಾಧನೆಯನ್ನು ನಿಲ್ಲಿಸಿದವರಲ್ಲ. ಚೆಲುವನಾರಾಯಣನ ಮೇಲೆ ಅಪಾರ ಭಕ್ತಿಯನ್ನು ಹೊಂದಿದವರು. ಐದು ಆಭರಣಗಳಿಂದ ಕೂಡಿದ ವಿಶೇಷವಾದ ಕೃಷ್ಣರಾಜ ಮುಡಿಯೊಂದನ್ನು ದೇವರಿಗೆ ಅರ್ಪಿಸುತ್ತಾರೆ. ಮುಮ್ಮಡಿಯವರು ನೀಡಿದ್ದ ಆ ಕೃಷ್ಣರಾಜ ಮುಡಿ ಈಗಲೂ ಇದೆ. ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ಬಳಿಯಲ್ಲೇ ಸಾಕ್ಷಾತ್ ಮಹಾವಿಷ್ಣುವಿನ ಬಂದಂತಹ ವಜ್ರಖಚಿತ ವೈರಮುಡಿ ಇದೆ. ಪ್ರತಿವರ್ಷ ನೆಡೆಯುವ ವೈರಮುಡಿ ಉತ್ಸವ ಇಡೀ ವಿಶ್ವವನ್ನೇ ಸೆಳೆಯುತ್ತದೆ. 9 ದಿನಗಳ ಕಾಲ ಆ ಪರಂಪರೆಯನ್ನು, ಆ ಸಂಪ್ರದಾಯವನ್ನು, ಅದ್ದೂರಿ ಧಾರ್ಮಿಕ ವಿಧಿ ವಿಧಾನಗಳನ್ನು ನೋಡುವುದೇ, ಕಣ್ಣಿಗೆ ಒಂದು ಹಬ್ಬ, ಮನಸ್ಸಿಗೆ ಒಂದು ಸಡಗರ .

ವೈರಮುಡಿಯ ದಿನದಂದೆ ಮೇಲುಕೋಟೆಯಲ್ಲಿ ಇನ್ನೊಂದು ಪ್ರಸಿದ್ಧ ಉತ್ಸವ ನಡೆಯುತ್ತದೆ . ಅದೇ ರಾಜಮುಡಿ ಬ್ರಹ್ಮೋತ್ಸವ. ಮೈಸೂರು ಸಂಸ್ಥಾನವನ್ನು ಆಳಿದ ರಾಜ ಒಡೆಯರ್ 1616 ರಲ್ಲಿ ಮೇಲುಕೋಟೆಯ ಚೆಲುವನಾರಾಯಣನ ಸನ್ನಿಧಿಗೆ ತೆರಳುತ್ತಾರೆ. ಅವತ್ತು ವೈರಮುಡಿ ಉತ್ಸವ ಸಂಪ್ರದಾಯದಂತೆ ಅರಸರು ವೈರಮುಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಆ ದಿನ ರಾಜ ಒಡೆಯರ್ ಅವರು ಕೊಂಚ ತಡವಾಗಿ ತೆರಳುತ್ತಾರೆ. ಅಷ್ಟೊತ್ತಿಗೆ ಮೆರವಣಿಗೆ ಮುಗಿದಿತ್ತು. ವೈರಮುಡಿಯನ್ನು ಕೆಳಗೆ ಇಳಿಸಲಾಗಿತ್ತು. ಸಂಪ್ರದಾಯದ ಪ್ರಕಾರ ಒಮ್ಮೆ ವೈರಮುಡಿಯನ್ನು ಕೆಳಗಿಳಿಸಿದರೆ ಮತ್ತೊಮ್ಮೆ ದೇವರಿಗೆ ಧರಿಸುವುದು ಒಂದು ವರ್ಷದ ಬಳಿಕ. ಇದರಿಂದ ಬೇಸರಗೊಂಡ ಮುಮ್ಮಡಿಯವರು ತಾವೇ ಒಂದು ವಜ್ರಖಚಿತ ರಾಜಮುಡಿಯನ್ನು ಮಾಡಿಸಿ ಕೊಡುತ್ತಾರೆ.ಇದನ್ನು ದೇವರಿಗೆ ತೊಡಿಸಿ ಮೆರವಣಿಗೆ ಮಾಡಿಸುತ್ತಾರೆ. ಶುಭ ಶುಕ್ರವಾರದ ದಿನ ರಾಜ ಒಡೆಯರ್ ಅವರು ಶ್ರೀ ಚೆಲುವನಾರಾಯಣನಿಗೆ ರಾಜ ಮುಡಿಯನ್ನು ಕೊಡುಗೆಯಾಗಿ ನೀಡುತ್ತಾರೆ. ರಾಜಮುಡಿಯ ಜೊತೆಗೆ ಇತರೆ 16 ಆಭರಣಗಳನ್ನು ನೀಡುತ್ತಾರೆ .

 

 

ಅಷ್ಟೇ ಅಲ್ಲ ಮೇಲುಕೋಟೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುತ್ತಾರೆ. ಅದರ ನೆನಪಿಗಾಗಿ ಇಂದಿಗೂ ಸಹ ಮೇಲುಕೋಟೆಯಲ್ಲಿ ಪ್ರತಿ ವರ್ಷ ರಾಜಮುಡಿ ಉತ್ಸವ ನಡೆಯುತ್ತದೆ. ಇದೇ ಮಾದರಿಯಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ಕೃಷ್ಣ ರಾಜಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಜನಿಸಿದ್ದು ಆಶಾಡ ಮಾಸದ ರೋಹಿಣಿ ನಕ್ಷತ್ರದ ದಿನದಂದು. ಹೀಗಾಗಿ ಅವರು ಅರ್ಪಿಸಿದ ಕೃಷ್ಣರಾಜ ಮುಡಿಯನ್ನು ಚೆಲುವನಾರಾಯಣನಿಗೆ ಆಶಾಡ ಮಾಸದ ರೋಹಿಣಿ ನಕ್ಷತ್ರದ ದಿನದಂದೇ ತೊಡಿಸಲಾಗುತ್ತದೆ. ನಂತರ ಭುವನೇಶ್ವರ ಮಂಟಪದಲ್ಲಿ ಚೆಲುವನಾರಾಯಣನಿಗೆ ತೀರ್ಥಸ್ನಾನ ನಡೆಯುತ್ತದೆ.ಇಡೀ ಮೇಲುಕೋಟೆಗೆ ಮೇಲುಕೋಟೆಯೇ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಮುಮ್ಮುಡಿಯವರೆಗೆ ಗೌರವ ಸಲ್ಲಿಸಲಾಗುತ್ತದೆ. ಕುತೂಹಲಕಾರಿ ಸಂಗತಿ ಏನೆಂದರೆ ಚೆಲುವನಾರಾಯಣನಿಗೆ ವೈರಮುಡಿ ಉತ್ಸವದ ದಿನ ಮಾತ್ರ ತೀರ್ಥಸ್ನಾನ ಮಾಡಲಾಗುತ್ತದೆ . ಅದನ್ನು ಬಿಟ್ಟರೆ ಆಷಾಢ ಮಾಸದಲ್ಲಿ ಕೃಷ್ಣರಾಜ ಮುಡಿ ಬ್ರಹ್ಮೋತ್ಸವ ಮಾಡುವುದು . ಇದರಿಂದಲೇ ತಿಳಿಯುತ್ತದೆ ಕೃಷ್ಣರಾಜ ಒಡೆಯರ್ ಅವರಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿ .

ಈ ವರ್ಷ 2018 ಆಗಸ್ಟ್ ಒಂದನೇ ತಾರೀಕಿನಂದು ರಾತ್ರಿ 7.30ಕ್ಕೆ ಕೃಷ್ಣರಾಜ ಮುಡಿ ಬ್ರಹ್ಮೋತ್ಸವ ಪ್ರಾರಂಭವಾಗುತ್ತದೆ. ಇದು 11:30 ರ ವರೆಗೂ ಇರುತ್ತದೆ ಕೃಷ್ಣರಾಜಮುಡಿ ಧರಿಸುವ ಚೆಲುವನಾರಾಯಣ ಹೇಗೆ ಕಾಣುತ್ತಾನೆ ? ಈ ಸಂದರ್ಭದಲ್ಲಿ ನಡೆಯುವ ರೀತಿ ರಿವಾಜುಗಳು ಏನು ? ಬನ್ನಿ ತಿಳಿದುಕೊಳ್ಳೋಣ.

ಇಂದು ವಜ್ರಾ ಬರಣಗಣಿಗಳಿಂದ ಕಂಗೊಳಿಸುತ್ತಾನೆ. ರಾಜರ ಆರಾಧ್ಯದೈವ ಚೆಲುವನಾರಾಯಣನಿಗೆ ನಡೆಯುವ ಕೃಷ್ಣರಾಜ ಮುಡಿ ಉತ್ಸವ ಹೇಗಿರುತ್ತದೆ ? ಮೇಲುಕೋಟೆ ಭರತ ಭೂಮಿಯ ಅತ್ಯಂತ ಪವಿತ್ರ ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಒಂದು. ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಧಾರ್ಮಿಕ ಕ್ಷೇತ್ರ ಸಾಕ್ಷಾತ್ ವಿಷ್ಣುವಿನ ಅಪರಾವತಾರವಾದ ಶ್ರೀ ಚಲುವನಾರಾಯಣಸ್ವಾಮಿ ನೆಲೆನಿಂತಿರುವ ಧರ್ಮ ಭೂಮಿ. ಈ ಕ್ಷೇತ್ರದಲ್ಲಿ ಈಗ ಆಶಾಡ ಮಾಸದಲ್ಲಿ ಬ್ರಹ್ಮೋತ್ಸವದ ಸಂಭ್ರಮ. ಇದೇ 2018, ಜುಲೈ 27 ರಿಂದ ಆರಂಭವಾಗಿರುವ ಅದ್ದೂರಿ ಬ್ರಹ್ಮೋತ್ಸವದ ಆರನೇ ದಿನದಂದು ಚೆಲುವನಾರಾಯಣನಿಗೆ ಕೃಷ್ಣರಾಜ ಮುಡಿ ಉತ್ಸವ ನಡೆಯುತ್ತದೆ. ರಾಜ್ಯದ ಆರಾಧ್ಯದೈವ ಚೆಲುವನಾರಾಯಣ ಉತ್ಸವ ಸಂದರ್ಭದಲ್ಲಿ ಸಕಲ ಆಭರಣಗಳಿಂದ ಭೂಷಿತನಾಗಿ ಶ್ರೀದೇವಿ ಹಾಗೂ ಭೂದೇವಿಯರೊಂದಿಗೆ ಪ್ರಮುಖ ಬೀದಿಯಲ್ಲಿ ಸಾಗುತ್ತಾರೆ. ಈ ಸಂದರ್ಭದಲ್ಲಿ ಭಕ್ತರು ಸಂತೋಷದಿಂದ ಜಯಘೋಷ ಹಾಕುತ್ತಾರೆ.

ಕೃಷ್ಣ ರಾಜಮುಡಿ ಉತ್ಸವದಲ್ಲಿ ಚೆಲುವನಾರಾಯಣನಿಗೆ ತೊಡಿಸುವ ಆಭರಣಗಳನ್ನು ಮಂಡ್ಯದ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗುತ್ತದೆ. ಉತ್ಸವ ನಡೆಯುವ ದಿನ ವಜ್ರದ ಕಿರೀಟ ಸೇರಿದಂತೆ ಇತರೆ ಆಭರಣಗಳನ್ನು ಸಂಜೆಯ ವೇಳೆಗೆ ಮೇಲುಕೋಟೆಗೆ ತಂದು ಅದನ್ನು ಪಲ್ಲಕ್ಕಿಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ .ಮಂಡ್ಯದ ಜಿಲ್ಲಾ ಖಜಾನೆಯಿಂದ ತರಲಾದ ವಜ್ರಕಿರೀಟ ಸೇರಿದಂತೆ ಇತರ ಆಭರಣಗಳನ್ನು ಜಿಲ್ಲಾಧಿಕಾರಿ, ತಾಸಿಲ್ದಾರ, ಪೊಲೀಸ್ ಸಶಸ್ತ್ರ ಪಡೆ ಸೇರಿದಂತೆ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗುತ್ತದೆ . ಮತ್ತು ದೇವಸ್ಥಾನದ ಪರಿಚಾಲಕರು ಸ್ಥಾನಿಕರು ಮತ್ತು ಹೀಗೆ ಅಧಿಕಾರಿಗಳಿಂದ ಬಿಗಿ ಬಂದೋಬಸ್ತುನಿಂದ ವಶಕ್ಕೆ ಪಡೆದುಕೊಂಡ ಆಭರಣಗಳನ್ನು ಚೆಲುವನಾರಾಯಣ ಸ್ವಾಮಿಗೆ ತೊಡಿಸಿ ಅಲಂಕಾರ ಮಾಡಲಾಗುತ್ತದೆ.

ಕೃಷ್ಣ ರಾಜಮುಡಿ ಉತ್ಸವಕ್ಕೆ ಮೊದಲು ಗರುಡ ಉತ್ಸವ ನಡೆಸಲಾಗುತ್ತದೆ. ಇದಾದ ನಂತರ ಅಪೂರ್ವ ವಜ್ರಗಳಿಂದ ಕೂಡಿದ ಕಿರೀಟ ಮತ್ತು ಇತರ ಆಭರಣಗಳನ್ನು ಚೆಲುವನಾರಾಯಣ ಸ್ವಾಮಿಗೆ ತೊಡಿಸಲಾಗುತ್ತದೆ. ಸ್ವಾಮಿಗೆ ಭವ್ಯವಾದ ಪೂಜೆ ಮಂಗಳಾರತಿ ನಡೆಸಲಾಗುತ್ತದೆ. ಕೃಷ್ಣರಾಜಮುಡಿ ಉತ್ಸವಕ್ಕೆ ಚಾಲನೆ ಸಿಗುತ್ತದೆ . ಆಗಸ್ಟ್ ಒಂದನೇ ತಾರೀಕು ರಾತ್ರಿ ಸುಮಾರು ಏಳು ಮೂವತ್ತಕ್ಕೆ ಆರಂಭವಾಗಿರುವ ಕೃಷ್ಣ ರಾಜಮುಡಿ ಉತ್ಸವ 11:30 ರ ವರೆಗೆ ನಡೆಯುತ್ತದೆ .ರಾಜಬೀದಿ, ವಾನಮ್ಮ ಮನೆ, ಮಂಟಪ, ರಥ, ಬೀದಿ ,ಮಾರಿಗುಡಿ ಹೀಗೆ ನಾಲ್ಕು ಬೀದಿಗಳಲ್ಲಿ ಸಾಗಿ ಒಂದು ಸುತ್ತು ಬಂದ ನಂತರ ರಾಜ ಬೀದಿಯಲ್ಲಿರುವ ವೇದಾಂತ ದೇಶಿಕರ ಸನ್ನಿಧಿಗೆ ಉತ್ಸವ ಸಾಗಿ ಬರುತ್ತದೆ. ಅಲ್ಲಿ ಪೂಜಾ ಕೈಂಕರ್ಯವನ್ನು ನಡೆಸಲಾಗುತ್ತದೆ. ಕೊನೆಯಲ್ಲಿ ಉತ್ಸವಮೂರ್ತಿಯನ್ನು ಚೆಲುವನಾರಾಯಣನ ಸನ್ನಿಧಿಗೆ ತರಲಾಗುತ್ತದೆ.
ಭಗವಂತನ ಮುಂದೆ ವೇದ ಪಾರಾಯಣಗಳು ನಡೆಯುತ್ತವೆ .ಈ ಸಂದರ್ಭದಲ್ಲಿ ವಿಶೇಷವಾಗಿ ದೇವರ ಪಾರಮ್ಯವನ್ನು ಹೇಳುವ ನಾನ್ ಮೋಹನ ತಿರುವನ್ನಾದಿ ಪಾರಾಯಣ ನಡೆಯುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಜನರ ಮಹಾರಾಜರಾಗಿದ್ದರು . ದಾರ್ಮಿಕವಾಗಿ ಜನರಲ್ಲಿ ಜಾಗೃತಿ ಮೂಡಿಸಿದವರಾಗಿದ್ದರು. ಮೈಸೂರು ಸಂಸ್ಥಾನವನ್ನು ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮುನ್ನೆಡೆಸಿದವರಾಗಿದ್ದರು. ಹೀಗಾಗಿ ಮೇಲುಕೋಟೆಯಲ್ಲಿ ಕೃಷ್ಣ ರಾಜಮುಡಿ ಬ್ರಹ್ಮೋತ್ಸವವನ್ನು ಆಚರಿಸುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಲಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top