ಭವಿಷ್ಯ

02 ಆಗಸ್ಟ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೦೨ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೬
ಸೂರ್ಯಾಸ್ತ : ೧೯:೧೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ – ೧೧:೩೨ ವರೆಗೆ
ನಕ್ಷತ್ರ : ಉತ್ತರಾ ಭಾದ್ರ – ೧೩:೧೩ ವರೆಗೆ
ಯೋಗ : ಸುಕರ್ಮ – ೧೪:೩೯ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೮ – ೧೩:೧೦
ಅಮೃತಕಾಲ : ೦೮:೦೩ – ೦೯:೪೬
ರಾಹು ಕಾಲ:೧೪:೨೧ – ೧೫:೫೮
ಗುಳಿಕ ಕಾಲ: ೦೯:೩೦ – ೧೧:೦೭
ಯಮಗಂಡ:೦೬:೧೬ – ೦೭:೫೩

 

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು.

 

ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ.

ಅಯ್ಯೋ ಪಾಪ ಎಂದರೆ ಆಯುಷ್ಯ ಕಡಿಮೆ ಆಗುವಂತಹ ಸಂದರ್ಭವಿದೆ. ಪರರ ಕಷ್ಟಕ್ಕೆ ಮರುಗಿ ದಾನಶೂರ ಕರ್ಣನಂತೆ ಇದ್ದುದೆಲ್ಲವನ್ನು ಪರರಿಗೆ ಹಂಚುವ ಔದಾರ್ಯದಿಂದ ಕೆಲಕಾಲ ಹಿಂದೆ ಸರಿಯುವುದು ಒಳ್ಳೆಯದು.

 

ಗತದಿನಗಳ ಅವಮಾನಗಳನ್ನು ನೆನಪಿಸಿಕೊಂಡು ಹಿಂಸೆಯನ್ನು ಅನುಭವಿಸದಿರಿ. ಹೊಸದಾದ ಸಂಕಲ್ಪ ನಿಮಗೆ ಹೊಸತನ ಮತ್ತು ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದು. ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

 

 

ಮಾತಿನ ಬಗ್ಗೆ ಸದಾ ಜಾಗೃತಿಯನ್ನು ಹೊಂದಬೇಕಾಗುವುದು. ನೀವು ಆಡಿದ ತಮಾಷೆ ಮಾತು ಪತಿಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಎರಡು ಬಾರಿ ಚಿಂತಿಸಿ ಮಾತನ್ನು ಆಡಿ. ಒಳಿತಾಗುವುದು.

 

 

ಅನೇಕ ರೀತಿಯ ಜನರನ್ನು ಇಂದು ಭೇಟಿಯಾಗಲಿದ್ದೀರಿ. ಮನಸ್ಸಿನ ಗೊಂದಲವನ್ನು ನಿರ್ಮಿಸುವವರ ಬಗ್ಗೆ ವಿಶೇಷವಾದ ಎಚ್ಚರಿಕೆಯಿರಲಿ. ಕೆಲ ಗ್ರಹಗಳ ಸಂಚಾರವು ಮಕ್ಕಳ ವಿದ್ಯೆಯಲ್ಲಿ ಹಿನ್ನಡೆ ಉಂಟು ಮಾಡುವುದು.

 

 

ನಿಮ್ಮ ಮನಸ್ಸನ್ನು ಘಾಸಿಗೊಳಿಸಿ ದುರ್ಬಲರನ್ನಾಗಿ ಮಾಡುವ ಜನರನ್ನು ಅಲಕ್ಷಿಸಿಬಿಡಿ. ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿ. ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.

 

ಹಲವು ತಾಪತ್ರಯಗಳ ನಡುವೆಯೂ ಹಿಡಿದ ಕೆಲಸವನ್ನು ಮುಗಿಸುವ ಆತುರತೆ ತೋರುವಿರಿ. ಸ್ನೇಹಿತರು ನಿಜವಾಗಿಯೂ ಈ ಸಂದರ್ಭದಲ್ಲಿ ಸಹಾಯ ಮಾಡುವರು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.

 

ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಮನೆಯ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು.

 

ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಗುರುರಾಯರನ್ನು ಸ್ಮರಿಸಿ

 

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top