ಹೆಚ್ಚಿನ

ಪ್ರತಿ ಶುಕ್ರವಾರ ಅಭಿಜಿತ್ ಶುಭ ಮುಹೂರ್ತದಲ್ಲಿ ಈ ನಿಯಮಗಳನ್ನೂ ಪಾಲಿಸಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿಕಟಾಕ್ಷ ದೊರೆತು ಸಿರಿ ಸಂಪತ್ತು ನಿಮ್ಮ ಮನೆಯಲ್ಲಿ ತುಳುಕುತ್ತದೆ.

ಧನ ಅಭಿವೃದ್ಧಿಗೋಸ್ಕರ ನಾವು ಪ್ರತಿನಿತ್ಯ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಿರುತ್ತೇವೆ. ಪ್ರತಿ ಶುಕ್ರವಾರ ಅಭಿಜಿತ್ ಲಗ್ನ ಅಥವಾ ಮುಹೂರ್ತದಲ್ಲಿ ಲಕ್ಷ್ಮೀದೇವಿಯನ್ನು ಆರಾಧಿಸಲು ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ಅರ್ಚನೆ ಮಾಡಿ ಪೂಜೆ ಮಾಡಿದರೆ ಶೀಘ್ರ ಪಲಿತಾಂಶಗಳನ್ನು ನಾವು ಕಾಣಬಹುದು.

 

 

 

ಶುಕ್ರವಾರದ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ತಲೆ ಸ್ನಾನವನ್ನು ಮಾಡಬೇಕು. ಪೂಜೆ ಕಾರ್ಯಕ್ರಮವನ್ನು ಮಾಡಿದ ನಂತರ ಲಘು ಉಪಹಾರವನ್ನು ಸೇವಿಸಬಹುದು.
ಅಭಿಜಿತ್ ಲಗ್ನ ಅಥವಾ ಮಹೂರ್ತದಲ್ಲಿ ಕೈಕಾಲನ್ನು ಪೂಜೆ ಮಾಡುವ ಮೊದಲು ಕೈ, ಕಾಲನ್ನು ತೊಳೆದುಕೊಂಡು ಒಂದು ಸ್ಟೀಲ್ ಪಾತ್ರೆ ಅಥವಾ ಬೆಳ್ಳಿಯ ತಟ್ಟೆಯನ್ನು ತೆಗೆದುಕೊಂಡು, ಅದನ್ನು ಮೊದಲಿಗೆ ಸ್ವಚ್ಛಗೊಳಿಸಬೇಕು. ಈ ತಟ್ಟೆಯನ್ನು ಬೇರೆ ಯಾವುದಕ್ಕೂ ಉಪಯೋಗಿಸಬಾರದು ಕೇವಲ ಪೂಜೆಗೆ ಮಾತ್ರ ಉಪಯೋಗಿಸಬೇಕು.

ನೀರಿನಲ್ಲಿ ನೆನೆಸಿದ ಕುಂಕುಮದಿಂದ ತಟ್ಟೆಗೆ ತ್ರಿಕೋಣ ಆಕಾರವನ್ನು ಬರೆಯಬೇಕು. ಇದರ ಮಧ್ಯದ ಕೇಂದ್ರ ಬಿಂದುವಿಗೆ ಕುಂಕುಮವನ್ನು ಇಡಬೇಕು. ನಂತರ ಆ ಕೇಂದ್ರ ಬಿಂದುವಿನ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇಡಬೇಕು. ಅಕ್ಕಿಯಲ್ಲಿ ಸ್ವಲ್ಪ ಸ್ವಚ್ಛವಾದ ಹಸುವಿನ ತುಪ್ಪ , ಕುಂಕುಮವನ್ನು ಹಾಕಿ ಅಕ್ಷತೆಯನ್ನು ತಯಾರಿ ಮಾಡಿಕೊಳ್ಳಬೇಕು. ಸಂಪತ್ತು ನಮ್ಮ ಅಧೀನದಲ್ಲಿ ಇರಬೇಕೆ ಹೊರತು , ನಾವು ಸಂಪತ್ತಿನ ಅಧೀನದಲ್ಲಿ ಇರಬಾರದು. ನಾವು ಅಹಂಕಾರವನ್ನು ತೋರಿಸಿದರೆ ಐಶ್ವರ್ಯ ಜಾರಿ ಹೋಗುತ್ತದೆ.

ಸಂತೃಪ್ತಿಗಿಂತ ಉತ್ತಮವಾದ ಧನ ಇನ್ನೊಂದಿಲ್ಲ. ಹೀಗೆ ಅಂದುಕೊಂಡಾಗ ಮಾತ್ರ ಲಕ್ಷ್ಮೀ ದೇವಿಯ ಕಟಾಕ್ಷ ನಮಗೆ ಸಿಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top