ಅರೋಗ್ಯ

ಮುಟ್ಟಿನ ಭಯಾನಕ ಹೊಟ್ಟೆ ನೋವಿಗೆ ಇಲ್ಲಿದೆ ಮನೆಮದ್ದು.

ಮುಟ್ಟಿನ ಭಯಾನಕ ಹೊಟ್ಟೆ ನೋವಿಗೆ ಸುಲಭವಾದ ಪರಿಹಾರಗಳು

 

 

 

 

1. ಹೀಟ್ ಪ್ಯಾಕ್ಸ್

ಕಿಬ್ಬೊಟ್ಟೆಯ ಪ್ರದೇಶದಲ್ಲಿ ಶಾಖವನ್ನು ನೀಡುವುದರಿಂದ ಮುಟ್ಟಿನ ದ್ರವ ದೇಹದಿಂದ ಸುಲಭವಾಗಿ ಹೊರಹೋಗುತ್ತದೆ.

 

2. ಬಿಸಿ ನೀರ ಸ್ನಾನ

ಬಿಸಿ ನೀರ ಸ್ನಾನ ಮಾಡುವುದರಿಂದ ದೇಹದ ತಾಪಮಾನ ಏರುತ್ತದೆ ಇದು ಗರ್ಭಕೋಶದ ರಕ್ತದ ಹರಿವನ್ನು ಹೆಚ್ಚಿಸುತ್ತದೆ ,ಕಿಬ್ಬೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತದೆ ಮತ್ತು ನಿಮ್ಮ ನೋವು ನಿವಾರಿಸುತ್ತದೆ , ಹೆಚ್ಚು ನೋವಿದ್ದರೆ 2 ರಿಂದ 3 ಬಾರಿ ಸ್ನಾನ ಮಾಡಿದರೆ ಉತ್ತಮ.

 

3. ಹೊಟ್ಟೆಯ ಅಂಗಮರ್ದನ (ಹೊಟ್ಟೆಯ ಮಸಾಜ್ )

ನಿಮ್ಮ ಹೊಟ್ಟೆಯ ಕೆಳಭಾಗಕ್ಕೆ ಆಲಿವ್ ತೈಲ ಅಥವಾ ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆ ಹಚ್ಚಿ ಎರಡೂ ಕೈಗಳಿಂದ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಬೇಕು , ಹೀಗೆ 5 ರಿಂದ 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ.

4. ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ 2 ಚಮಚಗಳು ನೀರಿಗೆ ಸೇರಿಸಿ. ಇದು 3 ಬಾರಿ ನಿಮ್ಮ ಋತು ಅವಧಿಯಲ್ಲಿ ಕುಡಿಯಿರಿ.

5. ಕಪ್ಪು ಕಬ್ಬಿನ ಚರಟ( Blackstrap Molasses )

ಬೆಚ್ಚಗಿನ ಒಂದು ಲೋಟ ಹಾಲಿಗೆ 2 ಚಮಚ ಕಪ್ಪು ಕಬ್ಬಿನ ಚರಟದ ಪುಡಿ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದು.

 

6. ವಿಟಮಿನ್ ಸಿ ಸಮೃದ್ಧ ಆಹಾರ

ವಿಟಮಿನ್ ಸಿ, ಗರ್ಭಾಶಯದ ಪ್ರೊಜೆಸ್ಟರಾನ್ ಪ್ರಮಾಣವನ್ನು ಕಡಿಮೆ ಮಾಡಿ ಗರ್ಭಕೋಶದ ಒಳಪದರ ವೇಗವಾಗಿ ಮುರಿಯಲು ಅವಕಾಶ ಮಾಡುತ್ತದೆ. ಇದರಿಂದಾಗಿ ಯಾವುದೇ ನೋವು ಇಲ್ಲದೆ ಋತು ದ್ರವ ಹೊರಗೆ ಬರಲು ಸಹಾಯ ಮಾಡುತ್ತದೆ
ಉದಾಹರಣೆಗೆ ಮೆಣಸುಗಳು, ಹಸಿರು ಸೊಪ್ಪು , ಕಿವಿ ಹಣ್ಣು , ಕೋಸುಗಡ್ಡೆ, ಸಿಟ್ರಸ್ ಹಣ್ಣುಗಳು, ಟೊಮೆಟೊಗಳು, ಅವರೆಕಾಳು ಮತ್ತು ಪಪ್ಪಾಯಿಗಳು ವಿಟಮಿನ್ ಸಿ ಭರಿತ ಆಹಾರಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top