fbpx
ಭವಿಷ್ಯ

ಆಗಸ್ಟ್ 2018,12 ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಆಗಸ್ಟ್ 2018 ಈ ತಿಂಗಳ ರಾಶಿ ಭವಿಷ್ಯ .

ಮೇಷ ರಾಶಿ

 

ಈ ತಿಂಗಳು ಇವರಿಗೆ ಗ್ರಹಗತಿಗಳು ಅನುಕೂಲವಾಗಿ ಇಲ್ಲದೆ ಇರುವುದರಿಂದ ಆದಾಯ ಹೆಚ್ಚಾಗಿದ್ದರೂ ಎರಡು ಪಟ್ಟು ಹೆಚ್ಚು ಖರ್ಚುಗಳು ಬರುತ್ತವೆ, ದೇಹದ ಆಲಸ್ಯ ಹೆಚ್ಚಾಗಿರುತ್ತದೆ, ಹಾಗೆಯೇ ನೀವು ಪ್ರಾರಂಭಿಸುವ ಪ್ರತಿ ಕೆಲಸಗಳಲ್ಲಿಯೂ ಅಡೆತಡೆಗಳು ಬರುವುದರಿಂದ ನೀವು ತುಂಬಾ ಶ್ರಮವಹಿಸಿ ಕೆಲಸಗಳನ್ನು ಪೂರ್ತಿ ಮಾಡಬೇಕಾಗುತ್ತದೆ . ಕೋರ್ಟ್ ಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ವಿರುದ್ಧವಾಗಿ ತೀರ್ಪು ಬರಲಿದೆ, ಆದ್ದರಿಂದ ಇದರ ಬಗ್ಗೆ ಜಾಗ್ರತೆವಹಿಸಿದರೆ ಒಳ್ಳೆಯದು , ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ವಾಹನ ಅಪಘಾತ ಸಂಭವಿಸುವ ಸೂಚನೆಗಳು ಕೂಡ ಗೋಚರಿಸುತ್ತಿದೆ, ಆದ್ದರಿಂದ ವಾಹನವನ್ನು ಚಲಾಯಿಸುವಾಗ ಜಾಗ್ರತೆಯಿಂದ ಚಲಾಯಿಸಿದರೆ ಉತ್ತಮ.

ಈ ತಿಂಗಳ ಮೊದಲ ಅರ್ಧದಲ್ಲಿ ತುಂಬಾ ಚಿಂತೆಯಿಂದ ಕೂಡಿರುತ್ತದೆ. ಈ ತಿಂಗಳ ದ್ವಿತೀಯಾರ್ಧದಲ್ಲಿ ಎಲ್ಲಾ ಅನುಕೂಲವಾಗಿರುತ್ತದೆ. ಬಂಧು-ಮಿತ್ರರನ್ನು ಬೇಟಿಯಾಗುವ ಶುಭ ಸಂದರ್ಭಗಳು ಕೂಡ ಒದಗಿ ಬರುತ್ತವೆ, ಈ ತಿಂಗಳು ನಿರುದ್ಯೋಗಿಗಳು ಹಟದಿಂದ ಕೆಲಸವನ್ನು ಹುಡುಕಲು ಪ್ರಯತ್ನಿಸಿದರೆ ನೀವು ಅಂದುಕೊಂಡ ಕೆಲಸಗಳಲ್ಲಿ ಸ್ಥಿರವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ದಂಪತಿಗಳ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ, ರಾಜಕೀಯ ಮತ್ತು ಕಲಾರಂಗದಲ್ಲಿ ಸ್ಥಿರವಾಗಿ ನೆಲೆ ನಿಲ್ಲಬೇಕೆಂದು ಅಂದುಕೊಂಡವರಿಗೆ ಒಳ್ಳೆಯ ಅವಕಾಶಗಳು ಬರುತ್ತವೆ.

ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ , ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳನ್ನು ಕಾಣಬಹುದು, ಆರ್ಥಿಕ ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರುತ್ತದೆ, ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಬೇರೆಯವರ ಹತ್ತಿರ ಚರ್ಚೆ ಮಾಡದೇ ಇರುವುದು ಒಳ್ಳೆಯದು, ಈ ತಿಂಗಳು ದೂರ ಪ್ರಯಾಣ ಮಾಡುವ ಸಂದರ್ಭಗಳನ್ನು ಮುಂದೂಡಿದರೆ ತುಂಬಾ ಒಳ್ಳೆಯದು.

ಪರಿಹಾರ
ಆರ್ಥಿಕ ಪರಿಸ್ಥಿತಿ ಉತ್ತಮವಾಗಲು, ಅನಾರೋಗ್ಯ ಸಮಸ್ಯೆಗಳು ದೂರವಾಗಲು, ಹಾಗೆಯೇ ಬುಧಗ್ರಹದ ಅನುಗ್ರಹವನ್ನು ಪಡೆಯಲು ,ಶನಿವಾರದ ದಿನ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ . ಈ ತಿಂಗಳ ಅದೃಷ್ಟದ ಬಣ್ಣ ಬಂಗಾರದ ಬಣ್ಣ ಮತ್ತು ತಿಳಿ ಗೋಧಿ ಬಣ್ಣ .

ವೃಷಭ ರಾಶಿ

 

ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಕುಟುಂಬದಲ್ಲಿ ಕಲಹಗಳು ಹೆಚ್ಚಾಗಿ ಕಾಣಿಸುವುದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ, ಮುಖ್ಯವಾಗಿ ನಿಮ್ಮ ಎಲ್ಲಾ ಲೆಕ್ಕಾಚಾರಗಳು ಬದಲಾಗುತ್ತದೆ, ಆದ್ದರಿಂದ ನೀವು ನಿರುತ್ಸಾಹ ಪಡದೇ ಮುಂದಕ್ಕೆ ಸಾಗಿದರೆ ಉತ್ತಮ. ನಿಮ್ಮ ಗ್ರಹಗತಿಗಳು ಅನುಕೂಲವಾಗಿ ಇಲ್ಲದೆ ಇರುವುದರಿಂದ ಈ ತಿಂಗಳು ಪೂರ್ತಿ ಇದೇ ಸ್ಥಿತಿ ಇರುತ್ತದೆ, ಆದರೆ ಇದಕ್ಕೆ ಸಂಬಂಧಿಸಿದಂತೆ ನೀವು ಭವಿಷ್ಯದಲ್ಲಿ ಒಳ್ಳೆಯ ಫಲಗಳನ್ನು ಕಾಣುತ್ತೀರ, ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ತುಂಬ ಅನುಕೂಲಗಳನ್ನು ಕಾಣುತ್ತೀರ. ಈ ತಿಂಗಳ ಮೊದಲ ಅರ್ಧಕ್ಕಿಂತ ದ್ವಿತೀಯಾರ್ಧದಲ್ಲಿ ತುಂಬಾ ಒಳ್ಳೆಯ ಫಲಿತಾಂಶಗಳನ್ನು ನೀವು ಕಾಣಬಹುದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಈ ಸಮಯದಲ್ಲಿ ಬೇರೆಯವರ ಸಲಹೆಯನ್ನು ಪಾಲಿಸುತ್ತ, ಅವರ ಬೆಂಬಲದಿಂದ ಮುಂದೆ ಸಾಗಿದರೆ , ಮಾಡುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಅಡೆತಡೆಗಳು ಎದುರಾದರೂ ಕೂಡ ಸ್ವಲ್ಪ ಬದಲಾವಣೆಗಳಿಂದ ಒಳ್ಳೆಯ ಫಲಗಳನ್ನು ಕಾಣುತ್ತೀರ.

ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಅಷ್ಟೊಂದು ಸೌಕರ್ಯ ಇಲ್ಲದಿದ್ದರೂ ಕೂಡ ನೀವು ಅಂದುಕೊಂಡಂತಹ ವಿಜಯವನ್ನು ಮತ್ತು ಫಲಿತಾಂಶವನ್ನು ಕಾಣಲಿದ್ದೀರಿ, ಆದರೆ ಇದಕ್ಕೋಸ್ಕರ ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ನೀವು ಸ್ವತಂತ್ರವಾಗಿ ವ್ಯವಹಾರ ಮಾLಡಲು ಅನುಕೂಲಕರವಾದ ಸಮಯ ಇದಲ್ಲ, ಹೆಚ್ಚಿನದಾಗಿ ದೈವಾರಾಧನೆಯನ್ನು ಮಾಡಿದರೆ ಉತ್ತಮ. ಈ ಸಮಯದಲ್ಲಿ ಬೇರೆಯವರ ಸಹಕಾರ ಕೇಳುವುದು ಒಳ್ಳೆಯದು. ನಿಮಗೆ ತುಂಬಾ ಆಸಕ್ತಿ ಇರುವ ವಿಷಯಗಳಲ್ಲಿ ಸಮಯವನ್ನು ಕಳೆಯಲು ಇಷ್ಟಪಡುತ್ತೀರಾ. ಈ ತಿಂಗಳು ನೂತನ ಕೆಲಸಗಳಲ್ಲಿ ಹೊಸ ಕೆಲಸ ಕಾರ್ಯಗಳನ್ನು ಪ್ರಯತ್ನಿಸುವವರಿಗೆ ಕೆಲಸದ ಅವಕಾಶಗಳು ಸಿಗುವುದು ಹೆಚ್ಚಾಗಿ ಕಾಣಿಸುತ್ತಿದೆ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆಯಲಿದೆ ,ಗ್ರಹಗಳ ಸ್ಥಿತಿ ಅನುಕೂಲವಾಗಿ ಇರುವುದರಿಂದ ಕೈಗೆ ಬರಬೇಕಾದ ದುಡ್ಡು ಬಂದು ನಿಮ್ಮ ಕಾಯಿ ಸೇರುವ ಸಾಧ್ಯತೆಗಳಿವೆ, ಆದರೆ ನೀವು ಈ ಹಿಂದೆ ಮಾಡಿರುವ ತಪ್ಪುಗಳನ್ನು ಅರಿತು ಅವುಗಳನ್ನು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಂಡರೆ ಉತ್ತಮ ದುಬಾರಿ ಖರ್ಚುಗಳಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಖರ್ಚಿಗೆ ಕಡಿವಾಣ ಹಾಕಿ.

ವಿವಾಹ ಸಂಬಂಧಗಳಿಗಾಗಿ ಪ್ರಯತ್ನಿಸುತ್ತಿದ್ದರೆ ನೀವು ಶುಭವಾರ್ತೆಯನ್ನು ಕೇಳಲಿದ್ದೀರಿ, ಮಕ್ಕಳ ಭವಿಷ್ಯಕ್ಕಾಗಿ ನೀವು ಹೆಚ್ಚಿನ ಶ್ರದ್ಧೆಯನ್ನು ವಹಿಸಬೇಕು, ಈ ತಿಂಗಳು ನಿಮ್ಮ ಆರೋಗ್ಯ ತುಂಬಾ ಬಲವಾಗಿರುತ್ತದೆ, ಆದರೆ ಕೊನೆಯ ವಾರದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ. ಬರುವ ಅಮಾವಾಸ್ಯೆ, ಶನಿವಾರಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ಪರಿಹಾರ
9 ಬತ್ತಿಯಿಂದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಗೆ ದೀಪಾರಾಧನೆ ಮಾಡಿ , ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಧನ ಪ್ರಾಪ್ತಿಯಾಗುತ್ತದೆ.

ಮಿಥುನ ರಾಶಿ

 

ನೀವು ಕುಟುಂಬ ವೃತ್ತಿಪರ , ವ್ಯಕ್ತಿಗತ ಲಕ್ಷ ಪರವಾಗಿ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ, ಸೂರ್ಯನ ಪ್ರಭಾವ ಈ ತಿಂಗಳು ನಿಮ್ಮ ಮೇಲೆ ಹೆಚ್ಚಾಗಿರುವ ಕಾರಣ ನಿಮ್ಮ ಕುಟುಂಬದ ಮೇಲೆ ಹೆಚ್ಚಿನ ಜಾಗ್ರತೆಯನ್ನು ವಹಿಸಿದರೆ ಉತ್ತಮ, ಗ್ರಹಗಳು ಅಷ್ಟೊಂದು ಅನುಕೂಲಕರವಾಗಿ ಇಲ್ಲದೆ ಇರುವುದರಿಂದ ಮಾಡುವ ಪ್ರತಿ ಕೆಲಸದಲ್ಲಿಯೂ ಎಚ್ಚರಿಕೆಯನ್ನು ವಹಿಸಬೇಕು ,ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಾ ಹೋದರೆ ಒಳ್ಳೆಯದು. ನೀವು ಹೆಚ್ಚಿನ ವಿಷಯಗಳಲ್ಲಿ ಆಸಕ್ತಿಯನ್ನು ವಹಿಸುತ್ತೀರಿ , ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗೊಂದಲಕ್ಕೆ ಒಳಗಾಗುತ್ತೀರ, ಆದ್ದರಿಂದ ಮಾಡುವ ಪ್ರತಿ ಕೆಲಸಗಳಲ್ಲಿಯೂ ಮೊದಲು ಪ್ರಣಾಳಿಕೆಯನ್ನು ಸಿದ್ದ ಮಾಡಿಕೊಂಡು ಮುಂದೆ ಹೋಗುವುದು ಉತ್ತಮ, ನೀವು ಮಾಡುವ ಪ್ರಯಾಣಗಳು ಅನುಕೂಲಕರವಾಗಿರುತ್ತವೆ ,ಹೆಚ್ಚಿನ ಪ್ರಯಾಣವನ್ನು ಈ ತಿಂಗಳು ಮಾಡಬೇಕಾಗಬಹುದು.

ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ, ನಿಮ್ಮ ವ್ಯವಹಾರಗಳಲ್ಲಿ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತೀರಿ , ಈ ತಿಂಗಳಿನಿಂದ ನೀವು ಉಳಿತಾಯ ಮಾಡಲು ಪ್ರಾರಂಭಿಸುತ್ತೀರಿ, ಮಾಡುವ ಕೆಲಸಗಳಲ್ಲಿ ಎಷ್ಟು ಶ್ರಮವಹಿಸಿ ಕೆಲಸಗಳನ್ನು ಮಾಡುತ್ತೀರ ಅಷ್ಟೇ ಫಲಿತಾಂಶಗಳನ್ನು ಸಹ ಕಾಣುತ್ತೀರ, ಕುಟುಂಬ ಸದಸ್ಯರ ಜೊತೆ ಸೇರಿ ಪುಣ್ಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ತುಂಬಾ ಜಾಗ್ರತೆ ವಹಿಸಿ, ಸಮಯ ದೊರೆತಾಗ ವಿಶ್ರಾಂತಿ ತೆಗೆದುಕೊಳ್ಳಿ.

ಪರಿಹಾರ 
ಈ ತಿಂಗಳು ನಿಮ್ಮ ಇಷ್ಟ ದೇವತೆಗೆ ಬೆಳ್ಳಿಯ ದೀಪದಿಂದ ದೀಪಾರಾಧನೆಯನ್ನು ಮಾಡಿದರೆ ಒಳ್ಳೆಯದು.

ಕಟಕ ರಾಶಿ

 

ವೃತ್ತಿ ಉದ್ಯೋಗಗಳಲ್ಲಿ ಸ್ಥಿರವಾಗಿ ಇರುವವರಿಗೆ ಎಲ್ಲಾ ಶುಭ ಫಲಗಳೇ ಕಾಣುತ್ತವೆ , ನೂತನ ಗೃಹಪಯೋಗಿ ಕೆಲಸಗಳನ್ನು ಖರೀದಿ ಮಾಡುತ್ತೀರಿ , ವ್ಯಾಪಾರವನ್ನು ಮಾಡಬೇಕು ಎನ್ನುವವರಿಗೆ ಈ ತಿಂಗಳು ಅನುಕೂಲಕರವಾಗಿದೆ , ಆರ್ಥಿಕವಾಗಿ ಯಾವ ಸಮಸ್ಯೆಗಳು ಇರುವುದಿಲ್ಲ, ಅಂದುಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ತಿ ಆಗುತ್ತವೆ ,ಉದ್ಯೋಗ ಮಾಡುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಗಳಿಸಲಿದ್ದೀರಿ, ಆರ್ಥಿಕವಾಗಿ ಮತ್ತು ಆರೋಗ್ಯ ಪರವಾಗಿ ಈ ತಿಂಗಳು ನಿಮಗೆ ತುಂಬಾ ಚೆನ್ನಾಗಿದೆ. ಅಂದುಕೊಂಡ ಕೆಲಸಗಳಲ್ಲಿ ವಿಜಯವನ್ನು ಗಳಿಸುತ್ತೀರ, ದಂಪತಿಗಳ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ, ಕಲಾರಂಗದಲ್ಲಿ ಸ್ಥಿರವಾಗಿರುವವರೆಗೆ ಅಂದುಕೊಂಡ ಹಾಗೆ ಅವಕಾಶಗಳು ಬರುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ.

ಈ ತಿಂಗಳ ದ್ವಿತೀಯಾರ್ಧದಲ್ಲಿ ಪ್ರತಿಕೂಲವಾದ ವಾತಾವರಣವನ್ನು ಎದುರಿಸಬೇಕಾಗುತ್ತದೆ ,ವ್ಯಾಪಾರದ ವಿಷಯದ ಬಗ್ಗೆ ಸ್ವಲ್ಪ ಅಡೆತಡೆಗಳು ಇರುತ್ತವೆ, ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಸ್ವಲ್ಪ ವಿರೋಧಗಳು ಬರುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ, ಅಪಘಾತಗಳಾಗುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ, ಐಷಾರಾಮಿ ಜೀವನಕ್ಕೆ ಹೋಗಿ ತುಂಬಾ ದುಡ್ಡನ್ನು ಖರ್ಚು ಮಾಡಿಕೊಂಡು ಸಾಲವನ್ನು ಸಹ ಮಾಡುವ ಅವಕಾಶಗಳು ಹೆಚ್ಚಾಗಿರುತ್ತವೆ, ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸಿಕೊಂಡರೆ ಒಳ್ಳೆಯದು, ಮಾನಸಿಕ ನೆಮ್ಮದಿ ಇರುವುದಿಲ್ಲ , ಮಾನಸಿಕ ನೆಮ್ಮದಿಯನ್ನು ಗಳಿಸಲು ,ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಈ ಪರಿಹಾರವನ್ನು ಮಾಡಿಕೊಳ್ಳಿ.

ಪರಿಹಾರ
ಪ್ರತಿ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಯನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ ಒಳ್ಳೆಯದು. ಶಿವನ ಆರಾಧನೆ ಮತ್ತು ಅಭಿಷೇಕಗಳಿಂದ ಅತ್ಯಂತ ಶುಭ ಫಲಗಳನ್ನು ಕಾಣಬಹುದು .ಅದೃಷ್ಟದ ಬಣ್ಣ ಬಿಳಿ ಬಣ್ಣ .

ಸಿಂಹ ರಾಶಿ 

 

ಈ ತಿಂಗಳು ನಿಮಗೆ ಮಿಶ್ರ ಬಲದಿಂದ ಕೂಡಿದ್ದು ಆರ್ಥಿಕ ಪರಿಸ್ಥಿತಿಗಳು ಅನುಕೂಲವಾಗಿದ್ದರೂ ಆದಾಯಕ್ಕಿಂತ ಹೆಚ್ಚಿನ ಕರ್ಚನ್ನು ಮಾಡಬೇಕಾಗುತ್ತದೆ .ಕುಜ ಗ್ರಹ ಅನುಕೂಲವಾಗಿ ಇಲ್ಲದೆ ಇರುವುದರಿಂದ ಅಂದುಕೊಂಡ ಕೆಲಸಗಳು ಅಂದುಕೊಂಡ ಸಮಯದಲ್ಲಿ ಪೂರ್ತಿ ಮಾಡಲು ಸಾಧ್ಯವಾಗುವುದಿಲ್ಲ ಕುಟುಂಬದಲ್ಲಿ ಕಲಹಗಳು ಮಾನಸಿಕ ಆಶಾಂತಿ ಮೂಡುತ್ತವೆ ಹಾಗೆ ವಿಪರೀತ ಕೆಲಸದ ಒತ್ತಡದ ಹೆಚ್ಚಾಗಿರುತ್ತದೆ ಈ ಎಲ್ಲಾ ಕಾರಣಗಳಿಂದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೀರಿ ಈ ತಿಂಗಳ ಮೊದಲ ಅರ್ಧದಲ್ಲಿ ಅಂದುಕೊಂಡ ಕೆಲಸಗಳು ಪೂರ್ತಿಯಾಗಲು ತುಂಬಾ ಶ್ರಮವಹಿಸಬೇಕಾಗುತ್ತದೆ.

ಇನ್ನು ಈ ತಿಂಗಳ ದ್ವಿತೀಯಾರ್ಧದಲ್ಲಿ ಗ್ರಹಗಳು ಅನುಕೂಲತೆಯಿಂದ ಇರುವುದರಿಂದ ಎಲ್ಲಾ ಅಂದುಕೊಂಡ ಹಾಗೆ ನಡೆಯುತ್ತದೆ ದೂರ ಪ್ರಯಾಣವನ್ನು ಮಾಡುತ್ತೀರಿ ಹಾಗೆಯೇ ವಿದೇಶಯಾತ್ರೆ ಕೂಡ ಮಾಡುವ ಅವಕಾಶಗಳು ಸಹ ಇದೆ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯವಾಗಿದೆ ಆರ್ಥಿಕ ಲೇವಾದೇವಿ ಗಳಲ್ಲಿ ಅನುಕೂಲವಾದ ಪರಿಸ್ಥಿತಿಗಳು ಇರುವುದರಿಂದ ಬಂಡವಾಳ ಹೂಡಿಕೆಯನ್ನು ಮಾಡುತ್ತೀರಿ ಇದರಿಂದ ಅಧಿಕ ಲಾಭವನ್ನು ಸಹ ಕಾಣುತ್ತೀರಾ ನೀವು ಈ ಸಮಯದಲ್ಲಿ ಬರೋಣವನ್ನು ಸ್ನೇಹಿತರಿಗೆ ಬಂಧುಗಳಿಗೆ ನೀಡುವ ಹಾಡು ರಚನೆಗಳೆಂದರೆ ಇದನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯದು ನಿಮಗೆ ತುಂಬಾ ದೃಷ್ಟಿದೋಷ ಇರುತ್ತದೆ ಆದ್ದರಿಂದ ಈ ಸಮಯದಲ್ಲಿ ನೀವು ದೊಡ್ಡತನವನ್ನು ತೋರಿಸಬೇಡಿ ಹಾಗೆಯೇ ನಿಮ್ಮ ಆರ್ಥಿಕ ವಿಷಯಗಳನ್ನು ಯಾರಹತ್ತಿರವೂ ಸಹ ಚರ್ಚಿಸಬೇಡಿ ಈ ಸಮಯಗಳಲ್ಲಿ ಮೊಣಕಾಲಿನ ನೋವು ಅಜೀರ್ಣ ಸಮಸ್ಯೆ ಗಳು ಸಹ ಕಾಣಿಸಿಕೊಳ್ಳುತ್ತವೆ ಆದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಕೆಲಸಗಳನ್ನು ಮಾಡಿದರೆ ಒಳ್ಳೆಯದು ಬಂಧುಮಿತ್ರರನ್ನು ಬೇಟಿ ಮಾಡುತ್ತೀರಿ .ಈ ಆಗಸ್ಟ್ ಮೊದಲ ಹಂತದಲ್ಲಿ ಅಡೆತಡೆಗಳು ಎದುರಾದರೂ ಕೂಡ ದ್ವಿತೀಯಾರ್ಧದಲ್ಲಿ ಎಲ್ಲಾ ಅನುಕೂಲಕರವಾದ ಪರಿಸ್ಥಿತಿಗಳು ಗೋಚರವಾಗುತ್ತವೆ ಅಂದುಕೊಂಡ ಕೆಲಸಗಳಲ್ಲಿ ಅಡೆತಡೆಗಳು ಬರಬಾರದು ಎಂದರೆ.

ಪರಿಹಾರ
ದುರ್ಗಾದೇವಿಯನ್ನು ಪ್ರಾರ್ಥಿಸಬೇಕು ಮನಸ್ಸಿನ ಪ್ರಶಾಂತತೆಯನ್ನು ಪಡೆಯಲು ಅನಾರೋಗ್ಯ ಸಮಸ್ಯೆಗಳು ದೂರವಾಗಲು ಪ್ರತಿ ದಿನ ಬೆಳಗಿನ ಜಾವ ಸೂರ್ಯ ನಮಸ್ಕಾರವನ್ನು ತಪ್ಪದೇ ಮಾಡಿದರೆ ಒಳ್ಳೆಯದು ಅದೃಷ್ಟ ತರುವ ಬಂದಾ ಬಿಳಿಯ ಬಣ್ಣ.

ಕನ್ಯಾ ರಾಶಿ 

 

ನೀವು ನಿಮ್ಮ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ. ಗ್ರಹ ಸ್ಥಿತಿಗಳು ಅನುಕೂಲವಾಗಿ ಇಲ್ಲದೆ ಇರುವುದರಿಂದ ಈ ತಿಂಗಳಿನಲ್ಲಿ ವೃತ್ತಿ ಮತ್ತು ಕುಟುಂಬ ವ್ಯವಹಾರಗಳ ಬಗ್ಗೆ ತುಂಬಾ ಎಚ್ಚರ ವಹಿಸಿದರೆ ಒಳ್ಳೆಯದು . ಆದರೆ ಬೇರೆಯವರ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಒಳ್ಳೆಯದು.ನಿಮಗೆ ಸಂಬಂಧವಿಲ್ಲದ ವಿಷಯದ ಬಗ್ಗೆ ನೀವು ಆಲೋಚನೆ ಮಾಡದೇ ಇರುವುದೇ ಉತ್ತಮ. ಮುಖ್ಯವಾಗಿ ವೃತ್ತಿಪರವಾಗಿ ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಜ್ಞಾನದಿಂದ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ತಿ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಈ ಸಮಯ ಚೆನ್ನಾಗಿದೆ. ಹಾಗೇ ಹೊಸ ಸ್ನೇಹಿತರ ಪರಿಚಯವಾಗುತ್ತದೆ. ವಿದೇಶ ಪ್ರಯಾಣಕ್ಕೋಸ್ಕರ ಪ್ರಯತ್ನಿಸುತ್ತಿದ್ದೀರಿ . ನೀವು ತುಂಬಾ ಕಷ್ಟಗಳನ್ನು ಇದಕ್ಕಾಗಿಯೂ ಕೂಡ ಎದುರಿಸಬೇಕಾಗುತ್ತದೆ. ಹಾಗೆಯೇ ಅಲಂಕಾರ ಮಾಡಿಕೊಳ್ಳುವುದಕ್ಕೆ ಹೊಸ ಬಟ್ಟೆ ಖರೀದಿಸುವುದಕ್ಕೆ ಸಮಯವನ್ನು ಕಳೆಯುತ್ತೀರಿ.

ಆರ್ಥಿಕ ವ್ಯವಹಾರಗಳ ಬಗ್ಗೆ ಆಲೋಚನೆಗಳನ್ನು ಸಿದ್ದ ಪಡಿಸಿಕೊಳ್ಳಿ, ಈ ತಿಂಗಳು ಉಳಿತಾಯವನ್ನು ಮಾಡಲು ಪ್ರಾರಂಭಿಸಿದರೆ ಒಳ್ಳೆಯದು, ಹೆಚ್ಚಾಗಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ . ಬೇರೆಯವರಿಗೆ ಆದರ್ಶವಾಗಿ ಜೀವನ ನಡೆಸುತ್ತೀರ. ನೂತನ ಕೆಲಸವನ್ನು ಹುಡುಕದೆ ಇರುವುದು ಉತ್ತಮ. ಆರ್ಥಿಕವಾಗಿ ಈ ತಿಂಗಳು ನೀವು ತುಂಬಾ ಚೆನ್ನಾಗಿ ಉತ್ತಮವಾಗಿ ಇರುತ್ತೀರ. ಆರ್ಥಿಕವಾಗಿ ಅಭಿವೃದ್ಧಿಯಾಗಲು ಪ್ರಯತ್ನಿಸುತ್ತೀರಿ. ದಾನ, ಧರ್ಮವನ್ನು ಸಹ ಮಾಡುವಿರಿ. ಶುಭ ಕಾರ್ಯಗಳನ್ನು ಮಾಡುವ ಶುಭ ಸಂದರ್ಭ ಒದಗಿ ಬರಲಿದೆ . ಇದಕ್ಕಾಗಿ ಹೆಚ್ಚಿನ ಹಣವನ್ನು ಸಹ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಹಳೆಯ ಸ್ನೇಹಿತರನ್ನು ಈ ತಿಂಗಳು ಭೇಟಿಯಾಗಿ ಅವರ ಜೊತೆ ಸಮಯವನ್ನು ಕಳೆಯಿರಿ . ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗಿರುತ್ತವೆ. ಮುಖ್ಯವಾಗಿ ಈ ವಾರದ ಕೊನೆಯಲ್ಲಿ ಸ್ವಲ್ಪ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ತಿಂಗಳ ಪ್ರಾರಂಭದಲ್ಲಿ ಅತ್ಯಂತ ಸ್ವತಂತ್ರರಾಗಿರುತ್ತೀರಿ .

ದುಡ್ಡಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನೀವು ಯಾರ ಮಾತನ್ನು ಕೇಳಲು ಇಷ್ಟಪಡುವುದಿಲ್ಲ. ಕೊನೆಯ ದಿನಗಳಲ್ಲಿ ಹಣದ ಬಗ್ಗೆ ಎಚ್ಚರ ವಹಿಸಿದರೆ ಆದಷ್ಟು ಒಳ್ಳೆಯದು. ಹಣವನ್ನು ನೀಡುವಾಗ ಜಾಗ್ರತೆ ವಹಿಸುವುದು ಉತ್ತಮ. ನಿಮ್ಮ ಬಾಳಸಂಗಾತಿ ಗೋಸ್ಕರ ನೀವು ಈ ಹಿಂದೆ ನೀಡಿದ್ದ ಭರವಸೆಯನ್ನು ಈಗ ಪೂರ್ತಿ ಮಾಡಲು ಪ್ರಯತ್ನಿಸುತ್ತೀರಿ. ಬಾಳ ಸಂಗಾತಿಗೋಸ್ಕರ ಅಮೂಲ್ಯವಾದ ಉಡುಗೊರೆಯನ್ನು ಸಹ ನೀಡಬೇಕಾಗುತ್ತದೆ. ಆರೋಗ್ಯ ಪರವಾಗಿ ಈ ತಿಂಗಳು ತುಂಬಾ ಚೆನ್ನಾಗಿರುತ್ತದೆ ಮುಖ್ಯವಾಗಿ ಹಿಂದಿನ ಅನಾರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತವೆ.

ಪರಿಹಾರ
ಮನೆಯಲ್ಲಿ ದೇವರಿಗೆ ಹೆಚ್ಚಾಗಿ ದೀಪಾರಾಧನೆ ಮಾಡಿದರೆ ಒಳ್ಳೆಯದು

ತುಲಾ ರಾಶಿ

 

ಆಗಸ್ಟ್ ತಿಂಗಳು ನಿಮಗೆ ತುಂಬಾ ಉತ್ತಮವಾದ ತಿಂಗಳು ಎಂದೇ ಹೇಳಬಹುದು. ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾಗುವ ಸಾಧ್ಯತೆ ಇದೆ . ಗ್ರಹಗತಿಗಳು ಚೆನ್ನಾಗಿರುವ ಕಾರಣ ನೀವು ತುಂಬಾ ಶಕ್ತಿವಂತರಾಗಿ ಬೆಳೆಯುತ್ತೀರಿ .ಇನ್ನೂ ಕೆಲವು ವಿಷಯಗಳಲ್ಲಿ ತುಂಬಾ ಚುರುಕಾಗಿ ಇರುತ್ತೀರಿ. ನಿಮಗೆ ಬೇರೆಯವರು ಏನಾದರೂ ಮಾಡಬೇಕು ಎಂದು ಅಂದುಕೊಂಡರು ನಿಮಗೆ ಅದರ ಪ್ರಭಾವ ಬೀರುವುದಿಲ್ಲ . ಗ್ರಹಗಳು ಅನುಕೂಲವಾಗಿರುವ ಕಾರಣ ನಿಮ್ಮ ಶಕ್ತಿ ಸಾಮರ್ಥ್ಯಗಳು ಹೆಚ್ಚಾಗಿರುತ್ತವೆ . ಹಾಗೆ ನಿಮಗೆ ಬೇಕಾಗಿರುವುದನ್ನು ಸಹ ನೀವು ಸಾಧಿಸಿಕೊಳ್ಳುತ್ತೀರ. ಸ್ಥಿರಾಸ್ತಿಯನ್ನು ಖರೀದಿ ಮಾಡುವ ಯೋಗವಿದೆ. ಆರ್ಥಿಕವಾಗಿ ಉತ್ತಮವಾದ ಸಮಯವಾಗಿದೆ. ವೃತ್ತಿಪರವಾಗಿ ಬರುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೀರಿ. ವಿಜಯವನ್ನು ಸಾಧಿಸಲು ಒಳ್ಳೆಯ ಸಮಯವಾಗಿದೆ ನೂತನ ಕೆಲಸಗಳಿಗೋಸ್ಕರ ಈ ತಿಂಗಳಿನಲ್ಲಿ ಪ್ರಯತ್ನಿಸಿದರೆ ಒಳ್ಳೆಯದು.

ಈ ತಿಂಗಳಿನಲ್ಲಿ ನೀವು ಅಂದುಕೊಂಡ ಹಾಗೆ ಜೀವನ ಸಾಗಲು ಹೆಚ್ಚಿನ ಅವಕಾಶಗಳು ಬರುತ್ತವೆ . ನಿಮಗೆ ಎಲ್ಲರ ಸಹಕಾರ ಸಹಾಯ ದೊರೆಯುತ್ತದೆ . ಈ ಸಮಯದಲ್ಲಿ ಯಾವುದಕ್ಕೂ ಭಯಪಡುವ ಅವಶ್ಯಕತೆ ಇಲ್ಲ. ನೀವು ಧೈರ್ಯದಿಂದ ಮುಂದೆ ಸಾಗುತ್ತೀರ. ಯಾವುದೇ ಕೆಲಸಕ್ಕೆ ಸಂಬಂಧಪಟ್ಟಂತೆ ನೀವು ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಾಗಿ ಸಹಾಯ ದೊರೆಯುತ್ತದೆ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸಂತೋಷದಿಂದ ಇರುತ್ತೀರ. ಕುಟುಂಬ ಮತ್ತು ವೃತ್ತಿಪರವಾಗಿ ತುಂಬಾ ಸಂತೃಪ್ತಿಯನ್ನು ಕಾಣುತ್ತೀರ. ನಿಮ್ಮ ಇಷ್ಟ ಮತ್ತು ಆಸೆಯ ವಿರುದ್ಧವಾಗಿ ಈ ತಿಂಗಳು ಯಾವ ಕೆಲಸವೂ ನಡೆಯುವುದಿಲ್ಲ. ಬಂಧುಮಿತ್ರರು ನಿಮ್ಮ ಮಾತಿಗೆ ಗೌರವ ನೀಡುತ್ತಾರೆ . ನಿಮ್ಮ ಮೇಲೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಬೇರೆಯವರಿಗೆ ಆದರ್ಶವಂತ ವ್ಯಕ್ತಿಯಾಗಿ ಇರುತ್ತೀರಿ . ಈ ತಿಂಗಳು ಉತ್ಸಾಹದಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೀರಿ . ಈ ತಿಂಗಳಿನಲ್ಲಿ ದಾನ ಧರ್ಮವನ್ನು ಮಾಡಲು ಇಷ್ಟಪಡುತ್ತೀರ. ನಿಮ್ಮ ಕುಟುಂಬದವರ ಜೊತೆ ಪುಣ್ಯ ಕ್ಷೇತ್ರ ದರ್ಶನ ಮಾಡುತ್ತೀರ. ಆರ್ಥಿಕವಾಗಿ ಉನ್ನತಿಯನ್ನು ತಲುಪುತ್ತೀರಿ. ನ್ಯಾಯಪರವಾಗಿ ಬರಬೇಕಾದ ಸಂಪತ್ತುಗಳು ನಿಮಗೆ ಬಂದು ಸೇರುತ್ತವೆ. ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಆರ್ಥಿಕ ಲಾಭಗಳನ್ನು ಗಳಿಸುತ್ತೀರಿ. ನಿಮಗೆ ವಿರೋಧವಾಗಿದ್ದ ವಿಷಯಗಳೆಲ್ಲಾ ನಿಮ್ಮ ಪರವಾಗಿಯೇ ಆಗುತ್ತವೆ .

ಪರಿಹಾರ 
ಗಣಪತಿಗೆ ಕೊಬ್ಬರಿ ಎಣ್ಣೆಯಲ್ಲಿ 5 ಬತ್ತಿಗಳನ್ನು ಹಾಕಿ ದೀಪಾರಾಧನೆ ಮಾಡಿ, ಗರಿಕೆಯಿಂದ ಪೂಜೆ ಮಾಡಿ ನೈವೇದ್ಯವಾಗಿ ಬೆಲ್ಲವನ್ನು ಸಮರ್ಪಿಸಬೇಕು, ನಂತರ ಬೆಲ್ಲವನ್ನು ಪ್ರಸಾದವಾಗಿ ವಿನಿಯೋಗಿಸಬೇಕು .

ವೃಶ್ಚಿಕ ರಾಶಿ 

 

ವೃತ್ತಿಪರವಾಗಿ ತುಂಬ ಅನುಕೂಲವಾದ ತಿಂಗಳು ಎನ್ನಬಹುದು. ಕುಟುಂಬಕ್ಕೆ ಸಂಬಂಧಿಸಿದಂತೆ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಸಾಮಾಜಿಕವಾಗಿಯೂ ನೀವು ಆಲೋಚನೆಯನ್ನು ಮಾಡಬೇಕಾಗುತ್ತದೆ. ಆದಷ್ಟು ಸ್ನೇಹಿತರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು. ಈ ತಿಂಗಳ ಮೊದಲಾರ್ಧದಲ್ಲಿ ಉತ್ತಮವಾಗಿರುತ್ತದೆ. ನೀವು ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ದ್ವಿತೀಯಾರ್ಧದಲ್ಲಿ ತುಂಬಾ ಜಾಗ್ರತೆಯನ್ನು ವಹಿಸಿದರೆ ಒಳ್ಳೆಯದು .ಈ ಸಮಯದಲ್ಲಿ ವ್ಯಕ್ತಿಗತ ಗೌರವದ ಬಗ್ಗೆ ಎಚ್ಚರ ವಹಿಸಿದರೆ ಉತ್ತಮ. ಉದ್ಯೋಗದಲ್ಲಿ ನೀವು ಉನ್ನತಿಯನ್ನು ಕಾಣುತ್ತೀರಿ. ಕಾರ್ಯಾಲಯಗಳಲ್ಲಿ ಸ್ವಲ್ಪ ಅಡೆತಡೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ .ಆದ್ದರಿಂದ ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು.ಹಾಗೆ ಎಲ್ಲರೂ ನೀವು ಹೇಳುವ ಮಾತನ್ನು ಕೇಳಬೇಕು ಅಂದುಕೊಳ್ಳುವುದು ತಪ್ಪಾಗುತ್ತದೆ. ಬಂಧುಗಳ ಹತ್ತಿರ ಸ್ವಲ್ಪ ಜಾಗ್ರತೆವಹಿಸಬೇಕು. ಇಲ್ಲವಾದಲ್ಲಿ ಸ್ವಲ್ಪ ತೊಂದರೆಗಳನ್ನು ಕೂಡ ಅನುಭವಿಸಬೇಕಾಗುತ್ತದೆ .ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುವುದಿಲ್ಲ.

ಉದ್ಯೋಗದ ಪರವಾಗಿ ನೀವು ನಿಮ್ಮ ಲಕ್ಷವನ್ನು ಪೂರ್ತಿ ಮಾಡುತ್ತೀರಿ .ತಿಂಗಳಿನಲ್ಲಿ ಆದಾಯದ ಪರವಾಗಿ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ. ಈ ತಿಂಗಳಿನಲ್ಲಿ ಬೇರೆಯವರಿಗೂ ಸಹ ಆರ್ಥಿಕ ಸಹಾಯವನ್ನು ಮಾಡುತ್ತೀರಿ. ಉಳಿತಾಯವನ್ನು ಮಾಡುವುದು ಒಳ್ಳೆಯದು. ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ನೀವು ಮಾಡುವ ಆರ್ಥಿಕ ವ್ಯವಹಾರಗಳು ಸಂತೃಪ್ತಿ ತರುತ್ತವೆ. ನಿಮ್ಮ ಗಮನ ಹೆಚ್ಚಿನದಾಗಿ ವ್ಯಾಪಾರದ ಮೇಲೆ ಕೇಂದ್ರೀಕರಿಸುವುದರಿಂದ ನಿಮ್ಮ ಕುಟುಂಬದವರ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಆಗುವುದಿಲ್ಲ . ಗ್ರಹಗಳು ಅನುಕೂಲವಾಗಿ ಇಲ್ಲದೆ ಇರುವುದರಿಂದ ಕುಟುಂಬದ ಮೇಲೆ ಇದರ ಪ್ರಭಾವ ಹೆಚ್ಚಾಗಿರುತ್ತದೆ. ನಿಮ್ಮ ಹೆಚ್ಚಿನ ಸಮಯವನ್ನು ನಿಮ್ಮ ಬಾಳ ಸಂಗಾತಿಯ ಜೊತೆ ಕಳೆಯುವುದು ಒಳ್ಳೆಯದು. ಆರೋಗ್ಯದಲ್ಲಿ ತುಂಬಾ ಚೆನ್ನಾಗಿದ್ದರೂ ಕೊನೆಯ ವಾರದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಪರಿಹಾರ
ಇಷ್ಟದೇವತೆಗೆ ಮಂಗಳವಾರದ ದಿನ 5 ಬತ್ತಿಯಿಂದ ದೀಪಾರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು, ಶತ್ರು ಬಾಧೆಗಳು ಕಡಿಮೆಯಾಗಿ ಮಾನಸಿಕ ಶಾಂತಿ ಸಿಗುತ್ತದೆ.

ಧನಸ್ಸು ರಾಶಿ 

 

ಈ ತಿಂಗಳಿನಲ್ಲಿ ಧನಸ್ಸು ರಾಶಿಯವರಿಗೆ ಅತ್ಯಂತ ತೀವ್ರ ಪರೀಕ್ಷೆಯ ಕಾಲವಾಗಿರುತ್ತದೆ. ಮುಖ್ಯವಾಗಿ ನೀವು ಮಾಡುವ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ನಿಮ್ಮ ಪ್ರಯತ್ನಗಳು ಅಷ್ಟರಮಟ್ಟಿಗೆ ಪಲಿತಾಂಶವನ್ನು ನೀಡುವುದಿಲ್ಲ. ತುಂಬಾ ಶ್ರಮ ವಹಿಸಿದರೆ ಮಾತ್ರ ಕೆಲಸಗಳು ಪೂರ್ತಿಯಾಗುತ್ತದೆ. ಗ್ರಹ ಸ್ಥಿತಿಗಳು ಹತ್ತನೇ ತಾರೀಖಿನವರೆಗೂ ಹೀಗೆಯೇ ಇರುತ್ತದೆ ನಂತರ ನಿಧಾನವಾಗಿ ಪರಿಸ್ಥಿತಿಗಳು ಬದಲಾಗುತ್ತಾ ಹೋಗುತ್ತದೆ. ಈ ತಿಂಗಳು ನಿಮ್ಮ ಮೇಲೆ ನಿಮಗೆ ವಿಶ್ವಾಸ ಹೆಚ್ಚಾಗುತ್ತದೆ . ಗ್ರಹ ಸ್ಥಿತಿಗಳು ಅನುಕೂಲವಾಗಿ ಇಲ್ಲದೆ ಇರುವುದರಿಂದ ಸ್ಥಿರಾಸ್ತಿಗಳನ್ನು ಖರೀದಿ ಮಾಡದೇ ಇರುವುದು ಉತ್ತಮ. ಶುಭಕಾರ್ಯಗಳು ನಿಮ್ಮ ಹೆಸರಿನಲ್ಲಿ ಮಾಡದಿರುವುದು ಒಳ್ಳೆಯದು .ನಿಮ್ಮ ಸುತ್ತಮುತ್ತಲಿನವರ ಕಡೆಯಿಂದ ಸ್ವಲ್ಪ ಅಡೆತಡೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿವೆ ಆದರೆ ಈ ತಿಂಗಳಿನಲ್ಲಿ ನೀವು ಒಳ್ಳೆಯ ಹೆಸರನ್ನು ಗಳಿಸುತ್ತೀರಿ. ಸಹಜವಾಗಿ ನೀವು ಬೇರೆಯವರಿಗೆ ಸಹಾಯ ಮಾಡುವ ಗುಣದವರು ನೀವು ಎಷ್ಟೇ ಕೆಲಸದಲ್ಲಿ ನಿರತರಾಗಿದ್ದರು ಬೇರೆಯವರ ಕೆಲಸಗಳನ್ನು ಮಾಡಲು ಆಸಕ್ತಿಯನ್ನು ತೋರಿಸುತ್ತೀರಿ .

ನೀವು ನಿಮ್ಮ ಪ್ರತಿ ಸಂತೋಷವನ್ನು ಬೇರೆಯವರ ಜೊತೆ ಹಂಚಿ ಕೊಳ್ಳುತ್ತೀರಿ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ .ಈ ತಿಂಗಳು ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಿ .ಈ ತಿಂಗಳಿನಲ್ಲಿ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ನಿಮಗೆ ದೊರೆಯುತ್ತದೆ. ವೃತ್ತಿಪರವಾಗಿ ಸಾಮಾಜಿಕವಾಗಿ ನಿಮಗೆ ತುಂಬಾ ಅನುಕೂಲವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ, ಕೆಲಸದಲ್ಲಿ ಸಹೋದ್ಯೋಗಿಗಳ ಸಹಾಯ ಈ ತಿಂಗಳಿನಲ್ಲಿ ದೊರೆಯುತ್ತದೆ. ಆರ್ಥಿಕವಾಗಿ ಸಂಬಂಧಿಸಿದಂತೆ ನಿಮಗೆ ಆದಾಯ ಹೆಚ್ಚಾಗಿರುತ್ತದೆ ಹಾಗೆಯೇ ಬಂಡವಾಳ ಹೂಡಿಕೆಯನ್ನು ಸಹ ಮಾಡುತ್ತೀರಿ ಆದರೆ ಆರ್ಥಿಕವಾಗಿ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು. ಹೆಚ್ಚಿನ ಸಮಯವನ್ನು ನಿಮ್ಮ ಬಾಳ ಸಂಗಾತಿಯ ಜೊತೆ ಕಳೆಯಿರಿ. ಆರೋಗ್ಯ ಪರವಾಗಿ ತುಂಬಾ ಚೆನ್ನಾಗಿರುತ್ತದೆ.

ಪರಿಹಾರ 
ಈ ತಿಂಗಳು ಬರುವ ಪ್ರತಿ ಶುಕ್ರವಾರ ಸಾಯಂಕಾಲ ಲಕ್ಷ್ಮೀ ದೇವಿಗೆ ಆರು ಬತ್ತಿಯಿಂದ ತುಪ್ಪದ ದೀಪ ಆರಾಧನೆ ಮಾಡಿದರೆ ಒಳ್ಳೆಯದು. ಕನಕಧಾರ ಸ್ತೋತ್ರ, ಶ್ರೀ ಸೂಕ್ತ ಮತ್ತು ಲಕ್ಷ್ಮೀ ಅಷ್ಟೋತ್ತರಗಳನ್ನು ಪಠಿಸಿದರೆ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ.

ಮಕರ ರಾಶಿ 

 

ನೀವು ಅಂದುಕೊಂಡಂತೆ ಕೆಲಸ ಕಾರ್ಯಗಳು ಸಕಾಲದಲ್ಲಿ ನೆರವೇರುತ್ತವೆ. ನೀವು ಮಾಡುವ ಕೆಲಸಗಳಿಂದ ನಿಮ್ಮ ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ. ಗ್ರಹ ಸ್ಥಿತಿಗಳ ಕಾರಣಗಳಿಂದ ನಿಮ್ಮ ಕುಟುಂಬದಲ್ಲಿ ಯಾವುದಾದರೂ ಬದಲಾವಣೆ ಉಂಟಾಗಬಹುದು. ನೀವು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತೀರ. ಬೇರೆ ಯಾರ ಮಾತನ್ನು ಕೇಳಲು ಇಷ್ಟಪಡುವುದಿಲ್ಲ. ನಿಮ್ಮ ಇಷ್ಟದ ಅನುಸಾರವಾಗಿ ಬಾಳಬೇಕೆಂದು ಯೋಚಿಸುತ್ತೀರ. ಸಾಮಾಜಿಕವಾಗಿ ಹೆಚ್ಚಾಗಿ ಭಾಗಿಯಾಗಲು ನೀವು ಮನಸ್ಸು ಮಾಡುವುದಿಲ್ಲ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಮೊದಲಿಗೆ ಪ್ರಣಾಳಿಕೆಯನ್ನು ಸಿದ್ಧಪಡಿಸಿಕೊಂಡು ನಂತರ ಮುಂದುವರೆದರೆ ಒಳ್ಳೆಯದು. ವೃತ್ತಿಪರವಾಗಿ ನಿಮ್ಮ ಲಕ್ಷಗಳನ್ನು ಸಾಧಿಸುತ್ತೀರ. ನೂತನ ಕೆಲಸವನ್ನು ಹುಡುಕಲು ಒಳ್ಳೆಯ ಸಮಯವಾಗಿದೆ. ಆರ್ಥಿಕವಾಗಿ ಸಂಬಂಧಿಸಿದಂತೆ ಈ ತಿಂಗಳಿನಲ್ಲಿ ಆದಾಯ ಸ್ವಲ್ಪ ಕಡಿಮೆಯಾಗಿರುತ್ತದೆ .ಹಾಗೆಯೇ ಖರ್ಚು ಮಾತ್ರ ಹೆಚ್ಚಾಗಿರುತ್ತದೆ. ಆರ್ಥಿಕ ಲೇವಾ ದೇವಿಗಳು ಈ ತಿಂಗಳು ತುಂಬಾ ಕಷ್ಟಕರವಾಗಿರುತ್ತದೆ.

ಬಂಡವಾಳ ಹೂಡಿಕೆ ಮಾಡುವುದು ಅಷ್ಟು ಒಳ್ಳೆಯದಲ್ಲ, ಆರ್ಥಿಕ ವಿಷಯಗಳಲ್ಲಿ ಆತುರಪಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಕಾಗದದ ಮೇಲೆ ಸಹಿ ಮಾಡುವ ಸನ್ನಿವೇಶಗಳು ಬಂದರೆ ಅದನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಿ ,ವ್ಯಾಪಾರ ಮಾಡುವವರು ಈ ತಿಂಗಳಿನಲ್ಲಿ ತುಂಬಾ ಎಚ್ಚರದಿಂದ ಇದ್ದರೆ ಒಳ್ಳೆಯದು, ಬೇರೆಯವರ ಹತ್ತಿರ ಆರ್ಥಿಕ ಸಹಾಯವನ್ನು ಕೇಳುತ್ತೀರ, ಆದ್ದರಿಂದ ಇದರ ಬಗ್ಗೆ ಜಾಗೃತಿ ವಹಿಸಬೇಕು. ಕುಟುಂಬದಲ್ಲಿ ಸಹ ಕಲಹಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ, ಕುಟುಂಬದ ಬಗ್ಗೆ ತುಂಬಾ ಕಾಳಜಿ ವಹಿಸ ಬೇಕಾಗುವುದು, ಆರೋಗ್ಯವಾಗಿ ತುಂಬಾ ಚೆನ್ನಾಗಿರುತ್ತೀರ, ಮುಖ್ಯವಾಗಿ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಸಂತೋಷದಿಂದ ಇರುತ್ತೀರ, ಯಾವುದಾದರೂ ಅನಾರೋಗ್ಯ ಸಮಸ್ಯೆಗಳಿದ್ದರೂ ಸಹ ಈ ತಿಂಗಳು ಅವು ದೂರವಾಗುತ್ತವೆ. ಆರ್ಥಿಕವಾಗಿ ಕುಟುಂಬ ಪರವಾಗಿ ತುಂಬಾ ಜಾಗ್ರತೆವಹಿಸಿದರೆ ಒಳ್ಳೆಯದು.

ಪರಿಹಾರ
ಬರುವ ಪ್ರತಿ ಶುಕ್ರವಾರಗಳಲ್ಲಿ ಲಕ್ಷ್ಮೀದೇವಿಗೆ ದೀಪಾರಾಧನೆ ಮಾಡಿದರೆ ಒಳ್ಳೆಯದು , ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ದೂರವಾಗಬಹುದು.

ಕುಂಭ ರಾಶಿ

 

ಈ ರಾಶಿಗೆ ಈ ತಿಂಗಳು ಮಿಶ್ರಫಲಗಳಿಂದ ಕೂಡಿರುತ್ತದೆ. ಮೊದಲ 15 ದಿನಗಳಲ್ಲಿ ನಿಮಗೆ ಗ್ರಹಗಳು ಅನುಕೂಲವಾಗಿ ಇಲ್ಲದಿರುವುದರಿಂದ ಆದರೂ ಮಿತಿಮೀರಿದ ಚಿಂತೆಯನ್ನು ಮಾಡುತ್ತೀರಿ, ಚಿಕ್ಕ ಚಿಕ್ಕ ಕಷ್ಟಗಳಿಗೆ ನೀವು ವಿಪರೀತ ಗೊಂದಲಕ್ಕೆ ಒಳಗಾಗುತ್ತೀರಿ. ಹಾಗೆ ಮಾನಸಿಕ ಹೀನತೆಗೆ ಒಳಗಾಗುವ ಅವಕಾಶಗಳು ಸಹ ಹೆಚ್ಚಾಗಿರುತ್ತವೆ, ನಿಮಗೆ ಸಂಬಂಧವಿಲ್ಲದೇ ಇರುವ ವಿಷಯಗಳಲ್ಲಿ ತಲೆ ತೂರಿಸಬೇಡಿ. ನಿಮ್ಮ ಬಂಧು ಮಿತ್ರರ ಮಧ್ಯೆ ವಿರೋಧವನ್ನು ಕಟ್ಟಿಕೊಳ್ಳುತ್ತೀರಿ. ಹಾಗೇ ಕುಟುಂಬ ಸದಸ್ಯರ ಚಿಕ್ಕ ಚಿಕ್ಕ ಜಗಳಗಳನ್ನು ಎದುರಿಸುವ ಸೂಚನೆಗಳು ಗೋಚರಿಸುತ್ತಿವೆ. ಇನ್ನುಳಿದ 15 ದಿನಗಳಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗೆ ಮೇಲಾಧಿಕಾರಿಗಳಿಂದ ಪ್ರಶಂಸೆಗಳನ್ನು ಸಹ ಪಡೆಯುತ್ತೀರಿ. ಕೋರ್ಟ್ ಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಪರವಾಗಿಯೇ ತೀರ್ಪು ಬರುವ ಅವಕಾಶಗಳಿವೆ.

ನೀವು ಅಂದುಕೊಂಡ ಕೆಲಸಗಳು ಸರಳವಾಗಿ ನಡೆಯುತ್ತವೆ , ಈ ತರಹದ ದೃಷ್ಟಿದೋಷ ನಿಮ್ಮ ಮೇಲೆ ಹೆಚ್ಚಾಗಿರುತ್ತದೆ, ಭಗವಂತನ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ, ಈ ವಿಷಯದಲ್ಲಿ ನೀವು ತುಂಬಾ ಅದೃಷ್ಟವಂತರು ಎಂದೆ ಹೇಳಬಹುದು. ದೇವರ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರುವುದರಿಂದ ಉನ್ನತ ಸ್ಥಾನಮಾನ ತಲುಪುತ್ತೀರಿ, ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಸಹ ದೇವರ ಮೇಲೆ ನಂಬಿಕೆ ಇಟ್ಟು ಆ ಕೆಲಸವನ್ನು ಪ್ರಾರಂಭಿಸಿದರೆ ಒಳ್ಳೆಯದು. ಶನಿ ,ಬುಧ, ಗುರು ಗ್ರಹವನ್ನು ಪ್ರಸನ್ನ ಮಾಡಿಕೊಂಡರೆ ಆರ್ಥಿಕವಾಗಿ ಸಾಮಾಜಿಕವಾಗಿ ಆದಷ್ಟು ಉನ್ನತ ಸ್ಥಾನವನ್ನು ತಲುಪುತ್ತೀರಿ.

ಪರಿಹಾರ
ಪ್ರತಿದಿನ ಶಿವಾರಾಧನೆ, ಶಿವ ನಾಮವನ್ನು ಜಪಿಸುತ್ತಾ ಇರಬೇಕು, ಹಾಗೆ ಗೋವಿಂದ ನಾಮ ಜಪವನ್ನು ಮಾಡಿದರೆ ನಿಮಗೆ ಇರುವ ಆರ್ಥಿಕ ಕಷ್ಟಗಳು, ಅನಾರೋಗ್ಯ ಸಮಸ್ಯೆಗಳು, ಮಾನಸಿಕ ಗೊಂದಲಗಳು ದೂರವಾಗುತ್ತವೆ. ಅದೃಷ್ಟ ತರುವ ಬಣ್ಣ ತಿಳಿ ಹಳದಿ ಬಣ್ಣ .

ಮೀನ ರಾಶಿ

 

ನೀವು ವೃತ್ತಿಗೆ ಸಂಬಂಧಿಸಿದಂತೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತೀರಿ, ಈ ತಿಂಗಳು ಗ್ರಹ ಸ್ಥಿತಿಗಳು ಅನುಕೂಲವಾಗಿ ಇರುವುದರಿಂದ , ನಿಮ್ಮ ಮೇಲೆ ನಿಮಗೆ ವಿಶ್ವಾಸ ಹೆಚ್ಚಾಗಲಿದೆ. ಬೇರೆಯವರು ನಿಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಪ್ರತಿ ವಿಷಯಗಳಿಗೂ ನೀವು ಒಂದು ಸ್ಪಷ್ಟವಾದ ನಿಲುವಿಗೆ ಬರುತ್ತೀರಿ. ಬೇರೆಯವರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡುವುದು ಸ್ವಲ್ಪ ಕಡಿಮೆ ಮಾಡಿಕೊಂಡರೆ ಉತ್ತಮ. ವ್ಯಕ್ತಿ ಕೆಲಸಕ್ಕೆ ಸಂಬಂಧಿಸಿದಂತೆ ಮತ್ತು ಗುರಿಗಳ ಬಗ್ಗೆ ಆಲೋಚನೆ ಮಾಡಿದರೆ ಒಳ್ಳೆಯದು, ಪ್ರತಿ ವ್ಯವಹಾರಗಳಲ್ಲಿಯೂ ಸ್ವತಂತ್ರವಾಗಿ ವ್ಯವಹಾರ ಮಾಡಲು ಪ್ರಯತ್ನಿಸಿದರೆ ಉತ್ತಮ, ಸಾಮಾಜಿಕವಾಗಿ ಹೆಚ್ಚಿನ ಮರ್ಯಾದೆಯನ್ನು ಈ ತಿಂಗಳಿನಲ್ಲಿ ನೀವು ಗಳಿಸುತ್ತೀರಿ. ಹಾಗೆಯೇ ಅಜಾಗರೂಕತೆಯಿಂದ ಇದ್ದರೆ ಅವಮಾನವಾಗುವ ಅವಕಾಶಗಳು ಸಹ ಹೆಚ್ಚಾಗಿರುತ್ತವೆ ಆದ್ದರಿಂದ ಇದರ ಬಗ್ಗೆ ಎಚ್ಚರ ವಹಿಸಿದರೆ ಉತ್ತಮ .

ನೂತನ ಕೆಲಸಕ್ಕಾಗಿ ಪ್ರಯತ್ನಿಸಿದರೆ ಉತ್ತಮ ಫಲಿತಾಂಶಗಳು ಲಭಿಸುತ್ತವೆ. ನೀವು ಮಾಡುವ ಪ್ರತಿ ಕೆಲಸದಲ್ಲಿಯೂ, ನಿಮಗೆ ಹಿರಿಯರ ಬೆಂಬಲ ತುಂಬಾ ಚೆನ್ನಾಗಿದೆ, ಈ ತಿಂಗಳಿನಲ್ಲಿ ಆದಾಯ ಚೆನ್ನಾಗಿರುತ್ತದೆ, ಹಣಕ್ಕೆ ಸಂಬಂಧಿಸಿದಂತೆ ಯಾವ ತೊಂದರೆಗಳು ಬರುವುದಿಲ್ಲ, ಮುಖ್ಯವಾಗಿ ಅನೇಕ ದಿನಗಳಿಂದ ನಿಂತು ಹೋಗಿರುವ ದುಡ್ಡು ನಿಮ್ಮ ಕೈ ಬಂದು ಸೇರುತ್ತದೆ, ಆರ್ಥಿಕವಾಗಿ ಅಭಿವೃದ್ಧಿಯಾಗಲು ಇದು ನಿಮಗೆ ಒಳ್ಳೆಯ ಸಮಯವಾಗಿದೆ, ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬೇರೆಯವರ ಹತ್ತಿರ ಚರ್ಚಿಸದೆ ಇರುವುದು ಉತ್ತಮ, ಕುಟುಂಬದವರ ಹತ್ತಿರ ಚರ್ಚಿಸಿದರೆ ಒಳ್ಳೆಯದು, ಆದರೆ ಅತಿಯಾದ ಕಟ್ಟು ಪಾಡುಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ, ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರು ಶುಭವಾರ್ತೆಯನ್ನು ಕೇಳುತ್ತೀರಿ, ಹೊಸ ವ್ಯಕ್ತಿಯ ಪರಿಚಯ ಸಹ ಆಗುತ್ತದೆ, ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ, ಆದರೆ ಮಂಗಳವಾರ ,ಶನಿವಾರ ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು, ಸಮಯ ಸಿಕ್ಕಾಗಲೆಲ್ಲ ವಿಶ್ರಾಂತಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು,

ಪರಿಹಾರ
ಇಷ್ಟ ದೇವರಿಗೆ ಹೆಚ್ಚಿನದಾಗಿ ದೀಪಾರಾಧನೆ ಮಾಡಿದರೆ, ಶುಭ ಫಲಿತಾಂಶಗಳನ್ನು ಕಾಣುತ್ತೀರ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top